ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶುಕ್ರವಾರ, 31 ಮೇ 2019 (08:55 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಮನೆಯಲ್ಲಿ ಇದುವರೆಗೆ ಇದ್ದ ಅಸಮಾಧಾನಗಳು ನಿಧಾನವಾಗಿ ಮರೆಯಾಗಲಿವೆ. ಹೊಸ ವಸ್ತುಗಳ ಖರೀದಿಗೆ ಖರ್ಚು ವೆಚ್ಚಗಳಾಗುವುದರಿಂದ ಚಿಂತೆಯಾಗುವುದು. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

ವೃಷಭ: ಪ್ರೇಮಿಗಳಿಗೆ ಮನೆಯವರಿಂದ ವಿರೋಧ ಎದುರಿಸಬೇಕಾಗುತ್ತದೆ. ಅವಿವಾಹಿತರು ಮನಸ್ಸಿಗೆ ಒಪ್ಪುವ ಸಂಬಂಧಕ್ಕಾಗಿ ಕೆಲವು ಸಮಯ ಕಾಯಬೇಕಾಗುತ್ತದೆ. ಕೆಲಸ ಕಾರ್ಯಗಳಲ್ಲಿ ನಿಧಾನಗತಿಯಿಂದ ಚಿಂತೆಯಾಗಬಹುದು. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.

ಮಿಥುನ: ಹೊಸ ಕೆಲಸ ಕಾರ್ಯಗಳಿಗೆ ಕೈ ಹಾಕುವಿರಿ. ಆದರೆ ಲೆಕ್ಕ ಪತ್ರಗಳ ಬಗ್ಗೆ ಸರಿಯಾದ ಲೆಕ್ಕಾಚಾರವಿಟ್ಟುಕೊಳ್ಳದಿದ್ದರೆ ಮುಂದೆ ತೊಂದರೆಯಾದೀತು. ಸನ್ಮಿತ್ರರ ಸಹಕಾರ ದೊರೆಯಲಿದೆ. ಕೌಟುಂಬಿಕವಾಗಿ ಅಭಿವೃದ್ಧಿಯಾಗಲಿದೆ.

ಕರ್ಕಟಕ: ನೂತನ ದಂಪತಿಗಳಲ್ಲಿ ಸಂತಾನ ಫಲ ಸೂಚನೆ ಕಂಡುಬರುವುದು. ಮನೆಯಲ್ಲಿ ಸಂತಸದ ವಾತಾವರಣವಿರಲಿದೆ. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ಗೌರವ ಹೆಚ್ಚಾಗಲಿದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಮಾಡಿ.

ಸಿಂಹ: ವಿನಾಕಾರಣ ತೊಂದರೆಗಳನ್ನು ಮೈ ಮೇಲೆಳೆದುಕೊಳ್ಳಬೇಡಿ. ಅಪರಿಚಿತರಿಗೆ ಸಹಾಯ ಮಾಡುವಾಗ ಎಚ್ಚರವಿರಿ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆಗೊಳಗಾಗುವಿರಿ. ಆರ್ಥಿಕವಾಗಿ ಅಭಿವೃದ್ಧಿಯಿದೆ.

 
ಕನ್ಯಾ: ಸಮಾನ ಮನಸ್ಕರೊಂದಿಗೆ ಹೊಸ ಸಾಹಸಕ್ಕಿಳಿಯುವ ಮನಸ್ಸಾದೀತು. ಆದರೆ ಆತುರದ ನಿರ್ಧಾರ ಮಾಡಬೇಡಿ. ಸ್ತ್ರೀಯರಿಂದ ಅಪವಾದದ ಭೀತಿಯಿದೆ. ಹೆಚ್ಚಿನ ಹಣ ಸಂಪಾದನೆಗೆ ಪರಿಶ್ರಮ ಪಡಲೇಬೇಕು. ತಾಳ್ಮೆಯಿಂದಿರಿ.

ತುಲಾ: ಧಾರ್ಮಿಕ ಕಾರ್ಯಗಳಿಗಾಗಿ ಧನವಿನಿಯೋಗ ಮಾಡುವಿರಿ. ಅನಿರೀಕ್ಷಿತವಾಗಿ ಹಳೆಯ ಮಿತ್ರರ ಭೇಟಿ ಮನಸ್ಸಿಗೆ ಖುಷಿ ಕೊಡಲಿದೆ. ಕೌಟುಂಬಿಕವಾಗಿ ನಿಮ್ಮ ಜವಾಬ್ಧಾರಿಗಳು ಹೆಚ್ಚಲಿವೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.

ವೃಶ್ಚಿಕ: ಸಂಗಾತಿಯ ನಿರ್ಧಾರಗಳಿಗೆ ತಲೆದೂಗಲೇಬೇಕಾದೀತು. ಕುಟುಂಬದವರ ನೆಮ್ಮದಿಗಾಗಿ ಕೆಲವೊಂದು ತ್ಯಾಗ ಮಾಡಬೇಕಾಗುತ್ತದೆ. ಮಾನಸಿಕವಾಗಿ ಋಣಾತ್ಮಕ ಚಿಂತನೆಗಳಿಗೆ ಅವಕಾಶ ಕೊಡದಿರಿ. ದೇವತಾ ಪ್ರಾರ್ಥನೆ ಮಾಡಿದರೆ ಒಳಿತು.

ಧನು: ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟ ಹೆಚ್ಚಿ ದೇಹಾಯಾಸವಾಗಬಹುದು. ಅನಗತ್ಯವಾಗಿ ಇನ್ನೊಬ್ಬರ ವಿಚಾರದಲ್ಲಿ ಮೂಗು ತೂರಿಸುವ ನಿಮ್ಮ ಸ್ವಭಾವಕ್ಕೆ ಕಡಿವಾಣ ಹಾಕುವುದು ಒಳ್ಳೆಯದು. ಆರ್ಥಿಕವಾಗಿ ಹಣದ ಹರಿವಿಗೆ ಕೊರತೆಯಿರದು.

ಮಕರ: ವಿದ್ಯಾರ್ಥಿಗಳು ನಿರೀಕ್ಷಿತ ಫಲಿತಾಂಶ ಪಡೆಯಲು ಕಠಿಣ ಪರಿ‍ಶ್ರಮ ಪಡಬೇಕಾಗುತ್ತದೆ. ಇಷ್ಟಮಿತ್ರರೊಂದಿಗೆ ಪ್ರವಾಸ, ಭೋಜನ ಮಾಡುವಿರಿ. ಆದರೆ ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಉದ್ಯೋಗದಲ್ಲಿ ಮುನ್ನಡೆಯಿದೆ.

ಕುಂಭ: ಕೌಟುಂಬಿಕ ಜವಾಬ್ಧಾರಿಗಳನ್ನು ನಿಭಾಯಿಸುವಲ್ಲಿ ಹೈರಾಣಾಗುವಿರಿ. ಕೃಷಿಕರಿಗೆ ನೀರಿಗಾಗಿ ಬವಣೆ ತಪ್ಪದು. ಕೋರ್ಟು, ಕಚೇರಿ ವ್ಯವಹಾರಗಳಲ್ಲಿ ನಿಮಗೆ ಅನುಕೂಲಕರವಾದ ತೀರ್ಪು ಬರಬಹುದು.

ಮೀನ: ಮಕ್ಕಳ ಏಳಿಗೆ ಮನಸ್ಸಿಗೆ ನೆಮ್ಮದಿ ತರುವುದು. ವಿದೇಶ ಪ್ರಯಾಣ ಯೋಗವಿದೆ. ನಿರುದ್ಯೋಗಿಗಳು ಪಾಲಿಗೆ ಬಂದ ಅವಕಾಶವನ್ನು ಬಳಸಿಕೊಳ್ಳಬೇಕು. ಧನಾಗಮನವಿದ್ದಷ್ಟೇ ಖರ್ಚೂ ಬರಬಹುದು. ಎಚ್ಚರಿಕೆ ಅಗತ್ಯ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಭಯವಾದಾಗ ಹೇಳಬೇಕಾದ ಮಂತ್ರ ಯಾವುದು

ಸೋಮವಾರ ಶಿವ ಹೃದಯಂ ಸ್ತೋತ್ರ ಪಾರಾಯಣ ಮಾಡಿ

ತುಳಸಿ ಹಬ್ಬ 2025: ತುಳಸಿ ಪೂಜೆ ಮಾಡುವಾಗ ಈ ಮಂತ್ರ ಜಪಿಸಿದರೆ ಅದೃಷ್ಟ

ಎಲ್ಲಾ ರೀತಿಯ ಗ್ರಹ ದೋಷಗಳಿಗೆ ಈ ಮಂತ್ರ ಪರಿಹಾರ

ತುಳಸಿ ಹಬ್ಬ ಯಾವಾಗ, ಪೂಜಾ ಸಮಯ, ಶುಭ ಮುಹೂರ್ತ ಇಲ್ಲಿದೆ

ಮುಂದಿನ ಸುದ್ದಿ
Show comments