ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಗುರುವಾರ, 20 ಆಗಸ್ಟ್ 2020 (09:01 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಮೇಲಧಿಕಾರಿಗಳ ಅಸಹಾಕರ ಅಸಮಾಧಾನವುಂಟು ಮಾಡಲಿದೆ. ಬಾಕಿ ಹಣ ವಸೂಲಾತಿ ಚಿಂತೆ ಕಾಡುವುದು. ವೃತ್ತಿರಂಗದಲ್ಲಿ ಹೊಸ ಬಗೆಯ ಯೋಚನೆಗಳನ್ನು ಕಾರ್ಯರೂಪಕ್ಕೆ ತರಲಿದ್ದೀರಿ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿ.

ವೃಷಭ: ಮನಸ್ಸಿಗೆ ಅನಿಸಿದ್ದನ್ನು ಮಾಡುತ್ತಾ ಹೋಗುವುದರಿಂದ ಕುಟುಂಬ ಸದಸ್ಯರ ಅಸಮಾಧಾನಕ್ಕೆ ಗುರಿಯಾಗಬೇಕಾದೀತು. ವೃತ್ತಿರಂಗದಲ್ಲಿ ಅಭಿವೃದ್ಧಿ ಕಂಡುಬರಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಭ್ಯವಾಗುವುದು.

ಮಿಥುನ: ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ಬರಲಿದೆ. ನೀವು ಅಂದುಕೊಂಡಂತೇ ಕೆಲಸಗಳು ನಡೆಯದೇ ಹತಾಶೆಯಾಗಬಹುದು. ಅನಿರೀಕ್ಷಿತವಾಗಿ ದೂರ ಪ್ರಯಾಣ ಮಾಡುವ ಪರಿಸ್ಥಿತಿ ಬರಲಿದೆ. ದಿನದಂತ್ಯಕ್ಕೆ ಎಚ್ಚರಿಕೆ ಅಗತ್ಯ.

ಕರ್ಕಟಕ: ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಸಿಗಲಿದೆ. ಅನಿರೀಕ್ಷಿತವಾಗಿ ಹಳೆಯ ಮಿತ್ರನನ್ನು ಭೇಟಿಯಾಗಲಿದ್ದು, ಮನಸ್ಸಿಗೆ ಸಂತಸವಾಗಲಿದೆ. ಕೆಲಸ ಕಾರ್ಯಗಳು ನೀವು ಅಂದುಕೊಂಡ ರೀತಿಯಲ್ಲೇ ಸಾಗಲಿವೆ. ವೈವಾಹಿಕ ಪ್ರಸ್ತಾಪಗಳಿಗೆ ಮುನ್ನಡೆ ಸಿಗಲಿದೆ.

ಸಿಂಹ: ಶ್ರೀದೇವತಾ ಅನುಗ್ರಹದಿಂದ ಅಂದುಕೊಂಡ ಕೆಲಸ ಕಾರ್ಯಗಳು ಸುಗಮವಾಗಿ ನೆರವೇರಲಿದೆ. ಕೃಷಿಕರಿಗೆ ವ್ಯವಹಾರದಲ್ಲಿ ಇದುವರೆಗೆ ಇದ್ದ ಅಡೆತಡೆಗಳು ನಿವಾರಣೆಯಾಗಲಿದೆ. ದಾಯಾದಿಗಳೊಂದಿಗಿನ ಭಿನ್ನಾಭಿಪ್ರಾಯಗಳು ನಿವಾರಣೆಯಾಗಲಿವೆ.

ಕನ್ಯಾ: ವೈಯಕ್ತಿಕ ಆರೋಗ್ಯದ ಬಗ್ಗೆ ನಿಗಾ ಇರಲಿ. ಆಗಾಗ ಬಂಧು ಮಿತ್ರರ ಚಾಡಿ ಮಾತುಗಳಿಂದ ಮನಸ್ಸಿಗೆ ನೆರವಾಗಬಹುದು. ಮಾಡುವ ಕೆಲಸದಲ್ಲಿ ಹೆಚ್ಚಿನ ಏಕಾಗ್ರತೆ ಬೇಕಾಗುತ್ತದೆ. ದೇವತಾ ಕಾರ್ಯಗಳಿಗೆ ಧನವಿನಿಯೋಗ ಮಾಡಲಿದ್ದೀರಿ.

ತುಲಾ: ವೃತ್ತಿರಂಗದಲ್ಲಿ ನಿಮ್ಮ ಕ್ರಿಯಾಶೀಲತೆ ಪ್ರಕಟಿಸಲು ಸದವಕಾಶಗಳು ಸಿಗಲಿವೆ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳು ನೆರವೇರಲಿದ್ದು, ಸಂಭ್ರಮದ ವಾತಾವರಣವಿರಲಿದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಶ್ಚಿಕ: ಆರ್ಥಿಕವಾಗಿ ಧನಗಳಿಕೆಗೆ ನಾನಾ ಮಾರ್ಗಗಳನ್ನು ಕಂಡುಕೊಳ್ಳಲಿದ್ದೀರಿ. ಗೃಹ ರಿಪೇರಿ ಕೆಲಸಗಳಿಗೆ ಮುಂದಾಗಲಿದ್ದೀರಿ. ಸಾಂಸಾರಿಕವಾಗಿ ಮನದೆನ್ನೆಯ ಮನಸ್ಸಿಗೆ ಸಂತೋಷ ಕೊಡಲಿದ್ದೀರಿ. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.

ಧನು: ವೃತ್ತಿರಂಗದಲ್ಲಿ ಉತ್ತಮ ಸ್ನೇಹಸಂಗದಿಂದ ನೀವು ಅಂದುಕೊಂಡಿದ್ದನ್ನು ಸಾಧಿಸಬಹುದು. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳ ಬಗ್ಗೆ ಮಿತಿಯಿರಲಿ.

ಮಕರ: ಆಗಾಗ ಆರೋಗ್ಯದಲ್ಲಿ ಏರುಪೇರಾಗುವುದರಿಂದ ಆತಂಕವಾದೀತು. ಪತಿ-ಪತ್ನಿಯರಲ್ಲಿ ಹೊಂದಾಣಿಕೆ ಅಗತ್ಯ. ಅವಿವಾಹಿತರಿಗೆ ಶೀಘ್ರ ಕಂಕಣ ಭಾಗ್ಯ ಕೂಡಿಬರಲಿದೆ. ಸ್ವಕ್ಷೇತ್ರದಲ್ಲಿ ಸಾಧನೆ ಮಾಡಲು ಆಸಕ್ತಿ ಮೂಡಲಿದೆ. ಹಿರಿಯರ ಬಗ್ಗೆ ಕಾಳಜಿವಹಿಸಿ.

ಕುಂಭ: ಆರ್ಥಿಕವಾಗಿ ನಾನಾ ಖರ್ಚು ವೆಚ್ಚಗಳು ಕಂಡುಬಂದರೂ ಸಕಾಲಕ್ಕೆ ಆದಾಯ ಬರುವುದರಿಂದ ಸಮಸ್ಯೆಯಾಗದು. ಹಿತ ಶತ್ರುಗಳ ಕಾಟದಿಂದ ಮನಸ್ಸಿಗೆ ಕಿರಿ ಕಿರಿಯಾಗಬಹುದು. ಕಾರ್ಯನಿಮಿತ್ತ ಓಡಾಟ ನಡೆಸಬೇಕಾಗುತ್ತದೆ. ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿ.

ಮೀನ: ಎಷ್ಟೋ ದಿನಗಳ ಬಳಿಕ ಇಷ್ಟ ಮಿತ್ರರ ಭೇಟಿಯಾಗುವ ಯೋಗವಿದೆ. ಆರ್ಥಿಕವಾಗಿ ನಾನಾ ರೀತಿಯಲ್ಲಿ ಖರ್ಚು ವೆಚ್ಚಗಳು ಕಂಡುಬಂದೀತು. ಹೆಣ್ಣು ಮಕ್ಕಳಿಂದ ಸಂಗಾತಿಯಿಂದ ಉಡುಗೊರೆ ಸಿಗಲಿದೆ. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಲಿದ್ದೀರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಂಕಟ ಮೋಚನ ಹನುಮಾನ್ ಅಷ್ಟಕಂ ಸ್ತೋತ್ರ

ಹಣಕಾಸಿನ ಸಮಸ್ಯೆಯಿದ್ದರೆ ಕನಕಧಾರಾ ಸ್ತೋತ್ರ ತಪ್ಪದೇ ಓದಿ

2026 ರಲ್ಲಿ ಯಾವ ರಾಶಿಯವರು ಯಾವ ದೇವರ ಪ್ರಾರ್ಥನೆ ಮಾಡಬೇಕು ಗಮನಿಸಿ

ಗಣೇಶ ಕವಚ ಸ್ತೋತ್ರವನ್ನು ಮಕ್ಕಳಿಗೆ ಹೇಳಿಸಿ

ಈ ಐದು ರಾಶಿಯವರಿಗೆ 2026 ರಲ್ಲಿ ಸ್ವಂತ ಮನೆ ಕನಸು ನನಸಾಗುತ್ತದೆ

ಮುಂದಿನ ಸುದ್ದಿ
Show comments