Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಗುರುವಾರ, 26 ಡಿಸೆಂಬರ್ 2019 (07:48 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಅನವಶ್ಯಕವಾಗಿ ಬೇಡದ ವಿಚಾರಗಳ ಬಗ್ಗೆ ವಾದ ವಿವಾದ ಮಾಡಲು ಹೋದರೆ ಸಂಬಂಧ ಹಾಳಾದೀತು ಎಂಬುದನ್ನು ಮರೆಯಬೇಡಿ. ಮಕ್ಕಳಿಗಾಗಿ ಕೆಲವೊಂದು ತ್ಯಾಗ ಮಾಡಬೇಕಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆಯಿರಲಿದೆ.

ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಅಸಹನೆ ಉಂಟಾಗುವುದು. ವೃತ್ತಿ ಬದಲಾವಣೆಗೂ ಚಿಂತನೆ ನಡೆಸುವಿರಿ. ಆದರೆ ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬೇಡಿ. ಅವಿವಾಹಿತರ ವಿವಾಹ ಪ್ರಯತ್ನಗಳಿಗೆ ಮುನ್ನಡೆ ಸಿಗಲಿದೆ. ವಿದ್ಯಾರ್ಥಿಗಳಿಗೆ ಮುನ್ನಡೆಯಿರುವುದು.

ಮಿಥುನ: ವಾತ ಸಂಬಂಧೀ ಆರೋಗ್ಯ ಸಮಸ್ಯೆಗಳು ಉಂಟಾಗಿ ಆಸ್ಪತ್ರೆಗೆ ಅಲೆದಾಡಬೇಕಾದೀತು. ಆಸ್ತಿ ವಿವಾದಗಳು ಬಗೆಹರಿಯಲಿವೆ. ಸರಕಾರಿ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಮುಂಬಡ್ತಿ ಯೋಗವಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ.

ಕರ್ಕಟಕ: ಪ್ರೀತಿ ಪಾತ್ರರಿಗಾಗಿ ನಿಮ್ಮ ಕೆಲವೊಂದು ಇಷ್ಟಗಳನ್ನು ತ್ಯಾಗ ಮಾಡಬೇಕಾಗುತ್ತದೆ. ಹಿರಿಯರಿಂದ ಉಡುಗೊರೆ ಸ್ವೀಕರಿಸುವಿರಿ. ಸಂಗಾತಿಯ ಪ್ರೀತಿಗೆ ಪಾತ್ರರಾಗುವಿರಿ. ಧಾರ್ಮಿಕವಾಗಿ ಭಕ್ತಿ ಭಾವ ಹೆಚ್ಚುವುದು. ವ್ಯವಹಾರದಲ್ಲಿ ಮುನ್ನಡೆಯಿರುವುದು.

ಸಿಂಹ: ಕ್ರೀಡಾ ಕ್ಷೇತ್ರದಲ್ಲಿರುವವರಿಗೆ ಕೀರ್ತಿ ಸಂಪಾದಿಸುವ ಯೋಗವಿದೆ. ರಾಜಕೀಯವಾಗಿ ನಿಮ್ಮ ಸ್ಥಾನ ಮಾನ ಹೆಚ್ಚುವುದು. ನೂತನ ದಂಪತಿಗಳಲ್ಲಿ ಹೊಂದಾಣಿಕೆ ಕೊರತೆ ಉಂಟಾಗಬಹುದು. ಸಂಸಾರದಲ್ಲಿ ಮೂರನೆಯವರು ಮೂಗು ತೂರಿಸಲು ಅವಕಾಶ ಕೊಡಬೇಡಿ.

ಕನ್ಯಾ: ಮಕ್ಕಳ ದೇಹಾರೋಗ್ಯದಲ್ಲಿ ಏರುಪೇರಾಗಬಹುದು. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ದೂರ ಪ್ರಯಾಣ ಮಾಡಬೇಕಾಗುತ್ತದೆ. ವೃತ್ತಿರಂಗದಲ್ಲಿ ನಿಮ್ಮ ಸಹನೆಯ ಪರೀಕ್ಷೆ ನಡೆಯಲಿದೆ. ಧಾರ್ಮಿಕ ಕಾರ್ಯಗಳಿಗೆ ಧನವಿನಿಯೋಗ ಮಾಡುವಿರಿ.

ತುಲಾ: ಅಧಿಕ ಲಾಭ ತರುವ ಯೋಜನೆಗಳ ಬಗ್ಗೆ ಚಿಂತನೆ ನಡೆಸುವಿರಿ. ತಾತ್ಕಾಲಿಕ ಉದ್ಯೋಗಿಗಳಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಬಹುದು. ಸಾಂಸಾರಿಕವಾಗಿ ಸಂಗಾತಿಯ ಸಲಹೆಗಳಿಗೆ ಕಿವಿಗೊಡಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.

ವೃಶ್ಚಿಕ: ಅಪರಿಚಿತರನ್ನು ನಂಬಿ ವ್ಯವಹಾರದಲ್ಲಿ ಹೂಡಿಕೆ ಮಾಡಿದರೆ ಕೈ ಸುಟ್ಟುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಬಹುದು. ಕೃಷಿ ಕ್ಷೇತ್ರದಲ್ಲಿರುವವರಿಗೆ ಲಾಭ-ನಷ್ಟ ಸಮನಾಗಿರುವುದು. ಸಂಗಾತಿಯಿಂದ ಉಡುಗೊರೆ ನಿರೀಕ್ಷಿಸಬಹುದು. ಕುಲದೇವರ ಪ್ರಾರ್ಥನೆ ಮಾಡಿದರೆ ಶುಭ ಫಲ ದೊರೆಯುವುದು.

ಧನು: ಸಾಂಸಾರಿಕವಾಗಿ ನಿಮ್ಮ ಕೆಲವೊಂದು ನಿರ್ಧಾರಗಳು ಇತರ ಸದಸ್ಯರಿಗೆ ಇಷ್ಟವಾಗದೇ ಹೋಗಬಹುದು. ಸಹೋದರರೊಂದಿಗೆ ಆಸ್ತಿ ವಿಚಾರದಲ್ಲಿ ಕಿರಿ ಕಿರಿ ಬರಬಹುದು. ತಾಳ್ಮೆಯಿಂದ ವ್ಯವಹರಿಸಿ. ವಿದ್ಯಾರ್ಥಿಗಳು ಆಲಸ್ಯತನ ಬಿಡಬೇಕು.

ಮಕರ: ಕಾರ್ಯಕ್ಷೇತ್ರದಲ್ಲಿ ಅಡ್ಡಿ ಆತಂಕಗಳು ಎದುರಾಗಿ ಆರಂಭಿಸಿದ ಕೆಲಸಗಳು ಅರ್ಧಕ್ಕೇ ನಿಲ್ಲಲಿವೆ. ಕುಲದೇವರ ಪ್ರಾರ್ಥನೆ ಮಾಡಿದರೆ ಒಳಿತು. ನಿರುದ್ಯೋಗಿಗಳು ಉದ್ಯೋಗ ಸಂದರ್ಶನಕ್ಕಾಗಿ ದೂರ ಪ್ರಯಾಣ ಮಾಡಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕುಂಭ: ಶೀತ, ಕಫ ಸಂಬಂಧೀ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಂಡುಬಂದೀತು. ಆದರೆ ಸಾಂಸಾರಿಕವಾಗಿ ಅತ್ಯಂತ ನೆಮ್ಮದಿಯ ದಿನವಿದು. ಮಕ್ಕಳೊಂದಿಗೆ ಸಂತೋಷದ ಕ್ಷಣ ಕಳೆಯುವಿರಿ. ಉದ್ಯೋಗ ಕ್ಷೇತ್ರದಲ್ಲಿ ವೇತನ ಹೆಚ್ಚಳ ಸಂಭವವಿದೆ.

ಮೀನ: ಉದ್ಯೋಗ ಕ್ಷೇತ್ರದಲ್ಲಿ ಸ್ಥಾನ ಪಲ್ಲಟವಾಗುವ ಸಾಧ‍್ಯತೆಯಿದೆ. ನಿರ್ಧಾರಗಳನ್ನು ಕೈಗೊಳ್ಳುವಾಗ ಎಚ್ಚರಿಕೆಯಿಂದ ಹೆಜ್ಜೆಯಿಡಬೇಕು. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸುವಿರಿ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಬೇಕಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗ್ರಹಣ ಮುಗಿದ ಬಳಿಕ ಸ್ನಾನ ಮಾಡುವಾಗ ಹೀಗೆ ಮಾಡಿದರೆ ಗ್ರಹಣ ದೋಷ ನಿವಾರಣೆಯಾಗುತ್ತದೆ