Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಭಾನುವಾರ, 23 ಫೆಬ್ರವರಿ 2020 (08:54 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಮಹಿಳೆಯರಿಗೆ ಗೃಹ ಕೃತ್ಯದಲ್ಲಿ ಅಧಿಕ ಓಡಾಟ ನಡೆಸಬೇಕಾಗಬಹುದು. ಆರೋಗ್ಯದ ಮೇಲೆ ಕಾಳಜಿಯಿರಲಿ. ಮನೆಗೆ ಅನಿರೀಕ್ಷಿತವಾಗಿ ನೆಂಟರಿಷ್ಟರ ಆಗಮನವಾಗಲಿದೆ. ಆರ್ಥಿಕವಾಗಿ ಧನ ವಿನಿಯೋಗ ಹೆಚ್ಚಾಗಲಿದೆ. ಮಕ್ಕಳ ವಿಚಾರದಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳುವಿರಿ.

ವೃಷಭ: ಕೌಟುಂಬಿಕ ಸಮಸ್ಯೆಗಳಿಗೆ ಹಿರಿಯರ ಸಲಹೆ ಪಡೆದು ಪರಿಹಾರ ಕಂಡುಕೊಳ್ಳುವಿರಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ. ಅನಿರೀಕ್ಷಿತ ಖರ್ಚು ವೆಚ್ಚಗಳು ಬರಲಿವೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ನಡೆಸಬೇಕಾಗುತ್ತದೆ. ದೇವರ ಪ್ರಾರ್ಥನೆ ಮಾಡಿ.

ಮಿಥುನ: ಎಷ್ಟೋ ದಿನದಿಂದ ಅಂದುಕೊಂಡಿದ್ದ ಯೋಜನೆಗಳನ್ನು ಇಂದು ಪೂರ್ತಿ ಮಾಡುವಿರಿ. ವಾಹನ, ಭೂಮಿ ಖರೀದಿಗೆ ಇದು ಸಕಾಲ. ಆದರೆ ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿ ಬರಲಿದೆ.

ಕರ್ಕಟಕ: ಶಾರೀರಕವಾಗಿ ಸೌಖ್ಯವಿದ್ದರೂ ಮಾನಸಿಕವಾಗಿ ಹಲವು ವಿಚಾರಗಳಲ್ಲಿ ಗೊಂದಲ ಕಾಡಲಿದೆ. ಸಂಗಾತಿಯ ಸಲಹೆಗೆ ಕಿವಿಗೊಡುವುದು ಸೂಕ್ತ. ನೂತನ ದಂಪತಿಗಳಲ್ಲಿ ಹೊಂದಾಣಿಕೆಯ ಕೊರತೆ ಕಂಡುಬರಲಿದೆ. ಕೃಷಿಕರಿಗೆ ವೃತ್ತಿಯಲ್ಲಿ ವಿಘ‍್ನಗಳು ನಿವಾರಣೆಯಾಗಲಿವೆ.

ಸಿಂಹ: ಅಧಿಕ ಲಾಭ ತರುವ ಯೋಜನೆಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಹಿರಿಯರಿಂದ ಉಡುಗೊರೆ ನಿರೀಕ್ಷಿಸಬಹುದು. ದಾಯಾದಿ ಕಲಹಗಳು ನಿವಾರಣೆಯಾಗಲಿವೆ. ಸ್ವ ವ್ಯಾಪಾರಿಗಳಿಗೆ ಉನ್ನತಿಯ ಯೋಗವಿದೆ. ಆರ್ಥಿಕವಾಗಿ ಹಣಕಾಸಿಗೆ ತೊಂದರೆಯಾಗದು.

ಕನ್ಯಾ: ಕೌಟುಂಬಿಕವಾಗಿ ಸಂತಸದ ದಿನವಿದು. ಪತ್ನಿ-ಮಕ್ಕಳೊಂದಿಗೆ ಇಷ್ಟಭೋಜನ, ಕಿರು ಪ್ರವಾಸ ಮಾಡುವಿರಿ. ಉದ್ಯೋಗದ ಚಿಂತೆ ಆಗಾಗ ಕಾಡಲಿದೆ. ಬಾಕಿ ಹಣ ಸಂದಾಯವಾಗಲಿದ್ದು, ಆರ್ಥಿಕವಾಗಿ ಉನ್ನತಿಯಿರಲಿದೆ. ದೇವರ ಪ್ರಾರ್ಥನೆ ಮಾಡಿದರೆ ಶುಭವಾಗುವುದು.

ತುಲಾ: ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆಬರುವುದು. ಹಿರಿಯರಿಗೆ ಆರೋಗ್ಯದಲ್ಲಿ ಏರುಪೇರಾಗಬಹುದು. ಅವಿವಾಹಿತರ ವಿವಾಹ ಪ್ರಯತ್ನಕ್ಕೆ ನೂರೆಂಟು ವಿಘ‍್ನಗಳು ಎದುರಾಗಲಿವೆ. ಕುಲದೇವರ ಪ್ರಾರ್ಥಿಸಿದರೆ ಉತ್ತಮ.

ವೃಶ್ಚಿಕ: ಮಹಿಳೆಯರಿಗೆ ಚಿನ್ನಾಭರಣ ಖರೀದಿಯಿಂದ ಲಾಭವಾಗಲಿದೆ. ಕೊಡು ಕೊಳ್ಳುವ ವ್ಯಾಪಾರಗಳಿಂದ ಲಾಭ ಸಿಗುವುದು. ಹೊಸ ಮಿತ್ರರನ್ನು ಸಂಪಾದಿಸಲಿದ್ದೀರಿ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸಲಿದ್ದೀರಿ. ಕಿರು ಸಂಚಾರದಿಂಧ ಕಾರ್ಯಪ್ರಾಪ್ತಿಯಾಗುವುದು.

ಧನು: ಹಲವು ಅಭಿಪ್ರಾಯಗಳನ್ನು ಜಾರಿಗೊಳಿಸಲು ಹೋಗಿ ಕೈ ಸುಟ್ಟುಕೊಳ್ಳಬೇಡಿ. ವಿನಾಕಾರಣ ನಿಮ್ಮ ವಿಚಾರದಲ್ಲಿ ಮೂಗು ತೂರಿಸುವವರ ಬಗ್ಗೆ ಎಚ್ಚರಿಕೆಯಿಂದಿರಿ. ಬಯಸಿದ ವಸ್ತುಗಳು ಕೈಗೆಟುಕಲಿವೆ. ಸಂಗಾತಿಯ ಮನಸ್ಸಿಗೆ ಇಷ್ಟವಾಗುವಂತೆ ನಡೆದುಕೊಳ್ಳಲಿದ್ದೀರಿ.

ಮಕರ: ಸಾಂಸಾರಿಕವಾಗಿ ಮನೆಯಲ್ಲಿ ಮಹಿಳೆಯರೊಳಗೆ ಭಿನ್ನಾಭಿಪ್ರಾಯಗಳು ಕಂಡುಬರಬಹುದು. ಎಚ್ಚರಿಕೆಯಿಂದ ನಿಭಾಯಿಸಿ. ಸೂಕ್ತ ಸಮಯದಲ್ಲಿ ಮಿತ್ರರ ಸಹಕಾರ ದೊರೆಯುವುದರಿಂದ ಸಂಭಾವ್ಯ ತೊಂದರೆಯಿಂದ ಪಾರಾಗುವಿರಿ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.

ಕುಂಭ: ಅಧಿಕ ಧನಲಾಭ ತರುವ ಯೋಜನೆಗಳಿಗೆ ಕೈ ಹಾಕಲು ಹೋಗಿ ವಂಚನೆಗೊಳಗಾಗಲಿದ್ದೀರಿ. ಸಂಯಮದಿಂದ ವರ್ತಿಸುವುದು ಮುಖ್ಯ. ಮಕ್ಕಳ ವಿಚಾರದಲ್ಲಿ ಸಂತಸವಿರಲಿದೆ. ವ್ಯವಹಾರದಲ್ಲಿ ಎಚ್ಚರ. ನೂತನ ದಂಪತಿಗಳಿಗೆ ಸಂತಾನ ಫಲ ಸೂಚನೆ ಸಿಗುವುದು.

ಮೀನ: ಕಾರ್ಮಿಕ ವರ್ಗದವರಿಗೆ ಉದ್ಯೋಗದಲ್ಲಿ ಉನ್ನತಿಯ ಯೋಗವಿದೆ. ಮನೆಯಲ್ಲಿ ಶುಭ ಕಾರ್ಯಗಳು ನೆರವೇರಲಿವೆ. ಬಂಧು ಮಿತ್ರರ ಭೇಟಿಯಿಂದ ಮನಸ್ಸಿಗೆ ಖುಷಿಯಾಗುವುದು. ಧಾರ್ಮಿಕ ಕಾರ್ಯಗಳಿಗೆ ಧನವಿನಿಯೋಗ ಮಾಡಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆಯಾಗುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ