Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಮಂಗಳವಾರ, 7 ಜನವರಿ 2020 (08:52 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಎಷ್ಟೋ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಯೊಂದಕ್ಕೆ ಪರಿಹಾರ ಸಿಗಲಿದೆ. ಮನಸ್ಸಿಗೆ ಸಂತೋಷ ಕೊಡುವ ಕೆಲಸ ಮಾಡಲಿದ್ದೀರಿ. ಧಾರ್ಮಿಕ ಕ್ಷೇತ್ರಗಳ ಸಂದರ್ಶನ ಯೋಗವಿದೆ. ಕಾರ್ಮಿಕ ವರ್ಗದವರಿಗೆ ಉತ್ತಮ ಉದ್ಯೋಗಾವಕಾಶಗಳು ಲಭಿಸಲಿವೆ.

ವೃಷಭ: ಮನೆಯಲ್ಲಿ ಶುಭ ಮಂಗಲ ಕಾರ್ಯಗಳ ಸಿದ್ಧತೆಗಾಗಿ ಓಡಾಟವಿರುತ್ತದೆ. ಮಹಿಳೆಯರಿಗೆ ಆರೋಗ್ಯದಲ್ಲಿ ಏರುಪೇರಾಗಬಹುದು. ಕಾಳಜಿ ಅಗತ್ಯ. ಹಿರಿಯರ ಪುಣ್ಯ ಕ್ಷೇತ್ರ ಸಂದರ್ಶನಕ್ಕೆ ಏರ್ಪಾಟು ಮಾಡುವಿರಿ. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.

ಮಿಥುನ: ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಮುನ್ನಡೆಯ ಲಾಭವಾಗಲಿದೆ. ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು. ಆದರೆ ದುಂದುವೆಚ್ಚಗಳಿಗೆ ಕಡಿವಾಣ ಹಾಕಿ. ಹಿರಿಯರಿಂದ ಬಂದಿದ್ದ ಬಳುವಳಿ ಕೈ ಜಾರುವ ಭೀತಿ ಎದುರಾಗಲಿದೆ. ದೇವತಾ ಪ್ರಾರ್ಥನೆ ಮಾಡಿ.

ಕರ್ಕಟಕ: ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ ಸಿಗದೇ ತೊಂದರೆಯಾಗಬಹುದು. ಆರ್ಥಿಕವಾಗಿ ಸಾಲ ಮಾಡುವಾಗ ಎಚ್ಚರವಾಗಿರಿ. ಮಾನಸಿಕ ಚಿಂತೆಗಳನ್ನು ಸಂಗಾತಿಯೊಂದಿಗೆ ಹಂಚಿಕೊಂಡರೆ ಪರಿಹಾರ ಸಿಗಬಹುದು. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸುವಿರಿ.

ಸಿಂಹ: ಹೊಸ ಕೆಲಸ ಕಾರ್ಯಗಳಿಗೆ ಕೈ ಹಾಕಲು ಇದು ಸಕಾಲ. ಆರ್ಥಿಕವಾಗಿ ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ನಿರುದ್ಯೋಗಿಗಳಿಗೆ ಸರಕಾರಿ ಉದ್ಯೋಗದ ಯೋಗವಿದೆ. ಅವಕಾಶಗಳನ್ನು ಬಳಸಿಕೊಳ್ಳಿ.

ಕನ್ಯಾ: ಆದಾಯಕ್ಕೆ ಕೊರತೆಯಿಲ್ಲದೇ ಇದ್ದರೂ ಮಾನಸಿಕವಾಗಿ ನೆಮ್ಮದಿ ಇಲ್ಲವಾದೀತು. ಸಾಂಸಾರಿಕವಾಗಿ ಭಿನ್ನಾಭಿಪ್ರಾಯಗಳು ಮೂಡಬಹುದು. ತಾಳ್ಮೆಯಿಂದ ನಿಭಾಯಿಸಬೇಕು. ಆರೋಗ್ಯದಲ್ಲಿ ಏರುಪೇರಾಗಬಹುದು, ಕಾಳಜಿವಹಿಸಿ.

ತುಲಾ: ದುರ್ಜನರ ಸಂಗದಿಂದ ಕಾರ್ಯ ಹಾನಿ, ಮಾನ ಹಾನಿಯಾದೀತು. ಎಚ್ಚರವಾಗಿರಿ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿ ಯೋಗವಿದೆ. ಉದ್ಯೋಗ ಕ್ಷೇತ್ರದಲ್ಲಿ ಜವಾಬ್ಧಾರಿಗಳು ಹೆಚ್ಚಲಿವೆ. ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.

ವೃಶ್ಚಿಕ: ಸಾಂಸಾರಿಕವಾಗಿ ಸಂಬಂಧಗಳು ಉತ್ತಮಗೊಳ್ಳಲಿವೆ. ದಾಯಾದಿ ಕಲಹಗಳಿಗೆ ಅಂತ್ಯ ಸಿಗಲಿದೆ. ಆದರೆ ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರವಿರಲಿ. ಶುಭ ಮಂಗಲ ಕಾರ್ಯಗಳಿಗೆ ಅಡೆತಡೆ ಉಂಟಾದೀತು. ತಾಳ್ಮೆಯಿಂದಿರಿ.

ಧನು: ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ. ಧಾರ್ಮಿಕ ಕಾರ್ಯಗಳಿಗಾಗಿ ಧನವಿನಿಯೋಗವಾಗಲಿದೆ. ಕೌಟುಂಬಿಕ ಕೆಲಸಗಳಿಗಾಗಿ ಅಧಿಕ ಓಡಾಟ ನಡೆಸಬೇಕಾಗುತ್ತದೆ. ಸ್ತ್ರೀಯರೊಂದಿಗೆ ವ್ಯವಹರಿಸುವಾಗ ಎಚ್ಚರದಿಂದಿರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಕರ: ಮಹಿಳಾ ಉದ್ಯೋಗಿಗಳಿಗೆ ಉದ್ಯೋಗ ಕ್ಷೇತ್ರದಲ್ಲಿ ಚಿಂತೆ ತಪ್ಪದು. ದುಡುಕು ಮಾತಿನಿಂದ ಕಲಹವಾಗದಂತೆ ಎಚ್ಚರವಹಿಸಿ. ಕಷ್ಟದ ಸಂದರ್ಭದಲ್ಲಿ ಬಂಧು ಮಿತ್ರರ ನೆರವು ದೊರೆಯಲಿದೆ. ಹಿತ ಶತ್ರುಗಳ ಬಗ್ಗೆ ಎಚ್ಚರವಾಗಿರಿ. ಕಿರು ಸಂಚಾರ ಮಾಡುವಿರಿ.

ಕುಂಭ: ಅಂದುಕೊಂಡ ಕಾರ್ಯಗಳು ಸುಗಮವಾಗಿ ನೆರವೇರಿ ಮನಸ್ಸಿಗೆ ನೆಮ್ಮದಿಯಾಗುವುದು. ಆದರೆ ಸಂಗಾತಿಯ ಕಿರಿ ಕಿರಿ ಅಸಹನೀಯವೆನಿಸಲಿದೆ. ಮಕ್ಕಳೊಂದಿಗೆ ಸಂತಸದ ಕ್ಷಣ ಕಳೆಯುವಿರಿ. ಧಾರ್ಮಿಕ ಕಾರ್ಯಗಳಿಗೆ ಸಿದ್ಧತೆ ನಡೆಸುವಿರಿ. ದೇವತಾ ಪ್ರಾರ್ಥನೆ ಮಾಡಿ.

ಮೀನ: ಉದ್ಯೋಗ ಕ್ಷೇತ್ರದಲ್ಲಿ ಸ್ಥಾನ ಪಲ್ಲಟವಾಗುವ ಸಾಧ‍್ಯತೆಯಿದೆ. ಹೊಸ ನಿವೇಶನ ಖರೀದಿಗೆ ಇದು ಸಕಾಲ. ಆದರೆ ಲೆಕ್ಕ ಪತ್ರಗಳ ಬಗ್ಗೆ ನಿಗಾ ಇರಲಿ. ಅವಿವಾಹಿತರ ವಿವಾಹ ಪ್ರಯತ್ನಕ್ಕೆ ಹಲವು ಅಡೆತಡೆಗಳು ತೋರಿಬಂದೀತು. ಕುಲದೇವರ ಪ್ರಾರ್ಥನೆ ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Anjaneya Mantra: ಆಂಜನೇಯ ಅಷ್ಟೋತ್ತರ ಮಂತ್ರವನ್ನು ತಪ್ಪದೇ ಓದಿ

Lakshmi Mantra: ಧನಾಭಿವೃದ್ಧಿ ಆಗಬೇಕಾದ ಧನಲಕ್ಷ್ಮೀ ಸ್ತೋತ್ರ ಓದಿ

Raghavendra swamy mantra: ಶ್ರೀ ರಾಘವೇಂದ್ರ ಕವಚ ಸ್ತೋತ್ರಂ ಭಕ್ತಿಯಿಂದ ಓದಿ

Devi Mantra: ಮನೆಯಲ್ಲಿರುವ ಅವಿವಾಹಿತ ಕನ್ಯಾಮಣಿಗಳು ತಪ್ಪದೇ ಈ ಸ್ತೋತ್ರ ಓದಿ

Ardanaristaka Stothram: ವಿವಾಹಾದಿ ಸಮಸ್ಯೆಗಳಿಗೆ ಅರ್ಧನಾರೀಶ್ವರಾಷ್ಟಕಂ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments