Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಮಂಗಳವಾರ, 28 ಜನವರಿ 2020 (08:53 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಉದ್ಯೋಗ ಕ್ಷೇತ್ರದಲ್ಲಿ ಬರುವ ತೊಂದರೆಗಳಿಂದ ಭವಿಷ್ಯದ ಬಗ್ಗೆ ಚಿಂತೆಯಾಗುವುದು. ಒಂದು ರೀತಿಯಲ್ಲಿ ಮಾನಸಿಕವಾಗಿ ಋಣಾತ್ಮಕ ಯೋಚನೆಗಳು ಬರಲಿವೆ. ದೇಹಾರೋಗ್ಯದಲ್ಲಿ ಏರುಪೇರಾಗಲಿದೆ. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.

ವೃಷಭ: ಆರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ದೂರವಾಗಿ ಸುಧಾರಣೆ ಕಂಡುಬರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳೊಂದಿಗೆ ಹೊಂದಾಣಿಕೆಯಿರಲಿ. ಸಾಮಾಜಿಕವಾಗಿ ಸ್ಥಾನ ಮಾನ ವೃದ್ಧಿಯಾಗಲಿದೆ. ದಾಂಪತ್ಯದಲ್ಲಿ ಸಂತೋಷವಿರುವುದು.

ಮಿಥುನ: ವೃತ್ತಿರಂಗದಲ್ಲಿ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಕಂಡುಬರಲಿದೆ. ಇದರಿಂದಾಗಿ ಮನದಿಂಗಿತಗಳನ್ನು ನೆರವೇರಿಸಿಕೊಳ್ಳುವಿರಿ. ವಾಹನ ಖರೀದಿಗೆ ಇದು ಸಕಾಲ.  ಮಿತ್ರರೊಂದಿಗೆ ಅನಗತ್ಯ ಸಂಘರ್ಷವಾಗದಂತೆ ಎಚ್ಚರಿಕೆ ವಹಿಸಿ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕರ್ಕಟಕ: ವ್ಯಾಪಾರ, ವ್ಯವಹಾರ ಕ್ಷೇತ್ರದಲ್ಲಿರುವವರಿಗೆ ಆರ್ಥಿಕವಾಗಿ ಅಭಿವೃದ್ಧಿ ಕಂಡುಬರಲಿದೆ. ಶೈಕ್ಷಣಿಕ ರಂಗದಲ್ಲಿರುವವರಿಗೆ ಅಧ‍್ಯಯನ ನಿಮಿತ್ತ ದೂರ ಸಂಚಾರ ಮಾಡಬೇಕಾಗಬಹುದು. ನೂತನ ದಂಪತಿಗೆ ಸಂತಾನ ಫಲ ಸೂಚನೆ ದೊರಕಲಿದೆ.

ಸಿಂಹ: ವ್ಯವಹಾರದಲ್ಲಿ ಲಾಭ ಕಂಡುಬರಲಿದ್ದು, ಕೌಟುಂಬಿಕವಾಗಿ ಹೊಸ ವಸ್ತುಗಳ ಖರೀದಿ, ಮನದೆನ್ನೆಯ ಆಸೆ ಪೂರೈಸಲು ಮುಂದಾಗುವಿರಿ. ಮಕ್ಕಳ ವಿಚಾರದಲ್ಲಿ ಸಂತಸವಿರಲಿದೆ. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಜಯ ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕನ್ಯಾ: ಮಾಡುತ್ತಿರುವ ಕೆಲಸದಲ್ಲಿ ಏಕತಾನತೆಯಿಂದಾಗಿ ಮನಸ್ಸಿಗೆ ಬೇಸರವಾಗಬಹುದು. ಒಂದು ರೀತಿಯ ಆಲಸ್ಯ ಕಾಡಲಿದೆ. ಹೆಣ್ಣು ಮಕ್ಕಳಿಗೆ ತವರಿನಿಂದ ಉಡುಗೊರೆ ಬರಲಿದೆ. ಬಂಧು ಮಿತ್ರರ ಭೇಟಿಯಾಗುವಿರಿ. ದೇವತಾ ಪ್ರಾರ್ಥನೆ ಮಾಡಿ.

ತುಲಾ: ಸಣ್ಣ ಪುಟ್ಟ ವಿಚಾರಕ್ಕೆ ಕುಟುಂಬದ ಸದಸ್ಯರೊಳಗೇ ಭಿನ್ನಾಭಿಪ್ರಾಯಗಳು ಮೂಡಲಿವೆ. ವ್ಯವಹಾರದಲ್ಲಿ ನಂಬಿಕೆ ದ್ರೋಹಿಗಳ ವಂಚನೆ ಬೆಳಕಿಗೆ ಬರಲಿವೆ. ಉದ್ಯೋಗ ಕ್ಷೇತ್ರದಲ್ಲಿ ಎಷ್ಟೇ ತೊಂದರೆಗಳಿದ್ದರೂ ಅಂತಿಮ ಜಯ ನಿಮ್ಮದಾಗುವುದು.

ವೃಶ್ಚಿಕ: ವ್ಯಾಪಾರ ವ್ಯವಹಾರದಲ್ಲಿ ಲಾಭವಿಲ್ಲದಿದ್ದರೂ ನಷ್ಟವಾಗದು. ನಿಮ್ಮ ಕ್ರಿಯಾಶೀಲತೆಯನ್ನು ಪ್ರಕಟಗೊಳಿಸಲು ಇದು ಸಕಾಲ. ನಿರುದ್ಯೋಗಿಗಳಿಗೆ ಉದ್ಯೋಗ ನಿಮಿತ್ತವಾಗಿ ಪ್ರಯಾಸಪಡಬೇಕಾದೀತು. ಕೌಟುಂಬಿಕವಾಗಿ ನೆಮ್ಮದಿಯಿರಲಿದೆ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.

ಧನು: ಕುಟುಂಬ ಸೌಖ್ಯದಿಂದ ಮಾನಸಿಕ ನೆಮ್ಮದಿಗೆ ಕೊರತೆಯಿರದು. ಆದರೆ ಅಂದುಕೊಂಡ ಯೋಜನೆಗಳನ್ನು ಪೂರ್ತಿಗೊಳಿಸಲು ಹಣಕಾಸಿನ ಅಡಚಣೆ ಅಡ್ಡಿಯಾಗುವುದು. ಸಂಗಾತಿಯ ಮಾತಿಗೆ ಕಿವಿಗೊಡಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

ಮಕರ: ದಾಂಪತ್ಯದಲ್ಲಿ ಸಂಗಾತಿಯೊಂದಿಗೆ ಸಾಮರಸ್ಯ ಹೆಚ್ಚಲಿದೆ. ಸಂತಾನಾಪೇಕ್ಷಿತ ದಂಪತಿಗೆ ಶುಭ ಫಲ ದೊರೆಯಲಿದೆ. ಕೆಲವೊಂದು ಆಸೆಗಳಿಗೆ ಕಡಿವಾಣ ಹಾಕುವುದು ಒಳಿತು. ಹಣಕಾಸಿನ ಅಡಚಣೆ ಉಂಟಾಗಬಹುದು. ಕಾರ್ಯನಿಮಿತ್ತ ಕಿರುಸಂಚಾರ ಮಾಡುವಿರಿ.

ಕುಂಭ: ಸಾಮಾಜಿಕ ರಂಗದಲ್ಲಿ ನೀವು ಒಳ್ಳೆಯ ಉದ್ದೇಶದಿಂದ ಕೈ ಹಿಡಿಯುವ ಕೆಲಸಗಳಿಂದ ಅಪವಾದ ಎದುರಿಸಬೇಕಾದೀತು. ಸಂಯಮದಿಂದ ವರ್ತಿಸಿ. ಅವಿವಾಹಿತರ ವಿವಾಹ ಪ್ರಯತ್ನಕ್ಕೆ ಸದ್ಯಕ್ಕೆ ಅಡಚಣೆಯುಂಟಾದೀತು. ಕುಲದೇವರ ಪ್ರಾರ್ಥನೆಯಿಂದ ಶುಭವಾಗಲಿದೆ.

ಮೀನ: ಹಣಕಾಸಿನ ವ್ಯವಹಾರದಲ್ಲಿ ಮಿತ್ರರೊಂದಿಗೆ ಮನಸ್ತಾಪಗಳು ಬರುವ ಸಾಧ್ಯತೆಯಿದೆ. ಕೆಳ ಹಂತದ ನೌಕರರಿಗೆ ಉದ್ಯೋಗದಲ್ಲಿ ಸ್ಥಾನ ಪಲ್ಲಟ ಭೀತಿಯಿದೆ. ಹಿರಿಯರಿಗೆ ಧಾರ್ಮಿಕ ಕ್ಷೇತ್ರಗಳ ಸಂದರ್ಶನ ಯೋಗವಿದೆ. ಕುಟುಂಬದವರ ಶ್ರೀರಕ್ಷೆ ನಿಮ್ಮ ಮೇಲಿರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಜೆಯ ವೇಳೆ ಶಂಖ ಊದಿದರೆ ಏನಾಗುತ್ತದೆ ಗೊತ್ತಾ?