Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶುಕ್ರವಾರ, 12 ಫೆಬ್ರವರಿ 2021 (08:40 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ರಾಜಕೀಯ ವರ್ಗದವರಿಗೆ ಉನ್ನತ ಸ್ಥಾನ ಮಾನದ ಯೋಗವಿದೆ. ಸಂಗಾತಿಯ ಅಸಹಕಾರ ಮನಸ್ಸಿಗೆ ಕಿರಿ ಕಿರಿ ಎನಿಸಲಿದೆ. ಮಕ್ಕಳ ವಿದ್ಯಾಭ್ಯಾಸದ ವಿಚಾರ ಸಮಸ್ಯೆಯಾಗಿ ಕಾಡಲಿದೆ. ಕಾರ್ಯನಿಮಿತ್ತ ಕಿರು ಓಡಾಟ ನಡೆಸಲಿದ್ದೀರಿ.

ವೃಷಭ: ಕಾರ್ಯಕ್ಷೇತ್ರದಲ್ಲಿ ಉನ್ನತ ಸ್ಥಾನ ಮಾನಕ್ಕೆ ಯೋಗವಿದೆ. ದೇಹಾರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ನಿವಾರಣೆಯಾಗಲಿದೆ. ಪತ್ನಿ, ಮಕ್ಕಳಿಂದ ಸಂತೋಷ ಸಿಗಲಿದೆ. ಶೈಕ್ಷಣಿಕ ರಂಗದಲ್ಲಿರುವವರಿಗೆ ಮುನ್ನಡೆಯ ಯೋಗ.

ಮಿಥುನ: ವ್ಯಾಪಾರ, ವ್ಯವಹಾರದಲ್ಲಿ ಅಭಿವೃದ್ಧಿದಾಯಕ ವಾತಾವರಣವಿರಲಿದೆ. ಶಾಂತಿ ಸಮಾಧಾನ ಚಿತ್ತದಿಂದ ಯೋಚನೆ ಮಾಡಿದಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಹಿರಿಯರ ಸಲಹೆಗಳು ಉಪಯೋಗಕ್ಕೆ ಬರಲಿದೆ. ದಿನದಂತ್ಯಕ್ಕೆ ಅಚ್ಚರಿ ಸುದ್ದಿ.

ಕರ್ಕಟಕ: ಮನೆಯಲ್ಲಿ ಪತ್ನಿ, ಮಕ್ಕಳಿಂದ ನಿಮಗೆ ಸಂತೋಷದಾಯಕ ಸುದ್ದಿ ಸಿಗಲಿದೆ. ನೂತನ ದಂಪತಿಗಳಿಗೆ ಸುಂದರ ಕ್ಷಣ ಕಳೆಯುವ ಯೋಗ. ಕಲಾಕ್ಷೇತ್ರದಲ್ಲಿ ಸಾಧನೆಗೆ ತಕ್ಕ ಪುರಸ್ಕಾರ ಸಂದಾಯವಾಗಲಿದೆ. ತಾಳ್ಮೆ, ಸಂಯಮ ಅಗತ್ಯ.

ಸಿಂಹ: ಅತಿಯಾದ ಆತ್ಮವಿಶ್ವಾಸವೂ ಕೆಲವೊಮ್ಮೆ ಮುಳುವಾದೀತು. ರಾಜಕೀಯ ರಂಗದಲ್ಲಿರುವವರಿಗೆ ಮಹಿಳೆಯರಿಂದ ಅಪವಾದದ ಭೀತಿ. ಕೃಷಿಕರಿಗೆ ಕೈ ತುಂಬಾ ಬೆಳೆಯಿಂದ ಲಾಭವಾಗಲಿದೆ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ.

ಕನ್ಯಾ: ನಿಮ್ಮ ಸಹೋದ್ಯೋಗಿಗಳ ಕಷ್ಟಕ್ಕೆ ನೆರವಾಗಲಿದ್ದೀರಿ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಎಲ್ಲವೂ ಶುಭವಾಗಲಿದೆ. ವೈಯಕ್ತಿಕ ವಿಚಾರಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಲಿದ್ದೀರಿ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.

ತುಲಾ: ಮನೆಯಲ್ಲಿ ಸುಖ ಶಾಂತಿಗೆ ಕೊರತೆಯಿರದು. ಆದರೆ ಆದಾಯದಷ್ಟೇ ಖರ್ಚೂ ತಲೆದೋರಲಿದೆ. ಮಿತ್ರರೊಂದಿಗೆ ಕಿರು ಪ್ರವಾಸ ಮಾಡಲಿದ್ದೀರಿ. ಹಳೆಯ ಸಂಬಂಧಗಳು ಮರಳಿ ಕೂಡಲಿವೆ. ದಾಯಾದಿ ಕಲಹಗಳಿಗೆ ಮುಕ್ತಿ ಸಿಗಲಿದೆ.

ವೃಶ್ಚಿಕ: ಬದುಕಿನಲ್ಲಿ ಅನಿರೀಕ್ಷಿತ ತಿರುವುಗಳಿಗೆ ಸಿದ್ಧತೆ ನಡೆಸಲಿದ್ದೀರಿ. ಸರಕಾರಿ ನೌಕರರಿಗೆ ಸ್ಥಾನ ಪಲ್ಲಟವಾಗುವ ಸಾಧ‍್ಯತೆಯಿದೆ. ವ್ಯವಹಾರದಲ್ಲಿ ಹಿತ ಶತ್ರುಗಳ ಕಾಟದಿಂದ ಮುಕ್ತಿ ಸಿಗಲಿದೆ. ವಿವಾದಗಳಿಂದ ದೂರವಿದ್ದರೆ ಉತ್ತಮ.

ಧನು: ನೆರೆಹೊರೆಯವರಿಂದ ಕಿರಿ ಕಿರಿ ತಪ್ಪದು. ನಿಮ್ಮ ಮನಸ್ಸಿನ ಅಭಿಪ್ರಾಯಗಳಿಗೆ ಸಂಗಾತಿಯ ಸಹಕಾರ ಸಿಗಲಿದೆ. ಮಕ್ಕಳ ದೇಹಾರೋಗ್ಯ ಚಿಂತೆಗೆ ಕಾರಣವಾದೀತು. ಹಣಕಾಸಿನ ಮುಗ್ಗಟ್ಟು ನಿವಾರಣೆಯಾಗಲಿದೆ. ದೇವತಾ ಪ್ರಾರ್ಥನೆ ಮಾಡಿ.

ಮಕರ: ನಿಮ್ಮ ಇಷ್ಟದ ವಸ್ತು ಖರೀದಿಗಾಗಿ ಹಣ ವ್ಯಯವಾಗಲಿದೆ. ಹಿರಿಯರಿಗೆ ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಹಿರಿಯರೊಂದಿಗೆ ವಾಗ್ವಾದ ನಡೆಯದಂತೆ ಎಚ್ಚರಿಕೆ ವಹಿಸಿ. ಬೇರೆಯವರ ಕಷ್ಟಕ್ಕೆ ಸ್ಪಂದಿಸಲಿದ್ದೀರಿ.

ಕುಂಭ: ತಂದೆ-ಮಕ್ಕಳೊಡನೆ ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡೀತು. ತಾಳ್ಮೆ, ಸಂಯಮವಿದ್ದರೆ ಉತ್ತಮ. ವೃತ್ತಿರಂಗದಲ್ಲಿ ಅಧಿಕಾರ ನಿಮ್ಮ ಕೈ ಸೇರಲಿದೆ. ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ. ಕುಲದೇವರ ಪ್ರಾರ್ಥನೆ ಮಾಡಿ.

ಮೀನ: ಮಹಿಳೆಯರಿಗೆ ಭವಿಷ್ಯದ ಬಗ್ಗೆ ಋಣಾತ್ಮಕ ಚಿಂತನೆಗಳು ಕಾಡೀತು. ಹಿಂದೆ ಆದ ತಪ್ಪನ್ನು ನೆನೆಯುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ಹೊಸ ಬಗೆಯ ಚಿಂತನೆ ಮಾಡಿ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಉನ್ನತಿಯ ಯೋಗ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Kaali Mantra: ಶತ್ರು ಭಯವಿದ್ದರೆ ಕಾಳಿಯ ಈ ಸ್ತೋತ್ರವನ್ನು ಓದಿ

ಶ್ರೀದತ್ತಾತ್ರೇಯ ಸ್ತೋತ್ರ ಕನ್ನಡದಲ್ಲಿ, ತಪ್ಪದೇ ಓದಿ

Ram Navami 2025: ಈ ವಿಶೇಷ ದಿನದಂದು ಹೀಗೇ ಮಾಡಿದ್ರೆ ಫಲ ನಿಶ್ಚಿತ

Shani Mantra: ಶನಿ ರಕ್ಷಾಸ್ತವಃ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಇಂದು ಓದಿ

Ram Navami 2025: ದಿನಾಂಕ, ಶುಭ ಮುಹೂರ್ತ ಇಲ್ಲಿದೆ

ಮುಂದಿನ ಸುದ್ದಿ
Show comments