ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ಅತಿಯಾದ ಕೆಲಸದ ಒತ್ತಡದಿಂದ ದೇಹಾಯಾಸವಾಗಬಹುದು. ಗೃಹಿಣಿಯರಿಗೆ ಅನಿರೀಕ್ಷಿತವಾಗಿ ಸಂತಸದ ವಾರ್ತೆ ಕೇಳಿಬರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಸಕಾರಾತ್ಮಕ ವಿಚಾರಗಳನ್ನು ಮಾತ್ರ ಪರಿಗಣಿಸಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ವೃಷಭ: ಮನಸ್ಸು ವಿಶ್ರಾಂತಿ ಬಯಸಲಿದೆ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಸಕಾರಾತ್ಮಕ ಯೋಚನೆಗಳನ್ನು ಮಾಡುವುದರಿಂದ ಮನಸ್ಸು ನಿರಾಳವಾಗಿರಲಿದೆ. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟು ತೋರಿಬಂದೀತು.
ಮಿಥುನ: ಕಿರು ಸಂಚಾರದಿಂದ ಕಾರ್ಯಸಿದ್ಧಿಯಾಗುವುದು. ವಾಹನ, ಭೂಮಿ ಖರೀದಿ ಯೋಗವಿದೆ. ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು. ನಿಮ್ಮ ಕ್ರಿಯಾಶೀಲ ಯೋಚನೆಗಳಿಗೆ ಮನ್ನಣೆ ಸಿಗಲಿದೆ. ಸಂಗಾತಿಯ ಸಲಹೆಗಳನ್ನು ಪಾಲಿಸಿದಲ್ಲಿ ಉತ್ತಮ.
ಕರ್ಕಟಕ: ಆರ್ಥಿಕ ಸ್ಥಿತಿ ಗತಿಯಲ್ಲಿ ಕೊಂಚ ಏರುಪೇರಾದೀತು. ಹೊಸ ಯೋಜನೆಗಳನ್ನು ಸದ್ಯಕ್ಕೆ ಕೈಗೆತ್ತಿಕೊಳ್ಳದೇ ಇರುವುದೇ ಉತ್ತಮ. ಹಿರಿಯರ ಹಿತೋಪದೇಶಗಳು ಉಪಯೋಗಕ್ಕೆ ಬರುವುದು. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.
ಸಿಂಹ: ನಿಸ್ವಾರ್ಥವಾಗಿ ಮಾಡಿದ ಸೇವೆಗೆ ತಕ್ಕ ಫಲ ಸಿಗಲಿದೆ. ನಿರುದ್ಯೋಗಿಗಳು ಉದ್ಯೋಗ ಸಂದರ್ಶನಕ್ಕಾಗಿ ಪರ
ಊರಿಗೆ ಪ್ರಯಾಣ ಬೆಳೆಸಲಿದ್ದೀರಿ. ಸ್ನೇಹಿತರನ್ನು ಭೇಟಿಯಾಗುವ ಯೋಗವಿದೆ. ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ.
ಕನ್ಯಾ: ಮಕ್ಕಳ ವಿಚಾರದಲ್ಲಿ ಸಂತಸದ ವಾರ್ತೆ ಆಲಿಸುವಿರಿ. ಸಂಗಾತಿಯೊಂದಿಗೆ ಸುಂದರ ಕ್ಷಣ ಕಳೆಯಲಿದ್ದೀರಿ. ಹಿರಿಯರೊಡನೆ ಭಿನ್ನಾಭಿಪ್ರಾಯಗಳಾಗದಂತೆ ಎಚ್ಚರಿಕೆ ವಹಿಸಿ. ಸರಕಾರಿ ಕೆಲಸದವರು ಬಿಡುವಿನ ಖುಷಿ ಅನುಭವಿಸಲಿದ್ದಾರೆ.
ತುಲಾ: ಎಷ್ಟೋ ದಿನದಿಂದ ನೀವು ಅಂದುಕೊಂಡಿದ್ದ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ನೂತನ ದಂಪತಿಗಳಿಗೆ ಸುಂದರ ಕ್ಷಣ ಕಳೆಯುವ ಯೋಗವಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸಲಿದ್ದೀರಿ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.
ವೃಶ್ಚಿಕ: ನೀವು ಕೈಗೊಂಡ ಕೆಲಸಗಳಿಗೆ ಪೂರಕವಾದ ವಾತಾವರಣ ಒದಗಿಬರಲಿದೆ. ಹಿತಶತ್ರುಗಳ ಹುನ್ನಾರಗಳು ಬಯಲಿಗೆ ಬರಲಿವೆ. ಅನಿರೀಕ್ಷಿತವಾಗಿ ಮನೆಗೆ ಅತಿಥಿಗಳ ಆಗಮನವಾಗಬಹುದು. ಯೋಗ್ಯ ವಯಸ್ಕರಿಗೆ ಕಂಕಣ ಬಲ ಶೀಘ್ರದಲ್ಲೇ ಕೂಡಿಬರಲಿದೆ.
ಧನು: ಕಷ್ಡದ ಸಮಯದಲ್ಲಿ ಮಿತ್ರರು ನಿಮ್ಮ ನೆರವಿಗೆ ಬರಲಿದ್ದಾರೆ. ನೆರೆಹೊರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ಆಪ್ತ ಮಿತ್ರರಿಂದ ಸಹಾಯ ಸಿಗುವುದರಿಂದ ಆರ್ಥಿಕ ಸಂಕಷ್ಟ ದೂರವಾಗಲಿದೆ. ಚಿಂತೆ ಬೇಡ.
ಮಕರ: ಮಹಿಳೆಯರಿಗೆ ಮನಸ್ಸಿನಲ್ಲಿ ಅಂದುಕೊಂಡಿದ್ದು ಒಂದು, ಆಗುವುದು ಇನ್ನೊಂದು ಎಂಬ ಪರಿಸ್ಥಿತಿ ಎದುರಾದೀತು. ಕಷ್ಟದ ಸಮಯದಲ್ಲಿ ನಿಮ್ಮ ಆತ್ಮಸ್ಥೈರ್ಯವೇ ನಿಮಗೆ ಶ್ರೀರಕ್ಷೆಯಾಗಲಿದೆ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ.
ಕುಂಭ: ವೃತ್ತಿರಂಗದಲ್ಲಿ ನೀವು ತಾಳ್ಮೆ, ಸಂಯಮ ಕಾಪಾಡಿಕೊಂಡಷ್ಟು ನಿಮಗೇ ಒಳ್ಳೆಯದು. ದುಡುಕಿನ ನಿರ್ಧಾರ ತೆಗೆದುಕೊಳ್ಳಲು ಹೋಗಬೇಡಿ. ಕಲಾ ಕ್ಷೇತ್ರದಲ್ಲಿರುವವರಿಗೆ ಕೀರ್ತಿ ಸಂಪಾದಿಸುವ ಯೋಗ. ಖರ್ಚು ವೆಚ್ಚದ ಬಗ್ಗೆ ಮಿತಿಯಿರಲಿ.
ಮೀನ: ವೃತ್ತಿರಂಗದಲ್ಲಿ ಬದಲಾವಣೆ ಬಗ್ಗೆ ಮನಸ್ಸು ಮಾಡಲಿದ್ದೀರಿ. ನಿಮ್ಮ ನಿರ್ಧಾರಗಳಿಗೆ ಸಂಗಾತಿಯ ಬೆಂಬಲ ಸಿಗಲಿದೆ. ಮಾನಸಿಕವಾಗಿ ನಿರುತ್ಸಾಹ ಕಾಡದಂತೆ ಎಚ್ಚರಿಕೆ ವಹಿಸಿ. ಹಿರಿಯರಿಗೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಯೋಗವಿದೆ.