ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಬುಧವಾರ, 7 ಆಗಸ್ಟ್ 2019 (08:59 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಪಾಲು ಬಂಡವಾಳ ಹೂಡಿಕೆಯಲ್ಲಿ ಲಾಭ ಕಾಣುವಿರಿ. ಆದರೆ ಉದ್ಯೋಗ ಕ್ಷೇತ್ರದಲ್ಲಿ ಒಂದಲ್ಲಾ ಒಂದು ಸಮಸ್ಯೆಗಳು ತಪ್ಪದು. ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ದೇವತಾ ಪ್ರಾರ್ಥನೆ ಮಾಡಿ.

ವೃಷಭ: ಹೊಸ ಕೆಲಸಗಳಿಗೆ ಚಾಲನೆ ನೀಡಲು ಹೇಳಿ ಮಾಡಿಸಿದ ದಿನ. ಆರ್ಥಿಕವಾಗಿ ಸಾಕಷ್ಟು ಧನಾಗಮನವಾಗಲಿದೆ. ಸರಕಾರಿ ಕೆಲಸಗಳಲ್ಲಿ ಜಯ. ಸಾಂಸಾರಿಕವಾಗಿ ಸಂಗಾತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ.

ಮಿಥುನ: ಕೃಷಿ ಕ್ಷೇತ್ರದಲ್ಲಿರುವವರಿಗೆ ಸಾಕಷ್ಟು ಲಾಭ ಗಳಿಸುವ ಸಮಯವಿದು. ಅವಿವಾಹಿತರಿಗೆ ವಿವಾಹ ಭಾಗ್ಯವಿದೆ. ಖರ್ಚು ವೆಚ್ಚಗಳಲ್ಲಿ ಹಿಡಿತ ಅಗತ್ಯ. ಆರೋಗ್ಯದಲ್ಲಿ ಸುಧಾರಣೆಯಾಗುವುದು. ದಿನದಂತ್ಯಕ್ಕೆ ಶುಭ ಸುದ್ದಿ.

ಕರ್ಕಟಕ: ಸಾಂಸಾರಿಕವಾಗಿ ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾದ ಸಮಯವಿದು. ದುಡುಕು ಮಾತಿನಿಂದ ಸಂಬಂಧ ಹಾಳು ಮಾಡಿಕೊಳ್ಳಬೇಡಿ.ಅಧಿಕಾರಿ ವರ್ಗದವರಿಗೆ ವರ್ಗಾವಣೆ ಸಾಧ್ಯತೆಯಿದೆ.

ಸಿಂಹ: ನಿಂತು ಹೋಗದ್ದ ಕೆಲಸಗಳಿಗೆ ಮತ್ತೆ ಚಾಲನೆ ನೀಡುವಿರಿ. ಅಚ್ಚರಿಯ ರೀತಿಯಲ್ಲಿ ಸಹಾಯ ಒದಗಿಬರುವುದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ವೃತ್ತಿ ದೊರಕುವುದು. ಧನಾರ್ಜನೆಗೆ ನಾನಾ ಮಾರ್ಗ ಹುಡುಕುವಿರಿ.

ಕನ್ಯಾ: ಸಾಂಸಾರಿಕವಾಗಿ ಜವಾಬ್ಧಾರಿಗಳು ಹೆಚ್ಚಲಿವೆ. ಹಾಗಿದ್ದರೂ ಸಂತೋಷಕ್ಕೆ ಕೊರತೆಯಾಗದು. ಹೊಸ ಉದ್ಯೋಗಕ್ಕೆ ಸಂದರ್ಶನ ಕರೆ ಬರುವುದು. ಹಿರಿಯರ ಸಲಹೆಗಳಿಗೆ ಕಿವಿಗೊಡಬೇಕಾಗುತ್ತದೆ. ದೇವತಾ ಪ್ರಾರ್ಥನೆ ಮಾಡಿ.

ತುಲಾ: ಹೂಡಿಕೆ ವ್ಯವಹಾರಗಳಲ್ಲಿ ಲಾಭ ಗಳಿಸುವಿರಿ. ಮನೋಕಾಮನೆಗಳನ್ನು ಪೂರ್ತಿ ಮಾಡುವಿರಿ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಉತ್ತಮ. ಯೋಗ್ಯ ವಯಸ್ಕರಿಗೆ ವಿವಾಹ ಪ್ರಸ್ತಾಪಗಳು ಬರಲಿವೆ.

ವೃಶ್ಚಿಕ: ವಿದ್ಯಾರ್ಥಿಗಳಲ್ಲಿ ಉದಾಸೀನ ಪ್ರವೃತ್ತಿ ಕಂಡುಬರುವುದು. ಕೆಲಸ ಕಾರ್ಯಗಳಲ್ಲಿ ಅಡಚಣೆಯಾಗಬಹುದು. ಆದರೆ ಧೈರ್ಯ ಕಳೆದುಕೊಳ್ಳಬೇಡಿ. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ.

ಧನು: ಮನೆಗೆ ಹೊಸ ಅತಿಥಿಗಳು, ಸದಸ್ಯರ ಆಗಮನವಾಗಲಿದೆ. ಹಾಗಿದ್ದರೂ ಮನಸ್ಸಿಗೆ ಏನೋ ಒಂದು ರೀತಿಯ ಬೇಸರ ಕಾಡುವುದು. ಆರ್ಥಿಕವಾಗಿ ಖರ್ಚು ವೆಚ್ಚದ ಬಗ್ಗೆ ಎಚ್ಚರಿಕೆ ವಹಿಸಿ. ನೂತನ ದಂಪತಿಗಳಿಗೆ ಮಧುಚಂದ್ರ ಭಾಗ್ಯವಿದೆ.

ಮಕರ: ಮನಸ್ಸಿ ನೆಮ್ಮದಿ ಭಂಗವಾಗುವಂತಹ ಘಟನೆಗಳು ನಡೆಯಬಹುದು. ಆದರೆ ಆರ್ಥಿಕವಾಗಿ ಮುನ್ನಡೆ ಗಳಿಸುತ್ತೀರಿ. ಹಣಕಾಸಿಗೆ ತೊಂದರೆಯಾಗದು. ಮನೆಯಲ್ಲಿ ಶುಭ ಮಂಗಲ ಕಾರ್ಯ ನಡೆಸಲು ಸಿದ್ಧತೆ ಮಾಡುವಿರಿ.

ಕುಂಭ: ವಿಘ್ನಗಳಿದ್ದರೂ ಕಾರ್ಯ ಸಾಧನೆಗೆ ತೊಂದರೆಯಾಗದು. ಕೌಟುಂಬಿಕ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸಿ. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ವಿಳಂಬವಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ.

ಮೀನ: ಅನಿರೀಕ್ಷಿತವಾಗಿ ಅತಿಥಿಗಳ ಆಗಮನವಾಗಲಿದೆ. ವೃತ್ತಿರಂದಲ್ಲಿ ಕಾರ್ಯದೊತ್ತಡದಿಂದ ದೇಹಾಯಾಸವಾಗಬಹುದು. ಋಣಾತ್ಮಕ ಚಿಂತನೆಗಳಿಗೆ ಅವಕಾಶ ಕೊಡದಿರಿ. ಹಿತ ಶತ್ರುಗಳ ಬಗ್ಗೆ ಎಚ್ಚರಿಕೆಯಿಂದಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

2026 ರಲ್ಲಿ ಯಾವ ರಾಶಿಯವರು ಯಾವ ದೇವರ ಪ್ರಾರ್ಥನೆ ಮಾಡಬೇಕು ಗಮನಿಸಿ

ಗಣೇಶ ಕವಚ ಸ್ತೋತ್ರವನ್ನು ಮಕ್ಕಳಿಗೆ ಹೇಳಿಸಿ

ಈ ಐದು ರಾಶಿಯವರಿಗೆ 2026 ರಲ್ಲಿ ಸ್ವಂತ ಮನೆ ಕನಸು ನನಸಾಗುತ್ತದೆ

ಮಂಗಳವಾರ ದೇವಿಯ ಅನುಗ್ರಹಕ್ಕಾಗಿ ನವರತ್ನ ಮಾಲಿಕಾ ಸ್ತೋತ್ರ

ಶಿವ ಪಂಚಾಕ್ಷರಿ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments