Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಬುಧವಾರ, 6 ಮಾರ್ಚ್ 2019 (08:31 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ವೃತ್ತಿ ರಂಗದಲ್ಲಿ ನೀವು ಬಯಸಿದ ಮುನ್ನಡೆ, ಬಡ್ತಿ ಸಿಗುತ್ತದೆ. ಆರೋಗ್ಯ ಭಾಗ್ಯ ಸುಧಾರಿಸದೇ ಮನಸ್ಸಿಗೆ ಚಿಂತೆಯಾಗುವುದು. ಹಿರಿಯರ ಬಗ್ಗೆ ಆಘಾತಕಾರಿ ಸುದ್ದಿ ಬರಲಿದೆ. ಆರ್ಥಿಕ ಲಾಭಕ್ಕೆ ಕೊರತೆಯಿಲ್ಲ.

ವೃಷಭ: ಇಷ್ಟು ದಿನ ಕಾಡುತ್ತಿದ್ದ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗಲಿದೆ. ಅಧಿಕಾರಿ ವರ್ಗದವರಿಗೆ ಬಡ್ತಿ ಯೋಗಿವಿದೆ. ವಿದ್ಯಾರ್ಥಿಗಳಿಗೆ ಮನ್ನಡೆ. ಅನಿರೀಕ್ಷಿತವಾಗಿ ಬರುವ ನೆಂಟರಿಂದ ಶುಭ ಸುದ್ದಿ ಕೇಳಲಿದ್ದೀರಿ.

ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳೇ ನಿಮ್ಮ ಬಗ್ಗೆ ಅಸೂಯೆಪಟ್ಟುಕೊಳ್ಳುವರು. ವಿದ್ಯಾರ್ಥಿಗಳು ಉದಾಸೀನ ಪ್ರವೃತ್ತಿ ಬೆಳೆಸುವರು. ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ.

ಕರ್ಕಟಕ: ಉದ್ಯೋಗ ಕ್ಷೇತ್ರದಲ್ಲಿ ಸಮಚಿತ್ತದ ವಾತಾವರಣವಿರಲಿದೆ. ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ಅಲೆದಾಡಬೇಕಾದೀತು. ಕಾರ್ಯಗಳನ್ನು ಕೈಗೊಳ್ಳುವಾಗ ವಿಘ್ನಗಳು ಎದುರಾದರೂ, ಸಮಯಕ್ಕೆ ತಕ್ಕ ಹಾಗೆ ಹಣಕಾಸಿನ ನೆರವು ಸಿಗುವುದು.

ಸಿಂಹ: ಏನೋ ಒಂದು ರೀತಿಯ ತೊಳಲಾಟ ನಿಮ್ಮನ್ನು ಕಾಡಲಿದೆ. ದೇವತಾ ಪ್ರಾರ್ಥನೆಯಿಂದ ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳಿ. ಅವಿವಾಹಿತರಿಗೆ ಹೊಸ ಸಂಬಂಧಗಳ ಪ್ರಸ್ತಾಪಗಳು ಬರುವುದು. ನಿರುದ್ಯೋಗಿಗಳು ಸ್ವಲ್ಪ ದಿನ ಕಾಯಬೇಕಾಗುತ್ತದೆ.

ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಕಿರಿ ಕಿರಿ ಇರುವುದು. ವಿದ್ಯಾರ್ಥಿಗಳು ಅಭ್ಯಾಸದ ಕಡೆಗೆ ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಖರ್ಚು ವೆಚ್ಚಗಳು ಅಧಿಕವಾಗುವುದು. ಮಾತಿನ ಮೇಲೆ ನಿಗಾ ಇರಲಿ.

ತುಲಾ: ಸಾಲಗಾರರು ನಿಮ್ಮ ಸಾಲ ಮರುಪಾವತಿ ಮಾಡುವರು. ಆರ್ಥಿಕವಾಗಿ ಯಾವುದಕ್ಕೂ ಕೊರತೆಯಿಲ್ಲ. ಎಷ್ಟೋ ದಿನದಿಂದ ಬಾಕಿಯಿದ್ದ ದೇವರ ಹರಕೆ ಪೂರೈಸುವಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲ ಸಿಗಲಿದೆ.

ವೃಶ್ಚಿಕ: ಆರ್ಥಿಕವಾಗಿ ನಿಮ್ಮ ಲೆಕ್ಕಾಚಾರ ಸರಿಯಿಲ್ಲದೇ ಇರುವುದರಿಂದ ವ್ಯಥೆ ಪಡಬೇಕಾದೀತು. ಕಾರ್ಯನಿಮಿತ್ತ ದೂರ ಸಂಚಾರ ಮಾಡುವಿರಿ. ಆದರೂ ಕಳ್ಳತನದ ಭೀತಿಯಿದೆ. ಎಚ್ಚರಿಕೆ ಅಗತ್ಯ.

ಧನು: ಹಿರಿಯರ ಬಗ್ಗೆ ಅಶುಭದ ವಾರ್ತೆ ಕೇಳಲಿದ್ದೀರಿ. ಸಹೋದರರಿಂದ ಮನಸ್ಸಿಗೆ ಬೇಸರವಾಗಬಹುದು. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಸಂಗಾತಿಯ ಮಾತಿಗೆ ಕಿವಿಗೊಡಿ.

ಮಕರ: ಇಷ್ಟು ದಿನವಿದ್ದ ಕಷ್ಟಗಳೆಲ್ಲಾ ದೂರವಾಗಿ ಅಭಿವೃದ್ಧಿ ಕಾಣುವಿರಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ. ಸಂಗಾತಿಯೊಂದಿಗೆ ಸುಂದರ ಕ್ಷಣ ಕಳೆಯುವಿರಿ. ಮನೆಗೆ ಬರುವ ಅತಿಥಿಯೊಬ್ಬರಿಂದ ಶುಭ ಸುದ್ದಿ.

ಕುಂಭ: ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಸಂಗಾತಿಯೊಂದಿಗಿದ್ದ ಮನಸ್ತಾಪಗಳು ದೂರವಾಗಿ ಸಂತಸ ನೆಲೆಸುವುದು. ಆದರೆ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗುವುದು. ಹಿರಿಯರೊಂದಿಗೆ ವಾಗ್ವಾದಕ್ಕಿಳಿಯಬೇಡಿ.

ಮೀನ: ಆರ್ಥಿಕ ಮುಗ್ಗಟ್ಟುಗಳು ಎದುರಾಗುವುದರಿಂದ ಅಂದುಕೊಂಡ ಕಾರ್ಯಗಳಿಗೆ ಅಡೆತಡೆಯಾಗುವುದು. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸುವಿರಿ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ             

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶುಕ್ರವಾರ ತಪ್ಪದೇ ಅಷ್ಟಲಕ್ಷ್ಮೀ ಧ್ಯಾನ ಸ್ತೋತ್ರ ಪಠಿಸಿ

ಮಹಾವಿಷ್ಣುವಿನ ಅನುಗ್ರಹಕ್ಕೆ ಈ ಭಜನೆ ಸ್ತುತಿಸಿ

ಶ್ರೀ ವಿನಾಯಕಸ್ತವ ರಾಜ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಸಿಂಪಲ್ ಆಗಿ ಭೀಮನ ಅಮವಾಸ್ಯೆ ಪೂಜೆ ಮಾಡುವುದು ಹೇಗೆ

ಮಂಗಳವಾರ ದೇವಿಯ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments