Daily Horoscope
✕

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಸೋಮವಾರ, 27 ಜುಲೈ 2020 (08:35 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ನಿಮ್ಮ ಗುರಿ ಸಾಧನೆಗೆ ಹಲವು ಅಡ್ಡಿ ಆತಂಕಗಳು ಎದುರಾಗಲಿವೆ. ಹಾಗಿದ್ದರೂ ಯಾವುದೋ ಒಂದು ಪ್ರೇರಣೆಯಿಂದ ಮನ್ನಡೆಯಲಿದ್ದೀರಿ. ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಮಕ್ಕಳ ಭವಿಷ್ಯದ ಚಿಂತೆ ಕಾಡಲಿದೆ. ಮಾನಸಿಕ ನೆಮ್ಮದಿಗಾಗಿ ದೇವತಾ ಪ್ರಾರ್ಥನೆ ಮಾಡಿ.

ವೃಷಭ: ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಲು ಹಾತೊರೆಯುವಿರಿ. ಪ್ರೇಮಿಗಳಿಗೆ ಅಗಲುವಿಕೆಯ ನೋವು ಕಾಡಲಿದೆ. ಇಷ್ಟ ದೇವರ ಪ್ರಾರ್ಥನೆಯಿಂದ ವೃತ್ತಿ ಜೀವನದಲ್ಲಿ ಮುನ್ನಡೆ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ. ದಿನದಂತ್ಯಕ್ಕೆ ನೆಮ್ಮದಿ.

ಮಿಥುನ: ಕೃಷಿಕರಿಗೆ ವ್ಯವಹಾರದಲ್ಲಿ ಮುನ್ನಡೆ ಸಾಧಿಸಲು ಅವಕಾಶಗಳು ದೊರೆಯಲಿವೆ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ಸವಾಲುಗಳನ್ನು ಎದುರಿಸಲಿದ್ದೀರಿ. ಪ್ರೇಮ ವಿವಾಹಗಳು ನೆರವೇರಲಿವೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕರ್ಕಟಕ: ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಬೇಕಾದರೆ ಮೇಲಧಿಕಾರಿಗಳ ಕೃಪಾಕಟಾಕ್ಷ ಬೇಕಾಗುತ್ತದೆ. ಅಧಿಕ ಧನಲಾಭಕ್ಕಾಗಿ ವ್ಯಾಪಾರಿಗಳು ಅಡ್ಡ ದಾರಿ ಹಿಡಿದರೆ ನಷ್ಟವಾದೀತು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ.

ಸಿಂಹ: ಕಾರ್ಯರಂಗದಲ್ಲಿ ಶತ್ರುಗಳಿಂದ ಹಿನ್ನಡೆಯಾದೀತು. ಗೃಹಿಣಿಯರಿಗೆ ಗೃಹ ಕೃತ್ಯಗಳಿಂದ ಬಿಡುವು ಸಿಗಲಿದೆ. ಹೊಸ ಸ್ಥಳಗಳನ್ನು ಸಂದರ್ಶಿಸುವ ಯೋಗವಿದೆ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ಗೃಹ ಸಂಬಂಧೀ ಕೆಲಸಗಳಿಗೆ ಓಡಾಟ ನಡೆಸಬೇಕಾಗುತ್ತದೆ.

ಕನ್ಯಾ: ಅನ್ಯರ ಮಾತಿನ ಬಗ್ಗೆ ಹೆಚ್ಚು ತಲೆಕಡಿಸಿಕೊಳ್ಳಬೇಕಾಗಿಲ್ಲ. ನಿಮ್ಮ ಮನಸ್ಸಿನ ಭಾವನೆಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳಲಿದ್ದೀರಿ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಏಕಾಗ್ರತೆಯ ಕೊರತೆ ಉಂಟಾಗಬಹುದು. ಕಿರು ಸಂಚಾರ ಮಾಡಲಿದ್ದೀರಿ.

ತುಲಾ: ದೇವತಾ ಕಾರ್ಯಗಳನ್ನು ನೆರವೇರಿಸಲು ಮುಂದಾಗಲಿದ್ದೀರಿ. ಆರ್ಥಿಕವಾಗಿ ಸರಿಯಾದ ಲೆಕ್ಕಾಚಾರವಿಲ್ಲದೇ ಇದ್ದರೆ ಮುಂದೆ ತೊಂದರೆ ಅನುಭವಿಸಬೇಕಾದೀತು. ವೈವಾಹಿಕ ಮಾತುಕತೆಗಳು ಅರ್ಧಕ್ಕೇ ಮುರಿದು ಬೀಳಲಿದೆ. ಕುಲದೇವರ ಪ್ರಾರ್ಥನೆ ಮಾಡಿ.

ವೃಶ್ಚಿಕ: ನೂತನ ದಂಪತಿಗಳಿಗೆ ಸಂತಾನ ಫಲ ಸೂಚನೆ ದೊರೆಯಲಿದೆ. ಹಿರಿಯರಿಗೆ ದೇವತಾ ಕಾರ್ಯಗಳಲ್ಲಿ ಭಾಗಿಯಾಗುವ ಯೋಗವಿದೆ. ಆರ್ಥಿಕವಾಗಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಿದೆ. ವ್ಯಾಪಾರೀ ವರ್ಗದವರಿಗೆ ಲಾಭವಾಗಬಹುದು.

ಧನು: ಮಾನಸಿಕವಾಗಿ ಋಣಾತ್ಮಕ ಚಿಂತೆಗಳು ಕಾಡಲಿವೆ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಬೇಕಾದರೆ ಕ್ರಿಯಾತ್ಮಕ ಯೋಚನೆಗಳನ್ನು ಜಾರಿಗೆ ತನ್ನಿ. ಸಾಮಾಜಿಕವಾಗಿ ಉತ್ತಮ ಹೆಸರು ಗಳಿಸುವ ಯೋಗ. ಸಂಗಾತಿಯೊಂದಿಗೆ ಹೊಂದಾಣಿಕೆ ಅಗತ್ಯ.

ಮಕರ: ಸಾಹಿತ್ಯ, ಕಲೆ ಕ್ಷೇತ್ರದಲ್ಲಿರುವವರಿಗೆ ಮುನ್ನಡೆಯ ಯೋಗವಿದೆ. ಮಹಿಳೆಯರೊಂದಿಗೆ ವ್ಯವಹರಿಸುವಾಗ ಎಚ್ಚರ. ಸಾಲಗಳು ಮರುಪಾವತಿಯಾಗಲಿವೆ. ಆರ್ಥಿಕ ಅಡಚಣೆಗಳು ದೂರವಾಗಲಿದ್ದು, ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದ್ದೀರಿ.

ಕುಂಭ: ಕೃಷಿಕರಿಗೆ ಉತ್ತಮ ಮಳೆ, ಬೆಳೆಯಿಂದಾಗಿ ಹಾಕಿದ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಶೈಕ್ಷಣಿಕ ರಂಗದಲ್ಲಿರುವವರಿಗೆ ಹೊಸ ವಿಷಯಗಳನ್ನು ಕಲಿಯುವ ಅವಕಾಶ ಸಿಗಲಿದೆ. ಸರಕಾರಿ ಉದ್ಯೋಗಿಗಳಿಗೆ ಕಾರ್ಯದೊತ್ತಡ ಹೆಚ್ಚಲಿದೆ.

ಮೀನ: ದುಡುಕಿನ ನಿರ್ಧಾರದಿಂದ ಪ್ರತಿಕೂಲ ಪರಿಣಾಮ ಎದುರಿಸಬೇಕಾದೀತು. ನಿಮ್ಮ ಕೆಲವೊಂದು ಮಾತುಗಳು ಮಕ್ಕಳ ಮನಸ್ಸಿಗೆ ಬೇಸರವುಂಟು ಮಾಡೀತು. ರಾಜಕೀಯ ರಂಗದಲ್ಲಿರುವವರಿಗೆ ಮುನ್ನಡೆಯ ಯೋಗವಿದೆ. ಖರ್ಚು ವೆಚ್ಚದ ಬಗ್ಗೆ ಮಿತಿಯಿರಲಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿಯ ಪವರ್ ಫುಲ್ ಮಂತ್ರಗಳಲ್ಲಿ ಇದೂ ಒಂದು

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಓದಿ ಶ್ರೀ ಭದ್ರಲಕ್ಷ್ಮಿ ಸ್ತೋತ್ರಂ

ಭಯ ನಿವಾರಣೆಗಾಗಿ ಗುರು ರಾಘವೇಂದ್ರ ಆಪತ್ಪರಿಹರಣ ಸ್ತೋತ್ರ

ಶ್ರೀ ಗಣನಾಯಕಾಷ್ಟಕಂ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

ಕೋರ್ಟ್, ಕಚೇರಿ ಕೆಲಸಕ್ಕೆ ಹೋಗುವ ಮುನ್ನ ದೇವಿಯ ಈ ಸ್ತೋತ್ರ ಪಠಿಸಿ

ಮುಂದಿನ ಸುದ್ದಿ
Show comments