Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಭಾನುವಾರ, 7 ಜೂನ್ 2020 (09:12 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಮಹಿಳೆಯರಿಗೆ ಬಿಡುವಿಲ್ಲದ ಕೆಲಸಗಳಿಂದ ದೇಹ ಹೈರಾಣಾಗಬಹುದು. ದೇಹಾಯಾಸವಾಗದಂತೆ ನೋಡಿಕೊಳ‍್ಳಿ. ನಕಾರಾತ್ಮಕ ಯೋಚನೆಗಳು ಮನಸ್ಸನ್ನು ಘಾಸಿಗೊಳಿಸಲಿವೆ. ದೇವತಾ ಪ್ರಾರ್ಥನೆ ಮಾಡಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ವೃಷಭ: ಆರ್ಥಿಕ ಸ್ಥಿತಿಗತಿಗಳು ಸುಧಾರಿಸಲಿದ್ದು, ನೀವು ಅಂದುಕೊಂಡ ಕೆಲಸಗಳನ್ನು ನೆರವೇರಿಸಲಿದ್ದೀರಿ. ಆರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ದೂರವಾಗಲಿದೆ. ಹಿರಿಯರ ಪ್ರೀತಿಗೆ ಭಾಜನರಾಗಲಿದ್ದೀರಿ. ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂಭ್ರಮವಿರಲಿದೆ.

ಮಿಥುನ: ಬೇಡದ ವಿಚಾರಗಳಿಗೆ ಅನಗತ್ಯ ಪ್ರಾಮುಖ್ಯತೆ ಕೊಟ್ಟು ನಿಮ್ಮ ನೆಮ್ಮದಿಯನ್ನು ನೀವೇ ಹಾಳು ಮಾಡಿಕೊಳ್ಳಬೇಡಿ. ವ್ಯಾಪಾರ, ವ್ಯವಹಾರಗಳಲ್ಲಿ ನಿರೀಕ್ಷಿತ ಆದಾಯ ಸಿಗಲಿದೆ. ಆದರೆ ಅನಿರೀಕ್ಷಿತ ಖರ್ಚುಗಳು ಚಿಂತೆಗೆ ಕಾರಣವಾಗಬಹುದು. ದೇವತಾ ಪ್ರಾರ್ಥನೆ ಮಾಡಿ.

ಕರ್ಕಟಕ: ಮನಸ್ಸಿಗೆ ಆಘಾತ ತರುವ ವಿಚಾರಗಳನ್ನು ಕೇಳಲಿದ್ದೀರಿ. ದೈವಾನುಕೂಲದಿಂದ ನಿರುದ್ಯೋಗಿಗಳು ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆ ಬರುವುದು. ಶಿಕ್ಷಕರಿಗೆ ವೃತ್ತಿಯಲ್ಲಿ ಮುನ್ನಡೆ. ನೆರೆಹೊರೆಯವರ ಕಿರಿ ಕಿರಿ ಇದ್ದೇ ಇರುತ್ತದೆ. ಚಿಂತೆ ಮಾಡಬೇಡಿ.

ಸಿಂಹ: ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ. ಬಾಕಿ ಹಣ ಸಂದಾಯವಾಗಲಿದೆ. ಸಂಗಾತಿಗೆ ಅನಿರೀಕ್ಷಿತ ಉಡುಗೊರೆ ನೀಡಲಿದ್ದೀರಿ. ನೂತನ ದಂಪತಿಗಳಿಗೆ ಸಂತಾನ ಫಲ ಸೂಚನೆ ಸಿಗಲಿದೆ. ಮನಸ್ಸಿಗೆ ಸಂತೋಷ ಕೊಡುವ ಕೆಲಸ ಮಾಡಲಿದ್ದೀರಿ.

ಕನ್ಯಾ: ಕುಟುಂಬ ವರ್ಗದವರಿಂದ ನಿಮ್ಮ ನಿರ್ಧಾರ, ಕೆಲಸಗಳಿಗೆ ಸಹಕಾರ ಸಿಗಲಿದೆ. ಮಕ್ಕಳ ವಿಚಾರದಲ್ಲಿ ಕೆಲವು ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಆರ್ಥಿಕವಾಗಿ ಹಣಕಾಸಿನ ಅಡಚಣೆಗಳು ತೋರಿಬರಬಹುದು. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು ಅಗತ್ಯ.

ತುಲಾ: ವೃತ್ತಿರಂಗದಲ್ಲಿ ಅನಗತ್ಯ ಸಮಸ್ಯೆಗಳನ್ನು ಮೈಮೇಲೆಳೆದುಕೊಳ್ಳಲಿದ್ದೀರಿ. ಇದರಿಂದ ಮಾನಸಿಕ ನೆಮ್ಮದಿ ಹಾಳಾಗಬಹುದು. ಪ್ರೀತಿ ಪಾತ್ರರೊಂದಿಗೆ ನಿಮ್ಮ ಮನಸ್ಸಿನ ಭಾವನೆ ಹಂಚಿಕೊಳ್ಳಲಿದ್ದೀರಿ. ಶುಭ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ.

ವೃಶ್ಚಿಕ: ಕೆಲಸದ ನಿಮಿತ್ತ  ಅನ್ಯ ಊರುಗಳಿಗೆ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಪ್ರಯಾಣದಲ್ಲಿ ಎಚ್ಚರಿಕೆಯಿಂದಿರಿ. ಅಪರಿಚಿತರೊಂದಿಗೆ ವ್ಯವಹರಿಸುವುದು ಬೇಡ. ಸಾಲಗಾರರಿಂದ ಮುಕ್ತಿ ಸಿಗಲಿದೆ. ಆತುರದ ನಿರ್ಧಾರ ಬೇಡ.

ಧನು: ವೃತ್ತಿರಂಗದಲ್ಲಿ ಸಮಸ್ಯೆಗಳು ಎದುರಾದರೂ ನಿಮ್ಮ ಕ್ರಿಯಾಶೀಲತೆಯಿಂದ ನಿಭಾಯಿಸುವಿರಿ. ಸ್ನೇಹಿತರೊಡನೆ ಅತಿಯಾದ ಸಲುಗೆಯೂ ಒಳ್ಳೆಯದಲ್ಲ. ನೆರೆಹೊರೆಯವರೊಂದಿಗೆ ನಿಮ್ಮ ಬಾಂಧವ್ಯ ವೃದ್ಧಿಯಾಗಲಿದೆ. ಖರ್ಚು ವೆಚ್ಚದ ಮೇಲೆ ನಿಗಾ ಇರಲಿ.

ಮಕರ: ಯೋಗ್ಯ ವಯಸ್ಕರಿಗೆ ಮನಸ್ಸಿಗೆ ಹಿಡಿಸಿದ ಸಂಬಂಧಗಳು ಕೂಡಿಬರಲಿವೆ. ಆರ್ಥಿಕ ಪರಿಸ್ಥಿತಿಯಲ್ಲಿ ಏರಿಳಿತಗಳಿದ್ದರೂ ನಿಮ್ಮ ಮನದಿಚ್ಛೆಯನ್ನು ಪೂರೈಸಿಕೊಳ್ಳಲು ಧನವ್ಯಯ ಮಾಡಲಿದ್ದೀರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ಮನಸ್ಸಿಗೆ ನೆಮ್ಮದಿ ಸಿಗಲಿದೆ.

ಕುಂಭ: ಹೊಸ ರೀತಿಯ ಸವಾಲುಗಳಿಗೆ ಸಿದ್ಧತೆ ನಡೆಸಲಿದ್ದೀರಿ. ಹೊಸ ವಿಚಾರಗಳನ್ನು ಕಲಿಯುವ ಉತ್ಸಾಹ ತೋರಿಬರಲಿದೆ. ಸಂಗಾತಿಯ ಸಹಕಾರ ಸಿಗಲಿದೆ. ಯಾವುದರ ಬಗ್ಗೆಯೂ ಅತಿಯಾದ ಆಸೆ ಬೇಡ. ಶುಭ ಮಂಗಲ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ.

ಮೀನ: ವ್ಯವಹಾರದಲ್ಲಿ ಶತ್ರು ಕಾಟವಿದ್ದರೂ ನಿಮ್ಮ ಗುರಿ ಸಾಧನೆಗೆ ತೊಂದರೆಯಾಗದು. ನಿರುದ್ಯೋಗಿಗಳು ಸ್ವಯಂ ವೃತ್ತಿಯ ಕಡೆಗೆ ಗಮನ ಹರಿಸಲಿದ್ದಾರೆ. ಮಹಿಳೆಯರಿಗೆ ಸದ್ಯದಲ್ಲೇ ಚಿನ್ನಾಭರಣ ಖರೀದಿ ಯೋಗವಿದೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Sade Sati Shani 2025: 2025 ರಲ್ಲಿ ಸಾಡೇ ಸಾತಿ ಶನಿ ಇರುವವರು ಈ ಪರಿಹಾರ ಮಾಡಿ

Sade Sati Shani 2025: ಶನಿ ದೆಶೆಯ ಮೂರು ಚರಣಗಳು ಮತ್ತು ಅದರ ಪರಿಣಾಮಗಳು

Sade Sati Shani 2025: 2025 ರಲ್ಲಿ ಸಾಡೇಸಾತಿ ಶನಿ ಯಾರಿಗೆಲ್ಲಾ ಇದೆ ಇಲ್ಲಿದೆ ವಿವರ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Shani Dosha horoscope 2025: ಮೀನ ರಾಶಿಯವರಿಗೆ 2025 ರಿಂದ ಶನಿ ದೆಶೆ ಶುರು

ಮುಂದಿನ ಸುದ್ದಿ
Show comments