ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಮಂಗಳವಾರ, 30 ಏಪ್ರಿಲ್ 2019 (07:22 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಹೆಚ್ಚಿನ ಕಾರ್ಯದೊತ್ತಡ ಅನುಭವಕ್ಕೆ ಬರುವುದು. ಆದರೆ ಅಭಿವೃದ್ಧಿಗೆ ಕೊರತೆಯಿರದು. ದಾಂಪತ್ಯದಲ್ಲಿ ಹೊಂದಾಣಿಕೆ ಕೊರತೆ ಎದುರಾಗಬಹುದು. ಆರೋಗ್ಯ ಹದಗೆಡಬಹುದು. ಎಚ್ಚರಿಕೆ ಅಗತ್ಯ.

ವೃಷಭ: ಅನಿರೀಕ್ಷಿತವಾಗಿ ಖರ್ಚು ವೆಚ್ಚಗಳು ಕಂಡುಬರುವುದು. ಹಿರಿಯರ ತೀರ್ಥ ಯಾತ್ರೆಗೆ ಏರ್ಪಾಡು ಮಾಡುವಿರಿ. ಮನೆಯಲ್ಲಿ ಮಂಗಲ ಕಾರ್ಯ ನೆರವೇರಿಸಲು ಓಡಾಟ ನಡೆಸಬೇಕಾಗುತ್ತದೆ.

ಮಿಥುನ: ಕಾರ್ಯಕ್ಷೇತ್ರದಲ್ಲಿ ಅಡೆತಡೆಗಳುಂಟಾಗಬಹುದು. ಆರ್ಥಿಕವಾಗಿ ಹಿನ್ನಡೆ ಎದುರಿಸುವಿರಿ. ವ್ಯಾಪಾರ ವ್ಯವಹಾರದಲ್ಲಿ ವಿಳಂಬ ಧೋರಣೆ ಅನುಸರಿಸಿದರೆ ನಷ್ಟ ಅನುಭವಿಸಬೇಕಾಗುವುದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭ.

ಕರ್ಕಟಕ: ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ಆದರೆ ಕಳ್ಳತನ ಭೀತಿಯಿದೆ. ಆರ್ಥಿಕವಾಗಿ ಸುಧಾರಣೆ ಅಗತ್ಯ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ನಿರುದ್ಯೊಗಿಗಳಿಗೆ ಉದ್ಯೋಗ ಲಾಭ.

ಸಿಂಹ: ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ಅಲೆದಾಡಬೇಕಾದೀತು. ಸಾಂಸಾರಿಕವಾಗಿ ಕಳೆದುಕೊಂಡ ಸಂಬಂಧಗಳು ಕೂಡಿಕೊಳ್ಳಲಿವೆ. ಇಷ್ಟಮಿತ್ರರೊಂದಿಗೆ ಪ್ರವಾಸ ತೆರಳುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.

 
ಕನ್ಯಾ: ದುಡುಕು ವರ್ತನೆ ತೋರಿ ಸಂಬಂಧ ಹಾಳುಮಾಡಿಕೊಳ್ಳಬೇಡಿ. ಉದ್ಯೋಗದಲ್ಲಿ ಬಡ್ತಿ, ಮುನ್ನಡೆ ಸಿಗಬಹುದು. ವಾಸಸ್ಥಳ ಬದಲಾವಣೆಗೆ ಚಿಂತನೆ ನಡೆಸುವಿರಿ. ಪ್ರೇಮಿಗಳಿಗೆ ಶುಭ ವಾರ್ತೆ. ದೇವತಾ ಪ್ರಾರ್ಥನೆ ಮಾಡಿ.

ತುಲಾ: ಆರ್ಥಿಕವಾಗಿ ಹಂತ ಹಂತವಾಗಿ ಚೇತರಿಕೆ ಕಾಣುವಿರಿ. ವ್ಯಾಪಾರ, ವ್ಯವಹಾರಗಳಲ್ಲಿ ಅಭಿವೃದ್ಧಿ ಕಂಡುಬರುವುದು. ದಾಯಾದಿಗಳೊಂದಿಗೆ ಆಸ್ತಿ ವ್ಯವಹಾರ ನಡೆಸುವಾಗ ವಂಚನೆಗೊಳಗಾದಂತೆ ಎಚ್ಚರಿಕೆ ವಹಿಸಿ.

ವೃಶ್ಚಿಕ: ಮಕ್ಕಳಿಂದ ಸಂತೋಷದ ವಾರ್ತೆ ಸಿಗುವುದು. ಕೌಟುಂಬಿಕವಾಗಿ ಅಭಿವೃದ್ಧಿ ಕಾಣುವಿರಿ. ವಿದ್ಯಾರ್ಥಿಗಳು ನಿರೀಕ್ಷಿತ ಫಲಿತಾಂಶ ಪಡೆಯುವರು. ಪ್ರೀತಿ ಪಾತ್ರರಿಗೆ ನೋವಾಗುವಂತೆ ನಡೆದುಕೊಳ್ಳಬೇಡಿ.

ಧನು: ರಾಜಕೀಯ ಕ್ಷೇತ್ರದಲ್ಲಿರುವವರ ಸ್ಥಾನಮಾನ ಹೆಚ್ಚುವುದು. ಸಾಮಾಜಿಕವಾಗಿ ಉತ್ತಮ ಗೌರವ ಸಂಪಾದನೆ ಮಾಡಿದರೂ ಕೌಟುಂಬಿಕವಾಗಿ ನೀವು ಮನೆಯವರ ಅಸಮಾಧಾನಕ್ಕೆ ಗುರಿಯಾಗುವಿರಿ. ತಾಳ್ಮೆಯಿಂದಿರಿ.

ಮಕರ: ಗೃಹೋಪಯೋಗಿ ವಸ್ತುಗಳ ಖರೀದಿಗೆ ಹೆಚ್ಚಿನ ಧನವ್ಯಯ ಮಾಡಬೇಕಾಗುತ್ತದೆ. ಮನೆ ಬದಲಾವಣೆ ಬಗ್ಗೆ ಚಿಂತನೆ ಮಾಡುವಿರಿ. ಆರ್ಥಿಕವಾಗಿ ಧನಾಗಮನವಿದ್ದಷ್ಟೇ ಖರ್ಚೂ ಇರಲಿದೆ. ಉದ್ಯೋಗದಲ್ಲಿ ಸಮಾಧಾನಕರ ದಿನ.

ಕುಂಭ: ಕಾರ್ಯದೊತ್ತಡ ಹೆಚ್ಚುವುದು. ದೇಹಾರೋಗ್ಯದ ಬಗ್ಗೆ ಅಲಕ್ಷ್ಯ ಬೇಡ. ಮಾನಸಿಕವಾಗಿ ಸಾಕಷ್ಟು ಚಿಂತೆಗಳು ನಿಮ್ಮನ್ನು ಕಾಡುವುದು. ಆತ್ಮಸ್ಥೈರ್ಯದಿಂದ ಮುನ್ನಡೆಯಬೇಕಾದೀತು. ವಿದ್ಯಾರ್ಥಿಗಳಿಗೆ ಸತತ ಪರಿಶ್ರಮ ಅಗತ್ಯ.

ಮೀನ: ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದ್ದು, ಮನೆಯಲ್ಲಿ ಸಂತಸದ ವಾತಾವರಣವಿರುವುದು. ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಕಿರಿ ಕಿರಿ ತಪ್ಪದು. ಹಾಗಿದ್ದರೂ ಕೈಗೊಂಡ ಕಾರ್ಯದಲ್ಲಿ ಜಯ ಸಿಗುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ             

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಈ ಐದು ರಾಶಿಯವರಿಗೆ 2026 ರಲ್ಲಿ ಸ್ವಂತ ಮನೆ ಕನಸು ನನಸಾಗುತ್ತದೆ

ಮಂಗಳವಾರ ದೇವಿಯ ಅನುಗ್ರಹಕ್ಕಾಗಿ ನವರತ್ನ ಮಾಲಿಕಾ ಸ್ತೋತ್ರ

ಶಿವ ಪಂಚಾಕ್ಷರಿ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಈ ಐದು ರಾಶಿಯವರಿಗೆ 2026 ರಲ್ಲಿ ಮದುವೆ ಯೋಗವಿದೆ

ಶನಿವಾರದಂದು ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಲೇ ಬೇಡಿ

ಮುಂದಿನ ಸುದ್ದಿ
Show comments