ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶನಿವಾರ, 20 ಜೂನ್ 2020 (07:20 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಮಾನ ಹಾನಿಯಾಗುವಂತಹ ಪ್ರಸಂಗಗಳು ಎದುರಾದೀತು. ತಾಳ್ಮೆ, ಸಂಯಮದಿಂದ ನಡೆದುಕೊಳ್ಳಿ. ಆರ್ಥಿಕವಾಗಿ ಕಷ್ಟನಷ್ಟಗಳಿಗೆ ಇಂದೇ ಸಿದ್ಧರಾಗಿ. ಕೆಳ ಹಂತದ ನೌಕರರಿಗೆ ಬಡ್ತಿ ಯೋಗವಿದೆ. ಆಪ್ತರಿಂದ ದೂರವಾದ ನೋವು ಕಾಡಲಿದೆ. ಚಿಂತೆ ಮಾಡಬೇಡಿ.

ವೃಷಭ: ಷೇರು ಬಂಡವಾಳ ಹೂಡಿಕೆ ಮಾಡಿದವರಿಗೆ ಲಾಭ ಸಿಗುವ ಸಾಧ್ಯತೆಯಿದೆ. ನಾನಾ ಮೂಲಗಳಿಂದ ಆದಾಯ ಹರಿದುಬರುವುದರಿಂದ ಹಣಕಾಸಿಗೆ ತೊಂದರೆಯಿರದು. ಸಂಗಾತಿಯೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳಿ. ದುಡುಕಿನ ವರ್ತನೆ ಬೇಡ.

ಮಿಥುನ: ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ಅವಿವಾಹಿತ ಪುರುಷರಿಗೆ ಯೋಗ್ಯ ಕನ್ಯಾಮಣಿಗಳು ಸಿಗಲಿದ್ದಾರೆ. ವೃತ್ತಿರಂಗದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಬೇಕಾಗುತ್ತದೆ.

ಕರ್ಕಟಕ: ಕೋರ್ಟು ಕಚೇರಿ ವ್ಯವಹಾರಗಳಿಗೆ ಅಲೆದಾಡಬೇಕಾದೀತಾದರೂ ಅಂತಿಮವಾಗಿ ಜಯ ನಿಮ್ಮದಾಗಲಿದೆ. ಹಿರಿಯರ ಮಾತಿಗೆ ಮನ್ನಣೆ ನೀಡಿ. ಲೆಕ್ಕಪತ್ರಗಳ ಬಗ್ಗೆ ಸರಿಯಾದ ನಿಗಾ ವಹಿಸಿ. ಆದಾಯ ವೃದ್ಧಿಗೆ ನಾನಾ ಮಾರ್ಗ ಯೋಚಿಸಲಿದ್ದೀರಿ.

ಸಿಂಹ: ಎಂದೋ ಕೂಡಿಟ್ಟ ಹಣ ಇಂದು ಸದ್ವಿನಿಯೋಗವಾಗಲಿದೆ. ಮಕ್ಕಳ ಭವಿಷ್ಯಕ್ಕೆ ತಕ್ಕ  ಯೋಜನೆ ರೂಪಿಸಲಿದ್ದೀರಿ. ಹೊಸ ವಾಹನ ಖರೀದಿ ಮಾಡುವ ಯೋಗವಿದೆ. ಆದರೆ ಅನಗತ್ಯ ವಿವಾದಗಳಲ್ಲಿ ಮೂಗು ತೂರಿಸಲು ಹೋಗಬೇಡಿ. ತಾಳ್ಮೆಯಿರಲಿ.

ಕನ್ಯಾ: ಇನ್ನೊಬ್ಬರಿಗೆ ಸಹಾಯ ಮಾಡಲು ಹೋಗಿ ಕೈ ಸುಟ್ಟುಕೊಳ್ಳುವ ಪ್ರಸಂಗಗಳು ಎದುರಾದೀತು. ಹಣಕಾಸಿನ ವಿಚಾರವಾಗಿ ಎಚ್ಚರಿಕೆ ಹೆಜ್ಜೆಯಿಡಬೇಕು. ಸಾಲ ಪಾವತಿ ಚಿಂತೆಯಾಗಬಹುದು. ಸಂಗಾತಿಯಿಂದ ಸಹಕಾರ ಸಿಗಲಿದೆ. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.

ತುಲಾ: ಆಕಸ್ಮಿಕವಾಗಿ ಖರ್ಚು ವೆಚ್ಚಗಳು ಎದುರಾಗಲಿದ್ದು, ಚಿಂತೆಗೆ ಕಾರಣವಾಗಬಹುದು. ಅನ್ಯರ ಸಹಾಯ ಪಡೆಯುವಾಗ ಎಚ್ಚರಿಕೆಯಿರಲಿ. ಹಿರಿಯರಿಗೆ ನಿಮ್ಮ ಅಗತ್ಯ ಕಂಡುಬರಲಿದೆ. ಪ್ರೀತಿ ಪಾತ್ರರಿಗಾಗಿ ಸಮಯ ಮೀಸಲಿಡಿ. ದಾಯಾದಿ ಕಲಹಗಳು ಅಂತ್ಯವಾಗಲಿದೆ.

ವೃಶ್ಚಿಕ: ಕುಟುಂಬ ಸದಸ್ಯರ ಕಷ್ಟಗಳಿಗೆ ಹೆಗಲುಕೊಡಲಿದ್ದೀರಿ. ಆರ್ಥಿಕವಾಗಿ ಹಣಕಾಸಿಗೆ ತೊಂದರೆಯಾಗದು. ಆದರೆ ಖರ್ಚು ವೆಚ್ಚಗಳಿಗೆ ಕಡಿವಾಣವಿರಲಿ. ಹಳೆಯ ಮಿತ್ರನ ಭೇಟಿಯಿಂದ ಮನಸ್ಸಿಗೆ ಸಂತಸವಾಗಲಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.

ಧನು: ಸಾಂಸಾರಿಕವಾಗಿ ಸಂಗಾತಿಯ ಸಹಕಾರದಿಂದ ಎಂತಹದ್ದೇ ಕಷ್ಟವಾದರೂ ಎದುರಿಸುವ ಧೈರ್ಯ ಮಾಡುವಿರಿ. ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನ ನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ಅವಿವಾಹಿತರಿಗೆ ಶೀಘ‍್ರ ಕಂಕಣ ಬಲ ಕೂಡಿಬರಲಿದೆ.

ಮಕರ: ಆಗಾಗ ಖರ್ಚು ವೆಚ್ಚಗಳಿದ್ದರೂ ಅಂದುಕೊಂಡ ಕೆಲಸಗಳು ನೆರವೇರಿದ ನೆಮ್ಮದಿ ಸಿಗಲಿದೆ. ಮಹಿಳೆಯರಿಗೆ ಚಿನ್ನಾಭರಣ ಖರೀದಿ ಯೋಗವಿದೆ. ಮಕ್ಕಳ ವಿಚಾರದಲ್ಲಿ ಸಂತಸದ ವಾರ್ತೆ ಕೇಳಿಬರಲಿದೆ. ಅಧಿಕ ಓಡಾಟದಿಂದ ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿ.

ಕುಂಭ: ನೆರೆಹೊರೆಯವರೊಂದಿಗೆ ಕ್ಷುಲ್ಲುಕ ಕಾರಣಕ್ಕೆ ಮನಸ್ತಾಪ ಮಾಡಿಕೊಳ್ಳಲಿದ್ದೀರಿ. ಮಾತು, ವರ್ತನೆ ಮೇಲೆ ನಿಗಾ ವಹಿಸಿ. ನ್ಯಾಯಾಲಯದ ಕಲಾಪಗಳು ಸುಗಮವಾಗಿ ನೆರವೇರಲಿದೆ. ಬಂಧು ಮಿತ್ರರ ಮಾತುಗಳಿಗೆ ಬೆಲೆ ಕೊಡಬೇಕಾಗುತ್ತದೆ. ದೇವತಾ ಪ್ರಾರ್ಥನೆ ಮಾಡಿ.

ಮೀನ: ಗೃಹ ಬಳಕೆಯ ವಸ್ತುಗಳ ಖರೀದಿಗಾಗಿ ಹೆಚ್ಚಿನ ಧನ ವ್ಯಯ ಮಾಡಲಿದ್ದೀರಿ. ವ್ಯಾಪಾರ, ವ್ಯವಹಾರಗಳಲ್ಲಿ ಲಾಭವಿಲ್ಲದಿದ್ದರೂ ನಷ್ಟವಾಗದು. ವಾಹನ ಸವಾರರು ಚಾಲನೆಯಲ್ಲಿ ಎಚ್ಚರಿಕೆ ವಹಿಸುವುದು ಸೂಕ್ತ. ಅಪರಿಚಿತರಿಂದಲೂ ಸಹಾಯ ಸಿಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

2026 ರಲ್ಲಿ ಯಾವ ರಾಶಿಯವರು ಯಾವ ದೇವರ ಪ್ರಾರ್ಥನೆ ಮಾಡಬೇಕು ಗಮನಿಸಿ

ಗಣೇಶ ಕವಚ ಸ್ತೋತ್ರವನ್ನು ಮಕ್ಕಳಿಗೆ ಹೇಳಿಸಿ

ಈ ಐದು ರಾಶಿಯವರಿಗೆ 2026 ರಲ್ಲಿ ಸ್ವಂತ ಮನೆ ಕನಸು ನನಸಾಗುತ್ತದೆ

ಮಂಗಳವಾರ ದೇವಿಯ ಅನುಗ್ರಹಕ್ಕಾಗಿ ನವರತ್ನ ಮಾಲಿಕಾ ಸ್ತೋತ್ರ

ಶಿವ ಪಂಚಾಕ್ಷರಿ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments