Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಗುರುವಾರ, 21 ಮೇ 2020 (09:16 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಆರ್ಥಿಕವಾಗಿ ನಾನಾ ರೀತಿಯ ಕಷ್ಟಗಳು ಬಂದೀತು. ಎಲ್ಲವನ್ನೂ ಎದುರಿಸುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕಾದೀತು. ಮಿತ್ರರ ಸಲಹೆಗಳು ಉಪಯೋಗಕ್ಕೆ ಬರಲಿದೆ. ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಬೇಕು.

ವೃಷಭ: ಸಾಂಸಾರಿಕವಾಗಿ ಉತ್ತಮ ಫಲಗಳನ್ನು ಪಡೆಯಲಿದ್ದೀರಿ. ಸಂಗಾತಿಯ ಪ್ರೀತಿಗೆ ಭಾಜನರಾಗಲಿದ್ದೀರಿ. ಆದರೆ ಮಹಿಳೆಯರಿಗೆ ಚಿಂತೆ ತಪ್ಪದು. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.

ಮಿಥುನ:  ವಿಘ್ನ ಸಂತೋಷಿಗಳನ್ನು ಉಪೇಕ್ಷಿಸುವುದೇ ಉತ್ತಮ. ಕೌಟುಂಬಿಕವಾಗಿ ನೀವು ಕೈಗೊಳ್ಳುವ ನಿರ್ಧಾರಗಳು ಕುಟುಂಬ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಬಹುದು. ಸಂಗಾತಿಯೊಂದಿಗೆ ಮನಸ್ತಾಪವಾಗುವ ಸಾಧ‍್ಯತೆಯಿದೆ. ದೇವತಾ ಪ್ರಾರ್ಥನೆ ಮಾಡಿ.

ಕರ್ಕಟಕ: ಮಾನಸಿಕವಾಗಿ ಗೊಂದಲ ಕಾಡಲಿದ್ದು, ನಿರ್ಧಾರ ಕೈಗೊಳ್ಳುವಾಗ ಎಡವಲಿದ್ದೀರಿ. ಅನವಶ್ಯಕ ಮಾತಿನಿಂದ ಸಂಸಾರದಲ್ಲಿ ಕಲಹವಾದೀತು. ವೃತ್ತಿರಂಗದಲ್ಲಿ ಹೊಂದಾಣಿಕೆಯಿಂದ ನಡೆದುಕೊಳ್ಳುವುದು ಮುಖ್ಯ. ಕೆಳ ಹಂತದ ನೌಕರರಿಗೆ ಉದ್ಯೋಗದಲ್ಲಿ ಬಡ್ತಿ ಸಂಭವವಿದೆ.

ಸಿಂಹ: ಅನವಶ್ಯಕವಾಗಿ ಕೋಪದ ಕೈಗೆ ಬುದ್ಧಿ ಕೊಟ್ಟು ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಒದಗಿಬರಲಿದೆ. ಅವಿವಾಹಿತರಿಗೆ ಶೀಘ‍್ರ ಕಂಕಣ ಬಲ ಕೂಡಿಬರುವುದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ವೃತ್ತಿ ಸಿಗಲಿದೆ.

 
ಕನ್ಯಾ: ವೃತ್ತಿಜೀವನದಲ್ಲಿ ನಿರುತ್ಸಾಹ ಕಂಡುಬರಬಹುದು. ನಿಮ್ಮ ಕೆಲವೊಂದು ಸಣ್ಣ ತಪ್ಪಿಗೆ ಮುಂದೆ ದೊಡ್ಡ ಬೆಲೆ ತೆರಬೇಕಾದೀತು. ಎಚ್ಚರಿಕೆಯಿಂದ ಹೆಜ್ಜೆಯಿಡಿ. ಅನವಶ್ಯಕವಾಗಿ ಚಿಂತೆ ಮಾಡಬೇಡಿ. ಸಂಗಾತಿಯ ಹಿತ ವಚನಗಳಿಗೆ ಕಿವಿಗೊಡಿ.

ತುಲಾ: ಆರ್ಥಿಕವಾಗಿ ಅಧಿಕ ಖರ್ಚು ವೆಚ್ಚಗಳಾಗುವುದರಿಂದ ಚಿಂತೆಯಾಗಬಹುದು. ಮನೆ ರಿಪೇರಿ ಕೆಲಸಗಳನ್ನು ಮಾಡಬೇಕಾಗುತ್ತದೆ. ವೃತ್ತಿರಂಗದಲ್ಲಿ ಚೇತರಿಕೆ ಕಂಡುಬರಲಿದೆ. ಕಾರ್ಮಿಕ ವರ್ಗಕ್ಕೆ ಸಮಾಧಾನವಿರದು. ಸಂಚಾರದಲ್ಲಿ ಜಾಗ್ರತೆ ವಹಿಸಿ.

ವೃಶ್ಚಿಕ: ಆದಾಯದಲ್ಲಿ ವೃದ್ಧಿಯಾಗಲಿದ್ದು, ನಾನಾ ಮೂಲಗಳಿಂದ ಧನಾಗಮನವಾಗಲಿದೆ. ಅಂದುಕೊಂಡ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಇದು ಸಕಾಲ. ಸಂಗಾತಿಯ ಪ್ರೀತಿಗೆ ಪಾತ್ರರಾಗಲಿದ್ದೀರಿ. ಮಕ್ಕಳ ದೇಹಾರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.

ಧನು: ಹಿರಿಯರ ಮಾತುಗಳು ಅಪಥ್ಯವೆನಿಸಿದರೂ ಪಾಲಿಸಲೇಬೇಕಾಗುತ್ತದೆ. ಸಂಗಾತಿಯ ಮನಸ್ಸಿಗೆ ನೋವಾಗುವಂತೆ ನಡೆದುಕೊಳ್ಳಬೇಡಿ. ವಿದ್ಯಾರ್ಥಿಗಳು ಆಲಸ್ಯತನ ಬಿಟ್ಟು ಪರಿಶ್ರಮಪಟ್ಟರೇ ಯಶಸ್ಸು. ಕಾರ್ಯನಿಮಿತ್ತ ಕಿರು ಸಂಚಾರ ಮಾಡಬೇಕಾಗುತ್ತದೆ.

ಮಕರ: ಸಾಂಸಾರಿಕವಾಗಿ ಸಂತೋಷದ ದಿನಗಳಿವು. ನೀವು ಬಯಸಿದ ಕೆಲಸಗಳು ಸುಲಭವಾಗಿ ನೆರವೇರಲಿವೆ. ಪ್ರೀತಿ ಪಾತ್ರರೊಂದಿಗೆ ಇಷ್ಟ ಭೋಜನ ಮಾಡುವ ಯೋಗವಿದೆ. ವಾಹನ ಸವಾರ ವೃತ್ತಿಯಲ್ಲಿರುವವರಿಗೆ ಅಪಘಾತ ಭಯವಿದೆ. ಎಚ್ಚರಿಕೆ ಅಗತ್ಯ.

ಕುಂಭ: ನಿಮ್ಮ ಮನಸ್ಸಿಗೆ ಇಷ್ಟವಾಗುವವರ ಜತೆ ಕೆಲವು ಸಮಯ ಕಳೆಯುವ ಯೋಗವಿದೆ. ಕ್ರಿಯಾತ್ಮಕ ಆಲೋಚನೆಗಳಿಂದ ಇತರರ ಗಮನ ಸೆಳೆಯಲಿದ್ದೀರಿ. ಆದರೆ ದೇಹಾರೋಗ್ಯದಲ್ಲಿ ಏರುಪೇರಾಗಬಹುದು. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನದಿಂದ ಸಂತಸವಾಗಲಿದೆ.

ಮೀನ: ನಿರೀಕ್ಷಿತ ಕೆಲಸಗಳಿಗೆ ವಿಘ್ನಗಳು ಎದುರಾದೀತು. ಕೋರ್ಟು ಕಚೇರಿ ವ್ಯವಹಾರಗಳಿಗೆ ಓಡಾಟ ನಡೆಸಬೇಕಾಗುತ್ತದೆ. ಉದ್ಯೋಗಸ್ಥರಿಗೆ ಉದ್ಯೋಗ ಬದಲಾವಣೆಯ ಚಿಂತನೆ ಬರಲಿದೆ. ಮಹಿಳೆಯರಿಗೆ ಚಿನ್ನಾಭರಣ ಖರೀದಿಯ ಯೋಗವಿದೆ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪಿತಪ್ಪಿಯೂ ಈ ಸಮಯದಲ್ಲಿ ತಂದೆತಾಯಿ ಮಕ್ಕಳಿಗೆ ಬಾಯಿಗೆ ಬಂದಂತೆ ಬೈಯಬೇಡಿ