Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶುಕ್ರವಾರ, 12 ಜೂನ್ 2020 (09:05 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಸಂಗಾತಿಯ ಕೆಲವೊಂದು ನಡೆಗಳು ನಿಮಗೆ ಅಸಮಾಧಾನವುಂಟು ಮಾಡಬಹುದು. ಆದರೆ ಅನಗತ್ಯವಾಗಿ ಮನಸ್ತಾಪ ಮಾಡಿಕೊಳ್ಳಿ. ಜವಾಬ್ಧಾರಿಯುತವಾಗಿ ನಡೆದುಕೊಳ್ಳಬೇಕಾಗುತ್ತದೆ. ಮಕ್ಕಳ ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನಕೊಡಬೇಕಾಗುತ್ತದೆ.

ವೃಷಭ: ಅನಗತ್ಯವಾಗಿ ನೆರೆಹೊರೆಯವರೊಂದಿಗೆ ಕಿರಿಕ್ ಮಾಡಿಕೊಳ್ಳುತ್ತೀರಿ. ಇದರಿಂದ ನಿಮ್ಮ ಮನಸ್ಸಿಗೇ ನೆಮ್ಮದಿಯಿಲ್ಲವಾದೀತು. ಪ್ರವಾಸ ಇತ್ಯಾದಿ ಸಂಚಾರಗಳಲ್ಲಿ ಜಾಗ್ರತೆ ಅಗತ್ಯ. ವ್ಯಾಪಾರಿಗಳಿಗೆ ಲಾಭವಿಲ್ಲದಿದ್ದರೂ ನಷ್ಟವಾಗದು.

ಮಿಥುನ: ನೀವು ಅತಿಯಾಗಿ ನಂಬಿಕೊಂಡಿದ್ದವರಿಂದಲೇ ನಂಬಿಕೆ ದ್ರೋಹವಾಗಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಹೂಡಿಕೆ ಮಾಡುವಾಗ ಎಚ್ಚರಿಕೆಯಿಂದಿರಿ. ಸಂಗಾತಿಯ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳಿ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡಬೇಕಾಗುತ್ತದೆ.

ಕರ್ಕಟಕ: ವೃತ್ತಿರಂಗದಲ್ಲಿ ಅಡಚಣೆಗಳು ಕಂಡುಬಂದರೂ ಕಾರ್ಯಸಿದ್ಧಿಯಾಗಲಿದೆ. ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ. ದೇಹಾರೋಗ್ಯದ ಬಗ್ಗೆ ಆತಂಕವಾಗುವುದರಿಂದ ವೈದ್ಯರ ಭೇಟಿಯಾಗುವಿರಿ. ದೇವಾಲಯ ಸಂದರ್ಶನ ಮಾಡಲಿದ್ದೀರಿ.

ಸಿಂಹ: ಆರ್ಥಿಕವಾಗಿ ನಾನಾ ರೀತಿಯ ತಾಪತ್ರಯಗಳು ತೋರಿಬರಲಿವೆ. ಉದ್ಯೋಗದಲ್ಲಿ ಜಾಣ್ಮೆಯಿಂದ ಸವಾಲುಗಳನ್ನು ಎದುರಿಸಿದರೆ ಯಶಸ್ಸು ಕಾಣಲಿದ್ದೀರಿ. ಸರಕಾರಿ ಅಧಿಕಾರಿಗಳಿಗೆ ಕಾರ್ಯದೊತ್ತಡ ಹೆಚ್ಚಲಿದೆ. ಕಿರು ಸಂಚಾರ ಮಾಡಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.

ಕನ್ಯಾ: ಗೃಹ ನಿರ್ಮಾಣ ಕಾರ್ಯಕ್ಕೆ ಮುಂದಾಗಲಿದ್ದೀರಿ. ವ್ಯಾಪಾರ ವ್ಯವಹಾರದಲ್ಲಿ ಮುನ್ನಡೆ ಗಳಿಸಲಿದ್ದೀರಿ. ಶುಭ ಮಂಗಲ ಕಾರ್ಯಕ್ಕೆ ಓಡಾಡಲಿದ್ದೀರಿ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಹಣ ಖರ್ಚಾಗಲಿದೆ. ಹಿರಿಯರ ಸಲಹೆಗಳನ್ನು ಪಾಲಿಸಿದರೆ ಉತ್ತಮ.

ತುಲಾ: ಹಿರಿಯರ ಸಲಹೆಗಳು ಅಪಥ್ಯವೆನಿಸಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನ ನಿಮಿತ್ತ ಕಿರು ಸಂಚಾರ ಮಾಡಬೇಕಾಗುತ್ತದೆ. ಸಾಂಸಾರಿಕವಾಗಿ ಹೊಂದಾಣಿಕೆ ಅಗತ್ಯ. ನ್ಯಾಯಾಲಯದ ಕಲಾಪಗಳಲ್ಲಿ ಜಯ ಸಿಗಲಿದೆ. ದಿನದಂತ್ಯಕ್ಕೆ ನೆಮ್ಮದಿ.

ವೃಶ್ಚಿಕ: ಅವಿವಾಹಿತರಿಗೆ ಶೀಘ್ರದಲ್ಲೇ ಮನಸ್ಸಿಗೆ ಒಪ್ಪಿಗೆಯಾಗುವಂತಹ ವಿವಾಹ ಪ್ರಸ್ತಾಪಗಳು ಬರಲಿವೆ. ಪ್ರೇಮಿಗಳ ಗುಟ್ಟು ಮನೆಯವರ ಎದುರು ಬಹಿರಂಗವಾಗಲಿದೆ. ವ್ಯಾಪಾರಿಗಳು ನಿವ್ವಳ ಲಾಭ ಗಳಿಸಲಿದ್ದಾರೆ. ಭೂಮಿ, ಮನೆ ಖರೀದಿಗೆ ಇದು ಸಕಾಲ.

ಧನು: ವೃತ್ತಿರಂಗದಲ್ಲಿ ಹಿತಶತ್ರುಗಳಿಂದ ತೊಂದರೆಗಳು ಎದುರಾದೀತು. ಲೆಕ್ಕ ಪತ್ರಗಳ ಬಗ್ಗೆ ನಿಗಾ ಇರಲಿ. ಅನಗತ್ಯ ವಿಚಾರಗಳಲ್ಲಿ ಮೂಗು ತೂರಿಸಲು ಹೋಗಬೇಡಿ. ಹಿರಿಯರಿಗೆ ವಾತ ಸಂಬಂಧೀ ಆರೋಗ್ಯ ಸಮಸ್ಯೆ ಕಂಡುಬಂದೀತು. ಕಾಳಜಿಯಿರಲಿ.

ಮಕರ: ಕೃಷಿಕರಿಗೆ ತಮ್ಮ ವ್ಯವಹಾರಕ್ಕೆ ಅನುಕೂಲಕರವಾದ ವಾತಾವರಣ ಸಿಗಲಿದೆ. ವ್ಯಾಪಾರಿಗಳಿಗೆ ವ್ಯವಹಾರಗಳಲ್ಲಿ ಕಷ್ಟ-ಸುಖ ಸಮನಾಗಿರಲಿದೆ. ಸಂಪಾದನೆಗೆ ಹೊಸ ಮಾರ್ಗ ಕಂಡುಕೊಳ್ಳಲಿದ್ದೀರಿ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಒದಗಿಬರಲಿದೆ.

ಕುಂಭ: ನಾನಾ ರೀತಿಯಲ್ಲಿ ಧನಾಗಮನವಾಗಲಿದ್ದು, ಅಂದುಕೊಂಡ ಕೆಲಸಗಳನ್ನು ನೆರವೇರಿಸಲಿದ್ದೀರಿ. ಮಹಿಳೆಯರಿಗೆ ಆರೋಗ್ಯದಲ್ಲಿ ಏರುಪೇರಾಗುವ ಸಾಧ‍್ಯತೆಯಿದೆ. ಎಚ್ಚರಿಕೆ ಅಗತ್ಯ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ದೇವತಾ ಪ್ರಾರ್ಥನೆ ಮಾಡಿ.

ಮೀನ: ನಕಾರಾತ್ಮಕ ಚಿಂತನೆಗಳಿಂದಾಗಿ ಹೊಸ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ನಿರುತ್ಸಾಹ ಕಾಡಲಿದೆ. ಆರ್ಥಿಕವಾಗಿ ಹಣಕಾಸಿನ ತೊಂದರೆಗಳು ಪರಿಹಾರವಾಗಲಿದೆ. ವೈದ್ಯಕೀಯ ವೃತ್ತಿಯವರಿಗೆ ಬಿಡುವಿಲ್ಲದ ದುಡಿಮೆಯಿರಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳು ಹೇಳಿದ ಮಾತು ಕೇಳದೆ ಹಠ ಮಾಡುತ್ತಿದ್ದರೆ ಈ ತಂತ್ರ ಮಾಡಿ