Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಸೋಮವಾರ, 11 ಫೆಬ್ರವರಿ 2019 (08:52 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಖರ್ಚು ವೆಚ್ಚಗಳು ಅಧಿಕವಾಗುವುದು. ದೂರ ಪ್ರಯಾಣದ ಯೋಗವಿದ್ದು, ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಉದ್ಯೋಗದಲ್ಲಿ ಕಾರ್ಯದೊತ್ತಡವಿರುವುದು. ಹಿರಿಯ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಬೇಡಿ.

ವೃಷಭ: ಶತ್ರುಭಯವಿದ್ದರೂ ನಿಮ್ಮ ಆತ್ಮಸ್ಥೈರ್ಯದಿಂದ ಸವಾಲುಗಳನ್ನು ಎದುರಿಸುವಿರಿ. ಸಂಕಷ್ಟದ ಸಮಯದಲ್ಲಿ ಬಂಧು ಮಿತ್ರರ ಸಹಕಾರ ಸಿಗಲಿದೆ. ಆರ್ಥಿಕವಾಗಿ ಸಾಕಷ್ಟು ಲಾಭ ಗಳಿಸುವಿರಿ.

ಮಿಥುನ: ಧನಾಗಮನವಿದ್ದಷ್ಟೇ ಖರ್ಚು ವೆಚ್ಚಗಳೂ ಅಧಿಕವಾಗುವುದು. ವಿದ್ಯಾರ್ಥಿಗಳಿಗೆ ತೀವ್ರ ಪ್ರಯತ್ನ ಬಲ ಅಗತ್ಯ. ತಾಳ್ಮೆಯಿಂದ ಮುನ್ನಡೆದರೆ ಅಂದುಕೊಂಡ ಕಾರ್ಯಗಳು ನೆರವೇರುವುದು.

ಕರ್ಕಟಕ: ಕಾರ್ಯಗಳಿಗೆ ಆರಂಭದಲ್ಲಿ ವಿಘ್ನ, ಬಳಿಕ ಯಶಸ್ಸು. ಆರ್ಥಿಕವಾಗಿ ಚೇತರಿಕೆ ಕಂಡುಬರುವುದರಿಂದ ನೆಮ್ಮದಿ ಇರುವುದು. ವ್ಯವಹಾರದಲ್ಲಿ ವಂಚನೆಗೊಳಗಾಗದಂತೆ ಎಚ್ಚರಿಕೆ ವಹಿಸಿ.

ಸಿಂಹ: ಅನಿರೀಕ್ಷಿತವಾಗಿ ಬರುವ ನೆಂಟರಿಂದ ಮನೆಯಲ್ಲಿ ಸಂತಸದ ವಾತಾವರಣವಿರಲಿದೆ. ಸಂಗಾತಿಯೊಡನೆ ಉತ್ತಮ ಸಮಯ ಕಳೆಯುವಿರಿ.ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.

ಕನ್ಯಾ: ಇದುವರೆಗೆ ನಷ್ಟದಲ್ಲಿದ್ದ ವ್ಯವಹಾರಗಳಲ್ಲಿ ಈಗ ಚೇತರಿಕೆ ಕಂಡುಬರಲಿದೆ. ಆರೋಗ್ಯದಲ್ಲಿ ವ್ಯತ್ಯಯವಾದೀತು. ಹಿರಿಯರ ಮಾತಿಗೆ ಬೆಲೆ ಕೊಡಬೇಕಾದೀತು. ಉದ್ಯೋಗದಲ್ಲಿ ಮುನ್ನಡೆ ಕಾಣುವಿರಿ.

ತುಲಾ: ಬೇಡದ ಮಾತಿನಿಂದ ಅಪವಾದಕ್ಕೆ ಗುರಿಯಾಗುವಿರಿ. ಮನೆಯಲ್ಲಿ ವಿವಾಹ ಮುಂತಾದ ಶುಭ ಕಾರ್ಯಗಳಿಗೆ ತಯಾರಿ ನಡೆಸುವಿರಿ. ಕಚೇರಿಯಲ್ಲಿ ಎಚ್ಚರಿಕೆಯಿಂದ ವ್ಯವಹರಿಸುವುದು ಅಗತ್ಯ.

ವೃಶ್ಚಿಕ: ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ವೃತ್ತಿ ರಂಗದಲ್ಲಿ ಉತ್ಸಾಹದಿಂದ ಕೆಲಸ ಕಾರ್ಯ ನಿರ್ವಹಿಸುವಿರಿ. ಆರ್ಥಿಕವಾಗಿ ಧನಲಾಭ ಯೋಗವಿದೆ. ದೇವತಾ ಆರಾಧನೆಯಿಂದ ಇನ್ನಷ್ಟು ಶುಭ ಫಲ.

ಧನು: ವೃತ್ತಿ ರಂಗದಲ್ಲಿ ನೀವು ಪಟ್ಟ ಪರಿಶ್ರಮಕ್ಕೆ ತಕ್ಕ ಗೌರವ, ಬೆಲೆ ಸಿಗುವುದು. ಖರ್ಚು ವೆಚ್ಚಗಳ ಬಗ್ಗೆ ನಿಗಾ ಅಗತ್ಯ. ಮಕ್ಕಳ ಬಗ್ಗೆ ಅನಗತ್ಯ ಚಿಂತೆ ಮಾಡಬೇಡಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗುವುದು.

ಮಕರ: ಹಣಕಾಸಿನ ಮುಗ್ಗಟ್ಟುಗಳು ಎದುರಾಗಿ ನಿರೀಕ್ಷಿತ ಕೆಲಸಗಳಿಗೆ ವಿಘ್ನವಾಗುವುದು. ನಿರುದ್ಯೋಗಿಗಳು ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಈಗ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವುದು ಜಾಣತನ. ದಿನದಂತ್ಯಕ್ಕೆ ಶುಭ ಸುದ್ದಿ.

ಕುಂಭ: ದೇವರಿಗೆ ಸಂಬಂಧಪಟ್ಟ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರುವುದು. ಆದರೆ ಸಹೋದರರೊಂದಿಗೆ ಕಲಹವಾಗದಂತೆ ಎಚ್ಚರಿಕೆ ವಹಿಸಿ. ತಾಳ್ಮೆಯಿಂದ ನಡೆಯಿರಿ.

ಮೀನ:  ಹೊಸ ವ್ಯವಹಾರ, ಕಾರ್ಯಕ್ರಮ ಜಾರಿಗೆ ತರುವುದಿದ್ದರೆ ಇಂದೇ ಶುಭದಿನ. ಅದೃಷ್ಟ ಲಕ್ಷ್ಮಿ ನಿಮ್ಮ ಕೈ ಹಿಡಿಯಲಿದ್ದಾಳೆ. ಆದರೆ ಅನಗತ್ಯ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕು. ಕಾರ್ಯ ನಿಮಿತ್ತ ದೂರ ಸಂಚಾರ ಮಾಡುವಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.                          

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Muruga Mantra: ಸುಬ್ರಹ್ಮಣ್ಯ ದೇವರ ಮೂಲ ಮಂತ್ರ ಯಾವುದು, ಯಾಕೆ ಓದಬೇಕು

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Shani Mantra: ಶನಿ ಗಾಯತ್ರಿ ಮಂತ್ರ ಯಾವುದು, ಇದನ್ನು ಓದುವುದರಿಂದ ಏನು ಫಲ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ದುರ್ಗಾ ಅಷ್ಟೋತ್ತರ ನಾಮಾವಳಿ ಕನ್ನಡದಲ್ಲಿ ಓದಿ: ಇದನ್ನು ಓದುವುದರ ಲಾಭಗಳೇನು ನೋಡಿ

ಮುಂದಿನ ಸುದ್ದಿ
Show comments