Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಮಂಗಳವಾರ, 19 ಫೆಬ್ರವರಿ 2019 (08:56 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಹಲವು ಮಾನಸಿಕ ಚಿಂತೆಗಳು ಕಾಡಲಿವೆ. ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಕಿರಿ ಕಿರಿ ತಪ್ಪದು. ಮಕ್ಕಳ ಆರೋಗ್ಯದ ಬಗ್ಗೆ ಚಿಂತೆಯಾಗುವುದು. ಆದರೆ ಆರ್ಥಿಕ ಲಾಭಕ್ಕೆ ಕೊರತೆಯಿಲ್ಲ. ತಾಳ್ಮೆ ಅಗತ್ಯ.

ವೃಷಭ: ಕಷ್ಟಕಾಲದಲ್ಲಿ ಮಿತ್ರರಿಂದ ಸಹಾಯ ದೊರಕಿ ಪರಿಹಾರ ಸಿಗುವುದು. ಹೊಸ ವಸ್ತುಗಳ ಖರೀದಿ ಮಾಡುವಿರಿ. ಉದ್ಯೋಗದಲ್ಲಿ ಸರಾಗವಾಗಿ ಕೆಲಸ ಸಾಗುವುದು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.

ಮಿಥುನ: ವಾಹನ ಚಾಲಕರಿಗೆ ಅಪಘಾತ ಭಯವಿದೆ. ಉದ್ಯೋಗದಲ್ಲಿ ಮೇಲಧಿಕಾರಿಗಳ ಕಿರುಕುಳದಿಂದ ಬಡ್ತಿ, ಮುನ್ನಡೆಗೆ ಅಡ್ಡಿಯಾದೀತು. ಆದರೆ ನಿಮ್ಮ ಜಾಣ್ಮೆ ಪ್ರದರ್ಶಿಸಿದರೆ ಸಂಕಟಗಳಿಂದ ಪಾರಾಗಬಹುದು.

ಕರ್ಕಟಕ: ಹೊಸ ಮನೆ ಖರೀದಿ ಅಥವಾ ವಾಸಸ್ಥಳ ಬದಲಾವಣೆ ಬಗ್ಗೆ ಚಿಂತನೆ ಮಾಡುವಿರಿ. ಆರ್ಥಿಕವಾಗಿ ಸಾಕಷ್ಟು ಲಾಭ ಗಳಿಸುವಿರಿ. ಉದ್ಯಮದಲ್ಲಿ ಮುನ್ನಡೆ. ಕಾರ್ಯ ನಿಮಿತ್ತ ಸಂಚಾರ ಮಾಡಬೇಕಾಗಿ ಬರುತ್ತದೆ.

ಸಿಂಹ: ಹಿರಿಯರೊಂದಿಗೆ ತಾಳ್ಮೆಯಿಂದ ವರ್ತಿಸುವುದು ಒಳ್ಳೆಯದು. ಅವರ ಕೆಲವೊಂದು ಹಠವಾದಿ ಸ್ವಭಾವವನ್ನು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ಬರುವುದು. ಮನೆಯಲ್ಲಿ ಶುಭ ಕಾರ್ಯ ನಡೆಸಲು ಓಡಾಟ ನಡೆಸುವಿರಿ.

ಕನ್ಯಾ: ತುಂಬಾ ದಿನಗಳಿಂದ ಬಾಕಿಯಿದ್ದ ಹರಕೆ, ದೇವತಾ ಕಾರ್ಯಗಳನ್ನು ನೆರವೇರಿಸುವಿರಿ. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದೆ. ಆರ್ಥಿಕವಾಗಿ ಅಭಿವೃದ್ಧಿ ತೋರಿ ಬಂದೀತು. ಆದರೆ ವೃತ್ತಿ ರಂಗದಲ್ಲಿ ಕಾರ್ಯದೊತ್ತಡವಿರುವುದು.

ತುಲಾ: ಮಕ್ಕಳ ವಿದ್ಯಾಭ್ಯಾಸದ ಪ್ರಗತಿ ಬಗ್ಗೆ ಖುಷಿ ಪಡುವಿರಿ. ಹೊಸ ಉದ್ಯಮಕ್ಕೆ ಕೈ ಹಾಕಲು ಕೆಲವು ದಿನ ಕಾಯುವುದು ಒಳ್ಳೆಯದು. ಅವಿವಾಹಿತರಿಗೆ ಕಂಕಣ ಬಲ ಯೋಗವಿದೆ. ಶಿಕ್ಷಕರಿಗೆ ಶುಭದಿನವಾಗಲಿದೆ.

ವೃಶ್ಚಿಕ: ಯಾವುದೇ ಹೊಸ ಕೆಲಸಗಳಿಗೆ ಕೈ ಹಾಕಿದರೂ ಆರಂಭಿಕ ವಿಘ್ನ ಎದುರಿಸುವಿರಿ. ಉದ್ಯೋಗ ಬದಲಾವಣೆ ಯೋಗವಿದೆ. ಎಲ್ಲವನ್ನೂ ತಾಳ್ಮೆಯಿಂದ ನಿಭಾಯಿಸುವುದು ಮುಖ್ಯ. ಸಾಲ ಕೊಡಲು ಹೋಗಬೇಡಿ.

ಧನು: ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗಲಿದೆ. ಆರೋಗ್ಯದಲ್ಲಿ ಕೊಂಚ ಸುಧಾರಣೆಯಾಗಲಿದೆ. ಸಹೋದರರಿಂದ ಮನಸ್ಸಿಗೆ ಬೇಸರವಾಗಲಿದೆ. ಸಂಗಾತಿಯೊಡನೆ ತಾಳ್ಮೆಯಿಂದ ವರ್ತಿಸಿ.

ಮಕರ: ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ತಯಾರಿ ಮಾಡುವಿರಿ. ಬೇಡದ ಮಾತುಗಳು, ಅಪವಾದಗಳು ಕೇಳಿಬಂದೀತು. ಆದರೆ ಕಿವಿಗೊಡಬೇಡಿ. ವಂಚನೆಯ ಭೀತಿಯೂ ಇದೆ. ಎಚ್ಚರಿಕೆಯಿಂದಿರಿ.

ಕುಂಭ: ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ. ಪ್ರೇಮಿಗಳಿಗೆ ಹಿರಿಯರಿಂದ ವಿರೋಧ ವ್ಯಕ್ತವಾಗುವುದು. ಕುಟುಂಬ ಮತ್ತು ವೃತ್ತಿ ರಂಗದಲ್ಲಿ ಹೊಂದಾಣಿಕೆಯಿಂದ ನಡೆದುಕೊಂಡರೆ ಮಾತ್ರ ನೆಮ್ಮದಿ.

ಮೀನ: ಪ್ರಯತ್ನವಿಲ್ಲದೇ ಯಾವುದೇ ಕಾರ್ಯದಲ್ಲಿ ಜಯ ಸಿಗದು. ಉದಾಸೀನ ಪ್ರವೃತ್ತಿ ಕಂಡುಬರಲಿದೆ. ಇದರಿಂದಾಗಿ ನಿಮ್ಮ ಕೆಲವು ಕೆಲಸಗಳೂ ವಿಳಂಬವಾಗಲಿದೆ. ಅನವಶ್ಯಕ ಮಾತಿಗೆ ಕಿವಿಗೊಡಬೇಡಿ. ದಿನದಂತ್ಯದಲ್ಲಿ ಶುಭ ಸುದ್ದಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶ್ರೀ ಗುರು ದತ್ತಾತ್ರೇಯ ಗಾಯತ್ರಿ ಮಂತ್ರ ಯಾವುದು, ಫಲವೇನು

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸಲು ಈ ಎರಡು ಗಣೇಶ ಮಂತ್ರ ಜಪಿಸಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments