Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಗುರುವಾರ, 2 ಜುಲೈ 2020 (09:03 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಅವಕಾಶಗಳು ಎಲ್ಲ ಕಡೆ ಇರಲಿವೆ. ಅದನ್ನು ಬಳಸಿಕೊಳ್ಳುವ ಜಾಣತನ ಬೇಕಷ್ಟೇ. ಅದೃಷ್ಟದ ಬೆಂಬಲದಿಂದ ಬಯಸಿದ್ದು ಕೈಗೆ ಬರಲಿವೆ. ದೂರ ಸಂಚಾರವನ್ನು ಮುಂದೂಡಬೇಕಾದ ಪರಿಸ್ಥಿತಿ ಬರಲಿದೆ. ಪ್ರೇಮಿಗಳಿಗೆ ಹಿರಿಯರ ಒಪ್ಪಿಗೆ ಸಿಗಲಿದೆ.

ವೃಷಭ: ಮುಕ್ತ ಮನಸ್ಸಿನಿಂದ ನೋಡಿದರೆ ಸಮಸ್ಯೆಗಳ ಪರಿಹಾರಕ್ಕೆ ದಾರಿ ಸಿಗುವುದು. ನಿಮ್ಮ ಆತ್ಮಸ್ಥೈರ್ಯದಿಂದಲೇ ಕಷ್ಟದ ಕೆಲಸಗಳನ್ನೂ ಮಾಡಿ ಮುಗಿಸುವಿರಿ. ವ್ಯವಹಾರದಲ್ಲಿ ಮೂರನೆಯವರು ಮೂಗು ತೂರಿಸಲು ಅವಕಾಶ ಕೊಡಬೇಡಿ. ಸಾಂಸಾರಿಕವಾಗಿ ತಾಳ್ಮೆ ಅಗತ್ಯ.

ಮಿಥುನ: ಉದ್ಯೋಗದಲ್ಲಿ ಬರುವ ಸಣ್ಣ ಪುಟ್ಟ ಸಮಸ್ಯೆಗಳನ್ನು ಅಲಕ್ಷಿಸಿದರೆ ಮುಂದೆ ಸಮಸ್ಯೆ ದೊಡ್ಡದಾಗಬಹುದು. ಸ್ನೇಹಿತರ ಸಮಯೋಚಿತ ಸಲಹೆ ಉಪಯೋಗಕ್ಕೆ ಬರುವುದು. ಹಣಕಾಸಿನ ಮುಗ್ಗಟ್ಟು ಎದುರಾಗಬಹುದು. ಎಚ್ಚರಿಕೆ ಅಗತ್ಯ. ದೇವಾಲಯ ಸಂದರ್ಶಿಸುವ ಸಾಧ್ಯತೆಯಿದೆ.

ಕರ್ಕಟಕ: ಮಾತಿನ ಮೇಲೆ ನಿಗಾ ಇರಲಿ. ಸಂಯಮ ಕಳೆದುಕೊಂಡರೆ ಕಾರ್ಯ ಹಾಳಾಗುವುದು. ಪೋಷಕರ ಸಲಹೆಗಳು ಇಷ್ಟವಾಗದೇ ಹೋಗಬಹುದು. ಅನಿರೀಕ್ಷಿತವಾಗಿ ಖರ್ಚು ವೆಚ್ಚಗಳು ಕಂಡುಬರಲಿವೆ. ಉದ್ಯೋಗದಲ್ಲಿ ಬದಲಾವಣೆಗೆ ಚಿಂತನೆ ನಡೆಸುವಿರಿ.

ಸಿಂಹ: ಯಾವುದೇ ಯೋಜನೆ ಮಾಡುವುದಕ್ಕೂ ಮೊದಲು ದೂರದೃಷ್ಟಿಯಿಂದ ಯೋಚನೆ ಮಾಡುವುದು ಉತ್ತಮ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳಿಗೆ ಸಿದ್ಧರಾಗಬೇಕಾಗುತ್ತದೆ. ಆರ್ಥಿಕವಾಗಿ ಕೈಗೆ ಬಂದಿದ್ದು ಬಾಯಿಗೆ ಬರದ ಅನುಭವವಾಗಲಿದೆ.

ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕರ್ತವ್ಯ ಪ್ರಜ್ಞೆಯಿಂದ ಬರುವಂತಹ ಸಮಸ್ಯೆಗಳನ್ನು ನಿವಾರಿಸುವಿರಿ. ಹಂತ ಹಂತವಾಗಿ ಅಭಿವೃದ್ಧಿ ಅನುಭವಕ್ಕೆ ಬರಲಿದೆ. ಸರಕಾರಿ ಉದ್ಯೋಗಿಗಳಿಗೆ ವರ್ಗಾವಣೆಯ ಭೀತಿಯಿದೆ. ಭಾವನಾತ್ಮಕವಾಗಿ ಕಾಡುವ ಹಳೇ ವಿಚಾರಗಳಿಂದ ಮನಸ್ಸು ಬೇಸರದಲ್ಲಿರುವುದು.

ತುಲಾ: ನಿಮ್ಮ ದುಡುಕು ಮಾತಿನಿಂದ ಜತೆಗಿದ್ದವರ ಮನಸ್ಸಿಗೆ ನೋವುಂಟಾಗಬಹುದು. ಧನಾದಾಯ ಹೆಚ್ಚಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುವಿರಿ. ವಿವೇಚನೆಯಿಂದ ಹೆಜ್ಜೆಯಿಡಿ. ಅವಿವಾಹಿತರಿಗೆ ಹೊಸ ವಿವಾಹ ಸಂಬಂಧಗಳು ಬರಲಿವೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಶ್ಚಿಕ: ಹಣಕಾಸಿನ ವಿಚಾರದಲ್ಲಿ ಅಧಿಕ ಖರ್ಚು ವೆಚ್ಚಗಳು ಚಿಂತೆಗೀಡುಮಾಡಲಿವೆ. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸುವಿರಿ. ಅವಿವಾಹಿತರು ಉತ್ತಮ ಸಂಬಂಧಕ್ಕಾಗಿ ಇನ್ನೂ ಕೆಲ ಕಾಲ ಕಾಯುವುದು ಒಳಿತು. ನಯವಂಚಕರು ನಿಮ್ಮ ಜೀವನದಲ್ಲಿ ಮೂಗು ತೂರಿಸಲು ಅವಕಾಶ ಮಾಡಿಕೊಡಬೇಡಿ.

ಧನು: ಎಲ್ಲಾ ಪ್ರಯತ್ನದಲ್ಲಿ ಸೋಲುತ್ತೀರಿ ಎಂದಾಗಲೇ ಯಾವುದೋ ಹುಲ್ಲು ಕಡ್ಡಿಯ ಆಸರೆ ಸಿಗಲಿದೆ. ಸಂಗಾತಿಯ ಆರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಸಾಂಸಾರಿಕವಾಗಿ ಹೊಸ ಸವಾಲುಗಳಿಗೆ ಸಿದ್ಧರಾಗಿ. ಸಂಗಾತಿಯೊಂದಿಗೆ ಹೊಂದಾಣಿಕೆ ಅಗತ್ಯ.

ಮಕರ: ಸಂಘಟಿತ ಪ್ರಯತ್ನದಿಂದ ಉದ್ಯೋಗದಲ್ಲಿ ಯಶಸ್ಸು ಮುನ್ನಡೆ ಸಿಗಲಿದೆ. ಕೌಟುಂಬಿಕವಾಗಿ ಇದುವರೆಗೆ ಇದ್ದ ಭಿನ್ನಾಭಿಪ್ರಾಯಗಳು ಹಂತ ಹಂತವಾಗಿ ನಿವಾರಣೆಯಾಗಲಿದೆ. ಬಂಧು ಮಿತ್ರರ ಮಾತುಗಳಿಂದ ಮುಜುಗರಕ್ಕೀಡಾಗುವಿರಿ. ಸಂಯಮದಿಂದ ವರ್ತಿಸಿ.

ಕುಂಭ: ಇಂದು ನಿಮಗೆ ಮಿಶ್ರಫಲ ಉಂಟಾಗಲಿದೆ. ಮಾನಸಿಕವಾಗಿ ಋಣಾತ್ಮಕ ಚಿಂತೆಗಳಿಂದ ಹೈರಾಣಾಗುವಿರಿ. ಉದ್ಯೋಗದಲ್ಲಿ ವಿಶ್ರಾಂತಿಗೆ ಮನಸ್ಸು ಬಯಸುವುದು. ಆದರೆ ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು. ಕಿರು ಸಂಚಾರ ಮಾಡಬೇಕಾಗುತ್ತದೆ.

ಮೀನ: ವಿದ್ಯಾರ್ಥಿಗಳಲ್ಲಿ ಕಲಿಯುವ ಆಸಕ್ತಿ, ಕುತೂಹಲ ಹೆಚ್ಚಲಿದೆ. ಉದ್ಯೋಗ ಕ್ಷೇತ್ರದಲ್ಲಿ ವಿನಾಕಾರಣ ತಪ್ಪಿತಸ್ಥರಾಗಬೇಕಾಗುತ್ತದೆ. ಸಾಂಸಾರಿಕವಾಗಿ ಸಂಗಾತಿಯ ಸಹಕಾರ ಸಿಗಲಿದೆ. ಆರ್ಥಿಕವಾಗಿ ಆದಾಯದಷ್ಟೇ ಖರ್ಚೂ ಇರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದುಸ್ವಪ್ನಗಳು ಬೀಳಬಾರದಂತಿದ್ದರೆ ಈ ತಂತ್ರ ಮಾಡಿ