ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮನ್ನು ಮೂಲೆಗುಂಪು ಮಾಡುವ ವ್ಯವಸ್ಥಿತ ಸಂಚು ಬೆಳಕಿಗೆ ಬರಲಿದೆ. ಸಾಮಾಜಿಕ ಕೆಲಸಗಳಿಂದ ಮನಸ್ಸಿಗೆ ಖುಷಿಯಾಗಲಿದೆ. ಹೆಸರು, ಕೀರ್ತಿ ಸಂಪಾದಿಸಲಿದ್ದೀರಿ. ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಿ.
ವೃಷಭ: ವೃತ್ತಿರಂಗದಲ್ಲಿ ನಿಮ್ಮ ಕಾರ್ಯವೈಖರಿ ಮೇಲಧಿಕಾರಿಗಳ ಪ್ರಶಂಸೆಗೊಳಗಾಗಲಿದೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಆದರೆ ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ. ಸಂಗಾತಿಯ ಮನದಾಸೆ ಪೂರೈಸಲಿದ್ದೀರಿ.
ಮಿಥುನ: ಕಾರ್ಯರಂಗದಲ್ಲಿ ನೀವು ಮಾಡಲು ಬಾಕಿ ಉಳಿದಿರುವ ಕೆಲಸಗಳ ಬಗ್ಗೆ ಗಮನ ಹರಿಸಲಿದ್ದೀರಿ. ಅಪರಿಚಿತರಿಂದ ನಿಮಗೆ ಲಾಭವಾಗಲಿದೆ. ವ್ಯಾಪಾರ-ವ್ಯವಹಾರಗಳಲ್ಲಿ ಲಾಭವಿಲ್ಲದಿದ್ದರೂ ನಷ್ಟವಾಗದು. ಹಿರಿಯರ ಮಾತುಗಳಿಗೆ ಕಿವಿಗೊಡಬೇಕಾಗುತ್ತದೆ.
ಕರ್ಕಟಕ: ವೃತ್ತಿರಂಗದಲ್ಲಿ ನಿಮ್ಮ ಕಾರ್ಯಸಾಧನೆಗೆ ಅನೇಕ ಅಡೆತಡೆಗಳು ತೋರಿಬಂದೀತು. ಕುಲದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಉತ್ತಮ. ಕೌಟುಂಬಿಕವಾಗಿ ಉತ್ತಮ ದಿನವಾಗಿದ್ದು, ಸುಂದರ ಕ್ಷಣ ನಿಮ್ಮದಾಗುವುದು.
ಸಿಂಹ: ಅನಿರೀಕ್ಷಿತ ರೀತಿಯಲ್ಲಿ ಅಂದುಕೊಂಡ ಕೆಲಸ ಕಾರ್ಯಗಳು ನಡೆಯಲಿವೆ. ಕೃಷಿಕ ವರ್ಗದವರಿಗೆ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಅವಿವಾಹಿತರ ವಿವಾಹ ಮಾತುಕತೆಗಳು ಮುಂದೂಡಿಕೆಯಾಗಬಹುದು. ಕಾರ್ಯನಿಮಿತ್ತ ಕಿರು ಸಂಚಾರ ಮಾಡಬೇಕಾಗಬಹುದು.
ಕನ್ಯಾ: ಪ್ರೀತಿ ಪಾತ್ರರೊಂದಿಗೆ ಬೆರೆಯಲು ಸಾಧ್ಯವಾಗದೇ ಮನಸ್ಸಿಗೆ ಒಂದು ರೀತಿಯ ಬೇಸರ ಕಾಡಬಹುದು. ಮಕ್ಕಳ ದೇಹಾರೋಗ್ಯದ ಬಗ್ಗೆ ಚಿಂತೆಯಾಗಲಿದೆ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ನೆರವು ಸಿಗಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
ತುಲಾ: ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಕಷ್ಟದಲ್ಲಿರುವ ಮಿತ್ರರ ಸಹಾಯಕ್ಕೆ ನಿಲ್ಲುವಿರಿ. ಆರ್ಥಿಕವಾಗಿ ಖರ್ಚು ವೆಚ್ಚಗಳ ಬಗ್ಗೆ ಗಮನಹರಿಸಬೇಕು. ವೃತ್ತಿರಂಗದಲ್ಲಿ ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯಗಳಾಗದಂತೆ ಎಚ್ಚರಿಕೆ ವಹಿಸಿ.
ವೃಶ್ಚಿಕ: ಬಹಳ ದಿನಗಳಿಂದ ನೀವು ಕಾಯುತ್ತಿದ್ದ ಆಪ್ತರ ಭೇಟಿಯಾಗಲಿದ್ದೀರಿ. ನೀವು ಎಣಿಸಿದಂತೇ ಕಾರ್ಯಸಾಧನೆಯಾಗಲಿರುವುದರಿಂದ ಚಿಂತೆ ಬೇಡ. ಸಹೋದ್ಯೋಗಿಗಳು ನಿಮ್ಮ ಕಷ್ಟಗಳಿಗೆ ನೆರವಾಗಲಿದ್ದಾರೆ. ಚಿಂತೆ ಬೇಡ.
ಧನು: ಸಹೋದರರ ಪ್ರೀತಿಗೆ ಭಾಜನರಾಗಲಿದ್ದೀರಿ. ಸಾಹಿತ್ಯ ಕ್ಷೇತ್ರದಲ್ಲಿರುವವರಿಗೆ ಕೀರ್ತಿ ಸಂಪಾದಿಸುವ ಯೋಗ. ಹಿರಿಯರಿಗೆ ದೇವಾಲಯ ಸಂದರ್ಶನ ಯೋಗವಿದೆ. ಮಕ್ಕಳ ವಿಚಾರದಲ್ಲಿ ಅನಗತ್ಯ ಚಿಂತೆ ಬೇಡ. ದೇವತಾ ಪ್ರಾರ್ಥನೆಯಿಂದ ನೆಮ್ಮದಿ.
ಮಕರ: ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ. ಸಾಂಸಾರಿಕವಾಗಿ ಇದುವರೆಗೆ ಇದ್ದ ಸಮಸ್ಯೆಗಳು ಪರಿಹಾರವಾಗಲಿದೆ. ವ್ಯಾಪಾರಿಗಳಿಗೆ ಅಲ್ಪ ಮುನ್ನಡೆಯಿರಲಿದೆ. ಕೆಳ ಹಂತದ ನೌಕರರಿಗೆ ಉದ್ಯೋಗ ಭದ್ರತೆಯ ಆತಂಕ ಎದುರಾದೀತು.
ಕುಂಭ: ವಾಸ ಸ್ಥಳ ಬದಲಾವಣೆಗೆ ಚಿಂತನೆ ಮಾಡಲಿದ್ದೀರಿ. ಸಂಗಾತಿಯ ದೇಹಾರೋಗ್ಯದ ಚಿಂತೆಗೆ ಕಾರಣವಾದೀತು. ಆರ್ಥಿಕವಾಗಿ ಧನ ಗಳಿಕೆಗೆ ನಾನಾ ಮಾರ್ಗಗಳನ್ನು ಹುಡುಕಾಡಲಿದ್ದೀರಿ. ಮಹಿಳೆಯರಿಗೆ ತವರಿನ ಸಂಬಂಧಿಕರನ್ನು ಭೇಟಿಯಾಗುವ ಯೋಗ.
ಮೀನ: ಕುಟುಂಬದ ಹಿರಿಯರ ಆರೋಗ್ಯದಲ್ಲಿ ಏರುಪೇರಾದೀತು. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ. ನೂತನ ದಂಪತಿಗಳಿಗೆ ಸಂತಾನ ಫಲ ಸೂಚನೆ ಸಿಗಲಿದೆ. ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ದೇವತಾ ಪ್ರಾರ್ಥನೆ ಮಾಡಿ.