Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಗುರುವಾರ, 23 ಏಪ್ರಿಲ್ 2020 (09:13 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಕಾರ್ಯಕ್ಷೇತ್ರದಲ್ಲಿ ನಿಧಾನಗತಿಯಲ್ಲಿ ಕೆಲಸಗಳು ಸಾಗಲಿದ್ದು, ನಿಮ್ಮ ಸಹನೆ ಪರೀಕ್ಷೆ ನಡೆಸಲಿದೆ. ಸಾಂಸಾರಿಕವಾಗಿ ಸಂಗಾತಿಯೊಂದಿಗೆ ಹೊಂದಾಣಿಕೆ ಕಾಯ್ದುಕೊಳ‍್ಳಿ. ಇಷ್ಟ ದೇವರ ಪ್ರಾರ್ಥನೆಯಿಂದ ಮನಸ್ಸಿಗೆ ನೆಮ್ಮದಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭ: ಆರ್ಥಿಕ ಸ್ಥಿತಿಗತಿ ಏರುಪೇರಾಗದಂತೆ ಎಚ್ಚರವಹಿಸಿ. ಕಿರು ಸಂಚಾರದ ಸಾಧ‍್ಯತೆ. ಮಕ್ಕಳ ದೇಹಾರೋಗ್ಯದಲ್ಲಿ ಏರುಪೇರಾಗಲಿದೆ. ಎಚ್ಚರಿಕೆ ವಹಿಸಿ. ಮನೆಯಲ್ಲಿ ಗೃಹ ಬಳಕೆ ವಸ್ತುಗಳ ಖರೀದಿಗೆ ಖರ್ಚುವೆಚ್ಚವಾಗಲಿದೆ. ದಿನದಂತ್ಯಕ್ಕೆ ಶುಭ ಸುದ್ದಿ.

ಮಿಥುನ: ಅನಿರೀಕ್ಷಿತವಾಗಿ ದೂರ ಸಂಚಾರ ಮಾಡಬೇಕಾಗಿ ಬರುತ್ತದೆ. ಕಾರ್ಯಕ್ಷೇತ್ರದಲ್ಲಿ ಅಡಚಣೆ ತೋರಿಬರಲಿದೆ. ಇತರರೊಂದಿಗೆ ಬೆರೆಯಲು ಹಿಂಜರಿಕೆ ಬಂದಿರುತ್ತದೆ. ಅನವಶ್ಯಕವಾಗಿ ಚಿಂತೆ ಮಾಡಿ ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳಬೇಡಿ.

ಕರ್ಕಟಕ: ಪ್ರಮುಖ ವಿಚಾರಗಳನ್ನು ಸಂಗಾತಿಯಿಂದ ಮುಚ್ಚಿಟ್ಟುಕೊಂಡರೆ ಮುಂದೆ ಸಮಸ್ಯೆಯಾದೀತು. ಕೌಟುಂಬಿಕವಾಗಿ ಭಿನ್ನಾಭಿಪ್ರಾಯ ಬರದಂತೆ ಎಚ್ಚರಿಕೆ ವಹಿಸಿ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ಸಿಂಹ: ಅನಪೇಕ್ಷಿತ ಅತಿಥಿಗಳನ್ನು ಸ್ವಾಗತಿಸುವ ಅನಿವಾರ್ಯತೆ ಎದುರಾಗಲಿದೆ. ನೂತನ ದಂಪತಿಗಳಿಗೆ ಹೊಂದಾಣಿಕೆಯ ಕೊರತೆ ಉಂಟಾಗಲಿದೆ. ಖರ್ಚು ವೆಚ್ಚಗಳು ಹೆಚ್ಚಾಗಲಿವೆ. ನಿರ್ಧಾರ ಕೈಗೊಳ್ಳುವಾಗ ಅನಿಶ್ಚಿತತೆ ಎದುರಾಗಲಿದೆ. ದೇವತಾ ಪ್ರಾರ್ಥನೆ ಮಾಡಿ.

ಕನ್ಯಾ: ಬಹುದಿನಗಳಿಂದ ಕಾಯುತ್ತಿದ್ದ ರಹಸ್ಯಗಳು ಇಂದು ಹೊರಬೀಳಲಿದೆ. ಆರೋಗ್ಯದಲ್ಲಿ ಕಂಡುಬರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಆಪ್ತೇಷ್ಟರೊಂದಿಗೆ ದುಃಖ ಹಂಚಿಕೊಳ್ಳಲು ಬಯಸುತ್ತೀರಿ. ಆರ್ಥಿಕವಾಗಿ ಖರ್ಚು ವೆಚ್ಚಗಳಾಗಲಿವೆ.

ತುಲಾ: ಕೌಟುಂಬಿಕವಾಗಿ ನಿರ್ಧಾರ ಕೈಗೊಳ್ಳುವಾಗ ಗೊಂದಲದ ಪರಿಸ್ಥಿತಿ ಎದುರಾಗಲಿದೆ. ದಾಯಾದಿ ಕಲಹಗಳಿಗೆ ಹಿರಿಯರ ಮಧ್ಯಸ್ಥಿಕೆ ಪಡೆಯುವಿರಿ. ಕಾರ್ಯಕ್ಷೇತ್ರದಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಎದುರಾಗಲಿದೆ.

ವೃಶ್ಚಿಕ: ಹಿರಿಯರಿಂದ ಉಡುಗೊರೆ ಸ್ವೀಕರಿಸಲಿದ್ದೀರಿ. ಉದ್ಯೋಗಿಗಳಿಗೆ ವೃತ್ತಿ ರಂಗದಲ್ಲಿ ಬದಲಾವಣೆಗೆ ಮನಸ್ಸು ಬಯಸುವುದು. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗ ಸಿಗದೇ ನಿರಾಸೆಯಾಗಬಹುದು. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.

ಧನು: ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಸಾಮರ್ಥ್ಯಕ್ಕಿಂತ ಹೆಚ್ಚು ಕೆಲಸ ಮಾಡಲು ಹೋದರೆ ದೇಹಾಯಾಸವಾದೀತು. ಸಂಗಾತಿಯ ಬಹುದಿನಗಳ ಕನಸು ನನಸಾಗಿಸಲಿದ್ದೀರಿ. ಇಷ್ಟದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸು ಉಲ್ಲಾಸವಾಗಲಿದೆ.

ಮಕರ: ಆತುರದಿಂದ ಕೈಗೊಳ್ಳುವ ನಿರ್ಧಾರಗಳು ಅನಾಹುತಕ್ಕೆ ಕಾರಣವಾದೀತು. ಹಿರಿಯರ ಸಲಹೆಗಳು ಉಪಯೋಗಕ್ಕೆ ಬರುವುದು. ಅವಿವಾಹಿತರಿಗೆ ವಿವಾಹ ಮಾತುಕತೆಯಲ್ಲಿ ಮುನ್ನಡೆಯಿರಲಿದೆ. ಬೆಂಕಿ, ನೀರಿನ ಸಹವಾಸ ಮಾಡುವಾಗ ಎಚ್ಚರಿಕೆಯಿಂದಿರಿ.

ಕುಂಭ: ಮನಸ್ಸು ವಿನೋದ ಕೊಡುವ ಕೆಲಸಗಳ ಕಡೆಗೆ ವಾಲುವುದು. ಆದರೆ ಕರ್ತವ್ಯದ ಕರೆಗೆ ಓಗೊಡಬೇಕಾಗುತ್ತದೆ. ವಾಹನ ಸವಾರರಿಗೆ ಅಪಘಾತದ ಭಯವಿದೆ. ಎಚ್ಚರಿಕೆ ಅಗತ್ಯ. ನಿಮ್ಮ ನೆರೆಹೊರೆಯವರಿಂದ ಚಾಡಿ ಮಾತು ಕೇಳಿಬಂದೀತು. ತಾಳ್ಮೆಯಿರಲಿ.

ಮೀನ: ಮಾನಸಿಕವಾಗಿ ಋಣಾತ್ಮಕ ಚಿಂತನೆಗಳು ಕಾಡಿ ಕೆಲಸದಲ್ಲಿ ನಿರುತ್ಸಾಹ ಕಂಡುಬರಬಹುದು. ತಾಳ್ಮೆ ಅತೀ ಅಗತ್ಯ. ಮೇಲ್ವರ್ಗದ ಅಧಿಕಾರಿಗಳಿಗೆ ಕಾರ್ಯದೊತ್ತಡ ಹೆಚ್ಚಲಿದೆ. ಹೊಸ ಸ್ನೇಹಿತರನ್ನು ಸಂಪಾದಿಸಲಿದ್ದೀರಿ. ಹೊಸ ಸವಾಲುಗಳಿಗೆ ಸಿದ್ಧರಾಗಬೇಕಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಿಥುನ ರಾಶಿಯವರ ದೋಷ ಪರಿಹಾರವಾಗಲು ಅಕ್ಷಯ ತೃತೀಯ ದಿನದಂದು ಇದನ್ನು ದಾನ ಮಾಡಿ