ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶನಿವಾರ, 2 ಫೆಬ್ರವರಿ 2019 (08:52 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ವೃತ್ತಿರಂಗದಲ್ಲಿ ಕಾರ್ಯದೊತ್ತಡ ಕೊಂಚ ಕಡಿಮೆಯಾಗಲಿದೆ. ಸಂಗಾತಿಯೊಡನೆ ಯಾವುದೋ ವಿಚಾರಕ್ಕೆ ಅಸಮಾಧಾನಗೊಳ್ಳುವಿರಿ. ಆರ್ಥಿಕವಾಗಿ ಧನಾಗಮನವಾದಷ್ಟೇ ಖರ್ಚುಗಳೂ ಅಧಿಕವಾದೀತು.

ವೃಷಭ: ಬರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಜಾಣ್ಮೆ ಬೆಳೆಸಿರಿ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ಸಿಗುವುದು. ತಾಳ್ಮೆಯಿಂದ ವರ್ತಿಸಿದರೆ ಎಲ್ಲಾ ಕೆಲಸಗಳಲ್ಲೂ ಯಶಸ್ಸು ಸಿಗುವುದು.

ಮಿಥುನ: ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುವುದು. ಕಾರ್ಯದೊತ್ತಡದಿಂದ ದೇಹಾಯಾಸಗೊಳ್ಳುವುದು. ಧನಾಗಮನವಾಗಲಿದ್ದು, ಲಾಭ ಗಳಿಸುವಿರಿ. ಸಂಗಾತಿಯೊಡನೆ ಹೊಂದಾಣಿಕೆ ಅಗತ್ಯ.

ಕರ್ಕಟಕ: ಯಾವುದೇ ಕೆಲಸಕ್ಕೆ ಕೈ ಹಾಕುವುದಿದ್ದರೂ ಇಂದು ಪ್ರಶಸ್ತ ದಿನ. ನಿಮ್ಮ ಅದೃಷ್ಟ ನಿಮ್ಮ ಕೈ ಹಿಡಿಯಲಿದೆ. ಹೆಚ್ಚಿನ ಧನಾಗಮನವಾಗುವುದಲ್ಲದೆ, ನಿಮ್ಮ ಪ್ರಯತ್ನಕ್ಕೆ ತಕ್ಕ ಸ್ಥಾನ ಮಾನ, ಗೌರವ ಸಿಗುವುದು.

ಸಿಂಹ: ಎಂತಹದ್ದೇ ಕಷ್ಟಗಳಿದ್ದರೂ ಸಂಗಾತಿಯ ಸಹಕಾರ ಸಿಕ್ಕಿ ಎಲ್ಲವೂ ಸುಗಮವಾಗಿ ನೆರವೇರುವುದು. ವ್ಯವಹಾರದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಹಿತಶತ್ರುಗಳಿಂದ ವಂಚನೆಗೊಳಗಾಗುವ ಸಾಧ್ಯತೆಯಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲ ಬೇಕು.

ಕನ್ಯಾ: ಯಾವುದೋ ಅನಿರೀಕ್ಷಿತ ಸುದ್ದಿ ನಿಮ್ಮ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರಲಿದೆ. ಕಾರ್ಯ ಸಾಧನೆಗಾಗಿ ಸಂಚಾರ ಕೈಗೊಳ್ಳಬೇಕಾಗುತ್ತದೆ. ಧನಾಗಮನವಿದ್ದರೂ ಖರ್ಚು ವೆಚ್ಚಗಳ ಬಗ್ಗೆ ನಿಗಾ ಇಡಿ.

ತುಲಾ: ವೃತ್ತಿಯಲ್ಲಿ ನಿಮ್ಮ ಕೆಲಸಗಳಿಗೆ ಮನ್ನಣೆ ದೊರೆಯುತ್ತದೆ. ಮುನ್ನಡೆಗೆ ಅವಕಾಶವಿದೆ. ಆರ್ಥಿಕ ಮುಗ್ಗಟ್ಟುಗಳು ದೂರವಾಗಲಿದೆ. ತಾಳ್ಮೆ ಮತ್ತು ಹೊಂದಾಣಿಕೆಯಿಂದ ಸಮಸ್ಯೆಗಳನ್ನು ನಿವಾರಿಸಬೇಕಾಗುತ್ತದೆ.

ವೃಶ್ಚಿಕ: ಯಾವುದೋ ಆರೋಗ್ಯ ಸಮಸ್ಯೆ ಮತ್ತೆ ಕಾಣಿಸಿಕೊಂಡು ಚಿಂತೆಗೀಡುಮಾಡಲಿದೆ. ಖರ್ಚು ವೆಚ್ಚಗಳು ಅಧಿಕವಾಗಲಿದೆ. ಆದರೆ ಕುಟುಂಬದಲ್ಲಿ ಸಂಗಾತಿ, ಮಕ್ಕಳಿಂದ ಸಹಕಾರ ಸಿಗುವುದು. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವುದು.

ಧನು: ಇದುವರೆಗೆ ಇದ್ದ ಕಷ್ಟ ಕಾರ್ಪಣ್ಯಗಳು ದೂರವಾಗಿ ನಿಧಾನವಾಗಿ ಚೇತರಿಕೆ ಕಾಣುವಿರಿ. ನೂತನ ದಂಪತಿಗಳು ಮಧುಚಂದ್ರಕ್ಕೆ ತೆರಳುವರು. ಮನೆಗಾಗಿ ಹೊಸ ವಸ್ತು ಖರೀದಿಸುವಿರಿ. ಒಟ್ಟಾರೆರ ಶುಭ ದಿನ.

ಮಕರ: ಹೊಸ ವ್ಯವಹಾರ ಕೈಗೊಳ್ಳಲು ಉದ್ದೇಶಿಸಿದ್ದರೆ ಕೆಲವು ದಿನ ತಡೆಯಿರಿ. ಆತ್ಮಸ್ಥೈರ್ಯದಿಂದ ನಡೆದರೆ ಮುನ್ನಡೆ ಖಚಿತ. ಮಕ್ಕಳಿಲ್ಲದ ದಂಪತಿಗೆ ಶುಭ ಸುದ್ದಿ ಕಾದಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗಲಿದೆ.

ಕುಂಭ: ನಿಮ್ಮ ಹಿತಶತ್ರುಗಳಿಂದಲೇ ನಿಮ್ಮ ಏಳಿಗೆಗೆ ತೊಡಕಾಗುವುದು. ಆದರೆ ಯಾರ ಮಾತಿಗೂ ಕಿವಿಗೊಡಬೇಡಿ. ಮನೆಯಲ್ಲಿ ಶುಭ ಕಾರ್ಯ ನಡೆಸಲು ಏರ್ಪಾಟು ಮಾಡುವಿರಿ. ದೇವರ ಆರಾಧನೆಯಿಂದ ಮತ್ತಷ್ಟು ಶುಭ ಫಲ ಕಾಣುವಿರಿ.

ಮೀನ: ನಿಮ್ಮ ದೃಢಚಿತ್ತದಿಂದಲೇ ನೀವು ಅಂದುಕೊಂಡ ಕೆಲಸಗಳು ನೆರವೇರುವುದು. ತಾಳ್ಮೆಯಿಂದ ಬರುವ ಕಷ್ಟಗಳನ್ನು ಎದುರಿಸಿದರೆ ಆರ್ಥಿಕವಾಗಿಯೂ ಸಂಕಷ್ಟಕ್ಕೆ ಸಿಲುಕದೇ ಮುನ್ನಡೆಯುವಿರಿ. ಸಂಗಾತಿಯ ಮಾತಿಗೆ ಕಿವಿಗೊಡಬೇಕಾದೀತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.                          

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಂಕಟ ಮೋಚನ ಹನುಮಾನ್ ಅಷ್ಟಕಂ ಸ್ತೋತ್ರ

ಹಣಕಾಸಿನ ಸಮಸ್ಯೆಯಿದ್ದರೆ ಕನಕಧಾರಾ ಸ್ತೋತ್ರ ತಪ್ಪದೇ ಓದಿ

2026 ರಲ್ಲಿ ಯಾವ ರಾಶಿಯವರು ಯಾವ ದೇವರ ಪ್ರಾರ್ಥನೆ ಮಾಡಬೇಕು ಗಮನಿಸಿ

ಗಣೇಶ ಕವಚ ಸ್ತೋತ್ರವನ್ನು ಮಕ್ಕಳಿಗೆ ಹೇಳಿಸಿ

ಈ ಐದು ರಾಶಿಯವರಿಗೆ 2026 ರಲ್ಲಿ ಸ್ವಂತ ಮನೆ ಕನಸು ನನಸಾಗುತ್ತದೆ

ಮುಂದಿನ ಸುದ್ದಿ
Show comments