ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ಸಾಂಸಾರಿಕವಾಗಿ ಹೊಮದಾಣಿಕೆಯ ಕೊರತೆ ಉಂಟಾಗಲಿದೆ. ಕಾರ್ಯಕ್ಷೇತ್ರದಲ್ಲಿ ಉತ್ಸಾಹ ತೋರಿಬರಲಿದೆ. ಆದರೆ ಬಾಕಿ ಹಣ ಪಾವತಿಯಾಗದೇ ಚಿಂತೆಯಾಗಲಿದೆ. ಸರಕಾರಿ ಕೆಲಸಗಳಿಗೆ ಓಡಾಟ ನಡೆಸಬೇಕಾಗುತ್ತದೆ. ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.
ವೃಷಭ: ವೃತ್ತಿರಂಗದಲ್ಲಿ ಅಧಿಕ ಕಾರ್ಯದೊತ್ತಡದಿಂದ ದೇಹಾಯಾಸವಾಗಬಹುದು. ಎಚ್ಚರಿಕೆ ಅಗತ್ಯ. ಅನ್ಯರ ಚಾಡಿ ಮಾತುಗಳಿಗೆ ಕಿವಿಗೊಡಬೇಕಿಲ್ಲ. ದಾಯಾದಿಗಳೊಂದಿಗಿನ ಕಲಹ ಅಂತ್ಯವಾಗಲಿದೆ. ಅವಿವಾಹಿತರಿಗೆ ಶೀಘ‍್ರ ಕಂಕಣ ಬಲ ಕೂಡಿಬರಲಿದೆ.
ಮಿಥುನ: ಅನ್ಯರ ಮಾತಿಗೆ ಅಗತ್ಯಕ್ಕಿಂತ ಹೆಚ್ಚು ಬೆಲೆಕೊಡುತ್ತಿದ್ದರೆ ತಲೆಹಾಳಾಗುವುದು ಖಂಡಿತಾ. ಆತ್ಮಸ್ಥೈರ್ಯದಿಂದ ಮುನ್ನಡೆಯಿರಿ. ಹಿರಿಯರ ಸಲಹೆಗಳನ್ನು ಪಾಲಿಸುವುದು ಉತ್ತಮ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ.
ಕರ್ಕಟಕ: ಬಹುದಿನಗಳ ನಿಮ್ಮ ಕನಸು ನನಸು ಮಾಡಿಕೊಳ್ಳಲು ಸಕಾಲ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಆದರೆ ಯಾರಿಗೂ ಇಂದು ಸಾಲ ಕೊಡಲು ಹೋಗಬೇಡಿ. ಹಿತಶತ್ರುಗಳ ಬಗ್ಗೆ ಎಚ್ಚರಿಕೆಯಿಂದಿರಿ.
ಸಿಂಹ: ವಿದ್ಯಾರ್ಥಿಗಳಿಗೆ ಬಯಸಿದ ಫಲಿತಾಂಶ ಸಿಗಲಿದೆ. ದಾಯಾದಿಗಳ ನಿಷ್ಠೂರಕ್ಕೆ ಬಲಿಯಾಗದಿರಿ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಇತರರು ನಿಮ್ಮ ಬಗ್ಗೆ ಏನೆಂದುಕೊಳ್ಳುವರೋ ಎಂಬ ಕೀಳರಿಮೆ ಬಿಟ್ಟುಬಿಡಿ.
ಕನ್ಯಾ: ನಿಮ್ಮ ಪ್ರಾಮಾಣಿಕ ಕೆಲಸದಲ್ಲೂ ತಪ್ಪು ಹುಡುಕುವವರಿರುತ್ತಾರೆ. ತಾಳ್ಮೆ, ಸಂಯಮ ಅಗತ್ಯ. ಸಾಂಸಾರಿಕವಾಗಿ ಏಕತಾನತೆಯಿಂದ ಮನಸ್ಸಿಗೆ ಬೇಸರೆವನಿಸಬಹುದು. ಆಪ್ತರೊಡನೆ ನಿಮ್ಮ ದುಃಖ ಹಂಚಿಕೊಂಡರೆ ಸಮಾಧಾನವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ತುಲಾ: ನಿಮ್ಮ ದೌರ್ಬಲ್ಯವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವವರು ಸುತ್ತಲೂ ಇರುತ್ತಾರೆ. ಎಚ್ಚರಿಕೆಯಿಂದ ವ್ಯವಹರಿಸಿ. ವ್ಯಾಪಾರಿಗಳಿಗೆ ತಕ್ಕ ಮಟ್ಟಿಗೆ ಲಾಭ ಕಂಡುಬರಲಿದೆ. ಹೊಸ ಯೋಜನೆಗಳಿಗೆ ಕೈ ಹಾಕಲು ಕೆಲವು ದಿನ ಕಾಯುವುದು ಒಳಿತು.
ವೃಶ್ಚಿಕ: ವೃತ್ತಿರಂಗದಲ್ಲಿ ಕಷ್ಟ-ಸುಖ ಎರಡೂ ಸಮನಾಗಿರುತ್ತದೆ. ಸರಿದೂಗಿಸಿಕೊಂಡು ಹೋಗಲು ಕಲಿಯಬೇಕು. ನಿಮ್ಮ ಮೆಚ್ಚಿನ ಕೆಲಸಗಳಿಗೆ ಸಮಯ ಮೀಸಲಿಡಲಿದ್ದೀರಿ. ಸಂಗಾತಿಗೆ ಅಚ್ಚರಿಯ ಉಡುಗೊರೆ ನೀಡಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.
ಧನು: ಕೌಟುಂಬಿಕವಾಗಿ ಸುಖ ಸಮೃದ್ಧಿಯಿರಲಿದೆ. ಮಕ್ಕಳೊಂದಿಗೆ ಸಂತಸದ ಕ್ಷಣ ಕಳೆಯಲಿದ್ದೀರಿ. ಭವಿಷ್ಯದ ಯೋಜನೆಗೆ ಹಣ ಕೂಡಿಡಲಿದ್ದೀರಿ. ವೈಯಕ್ತಿಕ ಆರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಮಕರ: ಆರ್ಥಿಕ ಅಡಚಣೆಯಿಂದಾಗಿ ಅಂದುಕೊಂಡ ಕೆಲಸ ಕಾರ್ಯಗಳು ಅರ್ಧಕ್ಕೇ ನಿಲ್ಲಲಿವೆ. ಆದಾಯ ಗಳಿಕೆಗೆ ನಾನಾ ಮಾರ್ಗ ಹುಡುಕಾಡಲಿದ್ದೀರಿ. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗವೇ ಲೇಸು ಎನಿಸಬಹುದು. ವಿದ್ಯಾರ್ಥಿಗಳಿಗೆ ಪರಿಶ್ರಮ ಅಗತ್ಯ.
ಕುಂಭ: ಸಾಂಸಾರಿಕವಾಗಿ ನಿಮ್ಮ ಮಾತು, ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗುವುದು. ಮಾನಸಿಕವಾಗಿ ಋಣಾತ್ಮಕ ಚಿಂತನೆಗಳಿಗೆ ಅವಕಾಶಕೊಡಬೇಡಿ. ಅನಿರೀಕ್ಷಿತವಾಗಿ ಬಂಧು ಮಿತ್ರರ ಭೇಟಿಯಾಗಲಿದ್ದೀರಿ. ಖರ್ಚು ವೆಚ್ಚಗಳ ಬಗ್ಗೆ ನಿಗಾ ಇರಲಿ.
ಮೀನ: ಮಾತಿನ ಮೇಲೆ ನಿಗಾ ಇರಲಿ. ದುಡುಕಿನಲ್ಲಿ ಕೈಗೊಳ್ಳುವ ನಿರ್ಧಾರಗಳು ಮುಂದೆ ತೊಂದರೆ ಉಂಟು ಮಾಡಲಿವೆ. ವ್ಯಾಪಾರಿಗಳಿಗೆ ಬಹುದಿನಗಳ ಕನಸು ನನಸಾಗಲಿದೆ. ಯಾರಿಂದಲೂ ಸಹಾಯ ಅಪೇಕ್ಷಿಸಲು ಹೋಗಬೇಡಿ. ಇದರಿಂದ ನಿರಾಸೆಯೇ ಆಗುವುದು.