Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಭಾನುವಾರ, 10 ಮೇ 2020 (09:00 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಸಾಂಸಾರಿಕವಾಗಿ ನಿರಾಸೆ ಕಾಡಲಿದ್ದು, ಸಂಗಾತಿಯ ಮೇಲೆ ಅಸಮಾಧಾನ ಸ್ಪೋಟಗೊಳ್ಳಲಿದೆ. ಯಾವುದೂ ನೀವು ಅಂದುಕೊಂಡಂತೆ ನಡೆಯುತ್ತಿಲ್ಲ ಎಂಬ ಬೇಸರ ಕಾಡುವುದು. ತಾಳ್ಮೆ ಅಗತ್ಯ. ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ದೇವತಾ ಪ್ರಾರ್ಥನೆ ಮಾಡಿ.

ವೃಷಭ: ಗೃಹ ಬಳಕೆ ವಸ್ತುಗಳ ಖರೀದಿಗಾಗಿ ಹೆಚ್ಚಿನ ಧನವ್ಯಯವಾಗಲಿದೆ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಹೊಸ ಬದುಕಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಭವಿಷ್ಯದ ಚಿಂತೆ ಕಾಡಬಹುದು.

ಮಿಥುನ: ಪ್ರೇಮಿಗಳ ಜೀವನದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ದಿನವಿದು. ಉದ್ಯೋಗ ರಂಗದಲ್ಲಿ ಬಿಡುವಿಲ್ಲದ ದುಡಿಮೆಯಿಂದ ದೇಹ ಹೈರಾಣಾಗಬಹುದು. ಆದರೆ ಆರ್ಥಿಕವಾಗಿ ಹಣಕಾಸಿನ ಪರಿಸ್ಥಿತಿ ಸುಧಾರಣೆಯಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕರ್ಕಟಕ: ನಿಮ್ಮ ಕಷ್ಟದ ಸಮಯದಲ್ಲಿ ಗೆಳೆಯರ ಸಹಕಾರ ಸಿಗಲಿದೆ. ಆಪ್ತರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯಲಿದ್ದೀರಿ. ವೃತ್ತಿ ಬದಲಾವಣೆ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಅವಿವಾಹಿತರಿಗೆ ಶೀಘ‍್ರ ಕಂಕಣ ಬಲ ಕೂಡಿಬರಲಿದೆ. ತಾಳ್ಮೆಯಿರಲಿ.

ಸಿಂಹ: ಗೆಳಯರಿಂದ ಸೂಕ್ತ ಸಮಯದಲ್ಲಿ ಸಲಹೆ ಸೂಚನೆಗಳು ಸಿಕ್ಕಿ ಕಷ್ಟಗಳಿಂದ ಪಾರಾಗುವಿರಿ. ವೃತ್ತಿರಂಗದಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಕೆಲಸಗಳು ಸಮಾಜ ಪರವಾಗಲಿದೆ. ಹಣಕಾಸಿಗೆ ತೊಂದರೆಯಾದರೂ ಮುಂದೆ ಪರಿಸ್ಥಿತಿ ಸುಧಾರಿಸಬಹುದು.

 
ಕನ್ಯಾ: ಬಹುದಿನಗಳ ಕನಸು ನನಸು ಮಾಡಿಕೊಳ್ಳಲಿದ್ದೀರಿ. ಸಂಗಾತಿಯ ಪ್ರೀತಿಯ ಮಾತುಗಳು ಮನಸ್ಸಿಗೆ ಸಾಂತ್ವನ ನೀಡಲಿದೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಖರ್ಚು ವೆಚ್ಚಗಳನ್ನು ನಿಭಾಯಿಸಲು ಕಷ್ಟವಾದೀತು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ತುಲಾ: ವೃತ್ತಿರಂಗದಲ್ಲಿ ನಿಮ್ಮ ಮೈಮರೆವಿನಿಂದ ಕೆಲವೊಂದು ತಪ್ಪುಗಳಾಗಬಹುದು. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಇಂದು ಯಾರಿಗೂ ಸಾಲ ಕೊಡಲು ಹೋಗಬೇಡಿ. ಹಣಕಾಸಿನ ಬಗ್ಗೆ ಹೆಚ್ಚಿನ ಲೆಕ್ಕಾಚಾರದ ಹೆಜ್ಜೆಯಿಡುವುದು ಮುಖ್ಯ.

ವೃಶ್ಚಿಕ: ಅವಿವಾಹಿತ ಕನ್ಯಾಮಣಿಗಳಿಗೆ ಶೀಘ್ರದಲ್ಲೇ ಯೋಗ್ಯ ಸಂಬಂಧಗಳು ಕೂಡಿಬರಲಿವೆ. ಹೊಸ ಮಿತ್ರರ ಸಂಪಾದನೆ ಮಾಡಲಿದ್ದೀರಿ. ವ್ಯಾಪಾರಿಗಳಿಗೆ ಲಾಭವಿಲ್ಲದಿದ್ದರೂ ನಷ್ಟವಾಗದು. ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ.

ಧನು: ಇಂದಿನ ದಿನ ದೈವಾನುಗ್ರಹದಿಂದ ನಿಮಗೆ ಶುಭವಾಗಲಿದ್ದು, ಅಂದುಕೊಂಡ ಕೆಲಸ ಕಾರ್ಯಗಳನ್ನು ಸುಗಮವಾಗಿ ನೆರವೇರಿಸಲಿದ್ದೀರಿ. ಅನಿರೀಕ್ಷಿತವಾಗಿ ಮನೆಗೆ ಅತಿಥಿಗಳ ಆಗಮನವಾಗಲಿದ್ದು, ಸಂತಸದ ವಾತಾವರಣವಿರಲಿದೆ. ಚಿಂತೆ ಬೇಡ.

ಮಕರ: ಅನಗತ್ಯ ಯೋಚನೆಗಳಿಗೆ ಕಡಿವಾಣ ಹಾಕುವುದು ಒಳಿತು. ಮನೋಕಾಮನೆಗಳನ್ನು ಪೂರೈಸಲು ಖರ್ಚು ವೆಚ್ಚಗಳಾಗಬಹುದು. ಐಷಾರಾಮಿ ಜೀವನದ ಲಾಲಸೆ ಕಾಡಲಿದೆ. ಆದರೆ ಇದ್ದುದರಲ್ಲೇ ತೃಪ್ತಿ ಪಡಬೇಕಾದ ಅನಿವಾರ್ಯತೆಯ ಕಾಲ ಇದಾಗಿದೆ.

ಕುಂಭ: ತೀವ್ರ ನಿರಾಶೆ ಕಾಡಲಿದ್ದು, ಅಂದುಕೊಂಡ ಕೆಲಸಗಳನ್ನು ಪೂರ್ತಿ ಮಾಡಲು ನಿರುತ್ಸಾಹ ಕಾಡಲಿದೆ. ಸಂಗಾತಿಯ ಸಲಹೆಗಳಿಗೆ ಕಿವಿಗೊಡುವುದು ಮುಖ್ಯ. ಹೆಣ್ಣು ಮಕ್ಕಳಿಗೆ ತವರಿನ ಚಿಂತೆಯಾಗಲಿದೆ. ಮಕ್ಕಳ ದೇಹಾರೋಗ್ಯದ ಬಗ್ಗೆ ಗಮನ ಹರಿಸಬೇಕಾಗುತ್ತದೆ.

ಮೀನ: ದಾಯಾದಿ ಕಲಹಗಳು ನಿವಾರಣೆಯಾಗಲಿದ್ದು, ಹಿರಿಯರ ಸಲಹೆಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ವೃತ್ತಿರಂಗದಲ್ಲಿ ವಿಳಂಬ ಗತಿಯಲ್ಲಿ ಕೆಲಸಗಳು ಸಾಗಲಿದ್ದು, ಅಸಹನೆಯುಂಟಾಗುವುದು. ಹಿತಶತ್ರುಗಳ ಬಗ್ಗೆ ಎಚ್ಚರ. ಮನೋನಿಗ್ರಹ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ