ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಭಾನುವಾರ, 28 ಜುಲೈ 2019 (08:42 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಅನಿರೀಕ್ಷಿತವಾಗಿ ಆಪ್ತರ ಭೇಟಿ ಮನಸ್ಸಿಗೆ ಮುದ ನೀಡಲಿದೆ. ಇಷ್ಟಭೋಜನ ಮಾಡುವ ಭಾಗ್ಯವಿದೆ. ಆದರೆ ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಕಿರು ಸಂಚಾರ ಯೋಗವಿದೆ. ಖರ್ಚಿನ ಬಗ್ಗೆ ನಿಗಾ ಇರಲಿ.

ವೃಷಭ: ಪೋಷಕರ ಬಗ್ಗೆ ಹೆಚ್ಚಿನ ಕಾಳಜಿ, ಜವಾಬ್ಧಾರಿ ಹೊರಬೇಕಾದ ದಿನವಿದು. ಕೌಟುಂಬಿಕ ಜವಾಬ್ಧಾರಿಗಳನ್ನು ಹೊರಬೇಕಾಗುತ್ತದೆ. ಚಾಡಿ ಮಾತುಗಳಿಗೆ ಕಿವೊಗಡಬೇಡಿ. ಹೊಸ ಜನರ ಭೇಟಿ ಸಾಧ್ಯತೆಯಿದೆ.

ಮಿಥುನ: ಅವಿವಾಹಿತರಿಗೆ ಮನಸ್ಸಿಗೆ ಹಿಡಿಸಿದ ಸಂಬಂಧಗಳು ಕೂಡಿಬರಲಿದೆ. ಪ್ರೇಮಿಗಳು ಮನೆಯವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಪ್ರೀತಿ ಪಾತ್ರರ ಭೇಟಿಯಾಗುವಿರಿ. ಆರೋಗ್ಯದಲ್ಲಿ ಏರುಪೇರಾಗಬಹುದು.

ಕರ್ಕಟಕ: ಎಷ್ಟೋ ದಿನದಿಂದ ಅಂದುಕೊಂಡ ಕೆಲಸಗಲಿಗೆ ಚಾಲನೆ ನೀಡುವಿರಿ. ಸಂಗಾತಿಯೊಂದಿಗೆ ಸುಮಧುರ ಕ್ಷಣ ಕಳೆಯುವಿರಿ. ಮಕ್ಕಳ ಪ್ರಗತಿ ಮನಸ್ಸಿಗೆ ಸಂತಸ ನೀಡುವುದು. ನಿರುದ್ಯೋಗಿಗಳು ಸ್ವ ಉದ್ಯೋಗದ ಕಡೆಗೆ ಮನಸ್ಸು ಮಾಡುವರು.

ಸಿಂಹ: ಹಣಕಾಸಿನ ಅಡಚಣೆಯಿಂದಾಗಿ ಕೆಲವೊಂದು ಕೆಲಸಗಳು ಅರ್ಧಕ್ಕೇ ನಿಲ್ಲುವುದು. ಧನಾರ್ಜನೆಗೆ ನಾನಾ ಮಾರ್ಗಗಳನ್ನು ಕಂಡುಕೊಳ್ಳುವಿರಿ. ಬಂಧು ಮಿತ್ರರ ಭೇಟಿಯಾಗುವಿರಿ. ದೇವತಾ ಪ್ರಾರ್ಥನೆ ಮಾಡಿ.

ಕನ್ಯಾ: ಸಾಲ ಪಾವತಿ ಬಗ್ಗೆ ಚಿಂತನೆ ಮಾಡುವಿರಿ. ಕೌಟುಂಬಿಕವಾಗಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವಿರಿ. ಉದ್ಯೋಗ ಕ್ಷೇತ್ರದ ಒತ್ತಡಗಳು ಮನಸ್ಸಿಗೆ ಚಿಂತೆಯಾಗುವುದು.

ತುಲಾ: ಇಷ್ಟಮಿತ್ರರೊಂದಿಗೆ ಪ್ರವಾಸ, ಭೋಜನ ಸಾಧ್ಯತೆಯಿದೆ. ಅವಿವಾಹಿತರ ವಿವಾಹ ಪ್ರಯತ್ನಕ್ಕೆ ಹಿನ್ನಡೆಯಾದರೂ ಚಿಂತೆ ಬೇಡ. ನೂತನ ಗೃಹ ನಿರ್ಮಾಣ ಕೆಲಸಗಳಿಗೆ ಚಾಲನೆ ನೀಡಬಹುದು. ಆರೋಗ್ಯದಲ್ಲಿ ಸುಧಾರಣೆಯಾಗುವುದು.

ವೃಶ್ಚಿಕ: ಸಂಗಾತಿಗಾಗಿ ಚಿನ್ನಾಭರಣ ಖರೀದಿ ಮಾಡುವಿರಿ. ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ವಿದ್ಯಾರ್ಥಿಗಳು ಕಠಿಣ ಪ್ರಯತ್ನ ಮಾಡಬೇಕಾಗುತ್ತದೆ. ದೂರ ಸಂಚಾರದಿಂದ ಕಾರ್ಯಸಿದ್ಧಿಯಾಗುವುದು.

ಧನು: ಧಾರ್ಮಿಕ ಕಾರ್ಯಗಳಲ್ಲಿ ಪ್ರಗತಿಯಾಗುವುದು. ಹಾಗಿದ್ದರೂ ಯಾವುದೋ ಒಂದು ಬೇಸರದಿಂದ ಆಲಸ್ಯತನವುಂಟಾಗುವುದು. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಸಹೋದರರ ಭೇಟಿಯಾಗುವಿರಿ.

ಮಕರ: ಹೆಚ್ಚಿನ ಉದ್ಯೋಗವಾಕಾಶಗಳಿಗೆ ದೂರ ಸಂಚಾರ ಮಾಡುವ ಸಾಧ್ಯತೆಯಿದೆ. ದುಡುಕು ವರ್ತನೆಯಿಂದ ಅನಗತ್ಯ ವಿವಾದಗಳನ್ನು ಮೈಮೇಲೆಳೆದುಕೊಳ್ಳದಂತೆ ಎಚ್ಚರವಹಿಸಿ. ಉದರ ಸಂಬಂಧೀ ಅನಾರೋಗ್ಯ ಕಾಡಬಹುದು. ಎಚ್ಚರಿಕೆ.

ಕುಂಭ: ಸಂಗಾತಿಯ ಅಸಮಾಧಾನ ಮನಸ್ಸಿಗೆ ಕಿರಿ ಕಿರಿ ಉಂಟುಮಾಡುವುದು. ಧಾರ್ಮಿಕ ಕಾರ್ಯಗಳಿಗೆ ಧನವಿನಿಯೋಗ ಮಾಡುವಿರಿ. ಕೃಷಿಕರಿಗೆ ಲಾಭವಾಗಲಿದೆ. ವ್ಯಾಪಾರಿಗಳಿಗೆ ಹಿನ್ನಡೆಯಾಗಬಹುದು.

ಮೀನ: ಮಹಿಳೆಯರಿಂದ ಶುಭ ಫಲಗಳನ್ನು ನಿರೀಕ್ಷಿಸಬಹುದು. ಸಂಗಾತಿಯೊಂದಿಗೆ ಹೊಂದಾಣಿಕೆ ಮಾಡಬೇಕಾಗುತ್ತದೆ. ಶುಭ ಮಂಗಲ ಕಾರ್ಯಗಳಿಗೆ ಓಡಾಟ ನಡೆಸಬೇಕಾಗುತ್ತದೆ. ನೂತನ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಕಾಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಈ ಐದು ರಾಶಿಯವರಿಗೆ 2026 ರಲ್ಲಿ ಸ್ವಂತ ಮನೆ ಕನಸು ನನಸಾಗುತ್ತದೆ

ಮಂಗಳವಾರ ದೇವಿಯ ಅನುಗ್ರಹಕ್ಕಾಗಿ ನವರತ್ನ ಮಾಲಿಕಾ ಸ್ತೋತ್ರ

ಶಿವ ಪಂಚಾಕ್ಷರಿ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಈ ಐದು ರಾಶಿಯವರಿಗೆ 2026 ರಲ್ಲಿ ಮದುವೆ ಯೋಗವಿದೆ

ಶನಿವಾರದಂದು ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಲೇ ಬೇಡಿ

ಮುಂದಿನ ಸುದ್ದಿ
Show comments