ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಭಾನುವಾರ, 17 ಮೇ 2020 (08:56 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಉದ್ಯೋಗ ಕ್ಷೇತ್ರದಲ್ಲಿ ಪುನರಾರಂಭದ ಚಿಂತೆ ಕಾಡುವುದು. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಖರ್ಚು ಮಾಡುವುದು ಉತ್ತಮ. ದೈಹಿಕ ಆರೋಗ್ಯದ ಬಗ್ಗೆ ಇಲ್ಲದ ಚಿಂತೆ ಮಾಡಬೇಡಿ. ಹಿರಿಯರ ಸಲಹೆಗಳಿಗೆ ಕಿವಿಗೊಡಬೇಕಾಗುತ್ತದೆ.

ವೃಷಭ: ನಿಮ್ಮ ಕ್ರಿಯಾಶೀಲತೆಯಿಂದಲೇ ಬರುವಂತಹ ಸಮಸ್ಯೆಗಳನ್ನು ಎದುರಿಸುವಿರಿ. ಸಾಂಸಾರಿಕವಾಗಿ ಸಂಗಾತಿಯ ಮನೋಭಿಲಾಷೆ ಈಡೇರಿಸಲು ಖರ್ಚು ವೆಚ್ಚಗಳಾಗಬಹುದು. ಅವಿವಾಹಿತರಿಗೆ ಯೋಗ್ಯ ಸಂಬಂಧಕ್ಕಾಗಿ ಕೆಲವು ದಿನ ಕಾಯಬೇಕಾಗಬಹುದು.

ಮಿಥುನ: ಶೀತ ಸಂಬಂಧೀ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಂಡುಬರಬಹುದು. ಚಿಂತೆ ಬೇಡ. ಆರ್ಥಿಕವಾಗಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ. ವೃತ್ತಿರಂಗದಲ್ಲಿ ಅನಿರೀಕ್ಷಿತ ಬದಲಾವಣೆಗೆ ಮಾನಸಿಕವಾಗಿ ಸಿದ್ಧರಾಗಬೇಕಾಗುತ್ತದೆ.

ಕರ್ಕಟಕ: ಚಿಂತಿತ ಕೆಲಸಗಳನ್ನು ಪೂರ್ತಿ ಮಾಡುವುದಕ್ಕೆ ಕಠಿಣ ಶ್ರಮ ವಹಿಸಬೇಕಾಗುತ್ತದೆ. ಕಷ್ಟದ ಸಮಯದಲ್ಲಿ ಮಿತ್ರರ ಸಲಹೆಗಳು ಉಪಯೋಗಕ್ಕೆ ಬರಲಿವೆ. ಸಂಗಾತಿಯ ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.

ಸಿಂಹ: ಮಾನಸಿಕವಾಗಿ ಋಣಾತ್ಮಕ ಚಿಂತೆಗಳಿಂದ ಕೆಲಸ ಕಾರ್ಯಗಳಲ್ಲಿ ನಿರುತ್ಸಾಹ ಕಾಡಬಹುದು. ವೃತ್ತಿರಂಗದಲ್ಲಿ ಬದಲಾವಣೆ ಬಯಸುವಿರಿ. ಹೂಡಿಕೆ ವ್ಯವಹಾರದಲ್ಲಿ ತಕ್ಕಮಟ್ಟಿಗೆ ಲಾಭ ಪಡೆಯಲಿದ್ದೀರಿ. ದುಡುಕಿನ ವರ್ತನೆ, ಮಾತುಗಳಿಗೆ ಕಡಿವಾಣ ಹಾಕಬೇಕಾಗುತ್ತದೆ.

 
ಕನ್ಯಾ: ಸಾಂಸಾರಿಕವಾಗಿ ಸಂತೋಷದ ದಿನ ನಿಮ್ಮದಾಗಲಿದೆ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಅನಿರೀಕ್ಷಿತವಾಗಿ ಅತಿಥಿಗಳ ಆಗಮನವಾಗಲಿದೆ. ಆದರೆ ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರುವುದು. ಚಿಂತಿಸಿ ಮುಂದಿನ ಹೆಜ್ಜೆಯಿಡಿ.

ತುಲಾ: ಕುಟುಂಬ ಸದಸ್ಯರ ಜತೆ ವಿನಾಕಾರಣ ವಾಗ್ವಾದ ನಡೆಸಿ ಮಾನಸಿಕ ನೆಮ್ಮದಿ ಕಳೆದುಕೊಳ್ಳಲಿದ್ದೀರಿ. ಅನವಶ್ಯಕ ಗೊಂದಲ ಮಾಡಿಕೊಳ್ಳಬೇಡಿ. ತಾಳ್ಮೆ, ಸಂಯಮ ಅಗತ್ಯ. ವ್ಯಾಪಾರಿಗಳಿಗೆ ಅಭಿವೃದ್ಧಿ ಕಂಡುಬರುವುದು. ದೇವತಾ ಪ್ರಾರ್ಥನೆಯಿಂದ ನೆಮ್ಮದಿ.

ವೃಶ್ಚಿಕ: ಸಾಂಸಾರಿಕ ಸಮಸ್ಯೆಗಳಿಗೆ ಸಮಾಧಾನ ಚಿತ್ತದಿಂದ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ. ಸಂಗಾತಿಯೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳಿ. ಅವಿವಾಹಿತರಿಗೆ ಶೀಘ್ರದಲ್ಲೇ ಯೋಗ್ಯ ಸಂಬಂಧ ಕೂಡಿಬರಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ಧನು: ವೈಯಕ್ತಿಕ ವಿಚಾರವನ್ನು ನೆರೆಹೊರೆಯವರೊಂದಿಗೆ ಹಂಚಿಕೊಳ್ಳಲು ಹೋಗಬೇಡಿ. ಇಂದು ಆರ್ಥಿಕ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಹಣ ಕಳೆದುಕೊಳ್ಳುವ ಭೀತಿಯಿದೆ. ಸಾಂಸಾರಿಕ ಸಾಮರಸ್ಯ ಕಾಪಾಡಿಕೊಳ್ಳಿ. ವಾಹನ ಸವಾರರು ಚಾಲನೆಯಲ್ಲಿ ಎಚ್ಚರಿಕೆಯಿಂದಿರಬೇಕು.

ಮಕರ: ನಿಮ್ಮ ಸಮಾಧಾನಕರ ಮಾತಿನಿಂದಲೇ ಜತೆಗಿದ್ದವರಿಗೆ ಸಾಂತ್ವನ ಸಿಗಲಿದೆ. ಬೇರೆಯವರ ಕಷ್ಟಕ್ಕೆ ಸಹಾಯ ಮಾಡಲು ಹೋಗಿ ಅಪಾಯ ಮೈಮೇಲೆಳೆದುಕೊಳ್ಳಬೇಡಿ. ಆರ್ಥಿಕವಾಗಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಿದೆ. ದೇವತಾ ಪ್ರಾರ್ಥನೆಯಿಂದ ಶುಭ.

ಕುಂಭ: ನಿಮ್ಮ ದುಡುಕು ಮಾತಿನಿಂದ ಸಂಗಾತಿಯ ಮನಸ್ಸಿಗೆ ನೋವಾಗಬಹುದು. ತಾಳ್ಮೆ, ಸಂಯಮದಿಂದ ಇರುವುದು ಮುಖ್ಯ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಮಹಿಳೆಯರಿಗೆ ಬಿಡುವಿಲ್ಲದ ದುಡಿಮೆಯಿಂದ ದೇಹ ಹೈರಾಣಾಗಬಹುದು.

ಮೀನ: ನಿಮ್ಮ ಮಾನಸಿಕ ತುಮುಲವನ್ನು ಯಾರಿಗೂ ಹೇಳಿಕೊಳ್ಳಲಾಗದೇ ಮನಸ್ಸಿನೊಳಗೇ ಕೊರಗು ಮೂಡುವುದು. ಮನಸ್ಸಿನ ನೆಮ್ಮದಿಗಾಗಿ ಕುಲದೇವರ ಪ್ರಾರ್ಥನೆ ಮಾಡಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಪಾಲಿಗೆ ಬಂದ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಂಕಟ ಮೋಚನ ಹನುಮಾನ್ ಅಷ್ಟಕಂ ಸ್ತೋತ್ರ

ಹಣಕಾಸಿನ ಸಮಸ್ಯೆಯಿದ್ದರೆ ಕನಕಧಾರಾ ಸ್ತೋತ್ರ ತಪ್ಪದೇ ಓದಿ

2026 ರಲ್ಲಿ ಯಾವ ರಾಶಿಯವರು ಯಾವ ದೇವರ ಪ್ರಾರ್ಥನೆ ಮಾಡಬೇಕು ಗಮನಿಸಿ

ಗಣೇಶ ಕವಚ ಸ್ತೋತ್ರವನ್ನು ಮಕ್ಕಳಿಗೆ ಹೇಳಿಸಿ

ಈ ಐದು ರಾಶಿಯವರಿಗೆ 2026 ರಲ್ಲಿ ಸ್ವಂತ ಮನೆ ಕನಸು ನನಸಾಗುತ್ತದೆ

ಮುಂದಿನ ಸುದ್ದಿ
Show comments