ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಮಂಗಳವಾರ, 17 ನವೆಂಬರ್ 2020 (09:06 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಮಾನಸಿಕವಾಗಿ ಕಾಡುವ ಕೆಲವೊಂದು ವಿಚಾರಗಳಿಗೆ ಆಪ್ತರೊಂದಿಗೆ ದುಃಖ ಹಂಚಿಕೊಂಡು ಪರಿಹಾರ ಕಂಡುಕೊ‍ಳ್ಳಲಿದ್ದೀರಿ. ಸಂಗಾತಿಯ ಅಸಹಕಾರ ಮನಸ್ಸಿಗೆ ನೋವುಂಟುಮಾಡಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭ: ಸ್ಪಷ್ಟವಾದ ನಿರ್ಧಾರಕ್ಕೆ ಬರಲಾಗದೇ ಮಾನಸಿಕವಾಗಿ ಒದ್ದಾಡುವಿರಿ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಉದಾಸೀನ ಪ್ರವೃತ್ತಿಯಿಂದ ಹಿನ್ನಡೆಯಾದೀತು. ವೃತ್ತಿಗೆ ಸಂಬಂಧಿಸಿದ ಕೆಲಸಗಳಿಗೆ ಓಡಾಟ ನಡೆಸಬೇಕಾಗುತ್ತದೆ. ಎಚ್ಚರಿಕೆ ಅಗತ್ಯ.

ಮಿಥುನ: ವಾಹನ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದು ಮುಖ್ಯ. ಆಪ್ತ ಮಿತ್ರರೊಂದಿಗೆ ಸಂತೋಷದ ಕ್ಷಣ ಕಳೆಯಲಿದ್ದೀರಿ. ನೂತನ ದಂಪತಿಗಳಿಗೆ ಹೊಂದಾಣಿಕೆ ಕೊರತೆ ಕಂಡುಬಂದೀತು. ವಿದ್ಯಾರ್ಥಿಗಳಿಗೆ ಮುನ್ನಡೆ ತೋರಿಬರಲಿದೆ.

ಕರ್ಕಟಕ: ಆಪ್ತೇಷ್ಟರನ್ನು ಅಗಲುವ ನೋವು ಕಾಡಲಿದೆ. ಇಷ್ಟಮಿತ್ರರೊಂದಿಗೆ ಸಂತೋಷದ ಕ್ಷಣ ಕಳೆಯಲಿದ್ದೀರಿ. ಮಾನಸಿಕವಾಗಿ ಗಟ್ಟಿಯಾಗಬೇಕಾದ ಸಂದರ್ಭವಿದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.

ಸಿಂಹ: ದೂರ ಸಂಚಾರದಿಂದ ನಿಮ್ಮ ಕಾರ್ಯಸಿದ್ಧಿಯಾದೀತು. ಆದರೆ ಮನೆಯಲ್ಲಿ ಕಳ್ಳತನದ ಭೀತಿ ಎದುರಾಗಲಿದೆ. ಕಾರ್ಯರಂಗದಲ್ಲಿ ಮುನ್ನಡೆಗೆ ಅವಕಾಶಗಳು ತೋರಿಬರಲಿದೆ. ಕೌಟುಂಬಿಕ ವ್ಯಾಜ್ಯಗಳಿಗೆ ಹಿರಿಯರಿಂದ ಪರಿಹಾರ ಸಿಗುವುದು.

ಕನ್ಯಾ: ಉದ್ಯೋಗಕ್ಕೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳನ್ನೂ ಮುಂದೂಡಬೇಕಾದ ಅನಿವಾರ್ಯತೆ ಎದುರಾಗಲಿದೆ. ಮಕ್ಕಳ ಆರೋಗ್ಯ ಚಿಂತೆಗೆ ಕಾರಣವಾಗಲಿದೆ. ಆದರೆ ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ದೊರೆಯಲಿದೆ. ದಿನದಂತ್ಯಕ್ಕೆ ಅಚ್ಚರಿ ಸುದ್ದಿ.

ತುಲಾ: ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕಾಗುತ್ತದೆ. ಭಾವೋದ್ವೇಗದಿಂದ ನಿರ್ಧಾರ ತೆಗೆದುಕೊಳ್ಳಲು ಹೋಗಬೇಡಿ. ನಿಮಗೆ ಅನುಕೂಲಕರವಾದ ವಾತಾವರಣವಿರುವುದರಿಂದ ಕಾರ್ಯ ಸಾಧನೆಗೆ ತೊಂದರೆಯಾಗದು.

ವೃಶ್ಚಿಕ: ತಾಂತ್ರಿಕ ವೃತ್ತಿಯವರಿಗೆ ಭವಿಷ್ಯದ ಚಿಂತೆ ಕಾಡಲಿದೆ. ಕೌಟುಂಬಿಕವಾಗಿ ಕುಟುಂಬ ಸದಸ್ಯರ ಸಹಕಾರವಿರುವುದರಿಂದ ಚಿಂತೆಗಳು ದೂರವಾಗಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.

ಧನು: ಜೀವನದಲ್ಲಿ ನಡೆಯುವ ಕೆಲವು ಅನಿರೀಕ್ಷಿತ ಘಟನೆಗಳು ನಿಮ್ಮ ನಿರ್ಧಾರಗಳನ್ನು ಬದಲಾಯಿಸೀತು. ವಾರದ ಕೊನೆಯಲ್ಲಿ ತಿರುಗಾಟಕ್ಕೆ ಯೋಜನೆ ರೂಪಿಸುವಿರಿ. ಆರ್ಥಿಕವಾಗಿ ಭದ್ರವಾಗಲು ಹೊಸ ಯೋಜನೆಗಳನ್ನು ಕೈ ಹಾಕುವಿರಿ.

ಮಕರ: ಮನಸ್ಸಿನ ಆಸೆ ಪೂರೈಸಲು ಕೆಲವೊಂದು ತ್ಯಾಗ ಮಾಡಬೇಕಾಗಿಬರುತ್ತದೆ. ಇತರರ ಮೇಲೆ ಅತಿಯಾಗಿ ಅವಲಂಬನೆಯಾಗುವುದು ಬೇಡ. ಅವಿವಾಹಿತರಿಗೆ ಸದ್ಯದಲ್ಲೇ ಕಂಕಣ ಬಲ ಕೂಡಿಬರಲಿದೆ. ದೇವತಾ ಪ್ರಾರ್ಥನೆ ಮಾಡಿ.

ಕುಂಭ: ಮನಸ್ಸಿಗೆ ತುಂಬಾ ಸಂತೋಷದಾಯಕ ದಿನವಿಂದು. ಆಪ್ತೇಷ್ಟರನ್ನು ಭೇಟಿಯಾದ ಸಂತೋಷ ನಿಮಗಾಗುವುದು. ಆದರೆ ಸಂಗಾತಿಯ ಆರೋಗ್ಯ ಚಿಂತೆಗೆ ಕಾರಣವಾದೀತು. ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.

ಮೀನ: ಕಷ್ಟದ ಸಮಯದಲ್ಲಿ ಸ್ನೇಹಿತರು ಸಕಾಲದಲ್ಲಿ ನೆರವಾಗಲಿದ್ದಾರೆ. ನಿಮ್ಮ ಸ್ವಯಂಕೃತ ಅಪರಾಧಕ್ಕೆ ತಕ್ಕ ಬೆಲೆ ತೆರಬೇಕಾದೀತು. ಆತ್ಮವಿಶ್ವಾಸದಿಂದ ಮುನ್ನಡೆದಲ್ಲಿ ಜಯ ನಿಮ್ಮದಾಗಲಿದೆ. ಹೊಸ ವಾಹನ ಖರೀದಿಗೆ ಯೋಗ ಕೂಡಿಬರುವುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದೀಪಾವಳಿಗೆ ಯಾವ ರಾಶಿಯವರು ಯಾವ ವಸ್ತುಗಳನ್ನು ದಾನ ಮಾಡಬೇಕು

ಸಂಕಷ್ಟ ನಿವಾರಣೆಗೆ ಉಚ್ಛಿಷ್ಟ ಗಣಪತಿ ಸ್ತೋತ್ರ

ದೀಪಾವಳಿ ನಂತರ ಈ ರಾಶಿಯವರ ಅದೃಷ್ಟ ಬದಲಾಗುತ್ತದೆ

ಲಲಿತಾ ಪಂಚರತ್ನಂ ಸ್ತೋತ್ರವನ್ನು ಇಂದು ತಪ್ಪದೇ ಓದಿ

ದೀಪಾವಳಿ 2025 ಗೋ ಪೂಜೆ ಮುಹೂರ್ತ ಯಾವಾಗ

ಮುಂದಿನ ಸುದ್ದಿ
Show comments