ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಗುರುವಾರ, 21 ಫೆಬ್ರವರಿ 2019 (09:01 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಆರ್ಥಿಕವಾಗಿ, ವ್ಯಾವಹಾರಿಕವಾಗಿ ಎಷ್ಟೇ ಲಾಭಗಳಿದ್ದರೂ ಮಾನಸಿಕ ನೆಮ್ಮದಿಗೆ ಕೊರತೆಯಾಗುವುದು. ಉದ್ಯೋಗದಲ್ಲಿ ಕಾರ್ಯದೊತ್ತಡವಿರಲಿದೆ. ವಿದ್ಯಾರ್ಥಿಗಳಿಗೆ ತೀವ್ರ ಪ್ರಯತ್ನ ಅಗತ್ಯ.

ವೃಷಭ: ದೇವರ ಅನುಗ್ರಹ ನಿಮ್ಮ ಮೇಲಿದೆ. ಹೀಗಾಗಿ ಅಂದುಕೊಂಡ ಕಾರ್ಯಗಳು ನೆರವೇರುವುದು. ಆರ್ಥಿಕವಾಗಿಯೂ ಲಾಭ ಗಳಿಸುವಿರಿ. ಆದರೆ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಹಿತಶತ್ರುಗಳಿಂದ ವಂಚನೆಗೊಳಗಾದಂತೆ ಎಚ್ಚರವಹಿಸಿ.

ಮಿಥುನ: ಕಷ್ಟದ ಸಮಯದಲ್ಲಿ ಹಿರಿಯರ ಸೂಕ್ತ ಸಲಹೆ ನೆರವಿಗೆ ಬರುವುದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಸಂಗಾತಿಯೊಂದಿಗೆ ಮನಸ್ತಾಪ ಮಾಡಿಕೊಳ್ಳುವಿರಿ. ದೂರ ಸಂಚಾರ ಕೈಗೊಳ್ಳಲಿದ್ದು, ಎಚ್ಚರಿಕೆ ಅಗತ್ಯ.

ಕರ್ಕಟಕ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗಾಗಿ ವಿದೇಶ ಪ್ರಯಾಣ ಯೋಗವಿದೆ. ಸಂಗಾತಿಯೊಡನೆ ಉಲ್ಲಾಸದಾಯಕ ಸಮಯ ಕಳೆಯುವಿರಿ. ಕುಟುಂಬದಲ್ಲಿ ನೆಮ್ಮದಿ ನೆಲೆಸಲಿದೆ. ಆದರೆ ಕಾರ್ಯಕ್ಷೇತ್ರದಲ್ಲಿ ವಿಳಂಬ, ವಿಘ್ನಗಳು ನಿಮ್ಮ ನೆಮ್ಮದಿಗೆ ಭಂಗ ತರಲಿದೆ.

ಸಿಂಹ: ಎಷ್ಟೇ ಕಷ್ಟ ಬಂದರೂ ನಿಮ್ಮ ಆತ್ಮವಿಶ್ವಾಸದಿಂದಲೇ ಅದನ್ನು ಎದುರಿಸುವಿರಿ.  ಖರ್ಚುವೆಚ್ಚಗಳು ಅಧಿಕವಾಗುವುದು, ಹಿಡಿತವಿರಲಿ. ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ಅಲೆದಾಡಬೇಕಾದೀತು. ದಿನದಂತ್ಯಕ್ಕೆ ಶುಭ ಸುದ್ದಿ.

ಕನ್ಯಾ: ಅನಿರೀಕ್ಷಿತವಾಗಿ ಬರುವ ನೆಂಟರಿಂದ ಶುಭ ಸುದ್ದಿ. ಸಂಗಾತಿಯಿಂದ ನಿಮ್ಮ ಕೆಲಸಕ್ಕೆ ಸಹಕಾರ ಸಿಗುವುದು. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ‍್ಳುವಿರಿ. ಆದರೆ ಆಸ್ತಿ ವ್ಯವಹಾರಗಳನ್ನು ಸದ್ಯಕ್ಕೆ ಮುಂದೂಡುವುದು ಒಳ್ಳೆಯದು.

ತುಲಾ: ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಯಾವುದೇ ಕೆಲಸದಲ್ಲೂ ನಿಮ್ಮ ಗಮನ ಕೇಂದ್ರೀಕರಿಸಲು ಸಾಧ್ಯವಾಗದ ಸ್ಥಿತಿಯಲ್ಲಿರುತ್ತೀರಿ. ಇದರಿಂದ ಕಾರ್ಯಕ್ಷೇತ್ರದಲ್ಲಿ ಅಡಚಣೆಗಳು ಬರುತ್ತವೆ. ನೆಮ್ಮದಿಗಾಗಿ ಕುಲದೇವರ ಪ್ರಾರ್ಥಿಸಿ.

ವೃಶ್ಚಿಕ: ಕೆಲಸದಲ್ಲಿ ನಿರಾಸಕ್ತಿ, ನಿಧಾನ ಕಂಡುಬರುವುದು. ವಾಸಸ್ಥಳ ಬದಲಾವಣೆಗೆ ಚಿಂತನೆ ನಡೆಸುವಿರಿ. ಮಾನಸಿಕವಾಗಿ ಬೇಸರದಲ್ಲಿರುವಿರಿ. ಸಂಗಾತಿಯೊಂದಿಗೆ ವಿನಾಕಾರಣ ಮನಸ್ತಾಪ ಮಾಡಿಕೊಳ್ಳುವಿರಿ. ತಾಳ್ಮೆ ಅಗತ್ಯ.

ಧನು: ಸಂಗಾತಿಯ ಆರೋಗ್ಯ ಸಂಬಂಧವಾಗಿ ಆಸ್ಪತ್ರೆಗೆ ಹೋಗಬೇಕಾಗುತ್ತದೆ. ನಿಮ್ಮ ಕುಟುಂಬದ ನೇತೃತ್ವ ನೀವೇ ವಹಿಸುವ ಕಾಲವಿದು. ಆರ್ಥಿಕವಾಗಿ ಖರ್ಚು ವೆಚ್ಚಗಳಾಗುತ್ತವೆ. ಆದರೆ ಜವಾಬ್ಧಾರಿಯುತವಾಗಿ ನಡೆದುಕೊಳ್ಳುವುದು ಮುಖ್ಯ.

ಮಕರ: ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಕೆಲಸಗಳಿಗೆ ಸಹಕಾರ ಸಿಕ್ಕಿ ಮುನ್ನಡೆ ಸಾಧಿಸುತ್ತೀರಿ. ನಿರುಪಯೋಗಿ ವ್ಯಕ್ತಿಗಳಿಂದ ದೂರವಿದ್ದಷ್ಟೂ ಒಳ್ಳೆಯದು. ನಯವಂಚಕರು ನಿಮ್ಮನ್ನು ಮೋಸ ಮಾಡಲು ಕಾಯುತ್ತಿರುವರು. ವಿವೇಚನೆಯಿಂದ ವರ್ತಿಸುವುದು ಒಳ್ಳೆಯದು.

ಕುಂಭ: ಹಣಕಾಸಿನ ಹರಿವಿಗೆ ಕೊರತೆಯಿರದು. ವ್ಯವಹಾರದಲ್ಲೂ ಲಾಭ ಕಾಣುವಿರಿ. ಉದ್ಯೋಗದಲ್ಲಿ ಮುನ್ನಡೆ ಸಾಧಿಸುತ್ತೀರಿ. ಹಾಗಿದ್ದರೂ ಯಾವುದೋ ಒಂದು ಚಿಂತೆಯಿಂದ ನೆಮ್ಮದಿ ಇರದು. ದೇಹಾರೋಗ್ಯ ಸುಧಾರಿಸುವುದು.

ಮೀನ: ಆರೋಗ್ಯ ಸಮಸ್ಯೆಯಿಂದ ಕಿರಿ ಕಿರಿಯಾಗುವುದು. ಇಂದು ಅಂದುಕೊಂಡಿದ್ದ ಕಾರ್ಯಗಳು ನೆರವೇರಿಸಲು ಅಡ್ಡಿಗಳು ಎದುರಾಗುವುದು. ಕುಟುಂಬದವರೊಂದಿಗೆ ತಾಳ್ಮೆಯಿಂದ ವರ್ತಿಸಿ. ಮಾನಸಿಕ ಏರು ಪೇರುಗಳಿಗೆ ತಾಳ್ಮೆಯೇ ಮದ್ದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ                  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮೇಷಾದಿ ದ್ವಾದಶ ರಾಶಿಫಲ 2026: ಖ್ಯಾತ ಜ್ಯೋತಿಷಿ ಶ್ರೀ ವೆಂಕಟೇಶ್ವರ ಭಟ್ ಅವರಿಂದ

ಬುಧವಾರ ಗಣೇಶನ ಅನುಗ್ರಹಕ್ಕೆ ಈ ಸ್ತೋತ್ರ ಓದಿ

ವೈಕುಂಠ ಏಕಾದಶಿ ದಿನವಾದ ಇಂದು ಮಹಾವಿಷ್ಣುವಿನ ಈ ಮಂತ್ರವನ್ನು ತಪ್ಪದೇ ಪಠಿಸಿ

ವಿವಾಹ, ಸಂತಾನಕ್ಕೆ ಅಡ್ಡಿಯಾಗುತ್ತಿದ್ದರೆ ಸುಬ್ರಹ್ಮಣ್ಯನ ಈ ಸ್ತೋತ್ರ ಓದಿ

ನಾಳೆ ವೈಕುಂಠ ಏಕಾದಶಿ, ಹೀಗಿರಲಿ ಪೂಜಾ ವಿಧಾನ

ಮುಂದಿನ ಸುದ್ದಿ
Show comments