Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಗುರುವಾರ, 24 ಸೆಪ್ಟಂಬರ್ 2020 (09:14 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ನಿಶ್ಚಿತವಾಗಿ ನಿಮಗೆ ಬರಬೇಕಿದ್ದ ಹಣ ಪಾವತಿಯಾಗಲಿದೆ. ಆದರೆ ಅದಕ್ಕೆ ನೀವು ಸಾಕಷ್ಟು ಶ್ರಮಪಡಬೇಕಾಗುತ್ತದೆ. ದೇಹಾರೋಗ್ಯದಲ್ಲಿ ಕೆಲವು ಬದಲಾವಣೆಗಳು ಕಂಡುಬರಲಿದೆ. ಸಂಗಾತಿಯ ಸಹಕಾರ ದೊರೆಯಲಿದೆ. ದೇವತಾ ಪ್ರಾರ್ಥನೆ ಮಾಡಿ.

ವೃಷಭ: ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮನಸ್ಸಿಗೆ ಉಲ್ಲಾಸ ಪಡೆಯಲಿದ್ದೀರಿ. ಪ್ರೇಮಿಗಳು ಪ್ರೇಮ ಸಲ್ಲಾಪ ನಡೆಸಲಿದ್ದಾರೆ. ಹಿರಿಯರೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳಿ. ಕಾರ್ಯನಿಮಿತ್ತ ಕಿರು ಓಡಾಟ ನಡೆಸಬೇಕಾಗುತ್ತದೆ.

ಮಿಥುನ: ನಕಾರಾತ್ಮಕ ಯೋಚನೆಗಳನ್ನು ಬದಿಗಿಟ್ಟು ಕಾರ್ಯಕ್ಷೇತ್ರದಲ್ಲಿ ಹೊಸ ಚಿಂತನೆಗಳನ್ನು ಕಾರ್ಯಗತಗೊಳಿಸಿ. ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಿ. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗ ಸಿಗುವುದು.

ಕರ್ಕಟಕ: ಮನೆಗೆ ಅನಿರೀಕ್ಷಿತವಾಗಿ ಪ್ರೀತಿ ಪಾತ್ರರ ಆಗಮನವಾಗಲಿದ್ದು, ಸಂಭ್ರಮದ ವಾತಾವರಣವಿರಲಿದೆ. ಶುಭ ಮಂಗಲ ಕಾರ್ಯದಲ್ಲಿ ಭಾಗಿಯಾಗಲಿದ್ದೀರಿ. ಕೃಷಿಕರಿಗೆ ವ್ಯವಹಾರದಲ್ಲಿ ನಷ್ಟವಾಗಬಹುದು. ಆರ್ಥಿಕವಾಗಿ ಖರ್ಚು ವೆಚ್ಚಗಳ ಬಗ್ಗೆ ಹಿಡಿತವಿರಲಿ.

ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ಮೇಲ್ವರ್ಗಕ್ಕೆ ಏರುವ ಅವಕಾಶಗಳು ಸ್ವಲ್ಪದರಲ್ಲೇ ಕೈ ತಪ್ಪಿ ನಿರಾಸೆಯಾಗಬಹುದು. ಸ್ವಯಂ ವ್ಯಾಪಾರಿಗಳಿಗೆ ಮುನ್ನಡೆಗೆ ಅವಕಾಶಗಳು ದೊರೆಯುತ್ತವೆ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಉತ್ತಮ.

ಕನ್ಯಾ: ಹಿರಿಯರ ಜತೆಗೆ ಕೆಲವು ಕ್ಷಣ ಕಳೆಯುವುದರಿಂದ ಅವರಿಗೂ ನೆಮ್ಮದಿ ಸಿಗಲಿದೆ. ಸಂಗಾತಿಗೆ ಅನಿರೀಕ್ಷಿತ ಉಡುಗೊರೆ ನೀಡಲಿದ್ದೀರಿ. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸುವಿರಿ. ಇಷ್ಟಮಿತ್ರರೊಂದಿಗೆ ಕಿರು ಸಂಚಾರ ಮಾಡುವ ಯೋಗವಿದೆ.

ತುಲಾ: ಮನೆಯಲ್ಲಿ ಶುಭ ಮಂಗಲ ಕಾರ್ಯಗಳನ್ನು ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ಗುರು ಹಿರಿಯರ ಹಿತವಚನಗಳು ಹೊಸ ದಾರಿ ತೋರಲಿವೆ. ಮಾನಸಿಕವಾಗಿ ಉದ್ವೇಗಕ್ಕೊಳಗಾಗುವ ಸಂದರ್ಭ ಒದಗಿಬರಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಶ್ಚಿಕ: ಹಿಂದೆ ಮಾಡಿದ ತಪ್ಪುಗಳ ಬಗ್ಗೆ ಯೋಚಿಸುತ್ತಾ ಮನಸ್ಸು ಪಶ್ಚಾತ್ತಾಪ ಪಡಲಿದೆ. ಮನಸ್ಸಿನ ಭಾವನೆಗಳನ್ನು ಸಂಗಾತಿಯೊಂದಿಗೆ ಹಂಚಿ ಹಗುರಮಾಡಿಕೊಳ್ಳಿ. ಆರ್ಥಿಕವಾಗಿ ಹಣಕಾಸಿನ ಖರ್ಚು ವೆಚ್ಚಗಳ ಬಗ್ಗೆ ನಿಗಾ ಇರಲಿ.

ಧನು: ಕಷ್ಟದ ಸಮಯದಲ್ಲಿ ಮಿತ್ರರು ನೀಡುವ ಸಲಹೆಗಳು ಫಲ ಕೊಡಲಿವೆ. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ. ತಾಂತ್ರಿಕ ವೃತ್ತಿಯವರಿಗೆ ಮುನ್ನಡೆಯ ಯೋಗವಿದೆ. ಮನಸ್ಸಿಗೆ ಖುಷಿಕೊಡುವ ಕೆಲಸದಲ್ಲಿ ತೊಡಗಿಸಿಕೊಳ್ಳಿ.

ಮಕರ: ಲಾಭದಾಯಕ ಆದಾಯ ತರುವ ದಾರಿಗಳ ಬಗ್ಗೆ ಯೋಚನೆ ಮಾಡಲಿದ್ದೀರಿ. ಹಿತಶತ್ರುಗಳಿಂದ ದೂರವಿದ್ದರೆ ಉತ್ತಮ. ಉದ್ಯೋಗದಲ್ಲಿ ಸ್ಥಾನ ಪಲ್ಲಟ ಸಾಧ‍್ಯತೆಯಿದೆ. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ ಸಿಗುವುದು. ದಿನದಂತ್ಯಕ್ಕೆ ಅಚ್ಚರಿ ಸುದ್ದಿ.

ಕುಂಭ: ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ನೂತನ ದಂಪತಿಗಳಿಗೆ ಮಧುಚಂದ್ರದ ಭಾಗ್ಯವಿದೆ. ಮಾತಿನ ಬಗ್ಗೆ ನಿಗಾ ಇರಲಿ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಮುನ್ನಡೆಗೆ ಸಹಕಾರಿಯಾದ ವಾತಾವರಣ ಕಂಡುಬರಲಿದೆ.

ಮೀನ: ಮಕ್ಕಳ ಮನೋರಂಜನೆ ನಿಮಿತ್ತ ಧನವ್ಯಯ ಮಾಡಲಿದ್ದೀರಿ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ಒದಗಿಬರಲಿವೆ. ಮಹಿಳೆಯರಿಗೆ ಚಿನ್ನಾಭರಣ ಖರೀದಿ ಯೋಗವಿದೆ. ವ್ಯವಹಾರದಲ್ಲಿ ನಯವಂಚಕರನ್ನು ಗುರುತಿಸಿ ದೂರವಿರುವುದು ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಅಧಿಕ ಮಾಸದಲ್ಲಿ ಇದನ್ನು ದಾನ ಮಾಡಿದರೆ ಜಾತಕ ದೋಷ ದೂರವಾಗುತ್ತದೆ