ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಭಾನುವಾರ, 19 ಏಪ್ರಿಲ್ 2020 (08:57 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಯಾವುದೇ ಕೆಲಸವೇ ಆದರೂ ಆರಂಭದಲ್ಲಿ ಅತಿಯಾದ ಉತ್ಸಾಹದಿಂದ ತೊಡಗಿಸಿಕೊಳ್ಳುವಿರಿ. ಆದರೆ ಸಮಯ ಕಳೆಯದಂತೆ ಉತ್ಸಾಹ ಭಂಗವಾದೀತು. ಆರ್ಥಿಕವಾಗಿ ಗೃಹ ಬಳಕೆ ವಸ್ತುಗಳ ಖರೀದಿಗೆ ಖರ್ಚಾಗಲಿದೆ. ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

ವೃಷಭ: ವ್ಯವಹಾರದಲ್ಲಿ ಮುನ್ನಡೆಯ ಯೋಗವಿದೆ. ವ್ಯಾಪಾರಿಗಳು ಹೊಸ ದಾರಿಗಳನ್ನು ಕಂಡುಕೊಳ್ಳಲಿದ್ದಾರೆ. ಕೆಳ ಹಂತದ ನೌಕರರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಲಿದೆ. ಹಿರಿಯರಿಗೆ ದೇಹಾರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಬೇಕು. ದೇವತಾ ಪ್ರಾರ್ಥನೆ ಮಾಡಿ.

ಮಿಥುನ: ಪ್ರೇಮಿಗಳಿಗೆ ಹಿರಿಯರಿಂದ ವಿರೋಧ ವ್ಯಕ್ತವಾಗಲಿದೆ. ಅಗಲುವಿಕೆಯ ನೋವು ಕಾಡಲಿದೆ. ಸಂತಾನಾಪೇಕ್ಷಿತ ದಂಪತಿಗಳು ದೇವರ ಮೊರೆ ಹೋಗುವರು. ಸಾಂಸಾರಿಕವಾಗಿ ಹೊಸ ಜವಾಬ್ಧಾರಿಗಳಿಗೆ ಸಿದ್ಧರಾಗಬೇಕಾಗುತ್ತದೆ. ಖರ್ಚು ವೆಚ್ಚದ ಬಗ್ಗೆ ನಿಗಾ ಇರಲಿ.

ಕರ್ಕಟಕ: ಹಿರಿಯರಿಗೆ ಆಸ್ತಿ ಪಾಸ್ತಿಗೆ ವಾರಸುದಾರರ ಚಿಂತೆ ಕಾಡಲಿದೆ. ಪ್ರೇಮಿಗಳಿಗೆ ನಿರಾಸೆ ಕಾಡಲಿದೆ. ನೂತನ ದಂಪತಿಗಳು ಸುಮಧುರ ಕ್ಷಣ ಕಳೆಯಲಿದ್ದಾರೆ. ಧಾರ್ಮಿಕವಾಗಿ ಭಕ್ತಿ ಭಾವ ಹೆಚ್ಚಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸಲಿದ್ದೀರಿ.

ಸಿಂಹ: ನಿಮ್ಮ ಕ್ರಿಯಾತ್ಮಕತೆಯಿಂದಲೇ ಕಠಿಣ ಪರಿಸ್ಥಿತಿಯಿಂದ ಹೊರಬರಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ಹಿನ್ನಡೆಯ ಭೀತಿ ಎದುರಾಗಲಿದೆ. ಕೃಷಿಕರಿಗೆ ವ್ಯವಹಾರದಲ್ಲಿ ಮುನ್ನಡೆಯಾಗಲಿದೆ. ಆರ್ಥಿಕವಾಗಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ.

ಕನ್ಯಾ: ಮುಂದಿನ ಕಷ್ಟದ ದಿನಗಳಿಗೆ ಇಂದೇ ತಯಾರಾಗಿ. ದೇಹಾರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ. ಆರ್ಥಿಕವಾಗಿ ಎಚ್ಚರಿಕೆಯಿಂದ ಯೋಜನೆ ರೂಪಿಸಬೇಕಾಗುತ್ತದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ವಿದ್ಯಾರ್ಥಿಗಳಿಗೆ ಪರಿಶ್ರಮದ ಅಗತ್ಯವಿದೆ.

ತುಲಾ: ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಇಷ್ಟ ಭೋಜನ ಮಾಡುವ ಯೋಗವಿದೆ. ಉದರ ಸಂಬಂಧೀ ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಕಾರ್ಯರಂಗದಲ್ಲಿ ಅಂದುಕೊಂಡ ಕೆಲಸ ಪೂರ್ತಿ ಮಾಡಲು ವಿಘ್ನಗಳು ಎದುರಾದೀತು. ತಾಳ್ಮೆಯಿರಲಿ.

ವೃಶ್ಚಿಕ: ವ್ಯಾಪಾರ, ವ್ಯವಹಾರಗಳಲ್ಲಿ ಮುನ್ನಡೆಯ ಯೋಗವಿದೆ. ವ್ಯವಹಾರದಲ್ಲಿ ಹಿತಶತ್ರುಗಳ ಹುನ್ನಾರ ಬೆಳಕಿಗೆ ಬರಲಿದೆ. ವಿಘ‍್ನ ಸಂತೋಷಿಗಳ ಮಾತಿಗೆ ಕಿವಿಗೊಡಬೇಕಾಗಿಲ್ಲ. ಅವಿವಾಹಿತರಿಗೆ ಯೋಗ್ಯ ಸಂಬಂಧ ಕೂಡಿಬರಲಿದೆ. ದಿನದಂತ್ಯಕ್ಕೆ ಶುಭ ಸುದ್ದಿ.

ಧನು: ದೈನಂದಿನ ಬದುಕಿನಲ್ಲಿ ಬದಲಾವಣೆ ಬಯಸುತ್ತೀರಿ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಆದರೆ ಅನಿರೀಕ್ಷಿತ ಖರ್ಚು ವೆಚ್ಚಗಳು ತಲೆದೋರಲಿವೆ. ಸಂಗಾತಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ಕುಲದೇವರ ಪ್ರಾರ್ಥನೆ ಮಾಡಿ.

ಮಕರ: ಸಾಂಸಾರಿಕವಾಗಿ ಹಲವು ಚಿಂತೆಗಳು ಕಾಡುವುದರಿಂದ ಮನಸ್ಸು ಒಂದು ರೀತಿಯ ಖಿನ್ನತೆಗೊಳಗಾಗಲಿದೆ. ಆರೋಗ್ಯ ಭಾಗ್ಯಕ್ಕಾಗಿ ದೇವರ ಪ್ರಾರ್ಥನೆ ಮಾಡುವಿರಿ. ನಿರುದ್ಯೋಗಿಗಳು ಸ್ವಯಂ ಉದ್ಯೋಗಕ್ಕಾಗಿ ಪ್ರಯತ್ನ ನಡೆಸಲಿದ್ದು, ಸಫಲರಾಗುವರು.

ಕುಂಭ: ಕೌಟುಂಬಿಕವಾಗಿ ಜವಾಬ್ಧಾರಿ ಹೆಚ್ಚಲಿದೆ. ಗೃಹ ಸಂಬಂಧೀ ಕೆಲಸಗಳಿಗಾಗಿ ಓಡಾಟ ಹೆಚ್ಚಲಿದೆ. ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಜವಾಬ್ಧಾರಿ ಹೆಚ್ಚಲಿದೆ. ಶಾಂತಿ, ಸಮಾಧಾನ ಮುಖ್ಯ.

ಮೀನ: ನಿಮ್ಮ ಕೆಲವೊಂದು ಕೆಲಸಗಳು ಕುಟುಂಬ ಸದಸ್ಯರ ಅಸಮಾಧಾನಕ್ಕೆ ಕಾರಣವಾದೀತು. ಭಿನ್ನಾಭಿಪ್ರಾಯಗಳನ್ನು ಅಲ್ಲಲ್ಲೇ ಸರಿಪಡಿಸಿದರೆ ಉತ್ತಮ. ಮಹಿಳೆಯರಿಗೆ ತಾಳ್ಮೆ, ಸಂಯಮ ಅಗತ್ಯ. ವಿವಾಹ ಸಂಬಂಧಗಳು ಸ್ವಲ್ಪದರಲ್ಲೇ ತಪ್ಪಿ ಹೋಗಲಿದೆ. ಹಾಗಿದ್ದರೂ ನಿರಾಶೆ ಬೇಡ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಈ ಐದು ರಾಶಿಯವರಿಗೆ 2026 ರಲ್ಲಿ ಸ್ವಂತ ಮನೆ ಕನಸು ನನಸಾಗುತ್ತದೆ

ಮಂಗಳವಾರ ದೇವಿಯ ಅನುಗ್ರಹಕ್ಕಾಗಿ ನವರತ್ನ ಮಾಲಿಕಾ ಸ್ತೋತ್ರ

ಶಿವ ಪಂಚಾಕ್ಷರಿ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಈ ಐದು ರಾಶಿಯವರಿಗೆ 2026 ರಲ್ಲಿ ಮದುವೆ ಯೋಗವಿದೆ

ಶನಿವಾರದಂದು ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಲೇ ಬೇಡಿ

ಮುಂದಿನ ಸುದ್ದಿ
Show comments