ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 
									
										
								
																	
ಮೇಷ: ಸಂಗಾತಿಯ ಆಸೆ ಆಕಾಂಕ್ಷೆಗಳನ್ನು ಪೂರೈಸಬೇಕಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಹಳೆಯ ಸಮಸ್ಯೆಗಳು ಮತ್ತೆ ಎದುರಾಗಿ ಸಂಕಷ್ಟಕ್ಕೀಡಾಗುವಿರಿ. ಹೊಸ ವಸ್ತುಗಳ ಖರೀದಿಗೆ ಮುಂದಾಗುವಿರಿ. ಕೌಟುಂಬಿಕ ಸಮಸ್ಯೆಗಳು ನಿವಾರಣೆಯಾಗಲಿವೆ.
									
			
			 
 			
 
 			
					
			        							
								
																	ವೃಷಭ: ಮಹಿಳಾ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಬಡ್ತಿ ಯೋಗವಿದೆ. ಸಂಕಷ್ಟದ ಸಮಯದಲ್ಲಿ ಆರ್ಥಿಕವಾಗಿ ಮಿತ್ರರಿಂದ ಸಹಾಯ ದೊರಕಲಿದೆ. ಕಚೇರಿ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
									
										
								
																	ಮಿಥುನ: ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವಿರಿ. ಹೊಸ ವ್ಯವಹಾರಗಳಿಗೆ ಕೈ ಹಾಕಲು ಆರ್ಥಿಕ ಮುಗ್ಗಟ್ಟು ಎದುರಾಗುವುದು. ಕೃಷಿಕರಿಗೆ ಕೊಂಚ ನಿರಾಳವಾಗಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಒದಗಿಬರಲಿದೆ.
									
											
									
			        							
								
																	ಕರ್ಕಟಕ: ಹಿರಿಯರೊಂದಿಗೆ ಮನಸ್ತಾಪಗಳಾಗುವ ಸಾಧ್ಯತೆಯಿದೆ. ಎಚ್ಚರಿಕೆಯಿಂದ ವ್ಯವಹರಿಸಿ. ಮೇಲಧಿಕಾರಿಗಳಿಂದ ಕಿರಿ ಕಿರಿ ಎದುರಾದರೂ ಬಡ್ತಿಗೆ ತೊಂದರೆಯಾಗದು. ಹೊಸ ವಾಹನ, ಭೂಮಿ ಖರೀದಿಗೆ ಮುಂದಾಗುವಿರಿ.
									
					
			        							
								
																	ಸಿಂಹ: ಕಾರ್ಯಕ್ಷೇತ್ರದಲ್ಲಿ ಹಲವು ಅಡೆತಡೆಗಳು ತೋರಿಬಂದಾವು. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಂಡುಬಂದೀತು. ಕೃಷಿ ಕ್ಷೇತ್ರದಲ್ಲಿರುವವರಿಗೆ ಲಾಭವಾಗಲಿದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮಪಡಬೇಕು. ದಿನದಂತ್ಯಕ್ಕೆ ಶುಭ ಸುದ್ದಿ.
									
					
			        							
								
																	 
ಕನ್ಯಾ: ಸಂಗಾತಿಯ ಅಲಂಕಾರಿಕ ವಸ್ತುಗಳಿಗಾಗಿ ಅಧಿಕ ಖರ್ಚು ವೆಚ್ಚಗಳಾಗುವುದು. ದುಡುಕು ವರ್ತನೆಯಿಂದ ಅಪಾಯ ಮೈಮೇಲೆಳೆದುಕೊಳ್ಳಬೇಡಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ.
									
					
			        							
								
																	ತುಲಾ: ರಾಜಕೀಯವಾಗಿ ನಿಮ್ಮ ಸ್ಥಾನ ಮಾನ ಹೆಚ್ಚುವುದು. ಸಮಾಜದಲ್ಲಿ ಗೌರವ ಸಂಪಾದಿಸಲಿದ್ದೀರಿ. ಅವಿವಾಹಿತರಿಗೆ ಮನಸ್ಸಿಗೆ ಹಿಡಿಸುವ ಸಂಬಂಧ ಕೂಡಿಬರಲಿದೆ. ದಾಂಪತ್ಯ ಜೀವನದಲ್ಲಿ ಸಂತೋಷ ಕಾಣುವಿರಿ. ಆರೋಗ್ಯದ ಬಗ್ಗೆ ಎಚ್ಚರಿಕೆಯಿರಲಿ.
									
			                     
							
							
			        							
								
																	ವೃಶ್ಚಿಕ: ಉದ್ಯೋಗ ನಿಮಿತ್ತ ವಿದೇಶ ಪ್ರಯಾಣದ ಭಾಗ್ಯವಿದೆ. ಸಂಗಾತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಸಂತಾನ ಹೀನ ದಂಪತಿಗಳಿಗೆ ಶುಭ ಸೂಚನೆ ದೊರಕಲಿದೆ. ಆದಾಯಕ್ಕೆ ಕತ್ತರಿ ಬೀಳಬಹುದು. ಆದರೆ ಸಾಲ ಮಾಡಲು ಹೋಗಬೇಡಿ.
									
			                     
							
							
			        							
								
																	ಧನು: ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಗಳು ಎದುರಾಗುವುದು. ಇದು ನಿಮ್ಮನ್ನು ಚಿಂತೆಗೀಡುಮಾಡಲಿದೆ. ಸಾಮಾಜಿಕವಾಗಿ ನೀವು ಮಾಡುವ ಕೆಲವೊಂದು ಕೆಲಸಗಳಿಂದ ಸಂಕಷ್ಟಕ್ಕೀಡಾಗಬೇಕಾಗುತ್ತದೆ. ತಾಳ್ಮೆಯಿಂದ ವ್ಯವಹರಿಸಿ.
									
			                     
							
							
			        							
								
																	ಮಕರ: ದೂರ ಸಂಚಾರದಿಂದ ಕಾರ್ಯ ಸಿದ್ಧಿ. ಮನೆಯಲ್ಲಿ ಕಳ್ಳತನದ ಭೀತಿಯಿದೆ. ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿರಲಿ. ಶುಭ ಮಂಗಲ ಕಾರ್ಯ ನಡೆಸಲು ಸಕಾಲ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.
									
			                     
							
							
			        							
								
																	ಕುಂಭ: ಎಂದೋ ಕಲಿತ ವಿದ್ಯೆ ಇಂದು ಉಪಯೋಗಕ್ಕೆ ಬರಲಿದೆ. ಸಂಕಷ್ಟದ ಸಮಯದಲ್ಲಿ ನಿಮ್ಮ ಆತ್ಮಸ್ಥೈರ್ಯದಿಂದ ಮೇಲೇಳುವಿರಿ. ಸಂಗಾತಿಯ ಮಾತಿಗೆ ಕಿವಿಗೊಡಬೇಕಾಗುತ್ತದೆ. ಆದಾಯಕ್ಕೆ ನಾನಾ ಮಾರ್ಗಗಳನ್ನು ಕಂಡುಕೊಳ್ಳುವಿರಿ.
									
			                     
							
							
			        							
								
																	ಮೀನ: ಕೌಟುಂಬಿಕವಾಗಿ ಜವಾಬ್ಧಾರಿಗಳು ಹೆಚ್ಚಲಿವೆ. ಸಾಂಸಾರಿಕವಾಗಿ ಸಹನೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಮಕ್ಕಳ ಭವಿಷ್ಯ ರೂಪಿಸಲು ಸಹಾಯ ಮಾಡುವಿರಿ. ಹೊಸ ಕೆಲಸಗಳಿಗೆ ಧನವಿನಿಯೋಗ ಮಾಡುವಿರಿ. ದೇವತಾ ಪ್ರಾರ್ಥನೆ ಮಾಡಿ.