Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶುಕ್ರವಾರ, 6 ಸೆಪ್ಟಂಬರ್ 2019 (08:39 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಸ್ವಂತ ನಿರ್ಧಾರದಿಂದ ಮುಂದುವರಿಯಬೇಕಾದ ಕಾಲವಿದು. ವ್ಯಾಪಾರ ವ್ಯವಹಾರದಲ್ಲಿ ಕೊಂಚ ಹಿನ್ನಡೆಯಾಗಬಹುದು. ಎಚ್ಚರಿಕೆಯಿಂದಿರುವುದು ಉತ್ತಮ. ವಿದ್ಯಾರ್ಥಿಗಳಿಗೆ ಅಭ‍್ಯಾಸದಲ್ಲಿ ಮುನ್ನಡೆಯಿರಲಿದೆ. ಆರೋಗ್ಯದಲ್ಲಿ ಹೊಸ ಸಮಸ್ಯೆಗಳು ಚಿಂತೆಗೆ ಕಾರಣವಾಗುವುದು.

ವೃಷಭ: ಹಣಕಾಸಿನ ವಿಚಾರದಲ್ಲಿ ಅತೀವ ಕಾಳಜಿ ವಹಿಸಿ. ವಿಪರೀತ ಖರ್ಚುಗಳಿಗೆ ಕಡಿವಾಣ ಹಾಕಬೇಕು. ಸಾಂಸಾರಿಕವಾಗಿ ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ.

ಮಿಥುನ: ವಿವೇಚನೆಯಿಂದ ನಿರ್ಧಾರ ತೆಗೆದುಕೊಂಡರೆ ಸಂಭಾವ್ಯ ಅಪಾಯಗಳಿಂದ ತಪ್ಪಿಸಿಕೊಳ್ಳಬಹುದು. ಸಂದರ್ಭಕ್ಕೆ ತಕ್ಕಂತೆ ನಡೆದುಕೊಳ್ಳುವ ಜಾಣತನ ಪ್ರದರ್ಶಿಸಬೇಕು. ಆರ್ಥಿಕವಾಗಿ ಖರ್ಚುಗಳಿಗೆ ಕಡಿವಾಣ ಹಾಕಿ;. ವ್ಯಾಪಾರದಲ್ಲಿ ಲಾಭ ಸಿಗಬಹುದು.

ಕರ್ಕಟಕ: ವೃತ್ತಿರಂಗದಲ್ಲಿ ಕೆಳಹಂತದ ನೌಕರರಿಗೆ ಬಡ್ತಿ ಯೋಗವಿದೆ. ಕೊಡು ಕೊಳ್ಳುವಿಕೆ ವ್ಯವಹಾರದಲ್ಲಿ ಲಾಭ. ನಿರುದ್ಯೋಗಿಗಳಿಗೆ ಸೂಕ್ತ ಉದ್ಯೋಗ ಸಿಗುವುದು. ಉದ್ಯೋಗದಲ್ಲಿ ಬದಲಾವಣೆಯಾಗುವ ಸಾಧ‍್ಯತೆ. ವಾಹನ ಖರೀದಿ ಯೋಗವಿದೆ.

ಸಿಂಹ: ಅರ್ಧಕ್ಕೇ ನಿಂತ ಕೆಲಸಗಳಿಗೆ ಚಾಲನೆ ನೀಡಲು ಇದು ಸಕಾಲ. ಆತ್ಮಸ್ಥೈರ್ಯದಿಂದ ಮುನ್ನಡೆಯಿರಿ. ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಆತುರದ ನಿರ್ಧಾರ ಕೈಗೊಳ್ಳಬೇಡಿ. ಸಂಗಾತಿಯ ಮಾತಿಗೆ ಕಿವಿಗೊಡಿ. ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ.

ಕನ್ಯಾ: ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಅಲೆದಾಡಬೇಕಾದೀತು. ನಿರುದ್ಯೋಗಿಗಳಿಗೆ ಹಲವು ಉದ್ಯೋಗಾವಕಾಶಗಳು ಒದಗಿಬರಲಿವೆ. ಆರ್ಥಿಕವಾಗಿ ಧನಾಗಮನವಾಗಲಿದ್ದು, ಸಂತಸವಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ಮುನ್ನಡೆಯಿರುತ್ತದೆ.

ತುಲಾ: ಸಾಲ ಬಾಧೆಗಳು ನಿವಾರಣೆಯಾಗಲಿವೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಧನ ವ್ಯಯ ಮಾಡುವಿರಿ. ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸುವಿರಿ. ವಿದ್ಯಾರ್ಥಿಗಳಲ್ಲಿ ಆಲಸ್ಯತನ ಕಂಡುಬರುವುದು.

ವೃಶ್ಚಿಕ: ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಹಿನ್ನಡೆ ಅನುಭವಕ್ಕೆ ಬರಲಿದೆ. ವ್ಯಾಪಾರ ವ್ಯವಹಾರದಲ್ಲಿ ಧನ ಹಾನಿಯಾಗದಂತೆ ಎಚ್ಚರಿಕೆ ವಹಿಸಿ. ಅನಿರೀಕ್ಷಿತವಾಗಿ ಹಳೆಯ ಮಿತ್ರರ ಭೇಟಿ ಸಾಧ್ಯತೆ. ಕೌಟುಂಬಿಕವಾಗಿ ನೆಮ್ಮದಿ ಇರಲಿದೆ.

ಧನು: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸದ ಭಾಗ್ಯವಿದೆ. ಅನೇಕ ರೀತಿಯ ಖರ್ಚು ವೆಚ್ಚಗಳು ಎದುರಾಗಲಿವೆ, ಹಿಡಿತವಿರಲಿ. ದೇವರ ದರ್ಶನ ಭಾಗ್ಯವಿದೆ. ನೂತನ ದಂಪತಿಗಳಲ್ಲಿ ವಿರಸ ಮೂಡಬಹುದು. ಮಾತಿನ ಮೇಲೆ ನಿಗಾ ಇರಲಿ. ದಿನದಂತ್ಯಕ್ಕೆ ಶುಭ ಸುದ್ದಿ.

ಮಕರ: ಹೊಸ ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವಿರಿ. ಅಧಿಕಾರಿ ವರ್ಗದವರಿಗೆ ಅಭಿವೃದ್ಧಿಯ ಯೋಗವಿದೆ. ಆದರೆ ಕಾರ್ಯದೊತ್ತಡದಿಂದ ದೇಹಾಯಾಸವಾದೀತು. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯುವಿರಿ. ದೇವತಾ ಪ್ರಾರ್ಥನೆ ಮಾಡಿ.

ಕುಂಭ: ವಿದ್ಯಾರ್ಥಿಗಳಲ್ಲಿ ಆಲಸ್ಯತನ ಕಂಡುಬಂದು, ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾದೀತು. ಆಗಾಗ ದೇಹಾರೋಗ್ಯದಲ್ಲಿ ಏರುಪೇರಾಗಲಿದೆ. ಕಷ್ಟ ಕಾಲದಲ್ಲಿ ಮಿತ್ರರ ಸಹಕಾರ ದೊರಕಲಿದೆ. ಸರಕಾರಿ ಕೆಲಸಗಳಲ್ಲಿ ಜಯ. ದೇವತಾ ಪ್ರಾರ್ಥನೆ ಮಾಡಿ.

ಮೀನ: ಎಷ್ಟೋ ದಿನಗಳಿಂದ ಬಾಕಿಯಿದ್ದ ಕೆಲಸಗಳಿಗೆ ಚಾಲನೆ ನೀಡುವಿರಿ. ಹಿರಿಯರ ಮಾತಿಗೆ ಬೆಲೆಕೊಡಿ. ನಿರ್ಧಾರ ತೆಗೆದುಕೊಳ್ಳುವಾಗ ಗೊಂದಲಗಳು ಕಾಡಬಹುದು. ಚಿಂತೆ ಬೇಡ. ಶೀತ ಸಂಬಂಧೀ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಾಡಬಹುದು. ಎಚ್ಚರಿಕೆ ವಹಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Narasimha Mantra: ಮಹಾವಿಷ್ಣುವಿನ ಅಂಶವಾದ ನರಸಿಂಹನ ಈ ಸ್ತೋತ್ರವನ್ನು ತಪ್ಪದೇ ಓದಿ

Ganesha Mantra: ಬುಧವಾರ ಗಣೇಶನ ಅನುಗ್ರಹ ಸಿಗಲು ಈ ಸ್ತೋತ್ರ ಓದಿ

Durga Mantra: ಮಂಗಳವಾರ ಓದಲೇಬೇಕಾದ ದುರ್ಗಾ ಸ್ತೋತ್ರ ಇಲ್ಲಿದೆ ನೋಡಿ

Karnataka Weather: ಈ ವಾರದಿಂದ ರಾಜ್ಯದಲ್ಲಿ ಮಳೆ ಹೇಗಿರಲಿದೆ ಇಲ್ಲಿದೆ ಸಂಪೂರ್ಣ ವರದಿ

Shiva Mantra: ಸೋಮವಾರ ಶಿವ ಅಷ್ಟೋತ್ತರ ಭಕ್ತಿಯಿಂದ ಓದಿ

ಮುಂದಿನ ಸುದ್ದಿ
Show comments