Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಭಾನುವಾರ, 8 ಸೆಪ್ಟಂಬರ್ 2019 (07:00 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ನಿಮ್ಮ ವ್ಯಾಪಾರ,ವ್ಯವಹಾರದಲ್ಲಿ ಹೆಚ್ಚಿನ ಲಾಭ ಗಳಿಕೆಗೆ ದಾರಿ ಹುಡುಕಲು ಮುಂದಾಗುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಸಾಧು ಸಂತರ ಭೇಟಿ ಸಾಧ್ಯತೆ. ಸಂಗಾತಿಯೊಂದಿಗೆ ಹೊಂದಾಣಿಕೆ ಅಗತ್ಯ. ಕಿರು ಸಂಚಾರ ಮಾಡಬೇಕಾಗುತ್ತದೆ.

ವೃಷಭ: ವಿದ್ಯಾರ್ಥಿಗಳಿಗೆ ಪ್ರಯತ್ನ ಬಲವಿದ್ದರಷ್ಟೇ ಉತ್ತಮ ಫಲಿತಾಂಶ ಸಿಗಬಹುದು. ಕಾರ್ಯನಿಮಿತ್ತ ಅಧಿಕ ಓಡಾಟದಿಂದ ದೇಹಾಯಾಸವಾಗುವುದು. ಆರೋಗ್ಯದಲ್ಲಿ ಏರುಪೇರಾಗದಂತೆ ಎಚ್ಚರಿಕೆ ವಹಿಸಿ. ಆರ್ಥಿಕವಾಗಿ ಧನಾಗಮನವಾಗಲಿದೆ. ದಿನದಂತ್ಯಕ್ಕೆ ಶುಭ ಸುದ್ದಿ.

ಮಿಥುನ: ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ದಾಯಾದಿಗಳೂ ನಿಮ್ಮ ಅಭಿವೃದ್ಧಿ ಕಂಡು ಅಸೂಯೆಪಡುವರು. ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ಹಿರಿಯರ ತೀರ್ಥ ಯಾತ್ರೆಗೆ ಏರ್ಪಾಡು ಮಾಡುವಿರಿ. ಸಂಚಾರದಿಂದ ಕಾರ್ಯಪ್ರಾಪ್ತಿ.

ಕರ್ಕಟಕ: ಪಾಲು ಬಂಡವಾಳ ಹೂಡಿಕೆ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಕೈಗೆ ಬರುವುದು. ವೈಯಕ್ತಿಕ ಆರೋಗ್ಯದಲ್ಲಿ ಸುಧಾರಣೆಯಾಗುವುದು. ಅವಿವಾಹಿತರಿಗೆ ವಿವಾಹ ಯೋಗವಿದೆ. ಸಾಂಸಾರಿಕವಾಗಿ ನೆಮ್ಮದಿಯಿರುವುದು. ದೇವತಾ ಪ್ರಾರ್ಥನೆ ಮಾಡಿ.

ಸಿಂಹ: ಅಂದುಕೊಂಡ ಕೆಲಸ ಕಾರ್ಯಗಳನ್ನು ನೆರವೇರಿಸಲು ಅಡೆತಡೆಗಳು ಎದುರಾಗಲಿವೆ. ಸ್ನೇಹಿತರ ಸಹಕಾರದಿಂದ ನಿಮ್ಮ ಕ್ರಿಯಾಶೀಲತೆಗೆ ತಕ್ಕ ಮನ್ನಣೆ ಸಿಗುವುದು. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದ್ದು, ಮನೆಯಲ್ಲಿ ಸಂತಸದ ವಾತಾವರಣವಿರುವುದು.

ಕನ್ಯಾ: ಆರ್ಥಿಕವಾಗಿ ಆದಾಯವಿದ್ದರೂ ಖರ್ಚು ವೆಚ್ಚಗಳ ಬಗ್ಗೆ ಮಿತಿಯಿರಲಿ. ವಿದ್ಯಾರ್ಥಿಗಳು ಅಭ್ಯಾಸದ ಕಡೆಗೆ ಹೆಚ್ಚಿನ ಗಮನಕೊಡಬೇಕಾಗುತ್ತದೆ. ದೇವಾಲಯ ಸಂದರ್ಶನ ಮಾಡುವ ಸಾಧ್ಯತೆಯಿದೆ. ಹೊಸ ಜನರ ಭೇಟಿ. ನಿರುದ್ಯೋಗಿಗಳಿಗೆ ಹಲವು ಅವಕಾಶಗಳು ಸಿಗುವುದು.

ತುಲಾ: ಸಾಂಸಾರಿಕವಾಗಿ ಹೊಸ ಅತಿಥಿಯ ಆಗಮನ ಮನಸ್ಸಿಗೆ ಸಂತಸ ನೀಡುವುದು. ಹಾಗಿದ್ದರೂ ನೀವು ಕೈಗೊಳ್ಳುವ ಕೆಲವು ನಿರ್ಧಾರಗಳಿಂದ ಪ್ರೀತಿ ಪಾತ್ರರ ಮನಸ್ಸಿಗೆ ನೋವಾಗಬಹುದು. ಕೃಷಿಕರಿಗೆ  ಅಭಿವೃದ್ಧಿ ಇರುವುದು. ಅಧಿಕಾರಿ ವರ್ಗದವರಿಗೆ ಕಾರ್ಯದೊತ್ತಡವಿರುವುದು.

ವೃಶ್ಚಿಕ: ನಿರುದ್ಯೋಗಿಗಳು ಉದ್ಯೋಗ ಅರಸಿಕೊಂಡು ದೂರ ಸಂಚಾರ ಮಾಡಬೇಕಾಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಸಂಗಾತಿಯ ಮನೋಕಾಮನೆ ಪೂರೈಸಲು ಖರ್ಚು ವೆಚ್ಚ ಮಾಡಬೇಕಾಗುತ್ತದೆ. ವಾಹನ ಸವಾರರು ಎಚ್ಚರಿಕೆಯಿಂದಿರಬೇಕು.

ಧನು: ಭೂಮಿ, ಮನೆ ಖರೀದಿಗೆ ಚಿಂತನೆ ನಡೆಸುವಿರಿ. ವ್ಯವಹಾರದಲ್ಲಿ ವಂಚನೆಗೊಳಗಾದಂತೆ ಎಚ್ಚರಿಕೆ ವಹಿಸಬೇಕು. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ಕಾರ್ಯಗಳು ಸುಗಮವಾಗಲಿವೆ. ವೈಯಕ್ತಿಕ ಆರೋಗ್ಯದ ಬಗ್ಗೆ ಉದಾಸೀನ ಮಾಡಬೇಡಿ.

ಮಕರ: ಗೃಹೋಪಯೋಗಿ ವಸ್ತುಗಳಿಗೆ ಅಧಿಕ ಧನವ್ಯಯವಾಗುವುದು. ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ. ನೂತನ ದಂಪತಿಗಳಿಗೆ ಮಧುಚಂದ್ರದ ಭಾಗ್ಯವಿದೆ. ನಿರುದ್ಯೋಗಿಗಳು ಪಾಲಿಗೆ ಬಂದ ಅವಕಾಶಗಳನ್ನು ಬಳಸಿಕೊಳ್ಳಬೇಕು.

ಕುಂಭ: ಹಿರಿಯರ ಆರೋಗ್ಯದಲ್ಲಿ ವ್ಯತ್ಯಯವಾಗಿ ಆಸ್ಪತ್ರೆಗೆ ಅಲೆದಾಡಬೇಕಾಗಬಹುದು. ಕಾರ್ಮಿಕ ವರ್ಗದವರಿಗೆ ಉದ್ಯೋಗದಲ್ಲಿ ಮುನ್ನಡೆ ಯೋಗವಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ವೃತ್ತಿ ಸಿಗಲಿದೆ. ಖರ್ಚಿನ ಬಗ್ಗೆ ಕಡಿವಾಣವಿರಲಿ. ದೇವತಾ ಪ್ರಾರ್ಥನೆ ಮಾಡಿ.

ಮೀನ: ವಾಹನ ಖರೀದಿಗೆ ಮನಸ್ಸು ಮಾಡುವಿರಿ. ಯೋಗ್ಯ ವಯಸ್ಕರಿಗೆ ವಿವಾಹ ಪ್ರಸ್ತಾಪಗಳು ಬರುವುದಾದರೂ ಕೊನೆಯ ಹಂತದಲ್ಲಿ ಹಿನ್ನಡೆಯಾಗಬಹುದು. ತಾಳ್ಮೆಯಿಂದಿರಿ. ದೂರ ಸಂಚಾರದಿಂದ ಕಾರ್ಯಸಿದ್ಧಿಯಾಗಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲ ದೊರೆಯುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಪೂರ್ವಾಷಾಢ ನಕ್ಷತ್ರದವರಿಗೆ ಯಾವ ಅಕ್ಷರದಿಂದ ಆರಂಭವಾಗುವ ಹೆಸರಿಡಬೇಕು?