Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಭಾನುವಾರ, 10 ಫೆಬ್ರವರಿ 2019 (07:51 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಕುಟುಂಬ ಸದಸ್ಯರೊಡನೆ ಪ್ರವಾಸ ತೆರಳುವಿರಿ. ಅನಿರೀಕ್ಷಿತವಾಗಿ ಹಳೆಯ ಮಿತ್ರರನ್ನು ಭೇಟಿಯಾಗುವಿರಿ. ಆದರೆ ಖರ್ಚು ವೆಚ್ಚಗಳ ಬಗ್ಗೆ ಹಿಡಿತವಿರಲಿ. ಹೊಸ ವಸ್ತು ಖರೀದಿ ಮಾಡುವಿರಿ.

ವೃಷಭ: ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರುವುದು. ಆದರೆ ಮನಸ್ಸಿಗೆ ಒಪ್ಪಿಗೆಯಾಗದು. ಹಿರಿಯರೊಡನೆ ವೃಥಾ ವಾಗ್ವಾದ ಮಾಡಬೇಡಿ. ಸಂಗಾತಿಯ ಸಲಹೆಗಳಿಗೆ ಕಿವಿಗೊಡಿ. ಹೊಸ ವ್ಯವಹಾರಗಳಿಗೆ ಕೈ ಹಾಕಲು ಕೆಲವು ದಿನ ಕಾಯುವುದೇ ಒಳ್ಳೆಯದು.

ಮಿಥುನ: ಸಂಗಾತಿಯ ಮನಸ್ಸು ನೋಯಿಸುವಂತಹ ಕೆಲಸ ಮಾಡುತ್ತೀರಿ. ಇದರಿಂದ ಕುಟುಂಬದಲ್ಲಿ ಕಿರಿ ಕಿರಿ ಇರುವುದು. ಹೊಸ ವಸ್ತು, ವಾಹನ ಖರೀದಿಗೆ ಮನಸ್ಸು ಮಾಡುವಿರಿ. ಆದರೆ ಹಿತಶತ್ರುಗಳಿಂದ ವಂಚನೆಗೊಳಗಾಗುವ ಭೀತಿಯೂ ಇದೆ.

ಕರ್ಕಟಕ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಉದಾಸೀನ ಪ್ರವೃತ್ತಿ ಕಂಡುಬರುವುದು. ಇದರಿಂದ ಹೆತ್ತವರ ಮನಸ್ಸಿಗೆ ಬೇಸರವುಂಟು ಮಾಡುವಿರಿ. ಸಂಸಾರಸ್ಥರಿಗೆ ಅಪವಾದದ ಭೀತಿ. ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ ಕಂಡುಬರುವುದು.

ಸಿಂಹ: ಬಹುದಿನಗಳಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗಲಿದೆ. ಸಕಾಲದಲ್ಲಿ ಮಿತ್ರರು ಸಹಾಯಕ್ಕೆ ಬರುವುದರಿಂದ ಅನಗತ್ಯ ಓಡಾಟಗಳು ತಪ್ಪಲಿವೆ. ಸಂಗಾತಿಯೊಂದಿಗೆ ಸರಸಮಯ ಕ್ಷಣ ಕಳೆಯುವಿರಿ. ನೂತನ ದಂಪತಿಗಳಿಗೆ ಸಂತಾನಭಾಗ್ಯ.

ಕನ್ಯಾ: ಕೃಷಿಕರಿಗೆ ಲಾಭದಾಯಕ ದಿನ. ಆರ್ಥಿಕವಾಗಿ ಸಾಕಷ್ಟು ಆದಾಯ ಗಳಿಸುವುದರಿಂದ ನೆಮ್ಮದಿ ಕಾಣುವಿರಿ. ಎಲ್ಲಾ ರೀತಿಯಲ್ಲೂ ಅಭಿವೃದ್ಧಿ ಗೋಚರಕ್ಕೆ ಬರುವುದು. ಹಿರಿಯರು ಮಾಡಿದ ಪುಣ್ಯದ ಫಲದಿಂದ ಅನಿರೀಕ್ಷಿತ ಅವಗಢಗಳಿಂದ ಪಾರಾಗುವಿರಿ.

ತುಲಾ: ಬಂಧು ಮಿತ್ರರ ಆಗಮನದಿಂದ ಖರ್ಚು ವೆಚ್ಚಗಳು ಅಧಿಕವಾಗುವುದು. ಹೆಣ್ಣು ಮಕ್ಕಳಿಗೆ ತವರು ಮನೆಯಿಂದ ಅಚ್ಚರಿಯ ವಾರ್ತೆ ಸಿಗುವುದು. ಎಷ್ಟೋ ದಿನದಿಂದ ಬಾಕಿಯಿದ್ದ ಕುಲದೇವರ ಹರಕೆ ತೀರಿಸುವಿರಿ.

ವೃಶ್ಚಿಕ: ಏನೋ ಮಾಡಲು ಹೋಗಿ ಇನ್ನೇನೋ ಆಗುವ ಪರಿಸ್ಥಿತಿ ಇಂದು ನಿಮ್ಮದು. ವಿನಾಕಾರಣ ಅಪವಾದಕ್ಕೆ ಗುರಿಯಾಗಬೇಕಾಗುತ್ತದೆ. ಆದರೆ ತಾಳ್ಮೆಯೇ ಮೂಲಮಂತ್ರವಾಗಲಿದೆ. ತಾಳ್ಮೆಯಿಂದ ವ್ಯವಹರಿಸಿದಲ್ಲಿ ದಿನದಂತ್ಯಕ್ಕೆ ನೆಮ್ಮದಿ ಕಾಣುವಿರಿ.

ಧನು: ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಮಕ್ಕಳಿಂದ ಶುಭವಾರ್ತೆ. ಸಂಗಾತಿಯೊಡನೆ ವಾಗ್ವಾದ ನಡೆಸುವಿರಿ. ಮಾತಿನ ಮೇಲೆ ನಿಗಾ ಅಗತ್ಯ. ತಾಳ್ಮೆ ತಪ್ಪಿ ನಡೆದರೆ ಕುಟುಂಬದ ನೆಮ್ಮದಿ ಭಂಗಕ್ಕೆ ಕಾರಣವಾಗುವಿರಿ.

ಮಕರ: ಕುಟುಂಬ ಸಮೇತ ದೇವರ ದರ್ಶನಕ್ಕೆ ತೆರಳುವಿರಿ. ಹೊಸ ವಾಹನ ಖರೀದಿ ಯೋಗವಿದೆ. ಕಾರ್ಯ ನಿಮಿತ್ತ ದೂರ ಸಂಚಾರ ಮಾಡುವಿರಿ. ಆದರೆ ಕಳ್ಳತನದ ಭೀತಿಯಿದೆ. ಎಚ್ಚರಿಕೆ ಅಗತ್ಯ.

ಕುಂಭ: ಅಪರಿಚಿತರೊಂದಿಗೆ ಸ್ನೇಹ ಮಾಡಬೇಡಿ. ನಿಮಗೇ ಅರಿವಿಲ್ಲದೇ ಇದು ಮುಂದೊಂದು ನಿಮಗೆ ತೊಂದರೆ ಉಂಟು ಮಾಡಬಹುದು. ಆಸ್ತಿ ವ್ಯವಹಾರದಲ್ಲಿ ದಾಯಾದಿಗಳ ಜತೆ ವಾಗ್ವಾದವಾಗುವುದು. ಹಿರಿಯರ ಮಾತಿಗೆ ಮನ್ನಣೆ ನೀಡಬೇಕಿದೆ.

ಮೀನ:  ನಿರುದ್ಯೋಗಿಗಳು ತಮ್ಮ ಸಮಸ್ಯೆ ಪರಿಹಾರಕ್ಕೆ ಹೊಸ ದಾರಿಗಳನ್ನು ಕಂಡುಕೊಳ್ಳುವರು. ಅವಿವಾಹಿತರಿಗೆ ವಿವಾಹ ಭಾಗ್ಯ ಸಿಗಲಿದೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗುವುದು. ವಿದೇಶ ಪ್ರಯಾಣ ಮಾಡುವುದಿದ್ದರೆ ಸದ್ಯಕ್ಕೆ ಮುಂದೂಡುವುದು ಒಳ್ಳೆಯದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.              

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶ್ರೀ ಗುರು ದತ್ತಾತ್ರೇಯ ಗಾಯತ್ರಿ ಮಂತ್ರ ಯಾವುದು, ಫಲವೇನು

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸಲು ಈ ಎರಡು ಗಣೇಶ ಮಂತ್ರ ಜಪಿಸಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments