ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶುಕ್ರವಾರ, 23 ಅಕ್ಟೋಬರ್ 2020 (08:55 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಶಿಸ್ತಿನ ಜೀವನವೇ ನಿಮ್ಮ ಪಾಲಿಗೆ ವರವಾಗಲಿದೆ. ಆದರೆ ಬೇರೆಯವರಿಂದ ಅನಗತ್ಯವಾಗಿ ಅಪವಾದ, ಚಾಡಿ ಮಾತು ಕೇಳಿಬಂದೀತು. ಆದರೆ ಅದಕ್ಕೆ ತಲೆಕೆಡಿಸಿಕೊಳ್ಳಬೇಡಿ. ಆರ್ಥಿಕವಾಗಿ ಸಾಕಷ್ಟು ಯೋಜನೆಗಳು ನಿಮ್ಮ ತಲೆಗೆ ಹೊಳೆಯಲಿವೆ.

ವೃಷಭ: ರಾಜಕೀಯ ವ್ಯಕ್ತಿಗಳಿಗೆ ಸ್ಥಾನ ಮಾನ ಬದಲಾವಣೆ ಸಾಧ‍್ಯತೆಯಿದೆ. ವೃತ್ತಿರಂಗದಲ್ಲಿ ಮೇಲಧಿಕಾರಿಗಳ ಕಿರಿ ಕಿರಿ ತಪ್ಪದು. ಕೃಷಿಕರಿಗೆ ವ್ಯವಹಾರದಲ್ಲಿ ನಷ್ಟದ ಭೀತಿಯಿದೆ. ಹಿರಿಯರು ಕೊಡುವ ಸಲಹೆಗಳು ಉಪಯೋಗಕ್ಕೆ ಬರಲಿವೆ.

ಮಿಥುನ: ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎನ್ನುವುದನ್ನು ಮರೆಯದಿರಿ. ಯಾರೋ ಹೇಳಿದ ಅಭಿಪ್ರಾಯಕ್ಕೆ ಜೋತುಬೀಳಬೇಡಿ. ಪ್ರೀತಿ ಪಾತ್ರರೊಂದಿಗೆ ಮನಸ್ಸು ಬಿಚ್ಚಿ ಮಾತನಾಡಿ. ಕಾರ್ಯನಿಮಿತ್ತ ಕಿರು ಸಂಚಾರ ಮಾಡುವಿರಿ.

ಕರ್ಕಟಕ: ಅನಿರೀಕ್ಷಿತವಾಗಿ ದೂರ ಸಂಚಾರ ಮಾಡಲಿದ್ದೀರಿ. ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನಕ್ಕೆ ಕರೆಬರಲಿದೆ. ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ. ಧಾರ್ಮಿಕ ಕಾರ್ಯಗಳಿಗಾಗಿ ಧನವಿನಿಯೋಗ ಮಾಡಲಿದ್ದೀರಿ.

ಸಿಂಹ: ವ್ಯವಹಾರ ಕ್ಷೇತ್ರದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ದೂರವಾಗಿ ನಿಧಾನವಾಗಿ ಚೇತರಿಕೆ ಕಂಡುಬರಲಿದೆ. ಆರ್ಥಿಕವಾಗಿ ಲಾಭ ಕಂಡುಬರುವುದು. ದೇಹಾರೋಗ್ಯದಲ್ಲಿ ಕೊಂಚ ಏರುಪೇರಾದೀತು. ಕಾಳಜಿ ಮಾಡುವುದು ಅಗತ್ಯ.

ಕನ್ಯಾ: ನಿಮ್ಮ ಮನಸ್ಸಿನ ಗೊಂದಲಗಳಿಗೆ ತೆರೆ ಎಳೆಯಲಿದ್ದೀರಿ. ಸಂಗಾತಿಯ ಸಾಂತ್ವನ ಸಿಗಲಿದೆ. ಮಕ್ಕಳ ದೇಹಾರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಹಿರಿಯರಿಗೆ ಆಧ‍್ಯಾತ್ಮಿಕ ವಿಚಾರಗಳಲ್ಲಿ ಆಸಕ್ತಿ ಮೂಡಲಿದೆ. ದೇವತಾ ಪ್ರಾರ್ಥನೆ ಮಾಡಿ.

ತುಲಾ: ಆರ್ಥಿಕವಾಗಿ ಉತ್ತಮ ಅಭಿವೃದ್ಧಿ ತೋರಿಬಂದರೂ ಭವಿಷ್ಯದ ದೃಷ್ಟಿಯಿಂದ ಖರ್ಚು ವೆಚ್ಚಗಳಿಗೆ ಇತಿಮಿತಿ ಹಾಕುವುದು ಉತ್ತಮ. ಅನಿವಾರ್ಯ ಕಾರಣಗಳಿಗೆ ಪ್ರಯಾಣ ಮಾಡಬೇಕಾಗುತ್ತದೆ. ವಾಹನ ಸವಾರರಿಗೆ ಅಪಘಾತದ ಭಯವಿದೆ, ಎಚ್ಚರಿಕೆಯಿರಲಿ.

ವೃಶ್ಚಿಕ: ಆರ್ಥಿಕವಾಗಿ ಹೆಚ್ಚಿನ ಪ್ರಗತಿ ನಿರೀಕ್ಷಿಸಬಹುದು. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಕೊಂಚ ಎಚ್ಚರಿಕೆ ವಹಿಸಬೇಕಾಗುತ್ತದೆ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.

ಧನು: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿಯಾಗುವ ಯೋಗವಿದೆ. ನೂತನ ದಂಪತಿಗಳಲ್ಲಿ ಹೊಂದಾಣಿಕೆ ಕೊರತೆ ಕಂಡುಬಂದೀತು. ತಾಳ್ಮೆ, ಸಂಯಮವಿರಲಿ.

ಮಕರ: ಉದ್ಯೋಗ ವ್ಯವಹಾರದಲ್ಲಿ ಹಂತ ಹಂತವಾಗಿ ಚೇತರಿಕೆ ಕಂಡುಬರಲಿದೆ. ಅನಗತ್ಯ ಚಿಂತೆಗಳಿಗೆ ಕಡಿವಾಣ ಹಾಕಿ. ಪ್ರೀತಿ ಪಾತ್ರರೊಂದಿಗೆ ಅಮೂಲ್ಯ ಸಮಯ ಕಳೆಯಲಿದ್ದೀರಿ. ವೃತ್ತಿರಂಗದಲ್ಲಿ ನಿಮ್ಮ ತಾಳ್ಮೆ ಪರೀಕ್ಷೆ ನಡೆಯಲಿದೆ.

ಕುಂಭ: ಅಧಿಕ ಧನಲಾಭ ತರುವ ಯೋಜನೆಗಳ ಬಗ್ಗೆ ಯೋಚಿಸಲಿದ್ದೀರಿ. ಮಾನಸಿಕವಾಗಿ ಉದ್ವೇಗಕ್ಕೊಳಗಾಗಿ ನಿರ್ಧಾರ ತೆಗೆದುಕೊಳ್ಳಲು ಹೋಗಬೇಡಿ. ತಟಸ್ಥ ಧೋರಣೆಯಿಂದ ಇದ್ದಲ್ಲಿ ಉತ್ತಮ. ವಿದ್ಯಾರ್ಥಿಗಳಿಗೆ ಮುನ್ನಡೆಯ ಯೋಗವಿದೆ.

ಮೀನ: ಹಿರಿಯರ ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ. ಕೀರ್ತಿ ಪ್ರತಿಷ್ಠೆ ಸ್ಥಾನಮಾನಗಳು ತಾವಾಗಿಯೇ ಒಲಿದುಬರಲಿವೆ. ಚಿಂತೆ ಬೇಡ. ಮಹಿಳೆಯರಿಗೆ ಚಿನ್ನಾಭರಣ ಖರೀದಿ ಯೋಗವಿದೆ. ವಾಹನ ಸವಾರರು ಎಚ್ಚರಿಕೆಯಿಂದಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಂಜೆ ದೀಪ ಹಚ್ಚುವ ಅತ್ಯಂತ ಮಂಗಳಕರ ಸಮಯ ಯಾವುದು ಗೊತ್ತಾ

ಮೇಷಾದಿ ದ್ವಾದಶ ರಾಶಿಫಲ 2026: ಖ್ಯಾತ ಜ್ಯೋತಿಷಿ ಶ್ರೀ ವೆಂಕಟೇಶ್ವರ ಭಟ್ ಅವರಿಂದ

ಬುಧವಾರ ಗಣೇಶನ ಅನುಗ್ರಹಕ್ಕೆ ಈ ಸ್ತೋತ್ರ ಓದಿ

ವೈಕುಂಠ ಏಕಾದಶಿ ದಿನವಾದ ಇಂದು ಮಹಾವಿಷ್ಣುವಿನ ಈ ಮಂತ್ರವನ್ನು ತಪ್ಪದೇ ಪಠಿಸಿ

ವಿವಾಹ, ಸಂತಾನಕ್ಕೆ ಅಡ್ಡಿಯಾಗುತ್ತಿದ್ದರೆ ಸುಬ್ರಹ್ಮಣ್ಯನ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments