ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಮಂಗಳವಾರ, 25 ಆಗಸ್ಟ್ 2020 (08:51 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಮಾಡಿದ ಕೆಲಸಕ್ಕೆ ಪ್ರತಿಫಲ ಸಿಗದೇ ಮನಸ್ಸಿಗೆ ಬೇಸರವಾಗಬಹುದು. ಹೊಸ ಉದ್ಯೋಗಾವಕಾಶಗಳಿಗಾಗಿ ಹುಡುಕಾಟ ನಡೆಸಲಿದ್ದೀರಿ. ಹಳೆಯ ಮಿತ್ರರಿಂದ ಸಹಾಯ ನಿರೀಕ್ಷಿಸಬಹುದು. ಹತ್ತು ಹಲವು ಚಿಂತೆಗಳಿಂದ ಮಾನಸಿಕವಾಗಿ ಹೈರಾಣಾಗಲಿದ್ದೀರಿ.

ವೃಷಭ: ಬಯಸಿದ್ದೊಂದು ಆಗುವುದು ಇನ್ನೊಂದು ಎಂಬ ಪರಿಸ್ಥಿತಿ ನಿಮ್ಮದಾಗಲಿದೆ. ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿಯಾಗಲಿದೆ. ಸಾಮಾಜಿಕವಾಗಿ ಉತ್ತಮ ಸ್ಥಾನ ಮಾನ ಗಳಿಸಲಿದ್ದೀರಿ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ.

ಮಿಥುನ: ದೇಹಾರೋಗ್ಯದಲ್ಲಿ ಏರುಪೇರಾಗಲಿದ್ದು, ಮನಸ್ಸಿಗೆ ಆತಂಕವಾಗಬಹುದು. ಸಂಗಾತಿಯ ಜತೆಗೆ ನಿಮ್ಮ ದುಃಖ ದುಮ್ಮಾನಗಳನ್ನು ಹಂಚಿಕೊಳ್ಳಲಿದ್ದೀರಿ. ವ್ಯಾಪಾರಿಗಳಿಗೆ ಉತ್ತಮ ಅವಕಾಶಗಳು ತೋರಿಬರಲಿವೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕರ್ಕಟಕ: ದೇಹಾರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ದೂರವಾಗಲಿದೆ. ವ್ಯವಹಾರದಲ್ಲಿ ಚೇತರಿಕೆಯ ಅನುಭವವಾಗಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರಲಿದ್ದು, ಮನಸ್ಸಿಗೆ ಸಂತವಾಗುವುದು. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.

ಸಿಂಹ: ನೂತನ ಗೃಹ, ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲು ಇದು ಸಕಾಲ. ಹಿತಶತ್ರುಗಳಿಂದ ವಂಚನೆಯಾದೀತು. ವ್ಯವಹಾರದಲ್ಲಿ ಹೆಚ್ಚುವರಿ ಹೊಣೆಗಾರಿಕೆ ಹೆಗಲಿಗೇರಲಿದೆ. ವ್ಯಾಪಾರಿಗಳಿಗೆ ಮುನ್ನಡೆ ತೋರಿಬರಲಿದೆ.

ಕನ್ಯಾ: ಸಾಂಸಾರಿಕವಾಗಿ ಕೆಲವೊಂದು ಭಿನ್ನಾಭಿಪ್ರಾಯಗಳು ಬಂದೀತು. ಆದರೆ ಅದನ್ನು ತಾಳ್ಮೆಯಿಂದ ನಿಭಾಯಿಸದೇ ಇದ್ದರೆ ಸಂಬಂಧ ಹಾಳಾದೀತು. ನಿಮ್ಮ ದುಡುಕು ಬುದ್ಧಿಯಿಂದ ಆಕಸ್ಮಿಕವಾಗಿ ಹಣ ಕಳೆದುಕೊಳ್ಳುವ ಪರಿಸ್ಥಿತಿ ಎದುರಾದೀತು. ಎಚ್ಚರಿಕೆ.

ತುಲಾ: ಮರ್ಯಾದೆ ಸಿಗದ ಜಾಗದಲ್ಲಿ ಇರುವುದಕ್ಕಿಂತ ಬೆಲೆಯಿರುವ ಕಡೆ ಇರುವುದು ಸೂಕ್ತ ಎನಿಸಲಿದೆ. ಉದ್ಯೋಗ ಬದಲಾವಣೆಗೆ ಮನಸ್ಸು ಚಿಂತನೆ ನಡೆಸಲಿದೆ. ಆಕಸ್ಮಿಕವಾಗಿ ಧನಲಾಭವಾಗುವುದದರಿಂದ ಅಂದುಕೊಂಡ ಕೆಲಸ ನೆರವೇರಿಸಲಿದ್ದೀರಿ.

ವೃಶ್ಚಿಕ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ನಾನಾ ಅವಕಾಶಗಳು ಕಂಡುಬರಲಿವೆ. ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ. ಹಿರಿಯರು ಮಾಡಿದ ಪುಣ್ಯದ ಫಲದಿಂದ ಕಾರ್ಯಸಾಧನೆಯಾಗುವುದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ.

ಧನು: ವ್ಯಾಪಾರಿ ವರ್ಗದವರಿಗೆ ತೀವ್ರ ಪೈಪೋಟಿ ಎದುರಾಗಲಿದೆ. ನವದಂಪತಿಗಳಿಗೆ ಹೊಂದಾಣಿಕೆ ಕೊರತೆ ಉಂಟಾಗಬಹುದು. ತಾಳ್ಮೆ, ಸಂಯಮ ಅಗತ್ಯ. ಉದ್ಯೋಗದಲ್ಲಿ ಸ್ಥಾನ ಪಲ್ಲಟ ಭೀತಿ ಎದುರಾಗಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗಬಹುದು.

ಮಕರ: ಬೇರೆಯವರ ವಿಚಾರಕ್ಕೆ ತಲೆಕೆಡಿಸಿಕೊಂಡು ನಿಮ್ಮ ನೆಮ್ಮದಿ ಹಾಳು ಮಾಡಿಕೊಳ್ಳಬೇಡಿ. ನೆರೆಹೊರೆಯವರೊಂದಿಗೆ ಎಚ್ಚರಿಕೆಯಿಂದ ವರ್ತಿಸಿ. ಇಷ್ಟ ದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡುವುದರಿಂದ ಮನಸ್ಸಿನಲ್ಲಿ ಅಂದುಕೊಳ‍್ಳುವುದು ನೆರವೇರುತ್ತದೆ.

ಕುಂಭ: ಸರಕಾರಿ ಅಧಿಕಾರಿಗಳಿಗೆ ಹೆಚ್ಚಿನ ಹೊಣೆಗಾರಿಕೆ ಹೆಗಲಿಗೇರಲಿದೆ. ನಯವಂಚಕರ ಹುನ್ನಾರಗಳು ಬೆಳಕಿಗೆ ಬರಲಿವೆ. ಉತ್ತಮ ಸ್ನೇಹ ಸಂಗ ಮುಂದೆ ಒಳ್ಳೆಯ ಫಲ ಕೊಡಲಿದೆ. ಮಹಿಳೆಯರಿಗೆ ಗೃಹ ಕೃತ್ಯಗಳಿಂದ ಕೊಂಚ ಬಿಡುವು ಸಿಗಬಹುದು.

ಮೀನ: ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು ಚಿಂತೆ ಬೇಡ. ಕೃಷಿಕರಿಗೆ ವೃತ್ತಿಯಲ್ಲಿ ನೆಮ್ಮದಿ ಸಿಗಲಿದೆ. ವ್ಯಾಪಾರ, ವ್ಯವಹಾರಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ವಾಹನ ಸವಾರರು ಎಚ್ಚರಿಕೆಯಿಂದ ಇರುವುದು ಅಗತ್ಯ. ಇಷ್ಟಮಿತ್ರರ ಭೇಟಿಯಾಗಲಿದ್ದೀರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments