Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶನಿವಾರ, 4 ಜುಲೈ 2020 (08:57 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ನಯವಾಗಿ ಮಾತನಾಡುತ್ತಾ ಬರುವವರ ಬಗ್ಗೆ ಎಚ್ಚರಿಕೆಯಿಂದಿರಿ. ನಿಮ್ಮ ಒಳ್ಳೆತನದ ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಿ. ಆರ್ಥಿಕವಾಗಿ ಅನಿರೀಕ್ಷಿತ ಖರ್ಚು ವೆಚ್ಚಗಳಾಗಬಹುದು. ದೇಹಾರೋಗ್ಯದ ಬಗ್ಗೆ ಕಾಳಜಿ ಅಗತ್ಯ. ವಿದ್ಯಾರ್ಥಿಗಳಿಗೆ ಮುನ್ನಡೆ.

ವೃಷಭ: ಸಾಹಿತಿಗಳಿಗೆ, ಕಲಾ ಕ್ಷೇತ್ರದಲ್ಲಿರವವರಿಗೆ ಮುನ್ನಡೆ, ಕೀರ್ತಿ ಸಂಪಾದಿಸುವ ಯೋಗವಿದೆ. ಕಾರ್ಯಕ್ಷೇತ್ರದಲ್ಲಿ ಅದೃಷ್ಟ ನಿಮ್ಮ ಪಾಲಿಗೆ ಬರಲಿದೆ. ನಿರುದ್ಯೋಗಿಗಳು ಸರಿಯಾದ ಅವಕಾಶಗಳನ್ನು ಜಾಣತನದಿಂದ ಆಯ್ದುಕೊಳ್ಳಬೇಕು. ಹಳೆಯ ಮಿತ್ರರ ಭೇಟಿ ಸಂಭವ.

ಮಿಥುನ: ಮನೋನಿಗ್ರಹ ಮಾಡದೇ ಇದ್ದರೆ ಸಂಕಷ್ಟ ತಪ್ಪಿದ್ದಲ್ಲ. ಕೆಟ್ಟ ಸ್ನೇಹ ಸಂಗದಿಂದ ದೂರವಿರುವುದೇ ಉತ್ತಮ. ಉದ್ಯೋಗದಲ್ಲಿ ಅಭಿವೃದ್ಧಿ ಕಂಡುಬಂದರೂ ಎಚ್ಚರಿಕೆಯ ಹೆಜ್ಜೆಯಿಡುವುದು ಸೂಕ್ತ. ಸಂಗಾತಿಯ ಮನಸ್ಸಿಗೆ ಇಷ್ಟವಾಗುವ ಕೆಲಸ ಮಾಡಲಿದ್ದೀರಿ.

ಕರ್ಕಟಕ: ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ಬಂದೀತು. ನಾಲಿಗೆ ಚಪಲಕ್ಕೆ ಕಡಿವಾಣ ಹಾಕಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಏಕಾಗ್ರತೆಯ ಕೊರತೆ ಉಂಟಾಗಬಹುದು. ಕಾರ್ಯನಿಮಿತ್ತ ಓಡಾಟ ನಡೆಸಬೇಕಾಗುತ್ತದೆ.

ಸಿಂಹ: ಕಾರ್ಯರಂಗದಲ್ಲಿ ತಾಪತ್ರಯಗಳು ತಪ್ಪಿದ್ದಲ್ಲ. ಹಣಕಾಸಿನ ಪರಿಸ್ಥಿತಿ ಸರಿಪಡಿಸಲು ಮುಂದಾಗುವಿರಿ. ಧನಗಳಿಕೆಗೆ ನಾನಾ ಮಾರ್ಗ ಕಂಡುಕೊಳ್ಳಲಿದ್ದೀರಿ. ಹಿರಿಯರ ಸಲಹೆಯನ್ನು ಪಾಲಿಸದಲ್ಲಿ ಉತ್ತಮ. ಕೃಷಿಕರಿಗೆ ವ್ಯವಹಾರಗಳು ಸುಸ್ರೂತ್ರವಾಗಲಿದೆ.

ಕನ್ಯಾ: ತಾಳ್ಮೆಯಿಂದ ನಡೆದುಕೊಂಡಲ್ಲಿ ಉದ್ಯೋಗ ಕ್ಷೇತ್ರದಲ್ಲಿ ನೀವು ಅಂದುಕೊಂಡ ಘಟ್ಟ ತಲುಪಲಿದ್ದೀರಿ. ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಕೌಟುಂಬಿಕವಾಗಿ ಅನೇಕ ಸಮಸ್ಯೆಗಳು ಬಂದರೂ ಸಂಗಾತಿಯ ಸಹಕಾರದಿಂದ ಪರಿಹರಿಸುವಿರಿ.

ತುಲಾ: ವೃತ್ತಿರಂಗದಲ್ಲಿ ಉನ್ನತ ಸ್ಥಾನಮಾನಕ್ಕೇರುವ ಅವಕಾಶಗಳು ಒದಗಿಬರಲಿವೆ. ಅವಿವಾಹಿತರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ದುಡುಕಿನ ವರ್ತನೆ ತೋರಿ ಸಮಸ್ಯೆ ಮೈಮೇಲೆಳೆದುಕೊಳ್ಳಬೇಡಿ. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರ.

ವೃಶ್ಚಿಕ: ಎಂದೋ ಮಾಡಿದ ಒಳ್ಳೆಯ ಕೆಲಸಗಳು ಇಂದು ನಿಮ್ಮ ಕೈಹಿಡಿಯಲಿವೆ. ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆ ಎದುರಾದೀತು. ಆದರೂ ಸಮಸ್ಯೆ ಪರಿಹಾರವಾಗಲಿದೆ. ವ್ಯಾವಹಾರಿಕವಾಗಿ ಉನ್ನತಿ ಕಂಡುಕೊಳ್ಳಲಿದ್ದೀರಿ. ದೇವತಾ ಪ್ರಾರ್ಥನೆ ಮರೆಯದಿರಿ.

ಧನು: ಭವಿಷ್ಯದ ಯೋಜನೆಗಳಿಗೆ ಇಂದೇ ಹಣ ಕೂಡಿಡಲಿದ್ದೀರಿ. ವ್ಯಾವಹಾರಿಕವಾಗಿ ನಿಮ್ಮ ಹಿತಶತ್ರುಗಳಿಂದ ತೊಂದರೆ ಎದುರಾಗಬಹುದು. ಹಾಗಿದ್ದರೂ ಅಂತಿಮ ಜಯ ನಿಮ್ಮದಾಗಲಿದೆ. ಪ್ರೀತಿ ಪಾತ್ರರೊಂದಿಗೆ ಹೆಚ್ಚಿನ ಸಮಯ ಕಳೆಯಲಿದ್ದೀರಿ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.

ಮಕರ: ಹಲವು ದಿನಗಳಿಂದ ಪ್ರಯತ್ನಿಸುತ್ತಿದ್ದ ಕಾರ್ಯದಲ್ಲಿ ಯಶಸ್ಸು ಕಾಣಲಿದ್ದೀರಿ. ಅನವಶ್ಯಕ ಚಿಂತೆಗಳಿಂದ ಕೆಲಸದಲ್ಲಿ ನಿರುತ್ಸಾಹ ತೋರಿಬಂದೀತು. ಕೆಳ ಹಂತದ ನೌಕರರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಲಿದೆ. ವಾಸಸ್ಥಳ ಬದಲಾವಣೆಗೆ ಚಿಂತನೆ ನಡೆಸಲಿದ್ದೀರಿ.

ಕುಂಭ: ನಿಮ್ಮ ಕೆಲವೊಂದು ನಿರ್ಧಾರಗಳು ಕುಟುಂಬದಲ್ಲಿ ಅನಗತ್ಯ ಭಿನ್ನಾಭಿಪ್ರಾಯ, ಕಲಹಗಳಿಗೆ ಕಾರಣವಾಗುವುದು. ತಾಳ್ಮೆ, ಸಂಯಮದಿಂದ ವರ್ತಿಸಿ. ಮಹಿಳೆಯರಿಗೆ ಆಕಸ್ಮಿಕ ಧನಲಾಭವಾಗಲಿದೆ. ಉದರ ಸಂಬಂಧೀ ಆರೋಗ್ಯ ಸಮಸ್ಯೆ ಕಂಡುಬರಬಹುದು, ಎಚ್ಚರ.

ಮೀನ: ಅವಿವಾಹಿತರು ಮನಸ್ಸಿಗೆ ಇಷ್ಟವಾಗುವ ಸಂಬಂಧಗಳು ಬರಲಿದ್ದು, ಶೀಘ್ರದಲ್ಲೇ ವೈವಾಹಿಕ ಬದುಕಿಗೆ ಕಾಲಿಡಲಿದ್ದೀರಿ. ವಿದ್ಯಾರ್ಥಿಗಳಿಗೆ ತಕ್ಕಮಟ್ಟಿಗಿನ ಮುನ್ನಡೆ ಕಂಡುಬರಲಿದೆ. ಸಾಂಸಾರಿಕವಾಗಿ ಹೊಸ ಜವಾಬ್ಧಾರಿಗಳಿಗೆ ಸಿದ್ಧರಾಗಬೇಕಾಗುತ್ತದೆ.

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ನಿರುದ್ಯೋಗ ಸಮಸ್ಯೆ ನಿವಾರಣೆಯಾಗಬೇಕೆಂದರೆ ಈ ಮಂತ್ರ ಜಪಿಸಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಪೊರಕೆ ಖರೀದಿ ಮಾಡುವಾಗಲೂ ವಾಸ್ತು ಪ್ರಕಾರ ಈ ಟಿಪ್ಸ್ ಫಾಲೋ ಮಾಡಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments