Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಭಾನುವಾರ, 9 ಜೂನ್ 2019 (08:47 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಉದ್ಯೋಗದಲ್ಲಿ ಅತಂತ್ರವಾಗುವ ಭೀತಿ. ನಿಮ್ಮ ತಾಳ್ಮೆ, ಆತ್ಮಸ್ಥೈರ್ಯವನ್ನು ಪರೀಕ್ಷಿಸುವ ಕಾಲವಿದು. ಆರ್ಥಿಕವಾಗಿ ಧನಾಗಮನಕ್ಕೆ ನಾನಾ ಮಾರ್ಗಗಳ ಬಗ್ಗೆ ಯೋಚನೆ ಮಾಡುವಿರಿ. ಮನೆಯಲ್ಲಿ ಸಮಾಧಾನಕರ ವಾತಾವರಣವಿರಲಿದೆ.

ವೃಷಭ: ವೃತ್ತಿರಂಗದಲ್ಲಿ ಇದುವರೆಗೆ ನಿಮಗಾಗುತ್ತಿದ್ದ ಮೋಸ, ವಂಚನೆಗಳು ಬೆಳಕಿಗೆ ಬರಲಿವೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯವಿದೆ. ಮಾನಸಿಕ ಚಿಂತೆಯಿಂದ ಕೆಲಸ ಕಾರ್ಯಗಳಲ್ಲಿ ವಿಳಂಬವಾಗಬಹುದು.

ಮಿಥುನ: ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಜಯ. ಕಷ್ಟದ ಸಮಯದಲ್ಲಿ ಮಿತ್ರರಿಂದ ನೆರವು ದೊರಕಲಿದೆ. ನಿರುದ್ಯೋಗಿಗಳು ಉದ್ಯೋಗ ಬೇಟೆಯ ಪ್ರಯತ್ನ ಮುಂದುವರಿಸುವರು. ಸಾಂಸಾರಿಕವಾಗಿ ಸಂಗಾತಿಯಿಂದ ಸಹಕಾರ ಸಿಗಲಿದೆ.

ಕರ್ಕಟಕ: ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಲಿವೆ. ಹಿರಿಯರ ಆರೋಗ್ಯ ಕೈಕೊಟ್ಟು ಆಸ್ಪತ್ರೆಗೆ ಅಲೆದಾಡಬೇಕಾದೀತು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗಲಿದೆ. ಆರ್ಥಿಕವಾಗಿ ಚೇತರಿಕೆ ಕಾಣುವಿರಾದರೂ ಖರ್ಚಿನ ಬಗ್ಗೆ ನಿಗಾ ಇರಲಿ.

ಸಿಂಹ: ಹಿಂದೆ ಮಾಡಿದ ಅಸಡ್ಡೆಗೆ ಇಂದು ಪ್ರತಿಫಲ ಎದುರಿಸಬೇಕಾದೀತು. ಆರ್ಥಿಕವಾಗಿ ಸಂಕಷ್ಟಗಳು ಎದುರಾಗಲಿವೆ. ಆದರೆ ನಿಮ್ಮ ಆತ್ಮಸ್ಥೈರ್ಯವೇ ನಿಮ್ಮ ಬಲವಾಗಬೇಕು. ಸಮಾಧಾನ ಚಿತ್ತದಿಂದ ಮುನ್ನಡೆಯಿರಿ.

 
ಕನ್ಯಾ: ವೃತ್ತಿರಂಗದಲ್ಲಿ ಹಿತಶತ್ರುಗಳಿಂದ ತೊಂದರೆಗಳು ಎದುರಾದೀತು. ಕೃಷಿ ಕ್ಷೇತ್ರದಲ್ಲಿರುವವರಿಗೆ ಸಮಾಧಾನಕರ ದಿನ. ವ್ಯಾಪಾರ ವಹಿವಾಟಿನಲ್ಲಿ ಚೇತರಿಕೆ ಕಾಣುವಿರಿ. ಆದರೆ ಮನೆಯಲ್ಲಿ ಸಂಗಾತಿಯೊಂದಿಗೆ ಮನಸ್ತಾಪವಾಗದಂತೆ ಎಚ್ಚರವಹಿಸಿ.

ತುಲಾ: ನಿಮ್ಮ ದೃಢ ನಿರ್ಧಾರದಿಂದ ವೃತ್ತಿರಂಗದಲ್ಲಿ ಯಾರೂ ನಿಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ. ಸರ್ಕಾರಿ ಕೆಲಸಗಳಲ್ಲಿ ಜಯ ನಿಮ್ಮದಾಗುವುದು. ಆರ್ಥಿಕವಾಗಿ ಪ್ರಗತಿ ಕಾಣುವಿರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಶ್ಚಿಕ: ಸಂಕಷ್ಟದ ಸಮಯದಲ್ಲಿ ಹಿರಿಯರ ಹಿತವಚನಗಳನ್ನು ಕೇಳಬೇಕು. ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆಯ ಭೀತಿಯಿದೆ. ಆರೋಗ್ಯದ ಬಗ್ಗೆ ಉದಾಸೀನ ಬೇಡ. ಶತ್ರುಬಾಧೆಗಳಿಂದ ಮುಕ್ತಿ.

ಧನು: ಕೌಟುಂಬಿಕವಾಗಿ ನೆಮ್ಮದಿಯ ವಾತಾವರಣವಿರಲಿದೆ. ಖರ್ಚು ವೆಚ್ಚಗಳು ಅಧಿಕವಾಗಬಹುದು. ಆದರೆ ನಿಮ್ಮ ಆತ್ಮವಿಶ್ವಾಸದ ನಡೆಯಿಂದ ಎಲ್ಲರ ಮನಸ್ಸು ಗೆಲ್ಲುವಿರಿ. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡುವಿರಿ.

ಮಕರ: ವೃತ್ತಿರಂಗದಲ್ಲಿ ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆಯಿಂದ ವ್ಯವಹರಿಸಬೇಕಾಗುತ್ತದೆ. ಚಾಡಿ ಮಾತುಗಳಿಗೆ ಕಿವಿಗೊಡಬೇಡಿ. ರಾಜಕೀಯ ಕ್ಷೇತ್ರದಲ್ಲಿರುವವರ ಸ್ಥಾನ ಮಾನಗಳು ಹೆಚ್ಚಲಿದ್ದು, ಸಮಾಜದಲ್ಲಿ ಗೌರವ ಸಂಪಾದಿಸಲಿದ್ದೀರಿ.

ಕುಂಭ: ಅನವಶ್ಯಕವಾಗಿ ಕೆಲಸ ಕಾರ್ಯಗಳನ್ನು ಮುಂದಕ್ಕೆ ಹಾಕಬೇಕೆನಿಸುತ್ತದೆ. ಋಣಾತ್ಮಕ ಚಿಂತನೆಗಳಿಂದ ಆಲಸ್ಯತನ ಕಂಡುಬರಬಹುದು. ಆದರೆ ಕಾಲಕ್ಕೆ ತಕ್ಕ ಹಾಗೆ ಚಿಂತನೆ ಮಾಡಿಕೊಂಡು ಮುಂದುವರಿಯಲೇಬೇಕಾದ ಅನಿವಾರ್ಯತೆಯಿದೆ ಎಂಬುದನ್ನು ಮನಗಾಣಿ.

ಮೀನ: ನೂತನ ಕೆಲಸ ಕಾರ್ಯಗಳಲ್ಲಿ ಉತ್ಸಾಹ, ಮುನ್ನಡೆ ಸಂತಸಕ್ಕೆ ಕಾರಣವಾಗುವುದು. ನೂತನ ದಂಪತಿಗಳಿಗೆ ಸಂತಾನ ಸೂಚನೆ ಸಿಗಲಿದೆ. ಉದ್ಯೋಗ ಬದಲಾವಣೆಗೆ ಚಿಂತನೆ ನಡೆಸುವಿರಿ. ದೇವತಾ ಪ್ರಾರ್ಥನೆ ಮಾಡಿದರೆ ಹೆಚ್ಚಿನ ಶುಭ ಫಲ.

Share this Story:

Follow Webdunia kannada

ಮುಂದಿನ ಸುದ್ದಿ

ಅನಾರೋಗ್ಯದ ಸಮಸ್ಯೆ ಇರುವವರು ಬುಧವಾರದಂದು ಈ ಬೇರನ್ನು ಪೂಜೆ ಮಾಡಿ ಕೈಗೆ ಕಟ್ಟಿಕೊಳ್ಳಿ