Daily Horoscope
✕

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಗುರುವಾರ, 31 ಜನವರಿ 2019 (09:37 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಬಂಧು ಮಿತ್ರರ ಅಗಲುವಿಕೆ ಮನಸ್ಸಿಗೆ ಬೇಸರ ಉಂಟುಮಾಡಬಹುದು. ಉದ್ಯೋಗ ಕ್ಷೇತ್ರದಲ್ಲಿ ಕೊಂಚ ಕಾರ್ಯದೊತ್ತಡ ಹೆಚ್ಚುವುದು. ಆದರೆ ಆದಾಯಕ್ಕೆ ಕೊರತೆಯಾಗದು. ದೂರ ಸಂಚಾರ ಮುಂದೂಡುವುದೇ ಒಳ್ಳೆಯದು.

ವೃಷಭ: ಕಾರ್ಯನಿಮಿತ್ತ ದೂರದ ಊರಿಗೆ ಪ್ರಯಾಣ ಬೆಳೆಸುವಿರಿ. ಆರ್ಥಿಕವಾಗಿ ಸಾಕಷ್ಟು ಆದಾಯ ಗಳಿಸುವಿರಿ. ಮನೆ ವಸ್ತುಗಳ ಖರೀದಿ ಮಾಡುವಿರಿ. ವ್ಯಾಪಾರಸ್ಥರಿಗೆ ಲಾಭವಿದೆ. ವಿದ್ಯಾರ್ಥಿಗಳಿಗೆ ಶುಭ ದಿನ.

ಮಿಥುನ: ಕಾರ್ಯಕ್ಷೇತ್ರಗಳಲ್ಲಿ ಅಡೆತಡೆಗಳು ತೋರಿಬಂದೀತು. ಮನೆ ಬದಲಾವಣೆ ಮಾಡಲಿದ್ದೀರಿ. ವಾಹನ ಚಾಲಕರು ಅಪಘಾತದ ಭಯ ಎದುರಿಸುವರು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ನಿರೀಕ್ಷಿತ ಯಶಸ್ಸು ಸಿಗಲಿದೆ.

ಕರ್ಕಟಕ: ಸ್ವ ಉದ್ಯೋಗಿಗಳಿಗೆ ಸಾಕಷ್ಟು ಆದಾಯ ಗಳಿಕೆಯಾಗುತ್ತದೆ. ಆದರೆ ಹಿತ ಶತ್ರುಗಳ ಬಗ್ಗೆ ಎಚ್ಚರವಿರುವುದು ಅಗತ್ಯ. ಕಾರ್ಯದೊತ್ತಡ ಹೆಚ್ಚಿ ದೇಹಾಯಾಸವಾದೀತು. ಮನೆಯಲ್ಲಿ ಶುಭ ಕಾರ್ಯ ನೆರವೇರಿಸುವಿರಿ.

ಸಿಂಹ: ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವುದು. ಕುಟುಂಬದ ಸದಸ್ಯರೊಳಗೇ ಭಿನ್ನಮತ ತೋರಿಬರುವುದು. ಆರೋಗ್ಯ ಹದಗೆಡುವುದು ಎಚ್ಚರಿಕೆ ಅಗತ್ಯ. ದೇವರ ಪ್ರಾರ್ಥನೆಯಿಂದ ಮತ್ತಷ್ಟು ಶುಭವಾಗುತ್ತದೆ.

ಕನ್ಯಾ: ನಿರುದ್ಯೋಗಿಗಳಿಗೆ ಸದ್ಯದ ಮಟ್ಟಿಗೆ ತಾತ್ಕಾಲಿಕ ಹುದ್ದೆಯೊಂದು ಸಿಗಲಿದೆ. ಬಳಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ಅನಿರೀಕ್ಷಿತವಾಗಿ ಬರುವ ಮಿತ್ರರಿಂದ ಶುಭ ಸುದ್ದಿ. ಉದ್ಯೋಗದಲ್ಲಿ ನಿಮ್ಮೆ ಪರಿಶ್ರಮಕ್ಕೆ ಬೆಲೆ ಸಿಗುವುದು.

ತುಲಾ: ಮನೆ ಕೆಲಸಕ್ಕಾಗಿ ಸಿದ್ಧತೆ ನಡೆಸಿದರೂ ಸಾಕಷ್ಟು ಅಡಚಣೆಗಳು ಎದುರಾಗಲಿವೆ. ಹಣಕಾಸಿನ ಹರಿವಿಗೆ ಭಂಗವಿಲ್ಲ. ಉದ್ಯೋಗಿಗಳಿಗೆ ಮುನ್ನಡೆ, ಬಡ್ತಿ ಸಿಗಲಿದೆ. ಸಂಗಾತಿಯ ಸಲಹೆಗೆ ಕಿವಿಗೊಡಬೇಕಾದೀತು. ದಿನದಂತ್ಯಕ್ಕೆ ಮತ್ತಷ್ಟು ಶುಭ ಫಲ.

ವೃಶ್ಚಿಕ: ಇದುವರೆಗೆ ಇದ್ದ ಹಣಕಾಸಿನ ಮುಗ್ಗಟ್ಟುಗಳು ದೂರವಾಗಿ ನಿಧಾನವಾಗಿ ಚೇತರಿಕೆ ಕಂಡುಬರವುದರಿಂದ ನೆಮ್ಮದಿ ಕಾಣುವಿರಿ. ಆರೋಗ್ಯದಲ್ಲೂ ಸುಧಾರಣೆಯಾಗಲಿದೆ. ಆದರೆ ವೃತ್ತಿರಂಗದಲ್ಲಿ ಬಿಡುವಿಲ್ಲದ ದಿನಚರಿ ನಿಮ್ಮದಾಗಲಿದೆ.

ಧನು: ದೂರ ಸಂಚಾರ ಕೈಗೊಳ್ಳುವಿರಿ. ಮಕ್ಕಳ ಬಗ್ಗೆ ಚಿಂತೆ ಮಾಡುವಿರಿ. ಆದಾಯದಷ್ಟೇ ಖರ್ಚೂ ಹೆಚ್ಚುವುದು. ಹೊಸ ವ್ಯವಹಾರಗಳಿಗೆ ಕೈ ಹಾಕಿದರೆ ಮಿಶ್ರಫಲ ಸಿಗುವುದು. ಸಂಚಾರದಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯ.

ಮಕರ: ಅಂದುಕೊಂಡ ಕಾರ್ಯಗಳು ನೆರವೇರುವುದು. ಹಣಕಾಸಿನ ಮುಗ್ಗಟ್ಟುಗಳು ಎದುರಾಗುವುದು.  ಮನೆಯಲ್ಲಿ ಶುಭ ಕಾರ್ಯ ನಡೆಸಲು ಓಡಾಟ ನಡೆಸುವಿರಿ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ. ವಿದ್ಯಾರ್ಥಿಗಳಿಗೆ ತೀವ್ರ ಪ್ರಯತ್ನ ಅಗತ್ಯ.

ಕುಂಭ: ಕುಟುಂಬದಲ್ಲಿ ನೆಮ್ಮದಿ ನೆಲೆಸಲಿದೆ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆ ಮಾಡಬೇಕಾಗುತ್ತದೆ. ಯಾವುದೋ ಚಿಂತೆ ಮನಸ್ಸು ಹಾಳು ಮಾಡಲಿದೆ. ದೇವತಾ ಆರಾಧನೆಯಿಂದ ಎಲ್ಲವೂ ಶುಭವಾಗುತ್ತದೆ

ಮೀನ: ತಾಳ್ಮೆ, ಧೈರ್ಯದಿಂದ ಮುನ್ನಡೆದರೆ ಎಂತಹಾ ಸವಾಲಾದರೂ ಮೆಟ್ಟಿ ನಿಲ್ಲುವಿರಿ. ಕುಟುಂಬದಲ್ಲಿ ಕೆಲವು ವಿಚಾರಗಳಿಗೆ ಭಿನ್ನಾಭಿಪ್ರಾಯಗಳು ಮೂಡುತ್ತವೆ. ಆದರೆ ತಾಳ್ಮೆ ಅಗತ್ಯ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಗಾಯತ್ರಿ ಜಪ ಮಾಡುವ ಮೊದಲು ಓದಲೇಬೇಕಾದ ಸ್ತೋತ್ರ

ಶ್ರೀ ಕಾಳಿ ಏಕಾಕ್ಷರ ಮಂತ್ರ ಜಪಿಸುವ ವಿಧಾನ, ಫಲವೇನು ನೋಡಿ

ಸಂಜೆ ಹೊತ್ತು ಓದಲೇಬೇಕಾದ ಶ್ರೀ ಚಂದ್ರಮೌಳೀಶ್ವರ ಸ್ತವ ಸ್ತೋತ್ರ

ನಿತ್ಯ ಬೆಳಿಗ್ಗೆ ಈ ಸೂರ್ಯ ಸ್ತೋತ್ರ ಪಠಿಸಿದರೆ ಸಕಲ ರೋಗಗಳಿಂದ ಮುಕ್ತಿ

ಶನಿಯ ಪವರ್ ಫುಲ್ ಮಂತ್ರಗಳಲ್ಲಿ ಇದೂ ಒಂದು

ಮುಂದಿನ ಸುದ್ದಿ
Show comments