ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಮಂಗಳವಾರ, 9 ಏಪ್ರಿಲ್ 2019 (09:05 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಮನೆಯಲ್ಲಿ ಶುಭಮಂಗಲ ಕಾರ್ಯಗಳು ನೆರವೇರುವುದು. ಆದರೆ ಆರೋಗ್ಯ ಕೈಕೊಡುವುದು. ಆರ್ಥಿಕವಾಗಿ ಸಾಲ ಕೊಂಡು ಹೋದವರಿಂದ ಹಣ ಪಡೆಯುವ ಬಗ್ಗೆ ಚಿಂತೆಯಾಗಲಿದೆ.

ವೃಷಭ: ಪತಿ-ಪತ್ನಿಯರಲ್ಲಿ ಕಲಹ ಸಂಭವವಿದೆ. ಮಾನಸಿಕ ನೆಮ್ಮದಿಗೆ ಭಂಗವಾಗುವುದು. ಆದರೆ ಆದಾಯಕ್ಕೆ ಯಾವುದೇ ಕೊರತೆಯಿಲ್ಲ. ಉದ್ಯೋಗ ಕ್ಷೇತ್ರದಲ್ಲಿ ಬಡ್ತಿ, ಮುನ್ನಡೆ ಸಾಧ್ಯತೆಯಿದೆ. ನೆನೆಗುದಿಗೆ ಬಿದ್ದಿದ್ದ ಕಾರ್ಯಗಳಿಗೆ ಚಾಲನೆ ದೊರೆಯಲಿದೆ.

ಮಿಥುನ: ಕಾರ್ಯದೊತ್ತಡಗಳು ಅಧಿಕವಾಗಲಿದ್ದು, ನಿರೀಕ್ಷಿತ ಜಯ ಸಿಗದೇ ನಿರಾಶೆಯಾಗುವುದು. ಹಿತ ಶತ್ರುಗಳಿಂದ ವಂಚನೆಯ ಭೀತಿಯಿದೆ. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ.

ಕರ್ಕಟಕ: ಹಠವಾದಿ ಮಕ್ಕಳು ಮಾತು ಕೇಳದೇ ಚಿಂತೆಯಾಗುವುದು. ಸನ್ಮಿತ್ರರ ಸಹಕಾರದಿಂದ ಕಷ್ಟಗಳು ದೂರವಾಗುವುದು. ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗಿ ಬರುತ್ತದೆ. ನಿರುದ್ಯೋಗಿಗಳಿಗೆ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ.

ಸಿಂಹ: ಸಾಮಾಜಿಕ ಕೆಲಸಗಳಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ದೊರೆಯುವುದು. ಜನರ ಪ್ರೀತಿಗೆ ಪಾತ್ರರಾಗಲಿದ್ದೀರಿ. ಆರ್ಥಿಕವಾಗಿಯೂ ಚೇತರಿಕೆ ಕಾಣುವಿರಿ. ಪ್ರತಿಭೆಗೆ ತಕ್ಕ ಫಲ ದೊರೆಯುವುದು. ಹಾಗಿದ್ದರೂ ಯಾವುದೋ ಮಾನಸಿಕ ಕೊರಗು ಕಾಡಲಿದೆ.

ಕನ್ಯಾ: ಉದ್ದೇಶಿತ ಕೆಲಸಗಳು ನಿಧಾನವಾಗಿ ಸಾಗಿದರೂ, ನೀವಂದುಕೊಂಡಂತೆ ನಡೆದು ಮನಸ್ಸಿಗೆ ನೆಮ್ಮದಿಯಾಗುವುದು. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಪ್ರಗತಿ ಕಂಡು ಸಹೋದ್ಯೋಗಿಗಳೂ ಅಸೂಯೆ ಪಡುವರು.

ತುಲಾ: ಆರ್ಥಿಕವಾಗಿ ಆರಂಭದಲ್ಲಿ ಕೊಂಚ ಮುಗ್ಗಟ್ಟು ಎದುರಿಸಬೇಕಾದೀತು. ಆದರೆ ಸಕಾಲದಲ್ಲಿ ಹಣ ಪಾವತಿಯಾಗಿ ಕೆಲಸಗಳು ಸುಗಮವಾಗಿ ನಡೆಯುವುದು. ಒಂದು ರೀತಿಯ ಮಿಶ್ರಫಲ ನೀವು ಅನುಭವಿಸಬೇಕಾಗುತ್ತದೆ. ಎಚ್ಚರವಾಗಿರಿ.

ವೃಶ್ಚಿಕ: ಹಂತ ಹಂತವಾಗಿ ಅಭಿವೃದ್ಧಿ ಕಾಣುವಿರಿ. ಇದರಿಂದ ನೆಮ್ಮದಿಯ ವಾತಾವರಣವಿರಲಿದೆ. ಕುಟುಂಬದವರು, ಮಿತ್ರರೊಂದಿಗೆ ಸಂತಸದ ಸಮಯ ಕಳೆಯುವಿರಿ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಆದರೆ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಧನು: ಯಾವುದೇ ಕೆಲಸವಾಗಿದ್ದರೂ ಪರಿಶ್ರಮ ಅಗತ್ಯವಿದೆ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆತೀತು. ಹಾಗಿದ್ದರೂ ದುಡುಕಿನ ವರ್ತನೆ ತೋರಿದರೆ ಅಪವಾದ ತಪ್ಪದು. ತಾಳ್ಮೆ ಅಗತ್ಯ.

ಮಕರ: ವಿವಾಹಾಪೇಕ್ಷಿಗಳಿಗೆ ಶುಭ ದಿನ. ಮನಸ್ಸಿಗೆ ಹಿಡಿಸಿದ ಸಂಬಂಧಗಳು ಕೂಡಿಬರಲಿದೆ. ಪ್ರೇಮಿಗಳಿಗೂ ಮನೆಯವರ ಒಪ್ಪಿಗೆ ಸಿಗಲಿದೆ. ಕೌಟುಂಬಿಕವಾಗಿ ಶುಭ ದಿನ. ಉದ್ಯೋಗ ಕ್ಷೇತ್ರದಲ್ಲಿ ಕೆಲವೊಂದು ಅಡೆತಡೆಗಳು ಎದುರಾದೀತು, ಹಾಗಿದ್ದರೂ ಚಿಂತೆ ಬೇಡ.

ಕುಂಭ: ಅನವಶ್ಯಕ ಆತಂಕ ಚಿಂತೆ ಮಾಡುವಿರಿ. ನಿರುದ್ಯೋಗಿಗಳು ಉದ್ಯೋಗಾವಕಾಶ ನಿಮಿತ್ತ ದೂರ ಸಂಚಾರ ಮಾಡುವರು. ದಾಯಾದಿಗಳೊಂದಿಗೆ ಕಿರಿ ಕಿರಿ ಆಗಬಹುದು. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಸೂಕ್ತ.

ಮೀನ: ಇಂದು ಆರಂಭಿಸುವ ಕೆಲಸದಲ್ಲಿ ಜಯ ಪಡೆಯುವಿರಿ. ಅವಿವಾಹಿತರಿಗೆ ಕಂಕಣ ಕೂಡಿಬರಲಿದೆ. ಆರ್ಥಿಕವಾಗಿಯೂ ಚೇತರಿಕೆ ಕಾಣುವಿರಿ. ಕುಲದೇವರಿಗೆ ಸಂಬಂಧಪಟ್ಟ ಧಾರ್ಮಿಕ ಕೆಲಸಗಳಲ್ಲಿ ಭಾಗಿಯಾಗುವಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

2026 ರಲ್ಲಿ ಯಾವ ರಾಶಿಯವರು ಯಾವ ದೇವರ ಪ್ರಾರ್ಥನೆ ಮಾಡಬೇಕು ಗಮನಿಸಿ

ಗಣೇಶ ಕವಚ ಸ್ತೋತ್ರವನ್ನು ಮಕ್ಕಳಿಗೆ ಹೇಳಿಸಿ

ಈ ಐದು ರಾಶಿಯವರಿಗೆ 2026 ರಲ್ಲಿ ಸ್ವಂತ ಮನೆ ಕನಸು ನನಸಾಗುತ್ತದೆ

ಮಂಗಳವಾರ ದೇವಿಯ ಅನುಗ್ರಹಕ್ಕಾಗಿ ನವರತ್ನ ಮಾಲಿಕಾ ಸ್ತೋತ್ರ

ಶಿವ ಪಂಚಾಕ್ಷರಿ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments