ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ಕಾರ್ಯರಂಗದಲ್ಲಿ ಉತ್ಸಾಹ ಭಂಗವಾಗಲಿದೆ. ಕೆಲವೊಂದು ವಿಚಾರಗಳು ಮನಸ್ಸಿಗೆ ಬೇಸರವುಂಟು ಮಾಡಲಿದೆ. ಆರ್ಥಿಕವಾಗಿ ಸಾಲಗಾರರಿಂದ ಬಾಕಿ ಹಣ ವಸೂಲಾತಿ ಚಿಂತೆ ಕಾಡುವುದು. ಕೌಟುಂಬಿಕವಾಗಿ ಸಮಾಧಾನಕರ ವಾತಾವರಣವಿರಲಿದೆ.
ವೃಷಭ: ಕುಟುಂಬದಲ್ಲಿ ಕಷ್ಟ-ಸುಖ ಸಮನಾಗಿರಲಿದ್ದು, ಸಂಗಾತಿಯ ಸಲಹೆಗಳಿಗೆ ಕಿವಿಗೊಡಬೇಕಾಗುತ್ತದೆ. ಉದ್ಯೋಗಿಗಳಿಗೆ ಉತ್ತಮ ಅವಕಾಶ ದೊರೆಯಲಿದೆ. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ದೇಹಾರೋಗ್ಯದಲ್ಲಿ ಸುಧಾರಣೆಯಾಗಲಿದೆ.
ಮಿಥುನ: ಪ್ರೇಮಿಗಳಿಗೆ ಹಿರಿಯರಿಂದ ವಿರೋಧ ವ್ಯಕ್ತವಾಗಲಿದೆ. ಅಗಲುವಿಕೆಯ ನೋವು ಕಾಡಲಿದೆ. ಸಂತಾನಾಪೇಕ್ಷಿತ ದಂಪತಿಗಳು ದೇವರ ಮೊರೆ ಹೋಗುವರು. ಸಾಂಸಾರಿಕವಾಗಿ ಹೊಸ ಜವಾಬ್ಧಾರಿಗಳಿಗೆ ಸಿದ್ಧರಾಗಬೇಕಾಗುತ್ತದೆ. ಖರ್ಚು ವೆಚ್ಚದ ಬಗ್ಗೆ ನಿಗಾ ಇರಲಿ.
ಕರ್ಕಟಕ: ವಾಹನ ಸವಾರರು ಚಾಲನೆಯಲ್ಲಿ ಅತೀವ ಎಚ್ಚರವಹಿಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳು ಅಧಿಕವಾಗಲಿದೆ.
ಸಿಂಹ: ಹಿರಿಯರು ದೇವಾಲಯ ಸಂದರ್ಶನ ಮಾಡಲಿದ್ದಾರೆ. ಉದ್ಯೋಗಿಗಳಿಗೆ ಭವಿಷ್ಯದ ಚಿಂತೆ ಕಾಡಲಿದೆ. ಸ್ವಯಂ ವ್ಯಾಪಾರಿಗಳಿಗೆ ಮುನ್ನಡೆಯ ಯೋಗವಿದೆ. ಬಂಧು ಮಿತ್ರರ ಸಹಕಾರ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.
ಕನ್ಯಾ: ದೈನಂದಿನ ಬದುಕಿನ ಏಕತಾನತೆಯಿಂದ ಮನಸ್ಸಿಗೆ ಬೇಸರವಾಗಬಹುದು. ಮಕ್ಕಳೊಂದಿಗೆ ಕ್ರಿಯಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಸಂಗಾತಿಯೊಂದಿಗೆ ಮನಸ್ತಾಪ ಬೇಡ. ಕನ್ಯಾಮಣಿಗಳಿಗೆ ಯೋಗ್ಯ ಸಂಬಂಧಗಳು ಬರಲಿವೆ.
ತುಲಾ: ಅಚಾತುರ್ಯದ ನಿರ್ಧಾರ ತೆಗೆದುಕೊಳ್ಳಲು ಹೋದರೆ ಅನಾಹುತ ತಪ್ಪದು. ಪ್ರೇಮಿಗಳಿಗೆ ಶುಭ ದಿನವಾಗಿದ್ದು, ಹಿರಿಯರ ಅನುಮೋದನೆ ಸಿಗಲಿದೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಾಗದು. ನಿರುದ್ಯೋಗಿಗಳಿಗೆ ಭವಿಷ್ಯದ ಚಿಂತೆ ಕಾಡುವುದು.
ವೃಶ್ಚಿಕ: ದೂರ ಸಂಚಾರಗಳು ಅನಿರೀಕ್ಷಿತವಾಗಿ ರದ್ದಾಗಲಿವೆ. ಚಿಂತಿತ ಕೆಲಸಗಳಿಗೆ ವಿಘ್ನಗಳು ಎದುರಾಗಲಿವೆ. ಕುಲದೇವರ ಪ್ರಾರ್ಥನೆ ನಡೆಸಿ ಮುಂದುವರಿಯಿರಿ. ಸಾಂಸಾರಿಕವಾಗಿ ಒಳ್ಳೆಯದನ್ನೇ ಆಲೋಚಿಸಿದರೆ ಒಳ್ಳೆಯದೇ ಆಗಲಿದೆ. ದಿನದಂತ್ಯಕ್ಕೆ ಶುಭ ಸುದ್ದಿ.
ಧನು: ನಿಮ್ಮ ಕೋಪ, ಹಠವಾದಿ ಸ್ವಭಾವದಿಂದಾಗಿ ಇತರರಿಗೆ ಕಿರಿ ಕಿರಿಯಾಗಬಹುದು. ನಿಮ್ಮ ನಿರ್ಧಾರಗಳನ್ನು ಇತರರ ಮೇಲೆ ಹೇರುವ ಯತ್ನ ಮಾಡಬೇಡಿ. ಸಾಮಾಜಿಕ ಕೆಲಸಗಳಲ್ಲಿ ಆಸಕ್ತಿ ತೋರಿಬರಲಿದೆ. ದೇಹಾರೋಗ್ಯದ ಬಗ್ಗೆ ಕಾಳಜಿ ಅಗತ್ಯ.
ಮಕರ: ದಾಯಾದಿಗಳೊಂದಿಗೆ ಕೌಟುಂಬಿಕ ಭಿನ್ನಾಭಿಪ್ರಾಯಗಳು ಬರುವ ಸಾಧ್ಯತೆಯಿದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಜವಾಬ್ಧಾರಿ ಹೆಚ್ಚಲಿದೆ. ನೀವು ಮಾಡುವ ಕೆಲಸಗಳಿಗೆ ಪೋಷಕರ ಸಹಕಾರವಿರಲಿದೆ. ಗೃಹ ಸಂಬಂಧೀ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ.
ಕುಂಭ: ದಾನ ಧರ್ಮಾದಿಗಳಿಂದ ಮನಸ್ಸಿಗೆ ಒಂದು ರೀತಿಯ ಸಮಾಧಾನ, ಖುಷಿ ಸಿಗಲಿದೆ. ಹಿರಿಯರಿಂದ ಬಂದ ಬಳವಳಿಗಳನ್ನು ರಕ್ಷಿಸುವ ಹೊಣೆಗಾರಿಕೆ ಇರಲಿದೆ. ವೃತ್ತಿರಂಗದಲ್ಲಿ ಜವಾಬ್ಧಾರಿ ಹೆಚ್ಚಲಿದೆ. ಕುಲದೇವರ ಪ್ರಾರ್ಥನೆ ಮಾಡಿ.
ಮೀನ: ನಿಮ್ಮ ಕಣ್ಣಿಗೆ ಕಾಣಿಸುವ ಸತ್ಯವನ್ನೇ ಹೇಳಿ ನಿಷ್ಠುರಕ್ಕೆ ಪಾತ್ರರಾಗುವಿರಿ. ಮಹಿಳೆಯರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿರಲಿ. ಹಿರಿಯರ ಅನುಭವದ ಪಾಠ ನಿಮಗೆ ವರದಾನವಾಗಲಿದೆ. ಹಣಕಾಸಿನ ಖರ್ಚು ವೆಚ್ಚದ ಬಗ್ಗೆ ಹಿಡಿತ ಅಗತ್ಯ.