ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಬುಧವಾರ, 26 ಡಿಸೆಂಬರ್ 2018 (08:56 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಕೌಟುಂಬಿಕ ವಿಚಾರದಲ್ಲಿ ಇದುವರೆಗೆ ಹೊಂದಿದ್ದ ಅಸಮಾಧಾನಗಳು ಕೊಂಚ ನಿವಾರಣೆಯಾಗಿ ಸಂಗಾತಿಯೊಡನೆ ಸಂತಸದ ದಿನ ಕಳೆಯುವಿರಿ. ಖರೀದಿ ವ್ಯವಹಾರಗಳಲ್ಲಿ ಲಾಭ ಸಿಗಲಿದೆ.

ವೃಷಭ: ಯಾವುದೇ ವ್ಯವಹಾರ ನಡೆಸುವುದಿದ್ದರೂ ಕುಟುಂಬದವರ ಸಲಹೆ ಸೂಚನೆ ಪಡೆಯುವುದು ಉತ್ತಮ. ಹಿತ ಶತ್ರುಗಳ ಬಗ್ಗೆ ಎಚ್ಚರವಿರಲಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಲಿ.

ಮಿಥುನ: ಯಾವುದೋ ನಿರ್ಧಾರ ಕೈಗೊಳ್ಳುವ ಮೊದಲು ಮಾನಸಿಕ ಧ್ವಂದ್ವ ನಿಮ್ಮನ್ನು ಆವರಿಸಲಿದೆ. ದೇವತಾ ಪ್ರಾರ್ಥನೆಯಿಂದ ನೆಮ್ಮದಿ ಸಿಗಲಿದೆ. ದಿನದಂತ್ಯಕ್ಕೆ ಶುಭ ಸುದ್ದಿ.

ಕರ್ಕಟಕ: ಹೊಸ ವ್ಯವಹಾರ ಕೈಗೊಳ್ಳುವ ಮೊದಲು ಹಿರಿಯರ ಮಾರ್ಗದರ್ಶನ ಪಡೆಯಿರಿ. ಉದ್ಯೋಗದಲ್ಲಿ ಬಡ್ತಿ ಸಿಗಲು ಮೇಲ್ವರ್ಗದವರಿಂದ ಕಿರಿ ಕಿರಿ ಎದುರಾಗಲಿದೆ. ವಿದ್ಯಾರ್ಥಿಗಳಿಗೆ ಶುಭ ಸುದ್ದಿ.

ಸಿಂಹ: ಯಾರೋ ಆಪ್ತರನ್ನು ಮಿಸ್ ಮಾಡಿಕೊಳ್ಳುತ್ತಿರುತ್ತೀರಿ. ದೂರ ಸಂಚಾರ ಕೈಗೊಳ್ಳುವಾಗ ಎಚ್ಚರವಹಿಸಲಿ. ವ್ಯವಹಾರದಲ್ಲಿ ಹಿನ್ನಡೆಯಾದೀತು. ಖರ್ಚು ವೆಚ್ಚಗಳೂ ಅಧಿಕವಾದೀತು.

ಕನ್ಯಾ: ಮಹಿಳೆಯರೊಂದಿಗಿನ ವ್ಯವಹಾರದಲ್ಲಿ ಎಚ್ಚರಿಕೆ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ. ದಿನದಂತ್ಯಕ್ಕೆ ಶುಭ ಸುದ್ದಿ.

ತುಲಾ: ಆರ್ಥಿಕ ಲಾಭ ಸಿಗುವುದರಿಂದ ಮನಸ್ಸಿಗೆ  ನೆಮ್ಮದಿ ಸಿಗುವುದು. ವಿದ್ಯಾರ್ಥಿಗಳು ತಮ್ಮ ಸ್ನೇಹಿತರ ಬಗ್ಗೆ ಎಚ್ಚರವಾಗಿರಿ. ಅಧಿಕಾರಿಗಳಿಂದ ಕಿರಿ ಕಿರಿ ಅನುಭವಿಸಬೇಕಾಗುವುದು.

ವೃಶ್ಚಿಕ: ಹಣದ ಅಡಚಣೆಯಿಂದಾಗಿ ಅಂದುಕೊಂಡ ಕಾರ್ಯಗಳು ನೆರವೇರುವುದಿಲ್ಲ. ದೇಹಾರೋಗ್ಯದ ಬಗ್ಗೆ ಎಚ್ಚರವಾಗಿರಿ. ಹಿರಿಯರೊಂದಿಗೆ ವ್ಯವಹರಿಸುವಾಗ ಎಚ್ಚರಿಸುವಿರಿ.

ಧನು: ಸಾಂಸಾರಿಕವಾಗಿ ನೆಮ್ಮದಿ ಕಾಣುವಿರಿ. ಕುಟುಂಬ ವರ್ಗದವರೊಂದಿಗೆ ಖುಷಿಯ ದಿನ ಕಳೆಯುವಿರಿ. ನಂಬಿಕಸ್ತರಿಂದಲೇ ಮೋಸಕ್ಕೊಳಗಾಗುವಿರಿ. ದೇವರ ದರ್ಶನ ಪಡೆಯಿರಿ.

ಮಕರ: ನೀರಿನಂತೆ ಹಣ ಖರ್ಚು ಮಾಡುವಿರಿ. ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುವಿರಿ. ಕುಟುಂಬದವರ ಸಹಕಾರ ಸಿಕ್ಕಿ ನೆಮ್ಮದಿ ಕಾಣುವಿರಿ. ವೃತ್ತಿಯಲ್ಲಿ ಬಡ್ತಿ ಸಿಗುವುದು.

ಕುಂಭ: ಕೆಟ್ಟವರ ಸಂಗ ಮಾಡಬೇಡಿ. ಉತ್ತಮ ಧನಾಗಮನವಾಗಲಿದೆ. ತುಂಬಾ ದಿನದಿಂದ ಕಾಡುತ್ತಿದ್ದ ಅನಾರೋಗ್ಯ ಸಮಸ್ಯೆ ದೂರವಾಗಲಿದೆ.

ಮೀನ: ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರಲಿದೆ. ಸಂಗಾತಿಗೆ ಅನಾರೋಗ್ಯ ಕಾಡಲಿದೆ. ವಾಹನ ಚಲಾಯಿಸುವಾಗ ಎಚ್ಚರವಹಿಸಿ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲದಿಂದ ಯಶಸ್ಸು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments