ಮೇಷ: ಕಾರ್ಯಕ್ಷೇತ್ರದಲ್ಲಿ ಖುಷಿಯ ದಿನ ಇಂದು. ಗೃಹ ಸಂಬಂಧೀ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ. ಸಂಗಾತಿಯೊಂದಿಗೆ ಹೊಂದಾಣಿಕೆ ಅಗತ್ಯ. ವಿದ್ಯಾರ್ಥಿಗಳಿಗೆ ಪ್ರಯತ್ನಬಲದಿಂದ ಯಶಸ್ಸು ಸಾಧ್ಯ.
ವೃಷಭ: ಸಾಂಸಾರಿಕವಾಗಿ ಮಿಶ್ರ ಫಲ ಇಂದು ನಿಮ್ಮದಾಗಲಿದೆ. ಮಕ್ಕಳಿಂದ ಸಂತಸದ ವಾರ್ತೆ ಕೇಳುವಿರಿ. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚು ವೆಚ್ಚಗಳೂ ಬರಲಿವೆ. ಮನಸ್ಸಿಗೆ ವಿನಾಕಾರಣ ಆತಂಕಗಳುಂಟಾಗಲಿವೆ. ತಾಳ್ಮೆಯಿಂದಿರಿ. ಶುಭ ಫಲಗಳಿಗೆ ದೇವತಾ ಪ್ರಾರ್ಥನೆ ಮಾಡಿ.
ಮಿಥುನ: ಮನೆಗೆ ಹೊಸ ಅತಿಥಿಗಳ ಆಗಮನದಿಂದ ಮನಸ್ಸಿಗೆ ಖುಷಿಯಾಗಲಿದೆ. ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸುವಿರಿ. ದೇಹಾರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕಾಗುತ್ತದೆ. ದಾಯಾದಿಗಳಿಂದ ಅನವಶ್ಯಕ ಮನಸ್ತಾಪಗಳು ಬರಬಹುದು. ಎಚ್ಚರಿಕೆಯಿಂದಿರಿ.
ಕರ್ಕಟಕ: ನಾಲಿಗೆ ಚಪಲದಿಂದಾಗಿ ಉದರ ಸಂಬಂಧೀ ಅನಾರೋಗ್ಯ ಬರಲಿದೆ. ಎಚ್ಚರಿಕೆ ಅಗತ್ಯ. ಇಷ್ಟಮಿತ್ರರ ಭೇಟಿ ಮನಸ್ಸಿಗೆ ಖುಷಿ ಕೊಡಲಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಿದ್ದರೂ ದುಂದು ವೆಚ್ಚಗಳಿಗೆ ಕಡಿವಾಣ ಹಾಕುವುದು ಅಗತ್ಯ. ನಿರುದ್ಯೋಗಿಗಳಿಗೆ ನಿರಾಶೆಯಾದೀತು.
ಸಿಂಹ: ವ್ಯಾಪಾರ ವ್ಯವಹಾರಗಳಲ್ಲಿ ಬರುವಂತಹ ತೊಂದರೆಗಳಿಗೆ ಜಾಣ್ಮೆಯಿಂದಲೇ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿಬರಲಿದೆ. ಮಾನಸಿಕವಾಗಿ ಬೇಡದ ಚಿಂತೆಗಳನ್ನು ದೂರಮಾಡಿ. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.
ಕನ್ಯಾ: ನಿಮ್ಮ ಚಿಂತನೆಗಳನ್ನು, ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಇದು ಸಕಾಲ. ಸಾಂಸಾರಿಕವಾಗಿ ಮನಸ್ಸಿಗೆ ನೆಮ್ಮದಿಯಿರಲಿದೆ. ಮಕ್ಕಳೊಂದಿಗೆ ಸಂತೋಷದ ಕ್ಷಣ ಕಳೆಯುವಿರಿ. ಧಾರ್ಮಿಕ ಕ್ಷೇತ್ರಗಳ ಭೇಟಿ ಯೋಗವಿದೆ. ದೂರ ಸಂಚಾರದಲ್ಲಿ ಎಚ್ಚರ.
ತುಲಾ: ನೂತನ ದಂಪತಿಗಳಿಗೆ ಮಧುಚಂದ್ರ ಭಾಗ್ಯ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಸ್ವ ಉದ್ಯೋಗಿಗಳಿಗೆ ವ್ಯವಹಾರದಲ್ಲಿ ಲಾಭ ಕಂಡುಬರಲಿದೆ. ಹಣಕಾಸಿನ ವಿಚಾರದಲ್ಲಿ ಸಂಗಾತಿಯ ಸಲಹೆಗೆ ಕಿವಿಗೊಡಿ. ಶೀತ ಸಂಬಂಧೀ ಆರೋಗ್ಯ ಸಮಸ್ಯೆ ಬರಬಹುದು.
ವೃಶ್ಚಿಕ: ಸಾಂಸಾರಿಕವಾಗಿ ತಾಳ್ಮೆ, ಸಮಾಧಾನದಿಂದಿರುವುದು ಅಗತ್ಯ. ದುಡುಕು ಮಾತಿನಿಂದ ಪ್ರೀತಿ ಪಾತ್ರರ ಮನಸ್ಸಿಗೆ ನೋವುಂಟುಮಾಡದಿರಿ. ಹಿರಿಯರ ಸಲಹೆಗಳನ್ನು ಪಾಲಿಸುವುದು ಉತ್ತಮ. ಸಹೋದರರೊಂದಿಗೆ ಮನಸ್ತಾಪವಾಗದಂತೆ ಎಚ್ಚರಿಕೆ ವಹಿಸಿ.
ಧನು: ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಏಕಾಗ್ರತೆಯ ಕೊರತೆಯುಂಟಾಗಬಹುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಬಂಧು ಮಿತ್ರರ ಭೇಟಿ ಮನಸ್ಸಿಗೆ ಖುಷಿ ನೀಡಲಿದೆ. ಕಷ್ಟದ ಸಮಯದಲ್ಲಿ ಹಿರಿಯರು ಕೊಡುವ ಸೂಕ್ತ ಸಲಹೆಗಳು ಉಪಯೋಗಕ್ಕೆ ಬರಲಿದೆ.
ಮಕರ: ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳು ಅಧಿಕವಾಗಬಹುದು. ಸಂಗಾತಿಯ ಮನದಾಸೆ ಪೂರೈಸುವಿರಿ. ಕೌಟುಂಬಿಕವಾಗಿ ಜವಾಬ್ಧಾರಿ ಹೆಚ್ಚಲಿದೆ. ನಿರುದ್ಯೋಗಿಗಳು ಸ್ವ ಉದ್ಯೋಗದ ಕಡೆಗೆ ಮನಸ್ಸು ಮಾಡುವರು.
ಕುಂಭ: ಕನ್ಯಾಮಣಿಗಳ ವಿವಾಹ ಮಾತುಕತೆಗೆ ಚಾಲನೆ ಸಿಗಲಿದೆ. ದೂರ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ಇಷ್ಟ ದೇವರ ಪ್ರಾರ್ಥನೆ ಮನಸ್ಸಿಗೆ ನೆಮ್ಮದಿ ಕೊಡಲಿದೆ. ವ್ಯವಹಾರಗಳಲ್ಲಿ ಜಯ ಸಿಗಲಿದೆ. ವಾಸಸ್ಥಳ ಬದಲಾವಣೆಯಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ಮೀನ: ಕಾರ್ಯಕ್ಷೇತ್ರದಲ್ಲಿ ನೀವು ಅಂದುಕೊಂಡಂತೆಯೇ ಎಲ್ಲವೂ ಸಾಗಿ ಮನಸ್ಸಿಗೆ ಖುಷಿಯಾಗಲಿದೆ. ಕೌಟುಂಬಿಕ ವಿಚಾರದಲ್ಲಿ ನಿಮ್ಮ ಅಭಿಪ್ರಾಯಗಳಿಗೆ ಮನ್ನಣೆ ಸಿಗದೇ ಹೋದೀತು. ತಾಳ್ಮೆಯಿಂದ ನಿಭಾಯಿಸಿ. ಹಿತಶತ್ರುಗಳ ಬಗ್ಗೆ ಎಚ್ಚರ.