ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಬುಧವಾರ, 12 ಜೂನ್ 2019 (07:19 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 

ಮೇಷ: ಕಚೇರಿಯಲ್ಲಿ ಸಹೋದ್ಯೋಗಿಗಳ ವರ್ತನೆ ಬೇಸರಕ್ಕೆ ಕಾರಣವಾಗುವುದು. ವಿಪರೀತ ಕಾರ್ಯದೊತ್ತಡದಿಂದ ದೇಹಾಯಾಸವಾಗಬಹುದು. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಮನೆಯಲ್ಲಿ ಶುಭ ಮಂಗಲ ಕಾರ್ಯಕ್ಕೆ ಸಿದ್ಧತೆ ಮಾಡುವಿರಿ.

ವೃಷಭ: ಸಾಹಿತ್ಯ, ಕಲೆ ಇತ್ಯಾದಿ ಕ್ಷೇತ್ರದಲ್ಲಿರುವವರಿಗೆ ಹೆಸರು, ಕೀರ್ತಿ ಸಂಪಾದನೆಯಾಗುವುದು. ಆದರೆ ಆದಾಯವಿದ್ದಷ್ಟೇ ಖರ್ಚೂ ಇರುವುದರಿಂದ ನೆಮ್ಮದಿಗೆ ಭಂಗ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಆಸಕ್ತಿ ಹೆಚ್ಚುವುದು.

ಮಿಥುನ: ಕಾರ್ಯಕ್ಷೇತ್ರದಲ್ಲಿ ಶತ್ರುಬಾಧೆ, ವಿಘ್ನಗಳು ತೋರಿಬಂದೀತು. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ. ದೂರ ಸಂಚಾರ ಯೋಗವಿದೆ. ಅವಿವಾಹಿತರಿಗೆ ವಿವಾಹ ಪ್ರಯತ್ನಕ್ಕೆ ಇದು ಸಕಾಲ. ಆರೋಗ್ಯದಲ್ಲಿ ಸುಧಾರಣೆ.

ಕರ್ಕಟಕ: ಶೈಕ್ಷಣಿಕ ವೃತ್ತಿಯಲ್ಲಿರುವವರಿಗೆ, ವಿದ್ಯಾರ್ಥಿಗಳಿಗೆ ಮುನ್ನಡೆಯಿರುತ್ತದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಒದಗಿಬರಲಿದೆ. ನಿರುದ್ಯೋಗಿಗಳು ಉದ್ಯೋಗ ಅರಸುತ್ತಾ ದೂರ ಪ್ರಯಾಣ ಮಾಡುವರು.

ಸಿಂಹ: ಆಸ್ತಿ ವಿವಾದಗಳು ಪರಿಹಾರವಾಗಿ ಹೊಸ ಮನೆ, ಭೂಮಿ ಖರೀದಿಗೆ ಮುಂದಾಗುವಿರಿ. ಪತ್ನಿಗೆ ಶುಭ ಸುದ್ದಿ. ಆರ್ಥಿಕ ಕ್ಷೇತ್ರದಲ್ಲಿ, ವ್ಯವಹಾರದಲ್ಲಿ ಲಾಭ ಕಂಡುಬರಲಿದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಮಾಡಬೇಕಾಗುತ್ತದೆ.

 
ಕನ್ಯಾ: ಅತಿ ಆಸೆ ದುಃಖಕ್ಕೆ ಮೂಲ ಎನ್ನುವುದನ್ನು ಮರೆಯದಿರಿ. ಈಗ ಇರುವ ಕಷ್ಟಗಳು ಶಾಶ್ವತವಲ್ಲ. ಉದ್ಯೋಗ ರಂಗದಲ್ಲಿ ಸಮಾಧಾನಕರ ವಾತಾವರಣವಿರುವುದು. ತಾಳ್ಮೆಯಿಂದ ಕಾದರೆ ಮುಂದೆ ಶುಭ ಫಲಗಳು ಸಿಗಲಿವೆ.

ತುಲಾ: ದೈವಾನುಗ್ರಹದಿಂದ ಆರ್ಥಿಕ ಲಾಭ, ವ್ಯವಹಾರದಲ್ಲಿ ಮುನ್ನಡೆ ಕಂಡುಬರುವುದು. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡುವಿರಿ. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನ ಸಂತಸ ವೃದ್ಧಿಸುವುದು.

ವೃಶ್ಚಿಕ: ಧಾರ್ಮಿಕ ಕಾರ್ಯಗಳಿಗೆ ಓಡಾಟ ಹೆಚ್ಚುವುದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭ. ಮೇಲ್ವರ್ಗದ ಅಧಿಕಾರಿಗಳಿಗೆ ವೇತನ ಹೆಚ್ಚಳ ಸಂಭವ. ಆರ್ಥಿಕವಾಗಿ ಖರ್ಚು ಮಾಡುವಾಗ ಎಚ್ಚರಿಕೆಯಿಂದಿರಿ.

ಧನು: ಆತ್ಮವಿವೇಚನೆಯಿಂದ ನಡೆದುಕೊಳ್ಳುವುದು ಅಗತ್ಯ. ವಿನಾಕಾರಣ ದುಡುಕಿ ಮಾತನಾಡಿ ಇನ್ನೊಬ್ಬರ ಮನಸ್ಸು ನೋಯಿಸಬೇಡಿ. ಸಂಗಾತಿಯ ಮಾತಿಗೆ ಕಿವಿಗೊಡಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.

ಮಕರ: ಮಹಿಳೆಯರಿಗೆ ಆಭರಣ ಖರೀದಿ ಯೋಗವಿದೆ. ನೂತನ ದಂಪತಿಗಳಿಗೆ ಸರಸದ ಸಮಯ ಕಳೆಯಲು ಅವಕಾಶ ಕೂಡಿಬರುವುದು. ಪ್ರೇಮಿಗಳಿಗೆ ಮನೆಯಲ್ಲಿ ಕಿರಿ ಕಿರಿ ತಪ್ಪದು. ಉದ್ಯೋಗದಲ್ಲಿ ಮುನ್ನಡೆಯಿರಲಿದೆ.

ಕುಂಭ: ಇನ್ನೇನು ಸೋಲು ನಿ‍ಶ್ಚಿತ ಎನ್ನುವಾಗ ಅಪರಿಚಿತರಿಂದ ಸಹಾಯ ಸಿಗಲಿದೆ. ಆರೋಗ್ಯದ ಬಗ್ಗೆ ಉಡಾಫೆ ಬೇಡ. ನಿರುದ್ಯೋಗಿಗಳಿಗೆ ಪ್ರಯತ್ನಕ್ಕೆ ತಕ್ಕ ಫಲ ಸಿಗದೇ ನಿರಾಸೆಯಾಗಬಹುದು. ದೇವತಾ ಪ್ರಾರ್ಥನೆ ಮಾಡಿ.

ಮೀನ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ದಾಯಾದಿಗಳೊಂದಿಗಿನ ಮನಸ್ತಾಪಗಳು ದೂರವಾಗಿ ಮನಸ್ಸಿಗೆ ನೆಮ್ಮದಿಯಾಗುವುದು. ಮಹಿಳೆಯರಿಂದ ಶುಭ ಸುದ್ದಿ. ಬಾಕಿ ಹಣ ಪಾವತಿಯಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಂಕಟ ಮೋಚನ ಹನುಮಾನ್ ಅಷ್ಟಕಂ ಸ್ತೋತ್ರ

ಹಣಕಾಸಿನ ಸಮಸ್ಯೆಯಿದ್ದರೆ ಕನಕಧಾರಾ ಸ್ತೋತ್ರ ತಪ್ಪದೇ ಓದಿ

2026 ರಲ್ಲಿ ಯಾವ ರಾಶಿಯವರು ಯಾವ ದೇವರ ಪ್ರಾರ್ಥನೆ ಮಾಡಬೇಕು ಗಮನಿಸಿ

ಗಣೇಶ ಕವಚ ಸ್ತೋತ್ರವನ್ನು ಮಕ್ಕಳಿಗೆ ಹೇಳಿಸಿ

ಈ ಐದು ರಾಶಿಯವರಿಗೆ 2026 ರಲ್ಲಿ ಸ್ವಂತ ಮನೆ ಕನಸು ನನಸಾಗುತ್ತದೆ

ಮುಂದಿನ ಸುದ್ದಿ
Show comments