ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಬುಧವಾರ, 3 ಜುಲೈ 2019 (08:42 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ವೃತ್ತಿರಂಗದಲ್ಲಿ ನಿಮ್ಮ ಕೆಲಸಗಳಿಗೆ ಪ್ರಶಂಸೆ ವ್ಯಕ್ತವಾಗುವುದು. ಆರ್ಥಿಕವಾಗಿಯೂ ಧನಾಗಮನಕ್ಕೆ ಕೊರತೆಯಾಗದು. ಆದರೆ ದೈಹಿಕ ಆರೋಗ್ಯ ಸಮಸ್ಯೆಗಳು ಹಿಂಸೆ ನೀಡಲಿವೆ. ಎಚ್ಚರಿಕೆ ಅಗತ್ಯ.

ವೃಷಭ: ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಓಡಾಟ ನಡೆಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುವುದು. ಮಹಿಳೆಯರಿಗೆ ಮಾನಸಿಕ ನೆಮ್ಮದಿಗೆ ಭಂಗವಾಗಲಿದೆ.

ಮಿಥುನ: ಕಲೆ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮುನ್ನಡೆ, ಹೆಸರು ಕೀರ್ತಿ  ಸಿಗಲಿದೆ. ಆದಾಯವಿದ್ದಷ್ಟೇ ಖರ್ಚೂ ಇರುವುದು. ಅವಿವಾಹಿತರಿಗೆ ವಿವಾಹ ಭಾಗ್ಯವಿದೆ. ದಿನದಂತ್ಯಕ್ಕೆ ಶುಭ ಸುದ್ದಿ.

ಕರ್ಕಟಕ: ಕಾರ್ಯಕ್ಷೇತ್ರದಲ್ಲಿ ಶ್ರಮವಹಿಸಿ ದುಡಿದರೆ ಅದರ ಪ್ರತಿಫಲ ನಿಮಗೆ ಸಿಕ್ಕೇ ಸಿಗುವುದು. ವಾಹನಾದಿ ಸೌಕರ್ಯಗಳಿಗಾಗಿ ಖರ್ಚು ವೆಚ್ಚ ಮಾಡಬೇಕಾಗುತ್ತದೆ. ಆದರೆ ಹಣಕಾಸಿನ ವಿಚಾರದಲ್ಲಿ ವ್ಯವಹಾರ ಮಾಡುವಾಗ ಎಚ್ಚರಿಕೆ ಅಗತ್ಯ.

ಸಿಂಹ: ವಿವಾಹ ಪ್ರಯತ್ನದಲ್ಲಿ ಕೊಂಚ ಹಿನ್ನಡೆಯಾದೀತು. ಆದರೂ ನಿರಾಸೆ ಬೇಡ. ದಾಂಪತ್ಯದಲ್ಲಿ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.

 
ಕನ್ಯಾ: ಕಚೇರಿಯಲ್ಲಿ ಬಿಡುವಿಲ್ಲದೇ ಕೆಲಸ ಮಾಡಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಹಿಡಿತ ಅಗತ್ಯ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಕೋರ್ಟು ಕಚೇರಿ ವ್ಯವಹಾರದಲ್ಲಿ ಅಪಜಯದ ಭೀತಿಯಿದೆ. ದೇವತಾ ಪ್ರಾರ್ಥನೆ ಮಾಡಿ.

ತುಲಾ: ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಸ್ಥಾನ ಮಾನ ಹೆಚ್ಚುವುದು. ಹಿರಿಯರ ಆರೋಗ್ಯ ಹದತಪ್ಪಿ ಆಸ್ಪತ್ರೆಗೆ ಅಲೆದಾಡಬೇಕಾದೀತು. ಖರೀದಿ ವ್ಯವಹಾರದಲ್ಲಿ ಲಾಭವಾಗುವುದು. ಕಿರು ಸಂಚಾರ ಮಾಡಬೇಕಾಗುತ್ತದೆ.

ವೃಶ್ಚಿಕ: ಅನಗತ್ಯವಾಗಿ ಇನ್ನೊಬ್ಬರ ವ್ಯವಹಾರದಲ್ಲಿ ಮೂಗು ತೂರಿಸಲು ಹೋದರೆ ಅಪವಾದಕ್ಕೆ ಗುರಿಯಾಗಬೇಕಾದೀತು. ಸಾಲ ಪಡೆದವರು ವಿಶ್ವಾಸ ದ್ರೋಹವೆಸಗಿಯಾರು. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಲಿವೆ.

ಧನು: ಹೊಸ ಕೆಲಸಗಳಿಗೆ ಕೈ ಹಾಕಿದರೆ ನಾನಾ ವಿಘ್ನಗಳು ಎದುರಾಗಲಿವೆ. ಆತ್ಮವಿಶ್ವಾಸದಿಂದ ಮುಂದುವರಿಯಬೇಕು. ಆರ್ಥಿಕವಾಗಿ ಅನಿರೀಕ್ಷಿತ ಖರ್ಚು ವೆಚ್ಚಗಳು ಎದುರಾಗಲಿವೆ. ವಿದ್ಯಾರ್ಥಿಗಳು ಕಠಿಣ ಪ್ರಯತ್ನ ಮಾಡಬೇಕು.

ಮಕರ: ಜೀರ್ಣ ಸಂಬಂಧೀ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಂಡುಬರಬಹುದು. ವೃತ್ತಿ ರಂಗದಲ್ಲಿ ವೇತನ ಹೆಚ್ಚಳ ಸಂಭವವಿದೆ. ಸಾಂಸಾರಿಕವಾಗಿ ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ.

ಕುಂಭ: ಗೃಹೋಪಯೋಗಿ ಕೆಲಸಗಳಿಗೆ ಹೆಚ್ಚಿನ ಓಡಾಟ ನಡೆಸಬೇಕಾಗುತ್ತದೆ. ಆದರೆ ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಧನಲಾಭವಾದಷ್ಟೇ ಖರ್ಚೂ ಇರುವುದು. ನಿರುದ್ಯೋಗಿಗಳಿಗೆ ಉದ್ಯೋಗಕ್ಕೆ ಸಂದರ್ಶನ ಕರೆ ಬರಬಹುದು.

ಮೀನ: ಶುಭ ಮಂಗಲ ಕಾರ್ಯಗಳಿಗೆ ಓಡಾಟ ನಡೆಸಬೇಕಾಗುತ್ತದೆ. ಧಾರ್ಮಿಕ ಕಾರ್ಯಗಳಿಗಾಗಿ ಧನವಿನಿಯೋಗ ಮಾಡಬೇಕಾಗುತ್ತದೆ. ಸಂಗಾತಿಯೊಂದಿಗೆ ಹೊಂದಾಣಿಕೆ ನಡೆಸಬೇಕಾಗುತ್ತದೆ. ದಿನದಂತ್ಯಕ್ಕೆ ಶುಭ ಸುದ್ದಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments