ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶುಕ್ರವಾರ, 6 ನವೆಂಬರ್ 2020 (09:11 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರಲಿದ್ದು, ಅಂದುಕೊಂಡ ಕೆಲಸಗಳನ್ನು ಯಶಸ್ವಿಯಾಗಿ ಪೂರ್ತಿ ಮಾಡುವಿರಿ. ಪೋಷಕರ ಮೆಚ್ಚುಗೆಗೆ ಕಾರಣರಾಗಲಿದ್ದೀರಿ. ಮನಸ್ಸಿನ ಭಾವನೆಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳುವಿರಿ.

ವೃಷಭ: ಹಿರಿಯರು ಎಷ್ಟೋ ದಿನದಿಂದ ಬಾಕಿಯಿದ್ದ ಕುಲದೇವರ ಪೂಜೆ ಮಾಡಲಿದ್ದಾರೆ. ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಇಷ್ಟ ಭೋಜನ ಮಾಡುವ ಯೋಗವಿದೆ. ಆದರೆ ಉದರ ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಿಥುನ: ದಾಯಾದಿ ಕಲಹಗಳಿಗೆ ಮಾತುಕತೆಯೇ ಪರಿಹಾರ ಎಂಬುದನ್ನು ಮನಗಾಣಲಿದ್ದೀರಿ. ಆರ್ಥಿಕವಾಗಿ ಹೊಸ ಯೋಜನೆಗಳಿಗೆ ಕೈ ಹಾಕಲಿದ್ದೀರಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಂಗಾತಿಯೊಂದಿಗೆ ಪರಾಮರ್ಶಿಸಿ.

ಕರ್ಕಟಕ: ಇಷ್ಟ ಮಿತ್ರರನ್ನು ಹಲವು ದಿನಗಳ ನಂತರ ಭೇಟಿಯಾದ ಖುಷಿ ಸಿಗಲಿದೆ. ಅಂದುಕೊಂಡಿದ್ದ ಕೆಲಸಗಳನ್ನು ಸರಿಯಾದ ಸಮಯಕ್ಕೆ ಪೂರ್ತಿ ಮಾಡಲಿದ್ದೀರಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.

ಸಿಂಹ: ವೃತ್ತಿರಂಗದಲ್ಲಿ ಪಾಲಿಗೆ ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ನೆರೆರಹೊರೆಯವರ ಚಾಡಿಮಾತುಗಳಿಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಹಿರಿಯರಿಗೆ ಅಪ್ರಿಯವಾದ ಸುದ್ದಿಗಳು ಕೇಳಿಬಂದೀತು. ತಾಳ್ಮೆ, ಸಂಯಮ ಅಗತ್ಯ.

ಕನ್ಯಾ: ಮನಸ್ಸಿಗೆ ಹಿಡಿಸಿದ ವ್ಯಕ್ತಿಗಳೊಂದಿಗೆ ವಿವಾಹ ಮಾತುಕತೆ ನಡೆಯಲಿದೆ. ಹಿರಿಯರ ದೇಹಾರೋಗ್ಯ ಚಿಂತೆಗೆ ಕಾರಣವಾದೀತು. ಕೃಷಿಕರಿಗೆ ವ್ಯವಹಾರದಲ್ಲಿ ಮುನ್ನಡೆಯಿದ್ದರೂ ಲಾಭ ಸಿಗದೇ ನಿರಾಸೆಯಾದೀತು. ದೇವತಾ ಪ್ರಾರ್ಥನೆ ಮಾಡಿ.

ತುಲಾ: ಮಿತವಾದ ಮಾತಿನಿಂದ ನಿಮಗೆ ಒಳಿತಾಗಲಿದೆ. ಬೇರೆಯವರ ವಿಚಾರದ ಬಗ್ಗೆ ಅನಗತ್ಯವಾಗಿ ಚಿಂತೆ, ಮೂಗು ತೂರಿಸಲು ಹೋಗಬೇಡಿ. ಮಹಿಳೆಯರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಕಿರು ಸಂಚಾರ ಮಾಡುವಿರಿ.

ವೃಶ್ಚಿಕ: ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರಗತಿ ಕಂಡುಬರುವುದು. ಯೋಗ್ಯ ವಯಸ್ಕರಿಗೆ ಸೂಕ್ತ ಸಂಬಂಧಗಳು ಕೂಡಿಬರಲಿದೆ. ಕಳೆದುಹೋದ ವಸ್ತುಗಳನ್ನು ಮರಳಿ ಪಡೆಯಲಿದ್ದೀರಿ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ.

ಧನು: ಪ್ರೀತಿ ಪ್ರೇಮದ ವಿಚಾರದಲ್ಲಿ ಹಿರಿಯರೊಂದಿಗೆ ಸಂಘರ್ಷಕ್ಕಿಳಿಯಲಿದ್ದೀರಿ. ಮಾತಿನ ಮೇಲೆ ನಿಗಾ ಇರಲಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಅಗತ್ಯವಿದೆ. ಸಂಗಾತಿಗೆ ಅನಿರೀಕ್ಷಿತ ಉಡುಗೊರೆ ನೀಡಿ ಸಂತೋಷ ಕೊಡುವಿರಿ.

ಮಕರ: ವೃತ್ತಿರಂಗದಲ್ಲಿ ನಿಮ್ಮ ಯಶಸ್ಸಿಗೆ ತೊಡಕುಂಟುಮಾಡುವವರ ಬಗ್ಗೆ ಎಚ್ಚರವಿರಲಿ. ಆತ್ಮವಿಶ್ವಾಸವೇ ನಿಮಗೆ ಶ್ರೀರಕ್ಷೆಯಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಭೇಟೆಗೆ ಅಲೆದಾಟ ತಪ್ಪದು. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ.

ಕುಂಭ: ನಿಮ್ಮ ಕೆಲಸ ಕಾರ್ಯದ ಬಗ್ಗೆ ಮಾತ್ರ ಗಮನಹರಿಸಿದರೆ ಸಾಕು. ಬೇಡದ ವಿಚಾರಗಳಲ್ಲಿ ಮೂಗು ತೂರಿಸಲು ಹೋದರೆ ಅವಮಾನ ಎದುರಿಸಬೇಕಾದೀತು. ಯಂತ್ರೋಪಕರಣ ವೃತ್ತಿಯವರಿಗೆ ಮುನ್ನಡೆಯ ಯೋಗವಿದೆ. ದೇವತಾ ಪ್ರಾರ್ಥನೆ ಮಾಡಿ.

ಮೀನ: ಒಳ್ಳೆಯ ಕೆಲಸ ಆರಂಭಿಸಲು ಹಿಂದೆ ಮುಂದೆ ನೋಡುತ್ತಾ ಕೂರಬೇಡಿ. ನಿಮ್ಮ ನೇರ ನುಡಿ ಕೆಲವರಿಗೆ ಇಷ್ಟವಾಗದೇ ಹೋಗಬಹುದು. ಆದರೆ ಚಿಂತೆ ಮಾಡಬೇಡಿ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಾಗದು. ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮಂಗಳವಾರ ಆಂಜನೇಯ ಸುಪ್ರಭಾತಮ್ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments