Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಬುಧವಾರ, 4 ಸೆಪ್ಟಂಬರ್ 2019 (08:37 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ:ಕೌಟುಂಬಿಕವಾಗಿ ಸಂಗಾತಿಯ ನಿರ್ಧಾರಗಳು ಹಿಡಿಸದೇ ಹೋಗಬಹುದು. ಇದರಿಂದ ಒಂದು ರೀತಿಯ ಚಿಂತೆ, ಬೇಸರ ಕಾಡುವುದು.ವ್ಯಾಪಾರಿಗಳಿಗೆ ನಿವ್ವಳ ಲಾಭ ಸಿಗಲಿದೆ. ಸರಕಾರಿ ಅಧಿಕಾರಿಗಳಿಗೆ ವರ್ಗಾವಣೆ ಭೀತಿಯಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭ: ಮನೆಯಲ್ಲಿ ಶಾಂತಿಯುತ ವಾತಾವರಣವಿರಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ಸಂಗಾತಿಯ ಮನೋಕಾಮನೆಗಳನ್ನು ಪೂರೈಸುವಿರಿ. ವಾಹನ ಚಾಲಕರು ಎಚ್ಚರವಾಗಿರಬೇಕು.

ಮಿಥುನ: ನಾನಾ ಮೂಲಗಳಿಂದ ಧನಾಗಮನವಾಗಲಿದ್ದು, ಅಂದುಕೊಂಡ ಕಾರ್ಯಗಳನ್ನು ಪೂರ್ತಿ ಮಾಡುವಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಬಂದು ಸಂತಸವಾಗುವುದು. ಅನವಶ್ಯಕವಾಗಿ ವಾಗ್ವಾದ ಮಾಡಿಕೊಳ್ಳಬೇಡಿ. ತಾಳ್ಮೆಯಿಂದಿರಿ.

ಕರ್ಕಟಕ: ಉದ್ಯೋಗಸ್ಥರಿಗೆ ಉದ್ಯೋಗ ಬದಲಾವಣೆ ಸಂಭವವಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಅರಸಿಕೊಂಡು ದೂರ ಸಂಚಾರ ಮಾಡಬೇಕಾಗುತ್ತದೆ. ಮಕ್ಕಳ ಭವಿಷ್ಯಕ್ಕಾಗಿ ಧನವ್ಯಯ ಮಾಡಬೇಕಾಗುತ್ತದೆ. ಕಾರ್ಯ ಕ್ಷೇತ್ರದಲ್ಲಿ ಒತ್ತಡವಿರಲಿದೆ. ಎಚ್ಚರಿಕೆಯಿರಲಿ.

ಸಿಂಹ: ಆಗಾಗ ಅತಿಥಿಗಳ ಆಗಮನದಿಂದ ಖರ್ಚು ವೆಚ್ಚಗಳು ಅಧಿಕವಾಗುವುದು. ಇಷ್ಟಮಿತ್ರರೊಂದಿಗೆ ಪ್ರವಾಸ ತೆರಳುವಿರಿ. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಕರೆಬರುವುದು. ಮಾನಸಿಕ ಚಿಂತೆಗಳಿಗೆಕ ಕಡಿವಾಣ ಹಾಕಿ. ಆತ್ಮಸ್ಥೈರ್ಯದಿಂದ ಮುನ್ನಡೆಯಿರಿ.

ಕನ್ಯಾ: ಪಾಲಿಗೆ ಬಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವುದರಲ್ಲಿ ಜಾಣತನ ಪ್ರದರ್ಶಿಸಿ. ಹಿರಿಯರ ಆರೋಗ್ಯದಲ್ಲಿ ಎಚ್ಚರಿಕೆ ವಹಿಸಬೇಕು. ಆರ್ಥಿಕವಾಗಿ ಸಮಾಧಾನಕರ ದಿನವಾಗಲಿದೆ. ಸಂಗಾತಿಯ ಅಲಂಕಾರಿಕ ವಸ್ತುಗಳಿಗೆ ಧನವ್ಯಯ ಮಾಡುವಿರಿ.

ತುಲಾ: ಸಾಮಾಜಿಕ ರಂಗದಲ್ಲಿ ನಿಮ್ಮ ಕ್ರಿಯಾಶೀಲತೆಗೆ ಮನ್ನಣೆ ಸಿಗಲಿದೆ. ನಿರುದ್ಯೋಗಿಗಳು ಬಂದ ಅವಕಾಶವನ್ನು ಬಳಸಿಕೊಳ್ಳಬೇಕು. ಆರ್ಥಿಕವಾಗಿ ಲಾಭವಿಲ್ಲದಿದ್ದರೂ ನಷ್ಟವಂತೂ ಇಲ್ಲ. ಕಾರ್ಯಕ್ಷೇತ್ರದಲ್ಲಿ ವಿಘ್ನಗಳು ಎದುರಾದರೂ ಅಂತಿಮವಾಗಿ ಜಯ ನಿಮ್ಮದೇ.

ವೃಶ್ಚಿಕ: ಅನಿರೀಕ್ಷಿತವಾಗಿ ಅತಿಥಿಗಳ ಆಗಮನವಾಗಲಿದೆ. ಕೆಲವೊಂದು ಚಾಡಿ ಮಾತುಗಳಿಗೆ ಕಿವಿ ಕಿವುಡಾಗಿಸುವುದೇ ಒಳಿತು. ವಿದ್ಯಾರ್ಥಿಗಳಿಗೆ ಪರಿಶ್ರಮ ಪಡಬೇಕಾದ ಕಾಲವಿದು. ಸಾಲಗಾರರ ಹಣ ಪಾವತಿಯಾಗದೇ ಚಿಂತೆಯಾಗುವುದು. ಆರೋಗ್ಯದಲ್ಲಿ ಸುಧಾರಣೆಯಾಗುವುದು.

ಧನು: ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯಲಿದ್ದು, ಮುನ್ನಡೆ ಸಾಧಿಸುವಿರಿ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ಆದ್ದರಿಂದ ಚಿಂತೆ ಬೇಡ. ಆದರೆ ದುಡುಕಿನ ವರ್ತನೆಯಿಂದ ಸಂಬಂಧ ಹಾಳು ಮಾಡಿಕೊಳ್ಳಬೇಡಿ. ದೇವತಾ ಪ್ರಾರ್ಥನೆ ಮಾಡಿ.

ಮಕರ: ಮೇಲ್ವರ್ಗದ ಅಧಿಕಾರಿಗಳಿಗೆ ಉದ್ಯೋಗದಲ್ಲಿ ಮುನ್ನಡೆಯ ಭಾಗ್ಯವಿದೆ. ಸಾಂಸಾರಿಕವಾಗಿ ಮಾನಸಿಕ ನೆಮ್ಮದಿಗೆ ಭಂಗ ತರುವಂತಹ ಘಟನೆಗಳು ನಡೆದಾವು. ಹಿರಿಯರ ತೀರ್ಥ ಯಾತ್ರೆಗೆ ಸಿದ್ಧತೆ ನಡೆಸುವಿರಿ. ಸರಕಾರಿ ಕೆಲಸಗಳಲ್ಲಿ ಜಯ ಸಿಗುವುದು.

ಕುಂಭ: ಆರ್ಥಿಕವಾಗಿ ಅಧಿಕ ಖರ್ಚು ವೆಚ್ಚಗಳಾಗುವುದು. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡುವಿರಿ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ಅನವಶ್ಯಕ ವಿಚಾರಗಳಿಗೆ ತಲೆಕೆಡಿಸಿಕೊಂಡು ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳಬೇಡಿ.

ಮೀನ: ಕುಟುಂಬದವರೊಂದಿಗೆ ಕಿರು ಪ್ರವಾಸ, ಸಂತೋಷದ ಕ್ಷಣಗಳನ್ನು ಕಳೆಯುವಿರಿ. ಮನೆಯಲ್ಲಿ ಶುಭ ಮಂಗಲ ಕಾರ್ಯ ನಡೆಸಲು ಚಿಂತನೆ ನಡೆಸುವಿರಿ. ಉದ್ಯೋಗದಲ್ಲಿ ಕಿರಿ ಕಿರಿ ಎದುರಾಗಬಹುದು. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶಾಖ ನಕ್ಷತ್ರದವರಿಗೆ ಯಾವ ಅಕ್ಷರದಿಂದ ಆರಂಭವಾಗುವ ಹೆಸರಿಡಬೇಕು?