Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಸೋಮವಾರ, 1 ಜೂನ್ 2020 (08:50 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಬೇಡದ ವಿಚಾರಗಳಿಗೆ ತಲೆಕೆಡಿಸಿಕೊಂಡು ಮಾನಸಿಕ ನೆಮ್ಮದಿ ಹಾಳಾಗಬಹುದು. ತಾಳ್ಮೆ, ಸಂಯಮ ಅಗತ್ಯ. ಹಿರಿಯರೊಂದಿಗೆ ಮಾತನಾಡುವಾಗ ದುಡುಕಿ ಮನಸ್ಸಿಗೆ ನೋವುಂಟು ಮಾಡಬೇಡಿ. ದೇವತಾ ಪ್ರಾರ್ಥನೆಯಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.

ವೃಷಭ: ಕಾರ್ಯರಂಗದಲ್ಲಿ ನಿಮಗೆ ಅನುಕೂಲಕರವಾಗಿ ಎಲ್ಲವೂ ನಡೆಯುತ್ತಿಲ್ಲ ಅನಿಸಿದರೂ ಪರಿಸ್ಥಿತಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಕೌಟುಂಬಿಕವಾಗಿ ನೆಮ್ಮದಿ ಸಿಗಲಿದೆ. ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ.

ಮಿಥುನ: ಸಾಂಸಾರಿಕವಾಗಿ ಮಹಿಳೆಯರಿಗೆ ಭಾವುಕ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗ ಸಿಗದೇ ನಿರಾಸೆಯಾಗಬಹುದು. ವಿದ್ಯಾರ್ಥಿಗಳು ಹೊಸ ಸವಾಲುಗಳಿಗೆ ಸಿದ್ಧತೆ ನಡೆಸಬೇಕಾಗುತ್ತದೆ.

ಕರ್ಕಟಕ: ಆರ್ಥಿಕವಾಗಿ ಧನಾಗಮನಕ್ಕೆ ಕೊರತೆಯಿರದು. ಆದರೆ ಅಷ್ಟೇ ಖರ್ಚೂ ಇರಲಿದೆ. ಕಾರ್ಯರಂಗದಲ್ಲಿ ಛಲಬಿಡದೇ ಕೆಲಸ ಮಾಡುವುದರಿಂದ ಯಶಸ್ಸು ನಿಮ್ಮದಾಗುವುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ದಿನದಂತ್ಯಕ್ಕೆ ಶುಭ ಸುದ್ದಿ ನಿರೀಕ್ಷಿಸಿ.

ಸಿಂಹ: ಪೂರ್ವ ನಿಗದಿತ ಕಾರ್ಯಕ್ರಮಗಳಲ್ಲಿ ಅನಿರೀಕ್ಷಿತ ಬದಲಾವಣೆಯಾಗುವುದರಿಂದ ಕಿರಿ ಕಿರಿ ಅನುಭವಿಸಲಿದ್ದೀರಿ. ರಾಜಕೀಯ ರಂಗದಲ್ಲಿರುವವರಿಗೆ ಹೆಚ್ಚಿನ ಹೊಣೆಗಾರಿಕೆ ಹೆಗಲಿಗೇರಲಿದೆ. ಸರಕಾರಿ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಮುನ್ನಡೆಯಿರಲಿದೆ.

ಕನ್ಯಾ: ಅವಿವಾಹಿತರಿಗೆ ನಿಂತು ಹೋಗಿದ್ದ ವಿವಾಹ ಮಾತುಕತೆ ಪುನರಾರಂಭವಾಗಲಿದೆ. ನಿರುದ್ಯೋಗಿಗಳು ಸ್ವಯಂ ಉದ್ಯೋಗದ ಬಗ್ಗೆ ಯೋಚನೆ ಮಾಡಲಿದ್ದೀರಿ. ಆರ್ಥಿಕವಾಗಿ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು ಉತ್ತಮ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ತುಲಾ: ನಿರುದ್ಯೋಗಿಗಳಿಗೆ ಅನೇಕ ರೀತಿಯ ಅವಕಾಶಗಳು ಒದಗಿಬರಲಿದೆ. ಉದ್ಯೋಗ ರಂಗದಲ್ಲಿ ಮೇಲಧಿಕಾರಿಗಳ ಸಲಹೆ ಪಡೆದು ಮುನ್ನಡೆಯಿರಿ. ಮಹಿಳೆಯರಿಗೆ ಸದ್ಯದಲ್ಲೇ ಚಿನ್ನಾಭರಣ ಖರೀದಿ ಯೋಗವಿದೆ. ಮಕ್ಕಳ ಭವಿಷ್ಯದ ಬಗ್ಗೆ ಯೋಜನೆ ರೂಪಿಸಬೇಕಾಗುತ್ತದೆ.

ವೃಶ್ಚಿಕ: ಸಾಂಸಾರಿಕವಾಗಿ ಪೋಷಕರ ಸಹಾಯದಿಂದ ಸಾಧನೆ ಮಾಡುವ ಉತ್ಸಾಹ ಬರಲಿದೆ. ಹಿರಿಯರ ಹಿತವಚನಗಳಿಗೆ ಕಿವಿಗೊಡಿ. ದಾಂಪತ್ಯದಲ್ಲಿ ಸುಖ ಕಾಣುವಿರಿ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಧನು: ಸರಕಾರಿ ಅಧಿಕಾರಿಗಳಿಗೆ ಕಾರ್ಯದೊತ್ತಡವರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನ ನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ವಾಹನ ಖರೀದಿ ಯೋಗವಿದೆ. ಹಣಕಾಸಿನ ಹರಿವಿಗೆ ತೊಂದರೆಯಿರದು. ದೇವರ ಮೇಲೆ ಭಕ್ತಿ ಹೆಚ್ಚಲಿದೆ.

ಮಕರ: ಅನಿರೀಕ್ಷಿತ ರೂಪದಲ್ಲಿ ನಿಮ್ಮ ಕಾರ್ಯಸಾಧನೆಯಾಗಲಿರುವುದರಿಂದ ಮನಸ್ಸಿಗೆ ಸಂತಸವಾಗಲಿದೆ. ಎಷ್ಟೋ ದಿನಗಳಿಂದ ಬಾಕಿಯಿದ್ದ ಹರಕೆ ತೀರಿಸಲಿದ್ದೀರಿ. ಹಿರಿಯರಿಗೆ ವಾತ ಸಂಬಂಧೀ ಆರೋಗ್ಯ ಸಮಸ್ಯೆ ಕಾಡಬಹುದು. ಎಚ್ಚರಿಕೆ ಅಗತ್ಯ.

ಕುಂಭ: ಉದ್ಯೋಗ ರಂಗದಲ್ಲಿ ನವೀನ ಚಿಂತನೆಗಳನ್ನು ಅಳವಡಿಸಲು ಚಿಂತನೆ ನಡೆಸಲಿದ್ದೀರಿ. ಧನಗಳಿಕೆಗೆ ನಾನಾ ಮಾರ್ಗಗಳನ್ನು ಹುಡುಕಲಿದ್ದೀರಿ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ದೊರೆಯಲಿದೆ. ಮಹಿಳೆಯರಿಗೆ ತವರಿನಿಂದ ಉಡುಗೊರೆ ನಿರೀಕ್ಷಿಸಬಹುದು.

ಮೀನ: ನ್ಯಾಯಾಲಯದ ಕಾರ್ಯ ಕಲಾಪಗಳಲ್ಲಿ ಹಿನ್ನಡೆಯಾಗಬಹುದು. ಸತತ ಪ್ರಯತ್ನದಿಂದ ಯಶಸ್ಸು ಪಡೆಯುವಿರಿ. ನೆರೆಹೊರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಕಿಲ್ಲ. ವ್ಯಾಪಾರಿಗಳಿಗೆ ಸಣ್ಣ ಮಟ್ಟಿನ ಲಾಭವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Sade Sati Shani 2025: 2025 ರಲ್ಲಿ ಸಾಡೇ ಸಾತಿ ಶನಿ ಇರುವವರು ಈ ಪರಿಹಾರ ಮಾಡಿ

Sade Sati Shani 2025: ಶನಿ ದೆಶೆಯ ಮೂರು ಚರಣಗಳು ಮತ್ತು ಅದರ ಪರಿಣಾಮಗಳು

Sade Sati Shani 2025: 2025 ರಲ್ಲಿ ಸಾಡೇಸಾತಿ ಶನಿ ಯಾರಿಗೆಲ್ಲಾ ಇದೆ ಇಲ್ಲಿದೆ ವಿವರ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Shani Dosha horoscope 2025: ಮೀನ ರಾಶಿಯವರಿಗೆ 2025 ರಿಂದ ಶನಿ ದೆಶೆ ಶುರು

ಮುಂದಿನ ಸುದ್ದಿ
Show comments