Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಭಾನುವಾರ, 3 ಮೇ 2020 (08:39 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಮಾನಸಿಕವಾಗಿ ಒಂದು ರೀತಿಯ ಬೇಸರ ಕಾಡಲಿದ್ದು, ಕೆಲಸದಲ್ಲಿ ನಿರುತ್ಸಾಹ ಕಾಡಲಿದೆ. ಆದರೂ ಕರ್ತವ್ಯದ ಕರೆಗೆ ಓಗೊಡಬೇಕಾಗುತ್ತದೆ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.

ವೃಷಭ: ವಿದ್ಯಾರ್ಥಿಗಳು ಪರಿಸ್ಥಿತಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಹಿರಿಯರ ಸಲಹೆ, ಸೂಚನೆ ಉಪಯೋಗಕ್ಕೆ ಬರುವುದು. ವೃತ್ತಿರಂಗದಲ್ಲಿ ಅದೃಷ್ಟದ ಬಲದಿಂದ ಮುನ್ನಡೆ ಸಾಧಿಸಲಿದ್ದೀರಿ. ಅಧಿಕಾರಿ ವರ್ಗದವರಿಗೆ ವರ್ಗಾವಣೆ ಭೀತಿಯಿದೆ.

ಮಿಥುನ: ವೃತ್ತಿರಂಗದಲ್ಲಿ ನಿಮ್ಮ ಕೆಲಸ ಕಾರ್ಯಗಳು ಸಹೋದ್ಯೋಗಿಗಳ ಅಸಮಾಧಾನಕ್ಕೆ ಕಾರಣವಾಗಬಹುದು. ಅವಸರದ ನಿರ್ಧಾರ ತೆಗೆದುಕೊಳ್ಳಬೇಡಿ. ಆರ್ಥಿಕವಾಗಿ ಸಕಾಲದಲ್ಲಿ ಹಣಕಾಸಿನ ಹರಿವು ಬರಲಿದೆ. ದೇಹಾರೋಗ್ಯದಲ್ಲಿ ಏರುಪೇರಾಗಲಿದೆ.

ಕರ್ಕಟಕ: ಪಾಲು ಬಂಡವಾಳ ಹೂಡಿಕೆಯಲ್ಲಿ ಎಚ್ಚರಿಕೆ ವಹಿಸಬೇಕು. ವ್ಯಾಪಾರಿಗಳಿಗೆ ವ್ಯವಹಾರ ಸುಗಮವಾಗಲಿದೆ. ಹಣಕಾಸಿಗೆ ತೊಂದರೆಯಿರದು. ಆದರೆ ಖರ್ಚು ವೆಚ್ಚಗಳಿಗೆ ಎಚ್ಚರಿಕೆ ವಹಿಸಬೇಕು. ಸರಕಾರಿ ಉದ್ಯೋಗಿಗಳಿಗೆ ಕಾರ್ಯದೊತ್ತಡವಿರಲಿದೆ.

ಸಿಂಹ: ಅನಿರೀಕ್ಷಿತವಾಗಿ ಕಿರು ಸಂಚಾರ ಮಾಡಬೇಕಾಗುತ್ತದೆ. ವೃತ್ತಿರಂಗದಲ್ಲಿ ಹೊಸ ಸಂಘರ್ಷಕ್ಕೆ ಸಿದ್ಧರಾಗಬೇಕಾಗುತ್ತದೆ. ಮಿತ್ರರೊಂದಿಗಿನ ವೈಮನಸ್ಸು ಮನಸ್ಸಿಗೆ ಬೇಸರವುಂಟುಮಾಡಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.

 
ಕನ್ಯಾ: ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಕೆಲಸ ಕಾರ್ಯಗಳಿಗೆ ಜನಮನ್ನಣೆ ಸಿಗಲಿದೆ. ಆರ್ಥಿಕವಾಗಿ ಚೇತರಿಕೆ ಉಂಟಾಗಲಿದ್ದು, ಅಂದುಕೊಂಡ ಕೆಲಸ ಕಾರ್ಯಗಳನ್ನು ನೆರವೇರಿಸುವಿರಿ. ಸರಕಾರಿ ನೌಕರರಿಗೆ ಓಡಾಟ ನಡೆಸಬೇಕಾಗುತ್ತದೆ. ತಾಳ್ಮೆ ಅತೀ ಅಗತ್ಯ.

ತುಲಾ: ವ್ಯಾಪಾರ, ವ್ಯವಹಾರಸ್ಥರಿಗೆ ತಮ್ಮ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುವ ತೃಪ್ತಿ ಸಿಗಲಿದೆ. ಹಾಗಿದ್ದರೂ ಹಣಕಾಸಿನ ವಿಚಾರದಲ್ಲಿ ಅನಿರೀಕ್ಷಿತ ಖರ್ಚು ವೆಚ್ಚಗಳು ತೋರಿಬರಬಹುದು. ನಿರುದ್ಯೋಗಿಗಳು ಪಾಲಿಗೆ ಬಂದ ಅವಕಾಶವನ್ನು ಬಳಸಿಕೊಳ್ಳಬೇಕು.

ವೃಶ್ಚಿಕ: ಆರ್ಥಿಕವಾಗಿ ಧನಾಗಮನವಿದ್ದರೂ ಖರ್ಚು ವೆಚ್ಚ ಮಾಡುವಾಗ ಯೋಚಿಸಿ ಹೆಜ್ಜೆಯಿಡಬೇಕಾಗುತ್ತದೆ. ನೌಕರ ವರ್ಗದವರಿಗೆ ಭವಿಷ್ಯದ ಚಿಂತೆ ಕಾಡಲಿದೆ. ಬಹುದಿನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯತ್ನಿಸುವಿರಿ. ದುಡುಕಿನ ನಿರ್ಧಾರ ಬೇಡ.

ಧನು: ಬಂಧು ಬಳಗದವರ ಸಹಕಾರದಿಂದ ಬರುವಂತಹ ಸಮಸ್ಯೆಗಳನ್ನು ನಿಭಾಯಿಸುವಿರಿ. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರ. ಕೃಷಿಕರಿಗೆ ಕೃಷಿ ಚಟುವಟಿಕೆಗಳಿಗೆ ಕಾಲ ಕೂಡಿಬರಲಿದೆ. ಸಾಂಸಾರಿಕವಾಗಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ.

ಮಕರ: ವ್ಯವಹಾರದಲ್ಲಿ ಮುನ್ನಡೆ ತೋರಿಬಂದರೂ ವಿಘ್ನಗಳನ್ನು ತಪ್ಪಿಸಲು ಸಾಧ‍್ಯವಿಲ್ಲ. ನೂತನ ದಂಪತಿಗಳು ಉತ್ತಮ ಸಮಯ ಕಳೆಯಲಿದ್ದಾರೆ. ವಿವಾಹ ಮಾತುಕತೆಗೆ ಮುನ್ನಡೆ ಸಿಗಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ನಡೆಸಲು ಸಿದ್ಧತೆ ನಡೆಸಲಿದ್ದೀರಿ.

ಕುಂಭ: ಯಾವುದೇ ಅಡೆತಡೆಗಳಿಲ್ಲದೇ ಕೆಲಸ ಕಾರ್ಯ ನಡೆಸಲಿದ್ದೀರಿ. ಸಂಗಾತಿಯ ಸಹಕಾರ ಸಿಗಲಿದೆ. ಮಾನಸಿಕವಾಗಿ ಉಲ್ಲಾಸದ ಕ್ಷಣ ಕಳೆಯಲಿದ್ದೀರಿ. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸಲಿದ್ದೀರಿ. ಬಂಧು ಬಳಗದವರ ಭೇಟಿ ಮನಸ್ಸಿಗೆ ಮುದ ನೀಡಲಿದೆ.

ಮೀನ: ಕೌಟುಂಬಿಕವಾಗಿ ನೆಮ್ಮದಿಯ ವಾತಾವರಣವಿರುವುದು. ಆದರೆ ವ್ಯಾಪಾರಿಗಳಿಗೆ ಪುನರಾರಂಭದ ಚಿಂತೆ ಕಾಡಲಿದೆ. ಮಹಿಳೆಯರಿಗೆ ಬಿಡುವಿಲ್ಲದ ಗೃಹ ಕೃತ್ಯಗಳಿಂದ ದೇಹ ಹೈರಾಣಾಗಬಹುದು. ಕೆಲಸ ಕಾರ್ಯಗಳು ಹಂತ ಹಂತವಾಗಿ ನೆರವೇರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುಂಭ ರಾಶಿಯವರ ದೋಷ ಪರಿಹಾರವಾಗಲು ಅಕ್ಷಯ ತೃತೀಯ ದಿನದಂದು ಇದನ್ನು ದಾನ ಮಾಡಿ