Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಭಾನುವಾರ, 17 ಫೆಬ್ರವರಿ 2019 (09:03 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಉದ್ಯೋಗ ಕ್ಷೇತ್ರದಲ್ಲಿ ಸಮಾಧಾನಕರ ವಾತಾವರಣವಿರಲಿದೆ. ಕಾರ್ಯಗಳಲ್ಲಿ ಪ್ರಗತಿ ಕಾಣುವುದು. ಸಾಂಸಾರಿಕವಾಗಿ ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲ ಅಗತ್ಯ.

ವೃಷಭ: ಮಹಿಳೆಯರಿಗೆ ಇಂದು ಅಂದುಕೊಂಡ ಕಾರ್ಯಗಳು ನೆರವೇರಿ ಶುಭದಿನವಾಗುವುದು. ಹೊಸ ವ್ಯವಹಾರಗಳಿಗೆ ಕೈ ಹಾಕಿದರೆ ಲಾಭ ಗಳಿಸುವಿರಿ. ನಿರುದ್ಯೋಗಿಗಳಿಗೆ ಸೂಕ್ತ ಉದ್ಯೋಗಕ್ಕಾಗಿ ಕೆಲವು ದಿನ ಕಾಯಬೇಕಾದೀತು.

ಮಿಥುನ: ಆರೋಗ್ಯದಲ್ಲಿ ಏರುಪೇರಾಗುವುದು. ಅವಿವಾಹಿತರಿಗೆ ಮನಸ್ಸಿಗೆ ಹಿಡಿಸುವ ಸಂಬಂಧಗಳು ಕೂಡಿಬರುವುದು. ದೂರ ಸಂಚಾರ ಯೋಗವಿದ್ದು, ಎಚ್ಚರಿಕೆ ಅಗತ್ಯ.  ಅನಿರೀಕ್ಷಿತವಾಗಿ ಬರುವ ಅತಿಥಿಗಳಿಂದ ಸಂತಸ.

ಕರ್ಕಟಕ: ಸಾಮಾಜಿಕ ಕಾರ್ಯಗಳಿಂದ ಮನ್ನಣೆ, ಗೌರವ ಸಿಗುವುದು. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ಅವಕಾಶಗಳು ಲಭಿಸಲಿವೆ. ವಾಹನ ಖರೀದಿ ಯೋಗವಿದೆ. ಆರ್ಥಿಕವಾಗಿ ಚೇತರಿಕೆ ಕಾಣುವಿರಿ.

ಸಿಂಹ: ಆದಾಯವಿದ್ದಷ್ಟೇ ಖರ್ಚುಗಳೂ ಅಧಿಕವಾಗಲಿದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರುವುದು. ಸಂಗಾತಿಯ ಮಾತಿಗೆ ಕಿವಿಗೊಡಬೇಕಾದೀತು. ಮಕ್ಕಳಿಂದ ಸಂತಸ.

ಕನ್ಯಾ: ಮಕ್ಕಳಾಗದ ದಂಪತಿಗೆ ಆಶಾಕಿರಣವೊಂದು ಮೂಡಲಿದೆ. ನವದಂಪತಿಗಳಿಗೆ ಮಧುಚಂದ್ರ ಭಾಗ್ಯ. ನೌಕರಿಯಲ್ಲಿ ಬಡ್ತಿ, ವೇತನ ಹೆಚ್ಚಳದಂತಹ ಮುನ್ನಡೆ ಕಾಣಲಿದ್ದೀರಿ. ಮಕ್ಕಳೊಂದಿಗೆ ಸಂತಸದ ಕ್ಷಣ ಕಳೆಯುವಿರಿ.

ತುಲಾ: ಕಚೇರಿಯಲ್ಲಿ ಮೇಲಧಿಕಾರಿಗಳ ಕಿರಿ ಕಿರಿಯಿಂದ ಮನಸ್ಸಿಗೆ ಬೇಸರವಾಗುವುದು. ಕಾರ್ಯದೊತ್ತಡದಿಂದ ದೇಹಾಯಾಸವಾಗಲಿದೆ. ಮನೆಯಲ್ಲಿ ಶುಭ ಕಾರ್ಯಗಳನ್ನು ನೆರವೇರಿಸಲು ಚಿಂತನೆ ಮಾಡುವಿರಿ. ತಾಳ್ಮೆ ಅಗತ್ಯ.

ವೃಶ್ಚಿಕ: ಮಾನಸಿಕ ತುಮುಲಗಳು ನಿಮ್ಮನ್ನು ಕಾಡುವುದರಿಂದ ನಿರ್ಧಾರ ತೆಗೆದುಕೊಳ್ಳುವಲ್ಲಿ ಸೋಲುವಿರಿ. ಹಿರಿಯರ ಅಭಿಪ್ರಾಯಗಳಿಗೆ ಕಿವಿಗೊಡಿ. ಹಣಕಾಸಿನ ಮುಗ್ಗಟ್ಟು ಎದುರಾಗಿ ಆತಂಕ ಎದುರಿಸುವಿರಿ. ದೇವತಾ ಪ್ರಾರ್ಥನೆ ಮಾಡಿ.

ಧನು: ವಿದ್ಯಾರ್ಥಿಗಳಿಗೆ ತೀವ್ರ ಪ್ರಯತ್ನ ಅಗತ್ಯ. ಅನಿರೀಕ್ಷಿತವಾಗಿ ಅಂದುಕೊಂಡ ಕಾರ್ಯ ನೆರವೇರಲು ಸಹಾಯಹಸ್ತ ಸಿಗುವುದು. ಅವಿವಾಹಿತರು ಕೊಂಚ ದಿನ ಕಾಯಬೇಕು. ಸಂಗಾತಿಯೊಂದಿಗೆ ಮನಸ್ತಾಪ ಬೇಡ.

ಮಕರ: ಕುಟುಂಬದಲ್ಲಿ ನೀವು ಕೈಗೊಂಡ ಕಾರ್ಯದಿಂದ ನಿಮ್ಮ ಸ್ಥಾನ ಮಾನ ಹೆಚ್ಚುವುದು. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ. ಸಹೋದರರ ವಿವಾಹ ಸಂಬಂಧಿತ ಕಾರ್ಯಗಳಿಗೆ ಓಡಾಟ ನಡೆಸುವಿರಿ.

ಕುಂಭ: ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಕಿರಿ ಕಿರಿ ಇದ್ದರೂ ನಿಮ್ಮ ಕಾರ್ಯ ನೆರವೇರಿಸಲು ತೊಂದರೆಯಾಗದು. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ತಲೆದೋರುವುದು. ವ್ಯಾಪಾರ ವ್ಯವಹಾರದಲ್ಲಿ ತೊಡಗಿಸಿಕೊಂಡರೆ ಲಾಭ ಗಳಿಸುವಿರಿ.

ಮೀನ: ಕೂಡಿಟ್ಟ ಸಂಪತ್ತನ್ನು ಕಾಪಾಡುವ ಚಿಂತೆ ಕಾಡಲಿದೆ. ಹೊಸ ಕೆಲಸಗಳಿಗೆ ಕೈ ಹಾಕಿದರೆ ವಿಘ್ನಗಳು ಎದುರಾದೀತು. ಕುಲದೇವರಿಗೆ ಸಂಬಂಧಿಸಿದ ಹರಕೆ ತೀರಿಸುವಿರಿ. ತಾಳ್ಮೆಯಿಂದ ನಡೆದುಕೊಳ್ಳುವುದು ಮುಖ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಿಮ್ಮ ವೃತ್ತಿ ಬದುಕಿನ ಭವಿಷ್ಯ ಹೀಗಿರುತ್ತದೆ